WhatsApp Group Join Now
Telegram Group Join Now

ಬಂಗಾರ ಯಾರಿಗೆ ತಾನೇ ಬೇಡ, ಬಂಗಾರವನ್ನು ಎಲ್ಲರೂ ಇಷ್ಟಪಡುತ್ತಾರೆ. ನಮ್ಮ ಹತ್ತಿರ ಬಂಗಾರ ಇದ್ದರೆ ಆಸ್ತಿಯನ್ನು ಹೊಂದಿದಂತೆ ಎಂದು ಹೇಳುತ್ತಾರೆ. ಸಾಮಾನ್ಯವಾಗಿ ಹೆಣ್ಣುಮಕ್ಕಳು ಹೆಚ್ಚು ಬಂಗಾರ ಧರಿಸುತ್ತಾರೆ ಆದರೆ ಬಂಗಾರ ಧರಿಸುವ ಪುರುಷರು ಇದ್ದಾರೆ ಅವರು ಯಾರು, ಎಲ್ಲಿಯವರು ಎಂದು ಈ ಲೇಖನದಲ್ಲಿ ನೋಡೋಣ.

ನಮ್ಮ ಭಾರತದಲ್ಲಿ ಬಂಗಾರಕ್ಕೆ ಹೆಚ್ಚು ಬೆಲೆ ಹಾಗೂ ಪ್ರಾಮುಖ್ಯತೆಯಿದೆ ಅದರಲ್ಲೂ ನಮ್ಮ ದೇಶದ ಹೆಣ್ಣುಮಕ್ಕಳಿಗೆ ಬಂಗಾರದ ಮೇಲೆ ಎಲ್ಲಿಲ್ಲದ ಪ್ರೀತಿ. ಮದುವೆ ಸಮಾರಂಭಗಳಲ್ಲಿ ಹೆಣ್ಣುಮಕ್ಕಳು ಹೆಚ್ಚಾಗಿ ಬಂಗಾರವನ್ನು ಖರೀದಿಸುತ್ತಾರೆ ಮತ್ತು ಧರಿಸುತ್ತಾರೆ ಆದರೆ ಕೆಲವು ಪುರುಷರು ಬಂಗಾರವನ್ನು ಧರಿಸುತ್ತಾರೆ. ಸನ್ನಿ ವಾಗಚೋರೆ ಇವರು ಮಹಾರಾಷ್ಟ್ರದ ಪುಣೆಗೆ ಸೇರಿದ್ದಾರೆ. ಇವರು ಬಿಸಿನೆಸ್ ಮ್ಯಾನ್ ಬಾಲಿವುಡ್ ನ ಕೆಲವು ಸಿನಿಮಾಗಳಿಗೆ ಪ್ರೊಡ್ಯೂಸರ್ ಆಗಿ ಕೆಲಸ ಮಾಡಿದ್ದಾರೆ. ಇವರನ್ನು ದ ಗೋಲ್ಡ್ ಮ್ಯಾನ್ ಆಫ್ ಪುಣೆ ಎಂದು ಕರೆಯುತ್ತಾರೆ. ಇವರಿಗೆ ಈಗ ಮೂವತ್ತು ವರ್ಷ ಇವರಿಗೆ ಚಿಕ್ಕವಯಸ್ಸಿನಿಂದಲೂ ಬಂಗಾರವೆಂದರೆ ಪ್ರೀತಿ.‌ ಇವರ ತಂದೆ ಕೂಡ ಬ್ಯುಸಿನೆಸ್ ಮ್ಯಾನ್. ಸನ್ನಿ ವಾಗಚೋರೆ ಇವರು ಪ್ರತಿದಿನ ನಾಲ್ಕರಿಂದ ಐದು ಕೆಜಿ ಬಂಗಾರವನ್ನು ಧರಿಸುತ್ತಾರೆ. ಈಗಿನ ಬಂಗಾರದ ರೇಟಿಗೆ ಸುಮಾರು ಅವರು ಎರಡು ಕೋಟಿಗಿಂತ ಅಧಿಕ ಬೆಲೆಯ ಬಂಗಾರ ಧರಿಸುತ್ತಾರೆ. ಬಂಗಾರದ ಉಂಗುರ, ವಾಚ್, ಬ್ರಾಸ್ಲೈಟ್, ಕತ್ತಿಗೆ ಚೈನ್ ಹಾಕಿಕೊಳ್ಳುತ್ತಾರೆ. ಅವರ ಬಳಿ ಬಂಗಾರದಿಂದ ಮಾಡಿರುವ ಶೂ ಇದೆ. ಇವರ ಬಳಿ ದುಬಾರಿ ವೆಚ್ಚದ ಕಾರುಗಳಿವೆ ಕೆಲವು ಕಾರುಗಳಿಗೆ ಗೋಲ್ಡನ್ ಲೇಯರ್ ಇದೆ. ಇವರಿಗೆ ಬಾಲಿವುಡ್ ಸ್ಟಾರ್ ನಟರೊಂದಿಗೆ ಸಂಬಂಧವಿದೆ. ಇವರು ಹೆಚ್ಚು ಬಂಗಾರವನ್ನು ಧರಿಸಿದ್ದರಿಂದ ಹೊರಗಡೆ ಹೋದಾಗ ಅವರ ಜೊತೆ ಬಾಡಿಗಾರ್ಡ್ಸ್ ಇರುತ್ತಾರೆ.

