ಎಲ್ಲರಿಗೂ ಬೇರೆಯವರ ಕಷ್ಟದ ಬಗ್ಗೆ ಎಲ್ಲರಿಗೂ ಕನಿಕರ ಬರುವುದು ಇಲ್ಲ ಆದರೆ ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಇನ್ನೊಬ್ಬರಿಗೆ ಸಹಾಯ ಮಾಡುವ ಗುಣ ಎಲ್ಲರಿಗೂ ಮನಸೆಳೆಯುತ್ತದೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೇವಲ ತೆರೆಯ ಮೇಲೆ ಮಾತ್ರವಲ್ಲದೆ ನಿಜಜೀವನದಲ್ಲಿ ಸಾಕಷ್ಟು ಸಾಮಾಜಿಕ ಕಾರ್ಯ ಕೆಲಸ ಮಾಡಿದ್ದಾರೆ ಬಡವರಿಗೆ ಮತ್ತು ಕಷ್ಟ ಎಂದವರಿಗೆ ಸಹಾಯ ಮಾಡುತ್ತಿದ್ದರು ಜೊತೆಗೆ ಊಟ ಮಾಡಿಲ್ಲ ಎಂದವರಿಗೆ ಮನೆಯ ಹತ್ತಿರ ಬಂದವರಿಗೆ ಊಟ ಮಾಡಿಸದೆ ಹಾಗೆ ಕಳಿಸುತ್ತಿರಲಿಲ್ಲ, ಇಂತಹ ಮನುಷ್ಯ ಇದೀಗ ನಮ್ಮ ಜೊತೆ ಇಲ್ಲದಿರುವುದು ನಮ್ಮ ದುರ್ದೈವವಾಗಿದೆ ಅವರ ಒಂದೊಂದು ಕೆಲಸ ಕಾರ್ಯ ನಡೆ ನುಡಿಯನ್ನು ಎಂದು ಮರೆಯಲು ಸಾಧ್ಯ ವಿಲ್ಲ ನಾವು ಈ ಲೇಖನದ ಮೂಲಕ ಪುನೀತ್ ರಾಜಕುಮಾರ ಅವರೂ ಹೇಳಿರುವ ಹಿತ ನುಡಿಗಳ ಬಗ್ಗೆ ತಿಳಿದುಕೊಳ್ಳೊಣ.
ಹಿಡಿದು ಇರೋ ಜ್ವರ ಬಿಡಬೇಕು ಅಂದರೆ ಒಂದು ಸಲ ಮೈ ತುಂಬಾ ಬೆವರು ಬರಬೇಕು ದುಃಖ ಕಡಿಮೆ ಆಗಬೇಕು ಅಂದರೆ ಒಂದು ಸಲ ಮೈ ಬಿಚ್ಚಿ ಅಳಬೇಕು ಹಾಗೆಯೇ ಕೋಪ ತಾಪ ಆಚೆ ಹೋಗಬೇಕು ಅಂದರೆ ಕಣ್ಣು ಮುಚ್ಕೊಂಡು ಉಸಿರನ್ನು ಒಳಗೆ ಎಳೆದು ಆಚೆ ಬಿಡಬೇಕು ನಮಗೆ ಯಾವುದು ಬೇಡವೋ ಅದನ್ನು ಆಚೆ ಹಾಕಿದ್ರೆ ಮಾತ್ರ ಆರೋಗ್ಯ ಚೆನ್ನಾಗಿ ಇರುತ್ತದೆ ಫ್ಯಾಮಿಲಿ ಲೈಫ್ ಚೆನ್ನಾಗಿ ಇರಬೇಕು ಅಂದರೆ ಇದೆ ಸೂತ್ರ ವಾಗಿದೆ ಸಿಟ್ಟಿನ ಮೂಟೆ ಕಟ್ಟಿ ಎಸೆಯಬೇಕು ಇಗೋ ಗಳನ್ನು ಮಾರಿದಾಗ ಮಾತ್ರ ನಾವು ಚೆನ್ನಾಗಿ ಇರಬಹುದು.
