ಬಿಎಂಟಿಸಿ ಅಥವಾ ಬೇರೆ ಯಾವುದೇ ಬಸ್ ಹತ್ತುತ್ತಿದ್ದಂತೆ ನಮ್ಮನ್ನ ಸ್ವಾಗತಿಸೋದೇ ಕಂಡೆಕ್ಟರ್. ಆದರೆ ಇನ್ಮುಂದೆ ಬಿಎಂಟಿಸಿಯಲ್ಲಿ ಈ ಕಂಡೆಕ್ಟರ್ಸ್ ಕಾಣೋದು ಡೌಟ್ ಎನ್ನುತ್ತಿದ್ದಾರೆ ಬಿಎಂಟಿಸಿ ಸಂಸ್ಥೆಯವರು. ಇದನ್ನ ಕೇಳೋಕೆ ನಿಮ್ಗೆ ಆಶ್ಚರ್ಯ ಆಗ್ಬಹುದು. ಆದರೆ ಬಿಎಂಟಿಸಿ ಇಂಥ ಒಂದು ಪ್ಲಾನ್ ಮಾಡಿಕೊಂಡಿದೆ.ಅದೇನು ಎಂಬುದನ್ನು ನೋಡೋಣ ಬನ್ನಿ.
ಬಿಎಂಟಿಸಿ ಸದ್ಯ ಮುಳುಗೋ ಹಡಗು, ಇರೋ ನೌಕರರಿಗೆ ಸಂಬಳ ಕೊಡಲಾಗದೇ ನಿಗಮ ಹೆಣಗಾಡ್ತಿದೆ. ಹೀಗಿರುವಾಗ ನಷ್ಟದ ಸುಳಿಯಿಂದ ಬಿಎಂಟಿಸಿಯನ್ನ ಮೇಲೆತ್ತಲು ಮಾಸ್ಟರ್ ಪ್ಲಾನ್ ಒಂದನ್ನು ರೆಡಿ ಮಾಡಲಾಗಿದೆ ಅಂತೆ .ಏನಪ್ಪಾ ಆ ಹೊಸ ಪ್ಲಾನ್ ಎಂದು ನೋಡೋದಾದರೆ. ಈ ಹೊಸ ಪ್ಲಾನ್ ಪ್ರಕಾರ ಬಸ್ ಓಡುತ್ತೆ, ಡ್ರೈವರ್ ಇರ್ತಾರೆ , ಆದರೆ ನಮ್ಮನೆಲ್ಲ ಸ್ವಾಗತಿಸೋ ಕಂಡೆಕ್ಟರ್ ಮಾತ್ರ ಇರೋದಿಲ್ಲ. ಏನಿದು ಹೊಸ ಪ್ಲ್ಯಾನ್? ಕಂಡಕ್ಟರ್ ಇಲ್ಲದೇ ಟಿಕೆಟ್ ಕಲೆಕ್ಷನ್ ಹೇಗೆ ಮಾಡುತ್ತಾರೆ ಅನ್ನೋದೇ ಇಲ್ಲಿನ ರೋಚಕ ಸಂಗತಿ.
ಬಸ್ ಗಳಿಗೆ ಡ್ರೈವರ್ ಮತ್ತು ಕಂಡಕ್ಟರ್ ಒಂದು ರೀತಿ ಪೋಷಕರು ಇದ್ದ ಹಾಗೆ. ಡ್ರೈವರ್ ಇಲ್ಲಾ ಅಂದ್ರೆ ಬಸ್ ಮುಂದಕ್ಕೆ ಚಲಿಸಲ್ಲ ,ಕಂಡಕ್ಟರ್ ಇಲ್ಲಾ ಅಂದ್ರೆ ಬೊಕ್ಕಸ ಖಜಾನೆಯನ್ನು ತುಂಬಿಸಲು ಸಾಧ್ಯವಿಲ್ಲ. ಬಿಎಂಟಿಸಿ ಬಸ್ ಹತ್ತುತ್ತಿದ್ದಂತೆ ನಮ್ಮನ್ನ ಸ್ವಾಗತಿಸೋದೇ ಕಂಡೆಕ್ಟರ್. ಆದರೆ ಇನ್ಮುಂದೆ ಬಿಎಂಟಿಸಿಯಲ್ಲಿ ಈ ಕಂಡೆಕ್ಟರ್ಸ್ ಕಾಣೋದು ಡೌಟ್. ಇದನ್ನ ಕೇಳೋಕೆ ನಿಮ್ಗೆ ಆಶ್ಚರ್ಯ ಆಗ್ಬಹುದು. ಕಂಡೆಕ್ಟರ್ ಇಲ್ಲದೇ ಟಿಕೆಟ್ ಕಲೆಕ್ಷನ್ ಆದ್ರೂ ಹೇಗೆ ಅಂತ ಯೋಚಿಸ್ತಾ ಇದ್ದೀರಾ. ಅದ್ಕೆ ಅಂತಾನೆ ಬಿಎಂಟಿಸಿ ಇಂಥಹದೊಂದು ಪ್ಲಾನ್ ಮಾಡಿಕೊಂಡಿದೆ. ನಿಗಮ ಮಂಡಳಿ ಆರ್ಥಿಕವಾಗಿ ಹಿಂದುಳಿದ್ದು , ಆರ್ಥಿಕತೆಯ ಹೊರೆ ಎದುರಿಸುತ್ತಿದೆ. ಜೊತೆಗೆ ಡ್ರೈವರ್ ಕೊರತೆಯೂ ಕಾಡ್ತಿದೆ. ಹೊಸ ನೇಮಕಾತಿಗೂ ಸರ್ಕಾರ ಒಪ್ಪಿಗೆ ಸೂಚಿಸ್ತಿಲ್ಲ. ಹೀಗಾಗಿ ಕಂಡೆಕ್ಟರ್ ಪೋಸ್ಟ್ ಗಳನ್ನೇ ಎತ್ತಂಗಡಿ ಮಾಡೋಕೆ ನಿಗಮ ಪ್ಲಾನ್ ಮಾಡಿದೆ.ಹಾಗಾದರೆ ಟಿಕೆಟ್ ಕಲೆಕ್ಷನ್ ಹೇಗೆ .ಅದಕ್ಕೆ ನೋಡಿ ಈ ಉಪಾಯವನ್ನು ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ಯಂತ ವೇಗವಾಗಿ ಮುಂದುವರೆಯಲು ಒಂದು ಹೆಜ್ಜೆ ಮುಂದೆ ಇಡುತ್ತಿದೆ. ಅದೇ ರೀತಿ ಬಿಎಂಟಿಸಿ ಬಸ್ ಗಳಲ್ಲಿ ಕೂಡ ಡಿಜಿಟಲ್ ತಂತ್ರಜ್ಞಾನ ಅಳವಡಿಸೋಕೆ ಪ್ರಯತ್ನ ಆರಂಭವಾಗಿದೆ. ಕಾಮನ್ ಮೊಬಿಲಿಟಿ ಕಾರ್ಡ್, ಇ ಪಾಸ್, ಸೇರಿ ಹಲವು ಡಿಜಿಟಲ್ ಫೆಸಿಲಿಟಿನ ಜಾರಿಗೆ ತಂದು ಟಿಕೆಟ್ ಕಲೆಕ್ಷನನ್ನು ಸಂಪೂರ್ಣ ಡಿಜಿಟಲೈಸ್ ಮಾಡಲು ಬಿಎಂಟಿಸಿ ತೀರ್ಮಾನಿಸಿದೆ. ಈ ಮೂಲಕವಾಗಿ ನಿಗಮದಲ್ಲಿರೋ ಎಲ್ಲಾ ಕಂಡೆಕ್ಟರ್ಗಳು ಕೆಲಸದಿಂದ ಮುಕ್ತರಾಗಲಿದ್ದಾರೆ. ಸದ್ಯ ಇರೋ ಪ್ರತಿಯೊಬ್ಬ ಕಂಡೆಕ್ಟಗಳೂ ಕಂಡೆಕ್ಟರ್ ಕಂ ಡ್ರೈವರ್ ಆದವರೇ.
ಇವಿಯಂ ಸಿಸ್ಟಮ್ ಅನ್ನು ಬಸ್ ನಲ್ಲಿ ಅಳವಡಿಸುವ ಮೂಲಕ ,ಮೆಟ್ರೋ ಮಾದರಿಯಲ್ಲಿ ಟಿಕೆಟ್ ಕಲೆಕ್ಷನ್ ಪ್ಲಾನ್ ಮಾಡಿದೆ.ಪ್ರಯಾಣಿಕರಿಗೆ ಬಿಎಂಟಿಸಿ ಕಾರ್ಡ್ ನೀಡುವುದು ,ಆ ಕಾರ್ಡ್ ಅನ್ನು ಪ್ರಯಾಣಿಕರು ರೀಚಾರ್ಜ್ ಮಾಡಿಕೊಂಡು ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸುವ ವೇಳೆಯಲ್ಲಿ ಮುಂದಿನ ಡೋರ್ ನಲ್ಲಿ ಹತ್ತುವಾಗ ಇವಿಯಂ ಕಾರ್ಡನ್ನು ಸ್ವೈಪ್ ಮಾಡಬೇಕು ಮತ್ತು ಇಳಿಯುವಾಗ ಹಿಂದಿನ ಡೂರ್ ಬಳಸಿ ಇಳಿಯಬೇಕು.ಇಳಿಯುವಾಗಲೂ ಕೂಡ ಕಾರ್ಡನ್ನು ಸ್ವೈಪ್ ಮಾಡಬೇಕು. ಇದು ಬಿಎಂಟಿಸಿ ಸಂಸ್ಥೆಯವರು ನಷ್ಟದ ಸುಳಿಯಿಂದ ಹೊರಬರಲು ಮಾಡಿಕೊಂಡಿರುವ ಪ್ಲಾನ್. ಈ ಪ್ಲಾನ್ ಎಷ್ಟರ ಮಟ್ಟಿಗೆ ಯಶಸ್ಸು ಕಾಣುವುದು ಎಂದು ನೋಡಬೇಕು.
ಸಂಬಳ ಉಳಿಸುವ ನಿಟ್ಟಿನಲ್ಲಿ ಡಿಜಿಟಲ್ ತಂತ್ರಜ್ಞಾನ ದ ಮೊರೆ ಹೋಗುತ್ತಿದ್ದಾರೆ.ಇದರಿಂದ ಸಾಕಷ್ಟು ನೌಕರರಿಗೆ ಕಷ್ಟ ಆಗುವ ಸಾದ್ಯತೆ ಹೆಚ್ಚಿದೆ.ಈಗಾಗಲೇ ಎಲೆಕ್ಟ್ರಿಕಲ್ ಬಸ್ ಗಳು ಬಂದಿರುವುದರಿಂದ ಚಾಲಕರು ಕೆಲಸ ಕಳೆದುಕೊಂಡಿದ್ದಾರೆ ಜೊತೆಗೆ ಮೆಕ್ಯಾನಿಕ್ ಗಳ ಕೆಲಸ ಕೊಡ ಹೋಗುತ್ತಿದೆ , ಈಗ ನಿರ್ವಾಹಕರ ಕೆಲಸ ಕೂಡ ಕಳೆದುಕೊಳ್ಳುವುದು ಎಷ್ಟು ಸರಿ..! ಇರುವ ಉದ್ಯೋಗಗಳನ್ನು ಕಡಿತಗೊಳಿಸುತ್ತೇವೆ ಎಂದರೆ ನಾವು ಇದನ್ನು ಖಂಡಿಸುತ್ತೇವೆ ಎಂದು .ಬಿಎಂಟಿಸಿ ಸಂಘದ ನೌಕರರು ಹೇಳಿದ್ದಾರೆ.
ಬಿಎಂಟಿಸಿ ಯ ಎಲ್ಲಾ ಕಂಡಕ್ಟರ್ ಗಳನ್ನು,ಡ್ರೈವರ್ ಗಳಾಗಿ ಮಾಡುತ್ತೇವೆ ಎಂದರೆ ಮಹಿಳಾ ಕಂಡಕ್ಟರ್ ಗಳು ಎಲ್ಲಿಗೆ ಹೋಗಬೇಕು.ಅವರ ಜೀವಕ್ಕೆ ಮುಂದಿನ ದಾರಿ ಏನು..? ಎಲ್ಲವನ್ನೂ ಕೂಲಂಕುಷವಾಗಿ ಪರಿಶೀಲಿಸಿ ಮುಂದುವರೆಯುವುದು ಉತ್ತಮ.
ಸದ್ಯದ ಪರಿಸ್ಥಿತಿಯಲ್ಲಿ ಕಂಡೆಕ್ಟರ್ ಇಲ್ಲದೇ ಬಸ್ ಊಹಿಸೋದು ಅಸಾಧ್ಯ, ಹೆಚ್ಚಿನ ಮಂದಿಗೆ ಡಿಜಿಟಲ್ ತಂತ್ರಜ್ಞಾನ ಒಪ್ಪಿಕೊಳ್ಳೋಕೆ ಸಮಯ ಬೇಕಾಗಲಿದೆ. ಆದರೂ ಬಿಎಂಟಿಸಿ ಸಿಬ್ಬಂದಿ ಹೊರೆ ತಪ್ಪಿಸೋ ನಿಟ್ಟಿನಲ್ಲಿ ಈ ಯೋಜನೆ ಜಾರಿಗೆ ಮುಂದಾಗಿದೆ. ಮುಂದಿನ ಒಂದೆರಡು ವರ್ಷದಲ್ಲಿ 100 ಶೇಕಡಾದಷ್ಟು ಕಂಡೆಕ್ಟರ್ ಲೆಸ್ ಬಸ್ ರಸ್ತೆಗಿಳಿಯಬೇಕು ಅನ್ನೋದು ಬಿಎಂಟಿಸಿ ಲೆಕ್ಕಾಚಾರ. ಆದರೆ ಇದು ಎಷ್ಟರಮಟ್ಟಿಗೆ ಕೈಗೂಡಲಿದೆ ಎಂಬುದನ್ನು ಕಾದು ನೋಡ್ಬೇಕಿದೆ.