ಸಂಜಯ್ ಗುಜಾರ್ ಇವರು ಸನ್ನಿ ಅವರ ಬೆಸ್ಟ್ ಫ್ರೆಂಡ್. ಇವರು ಮಹಾರಾಷ್ಟ್ರದ ಪುಣೆಯವರು. ಇವರು ಕೂಡ ಪ್ರತಿದಿನ 4ಕೆಜಿ ಬಂಗಾರವನ್ನು ಧರಿಸುತ್ತಾರೆ ಅಂದರೆ 2 ಕೋಟಿ ಮೌಲ್ಯದ ಬಂಗಾರವನ್ನು ಧರಿಸುತ್ತಾರೆ. ಗೋಲ್ಡ್ ರಿಂಗ್, ವಾಚ್, ಬ್ರಾಸ್ಲೈಟ್, ಕತ್ತಿಗೆ ಬಂಗಾರದ ಚೈನ್ ಹಾಕಿಕೊಳ್ಳುತ್ತಾರೆ. ಇವರ ಮೊಬೈಲ್ ಕವರ್ ಕೂಡ ಬಂಗಾರದ್ದಾಗಿದೆ. ಇವರ ಲಕ್ಕಿ ನಂಬರ್ ಸೆವೆನ್ ಅನ್ನು ಗೋಲ್ಡ್ ಚೈನ್ ಮಾಡಿಸಿ ಹಾಕಿಕೊಂಡಿದ್ದಾರೆ. ಇವರು ನಟರಾಗಿದ್ದಾರೆ, ಕೆಲವು ಟಿವಿ ಶೋಗಳಲ್ಲಿ ಗೆಸ್ಟ್ ಆಗಿ ಕಾಣಿಸಿಕೊಳ್ಳುತ್ತಾರೆ. ಸನ್ನಿ ಮತ್ತು ಸಂಜಯ್ ಬೆಸ್ಟ್ ಫ್ರೆಂಡ್ಸ್ ಆಗಿರುವ ಕಾರಣ ಗೋಲ್ಡನ್ ಚಾಯ್ಸ್ ಎಂಬ ಹೆಸರಿನ ಕಾರಿದೆ ಮತ್ತು ಇದೇ ಹೆಸರಿನ ಎನ್ ಜಿಓ ಪ್ರಾರಂಭಿಸಿದ್ದಾರೆ. ಪ್ರಶಾಂತ್ ಲಕ್ಷ್ಮಣ್ ಇವರು ಮಹಾರಾಷ್ಟ್ರದ ಪುಣೆಯಲ್ಲಿ ಒಂದು ಬಡ ಕುಟುಂಬದಲ್ಲಿ ಜನಿಸಿದರು. ಇವರಿಗೆ ಚಿಕ್ಕವಯಸ್ಸಿನಲ್ಲಿಯೇ ಬಂಗಾರವನ್ನು ಧರಿಸಿಕೊಳ್ಳಬೇಕೆಂಬ ಆಸೆ ಇತ್ತು. ಕಾಲೇಜು ಮುಗಿಸಿದ ತಕ್ಷಣ ಇವರು ಒಂದು ಬಿಸಿನೆಸ್ ಪ್ರಾರಂಭಿಸಿ ಅದರಲ್ಲಿ ಯಶಸ್ವಿಯಾಗುತ್ತಾರೆ. ವ್ಯಾಪಾರದಲ್ಲಿ ಹೆಚ್ಚು ಲಾಭ ಗಳಿಸಿ ಬಂಗಾರವನ್ನು ಖರೀದಿಸುತ್ತಾರೆ. ತಮ್ಮ 10 ಬೆರಳುಗಳಿಗೆ 10 ಗೋಲ್ಡನ್ ರಿಂಗ್ಸ್ ಹಾಕಿಕೊಳ್ಳುತ್ತಾರೆ, ಗೋಲ್ಡನ್ ಬ್ರಾಸ್ಲೈಟ್ಸ್, ಗೋಲ್ಡನ್ ಚೈನ್, ಗೋಲ್ಡನ್ ಶೂ ಅನ್ನು ಹೊಂದಿದ್ದಾರೆ. ಇವರು ತಮ್ಮ ವ್ಯಾಪಾರದಲ್ಲಿ ಬಂದ ಲಾಭದಿಂದ ಬಡವರಿಗೆ ಸಹಾಯ ಕೂಡ ಮಾಡುತ್ತಾರೆ.