ನೋವುಗಳನ್ನು ಕೊಟ್ಟು ಸಂತೋಷ ವನ್ನು ಎಕ್ಸ್ ಚೇಂಜ್ ಮಾಡಿಕೊಳ್ಳಬೇಕು ಹಾಗಿದ್ದಾಗ ಮಾತ್ರ ಸಂತೋಷವಾಗಿ ಇರಬಹುದು ಎಲ್ಲೋ ಮೂಲೆಯಲ್ಲಿ ಚಿಕ್ಕದೊಂದು ಹಾರ್ಟ್ ಇಟ್ಟುಕೊಂಡು ಇರುತ್ತೇವೆ ಆದರೂ ಹಾರ್ಟ್ ಗೆ ಸಣ್ಣ ನೋವು ಆದ್ರೂ ಎಷ್ಟೇ ದೊಡ್ಡ ದೇಹ ಆದರೂ ಸಹ ಅಲುಗಾಡಿ ಹೋಗುತ್ತದೆ ಯಾವ್ದೋ ಕ್ರಾಸ್ ಅಲ್ಲಿ ಎಲ್ಲೋ ಮೂಲೆಯಲ್ಲಿ ಒಂದು ಚಿಕ್ಕ ಮನೆಯನ್ನು ಕಟ್ಟಿಕೊಂಡು ಬದುಕುತ್ತ ಇರುತ್ತೇವೆ ಆದರೆ ಮನೆಯಲ್ಲಿ ಇರುವರಿಗೆ ಸಣ್ಣ ನೋವು ಆದರೂ ಸಹ ನಾವು ತರ ತರ ನಡುಗಿ ಹೋಗುತ್ತೇವೆ .
ಅಷ್ಟು ನಮಗೆ ನಮ್ಮ ಫ್ಯಾಮಿಲಿ ಮುಖ್ಯವಾಗಿರುತ್ತದೆ ಮನೆಯವರ ನಡುವಿನ ಬಾಂಧವ್ಯ ಅಂಥದ್ದು ಆಗಿರುತ್ತದೆ ಎಷ್ಟೇ ದೂರದಿಂದ ನೋಡಿದ್ದರು ನಮ್ಮ ಮನೆ ಕಾಣಬೇಕು ಅಷ್ಟು ದೊಡ್ಡ ಮನೆಯನ್ನು ಕಟ್ಟಿಸೋದು ಅಲ್ಲ ಅದರ ಬದಲಾಗಿ ಎಷ್ಟೇ ದೂರ ಹೋದರು ನಮ್ಮ ಮನೆ ನಮಗೆ ನೆನಪು ಆಗುವ ಹಾಗೆ ಅಂತ ಮನೆಯನ್ನು ಕಟ್ಟಬೇಕು ಪುನೀತ್ ರಾಜಕುಮಾರ್ ಅವರು ಮನೆಯ ಮಹಿಮೆಯ ಬಗ್ಗೆ ಸುಂದರವಾಗಿ ಹೇಳಿದ್ದಾರೆ
ಮನೆ ದೊಡ್ಡದು ಸಣ್ಣದು ಮುಖ್ಯವಲ್ಲ .ನಮ್ಮದು ಎಂಬ ಭಾವನೆ ಹಾಗೆಯೇ ನಮ್ಮ ಮನೆಯೆ ಸ್ವರ್ಗ ಅನ್ನುವ ಹಾಗೆ ಮನೆ ಇರಬೇಕು ಮನೆ ಚಿಕ್ಕದಾದರೂ ನಮ್ಮ ಮನೆ ಎನ್ನುವ ಖುಷಿಯೇ ದೊಡ್ಡದು ಹಾಗೆಯೇ ನಮ್ಮವರು ಎನ್ನುವ ಹೆಮ್ಮೆಯ ಮುಖ್ಯವಾಗಿದೆ ಹೀಗೆ ಮನಸ್ಸು ಹಾಗೂ ಮನೆ ಹೇಗಿರಬೇಕು ಎಂಬುದನ್ನು ಪುನೀತ್ ರಾಜಕುಮಾರ ಅವರು ತಿಳಿಸಿದ್ದಾರೆ ಅವರ ನೆನಪು ಮಾತ್ರ ಚಿರಸ್ಮರಣೀಯವಾಗಿದೆ.