ಅವರು ಭಾರತೀಯ ಚಿತ್ರ ನಟರಾಗಿದ್ದು ಇವರು ತೆಲುಗು ಸಿನೆಮಾಗಳಲ್ಲಿ ಅಭಿನಯಿಸಿದ್ದಾರೆ. ತೆಲುಗು ಚಿತ್ರಗಳೊಂದಿಗೆ ದೀರ್ಘಕಾಲದಿಂದ ಸಂಬಂಧವಿಟ್ಟುಕೊಂಡಿರುವ ಕುಟುಂಬದಿಂದ ಬಂದ ಅಲ್ಲು ಅರ್ಜುನ್ ಅವರು ನಿರ್ಮಾಪಕರಾದ ಅಲ್ಲು ಅರವಿಂದ್ ಅವರ ಪುತ್ರರಾಗಿದ್ದು ಇವರ ಹೆಸರಾಂತ ಸಂಬಂಧಿಗಳಲ್ಲಿ ಇವರ ಚಿಕ್ಕಪ್ಪರಾದ ಚಿರಂಜೀವಿ ಮತ್ತು ಪವನ್ ಕಲ್ಯಾಣ್ ಮತ್ತು ಸೋದರ ಸಂಬಂಧಿಯಾದ ರಾಮ್ ಚರಣ್ ತೇಜಾ ಸೇರಿದ್ದಾರೆ. ಆದ್ದರಿಂದ ನಾವು ಇಲ್ಲಿ ಅಲ್ಲೋ ಅರ್ಜುನ್ ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಇವರು ಸಂತೋಷ್ ಆರ್ಯ ಅವರ ಕಟ್ಟಾ ಅಭಿಮಾನಿಯಾಗಿದ್ದಾರೆ. ಕೌಟುಂಬಿಕ ವರ್ಗದ ಪ್ರೇಕ್ಷಕರನ್ನು ಗುರಿಯಾಗಿರಿಸಿದ ಚಿತ್ರಗಳನ್ನು ನೀಡುವಲ್ಲಿ ಹೆಸರಾದ ಅಲ್ಲು ಅರ್ಜುನ್ ಅವರು ತಮ್ಮ ಅಭಿನಯಕ್ಕಾಗಿ ಫಿಲ್ಮ್ಫೇರ್ ಮತ್ತು ನಂದಿ ಪ್ರಶಸ್ತಿಯನ್ನು ಒಳಗೊಂಡು ಪ್ರಮುಖ ಮನ್ನಣೆಗಳನ್ನು ಗಳಿಸಿದ್ದಾರೆ. 2003ರಲ್ಲಿ ಅಲ್ಲು ಅರ್ಜುನ್ ಅವರು ಕೆ. ರಾಘವೇಂದ್ರ ರಾವ್ಅವರ ಗಂಗೋತ್ರಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ತದನಂತರ ಇವರು 2004 ರ ರೊಮಾನ್ಸ್ ಚಿತ್ರ ಆರ್ಯ ದ ಪ್ರಧಾನ ಪಾತ್ರದಲ್ಲಿ ನಟಿಸಿದರು.
ಈ ಚಿತ್ರದಲ್ಲಿ ವಿದ್ಯಾರ್ಥಿಯೊಬ್ಬನು ನಾಯಕಿಯ ಮೇಲೆ ಏಕಮುಖ ಪ್ರೀತಿಯನ್ನು ಮಾಡುವುದು ಚಿತ್ರಿತವಾಗಿದೆ. ಈ ಪ್ರಾರಂಭದ ಚಲನಚಿತ್ರಗಳು ಅಲ್ಲು ಅರ್ಜುನ್ ಅವರ ಅಭಿಮಾನ ವೃಂದವನ್ನು ಸೃಷ್ಟಿಸಿದವು. ಇವರ 2004 ರ ಹಿಟ್ ಚಿತ್ರದ ಮುಂದಿನ ಭಾಗವಾದ ಆರ್ಯ 2 ಚಿತ್ರವನ್ನು ಒಳಗೊಂಡು ಇನ್ನಿತರ ಇತ್ತೀಚಿನ ಚಿತ್ರಗಳ ಪಾತ್ರಗಳು ಅಲ್ಲು ಅರ್ಜುನ್ ಅವರ ಸೊಗಸುಗಾರಿಕೆಯ ಪಾತ್ರಗಳನ್ನು ಕೇಂದ್ರೀಕರಿಸುತ್ತವೆ. ಹೆಚ್ಚಿನ ಹುಡುಗಿಯರು ಇವರ ಅಭಿಮಾನಿಗಳು ಎಂದರೂ ತಪ್ಪಿಲ್ಲ.
ಹಾಗೆಯೇ ಫಿಲ್ಮ್ ಪ್ರೊಡ್ಯೂಸರ್ ಕೂಡ ಆಗಿದ್ದಾರೆ. ಹಾಗೆಯೇ ಡಾನ್ಸರ್, ಪ್ಲೇಬಾಕ್ ಸಿಂಗರ್ ಕೂಡ ಆಗಿದ್ದಾರೆ. ಇವರ ವೇತನ 18ಕೋಟಿ ಆಗಿದೆ. ಸದ್ಯದಲ್ಲಿ 350ಕೋಟಿಗಳ ಒಡೆಯ ಆಗಿದ್ದಾರೆ. ಬಿಎಂಡಬ್ಲು ಸೇರಿದಂತೆ ಅನೇಕ ಕಾರುಗಳನ್ನು ಹೊಂದಿದ್ದಾರೆ. ಇವರ ತಂದೆಯ ಹೆಸರು ಅಲ್ಲು ಅರವಿಂದ್ ಮತ್ತು ತಾಯಿಯ ಹೆಸರು ನಿರ್ಮಲಾ ಅಲ್ಲು. ಹಾಗೆಯೇ ಇವರಿಗೆ ಅಲ್ಲು ಸಿರಿಶ್ ಎನ್ನುವ ಸಹೋದರ ಇದ್ದಾರೆ. ಇವರು ಸ್ನೇಹಾರೆಡ್ಡಿ ಅವರನ್ನು 2011ರಲ್ಲಿ ವಿವಾಹವಾಗಿದ್ದಾರೆ. ಇವರಿಬ್ಬರಿಗೆ ಆಯಾನ್ ಎಂಬ ಮಗ ಮತ್ತು ಆರ್ಹಾ ಎನ್ನುವ ಮಗಳಿದ್ದಾಳೆ.