ದತ್ತಾತ್ರೇಯ ಇವರು ಮಹಾರಾಷ್ಟ್ರದ ಪುಣೆಯವರು, ಇವರು ಬ್ಯುಸಿನೆಸ್ ಮ್ಯಾನ್. ಇವರದ್ದು ಒಂದು ಚಿಟ್ ಫಂಡ್ ಕಂಪನಿ ಇದೆ. ಇವರು 2007ರಲ್ಲಿ ತಮ್ಮ ಹುಟ್ಟುಹಬ್ಬದ ಸಲುವಾಗಿ ಒಂದು ಕೋಟಿ ಇಪ್ಪತ್ತೈದು ಲಕ್ಷ ಬೆಲೆಬಾಳುವ ಬಂಗಾರದಿಂದ ಮಾಡಿರುವ ಶರ್ಟ್ ಅನ್ನು ಖರೀದಿಸುತ್ತಾರೆ. ಈ ಶರ್ಟ್ ಅನ್ನು 15 ಜನರು 16 ದಿನಗಳಲ್ಲಿ ತಯಾರಿಸಿದ್ದಾರೆ. ಈ ಶರ್ಟ್ ತೂಕ 3 ವರೆ ಕೆಜಿ. ಅತ್ಯಂತ ಬೆಲೆಬಾಳುವ ಶರ್ಟ್ ಎಂದು ಗಿನ್ನಿಸ್ ದಾಖಲೆ ಹೊಂದಿದೆ. ಇವರು ಗೋಲ್ಡನ್ ಚೈನ್, ವಾಚ್, ಬ್ರಾಸ್ಲೈಟ್ಸ್ ಧರಿಸಿಕೊಳ್ಳುತ್ತಿದ್ದರು. 2016ರಲ್ಲಿ ಕೆಲವು ರೌಡಿಗಳು ಇವರನ್ನು ಹಣಕ್ಕಾಗಿ ಕೊಲೆ ಮಾಡುತ್ತಾರೆ. ಪಂಕಜ್ ಪರಾಕ್ ಇವರು ಮಹಾರಾಷ್ಟ್ರದವರು ಎಂಟನೇ ಕ್ಲಾಸ್ ವರೆಗೆ ಓದಿದ್ದಾರೆ. ನಂತರ ಇವರು ತಮ್ಮ ತಂದೆಯವರು ಮಾಡುತ್ತಿದ್ದ ವ್ಯಾಪಾರವನ್ನು ಮುಂದುವರಿಸುತ್ತಾರೆ. ಇವರು 2014 ರಲ್ಲಿ ತಮ್ಮ ಹುಟ್ಟುಹಬ್ಬಕ್ಕಾಗಿ 4ಕೆಜಿ ಬಂಗಾರದಿಂದ ಒಂದು ಶರ್ಟ್ ಅನ್ನು ರೆಡಿ ಮಾಡಿಸುತ್ತಾರೆ. ಈ ಶರ್ಟಿನ ಬೆಲೆ ಒಂದು ವರೆ ಕೋಟಿ ರೂಪಾಯಿ. ಈ ಶರ್ಟ್ ಅನ್ನು 20 ಜನರು ಮೂರು ತಿಂಗಳುಗಳಲ್ಲಿ ತಯಾರಿಸಿದ್ದಾರೆ. ಅತಿ ಹೆಚ್ಚು ಮೌಲ್ಯ ಹೊಂದಿರುವ ದತ್ತಾತ್ರೇಯ ಅವರ ಶರ್ಟಿನ ದಾಖಲೆಯನ್ನು ಇವರು ಬ್ರೇಕ್ ಮಾಡಿದ್ದಾರೆ. ಈ ರೀತಿ ಬಂಗಾರವನ್ನು ಧರಿಸಿಕೊಳ್ಳುವ ಪುರುಷರು ನಮ್ಮ ದೇಶದಲ್ಲಿ ಸಾಕಷ್ಟು ಜನರಿದ್ದಾರೆ ಅದರಲ್ಲೂ ಮಹಾರಾಷ್ಟ್ರ ರಾಜ್ಯದಲ್ಲಿ ಅತಿ ಹೆಚ್ಚು ಜನರಿದ್ದಾರೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: