WhatsApp Group Join Now
Telegram Group Join Now

ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸರ್ಕಾರ ಜಮೀನುಗಳಲ್ಲಿ ಮನೆ ನಿರ್ಮಿಸಿಕೊಂಡವರ ಬಹು ನಿರೀಕ್ಷೆಯ ಅಕ್ರಮ-ಸಕ್ರಮ ಯೋಜನೆಗೆ ಸರ್ಕಾರ ಚಾಲನೆ ನೀಡುತ್ತಿದ್ದಂತೆ, ಅರ್ಜಿದಾರರಲ್ಲಿ ಮತ್ತೆ ನಿರೀಕ್ಷೆ ಗರಿಗೆದರಿದೆ. ಕಂದಾಯ ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡ ಕಾರಣಕ್ಕೆ ಸರ್ಕಾರಿ ಸೌಲಭ್ಯಗಳಿಂದ ವಂಚಿತಗೊಂಡ ಜನರಲ್ಲಿ ಈಗಿನ ಯೋಜನೆ ಹೊಸ ಆಶಾಭಾವ ಮೂಡಿಸಿದೆ. ಕಳೆದ ವರ್ಷ ಮಾರ್ಚ್ 31ರೊಳಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದರೂ ನಂತರದಲ್ಲಿ ಕೋವಿಡ್‌ ಹಿನ್ನೆಲೆಯಲ್ಲಿ ಯೋಜನೆಗೆ ಸ್ಥಗಿತಗೊಂಡಿತ್ತು.

ಕೋವಿಡ್‌ ಎರಡನೇ ಅಲೆ ತಗ್ಗುತ್ತಿರುವ ಸಂದರ್ಭದಲ್ಲಿ ಮತ್ತೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದ್ದರಿಂದ ಬಡವರಲ್ಲಿ ಹೊಸ ಕನಸು ಚಿಗುರೊಡೆದಿದೆ. ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡ ಜನರು ನಗರ ಪ್ರದೇಶದಲ್ಲೂ ಅಕ್ರಮ-ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿದ್ದರು. ಸರ್ಕಾರ ನಿಗದಿಪಡಿಸಿದ ಪ್ರಕಾರ ಜಾಗದ ಅಳತೆ ಆಧರಿಸಿ ದಂಡ ಕಟ್ಟಲಿಕ್ಕೂ ಮುಂದೆ ಬಂದಿದ್ದರು.

ಇದರ ಪರಿಣಾಮ ಇಲ್ಲಿನ ನಗರಸಭೆ ಕಚೇರಿಗೆ 18 ಲಕ್ಷ ರೂಪಾಯಿ ಮುಂಗಡವೂ ಸಲ್ಲಿಕೆಯಾಗಿತ್ತು. ಮಾರ್ಚ್ 31, 2019ರ ನಂತರ ಅರ್ಜಿ ಇತ್ಯರ್ಥಪಡಿಸದ ಹಿನ್ನೆಲೆಯಲ್ಲಿ ಬಹುತೇಕರು ಅರ್ಜಿ ವಾಪಸ್‌ ಪಡೆದಿದ್ದರು. ಸರ್ಕಾರ ಕಂದಾಯ ಭೂಮಿಯಲ್ಲಿ ವಾಸವಾಗಿರುವ ಮನೆಗಳನ್ನು ಸಕ್ರಮ ಗೊಳಿಸುವ ಆದೇಶ ಹೊರಡಿಸುತ್ತಿದ್ದಂತೆ ಬಹುತೇಕರಲ್ಲಿ ಸಂತಸ ಮೂಡಿದೆ. ಮಾ.31, 2022ರ ತನಕವೂ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದರಿಂದ ಮತ್ತೆ ಅರ್ಜಿ ಸಲ್ಲಿಸುವ ಸಿದ್ಧತೆಗಳು ಗರಿಗೆದರಿವೆ.

ಕಚ್ಚಾ ಲೇಔಟ್‌ಗಳನ್ನು ಪಕ್ಕಾ ಮಾಡಿಕೊಳ್ಳುವ ಧಾವಂತ ನಗರದಲ್ಲಿ ಕಂಡುಬಂದಿದ್ದು, ಅರ್ಜಿ ಸ್ವೀಕರಿಸುವ ಪ್ರಕ್ರಿಯೆಯೂ ಚುರುಕು ಪಡೆದಿದೆ. ಈಗ ಅಕ್ರಮವಾಗಿ ಮನೆ ನಿರ್ಮಿಸಿಕೊಂಡ ಜನರಿಗೆ ಅದನ್ನು ಸಕ್ರಮ ಮಾಡಿಕೊಳ್ಳಲು ನೀಡಿದ ಅವಧಿಯನ್ನು ಸರ್ಕಾರ ವಿಸ್ತರಿಸಿ ಅದರ ದಿನಾಂಕವನ್ನು ಪ್ರಕಟಿಸಲು ಸೂಚನೆ ನೀಡಿದೆ. ಸರ್ಕಾರದ ಜಾಗದಲ್ಲಿ ಜನರು ಅಕ್ರಮವಾಗಿ ಮನೆಗಳನ್ನು ಕಟ್ಟಿಕೊಂಡಿದ್ದರೆ ಅದನ್ನು ಈಗ ಸಕ್ರಮ ಮಾಡಿಕೊಳ್ಳಬಹುದು. ಸಕ್ರಮ ಮಾಡಿಕೊಳ್ಳಲು ಅರ್ಜಿ ಸಲ್ಲಿಸಬೇಕು. ಈ ಅರ್ಜಿ ಸಲ್ಲಿಸುವ ಅವಧಿಯನ್ನು ಸರ್ಕಾರ ವಿಸ್ತರಿಸಿದೆ.

ಸರ್ಕಾರದ ಸೂಚನೆಯ ಪ್ರಕಾರ, ಮಾರ್ಚ್ 31, 2022 ರವರೆಗೆ ವಿಸ್ತರಿಸಿದೆ. ಇದರ ಕುರಿತಾಗಿ ವಿಧಾನ ಸಭೆಯಲ್ಲಿ ಕಂದಾಯ ಸಚಿವರಾದ ಆರ್ ಅಶೋಕ್ ಅವರು ಮಾಹಿತಿಯನ್ನು ನೀಡಿದ್ದಾರೆ. 2023 ಮಾರ್ಚ್ 31 ರ ವರೆಗೂ ಅರ್ಜಿಗಳನ್ನು ಇತ್ಯರ್ಥ ಪಡಿಸಲು ಅವಕಾಶ ನೀಡಿ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ 2015 ರ ಜನವರಿ ಒಂದಕ್ಕೆ ಮೊದಲು ಅನಧಿಕೃತವಾಗಿ ನಿರ್ಮಾಣವಾದ 30-40, 40-60, 50-80 ಅಳತೆಯ ಮನೆಗಳನ್ನು ಸಕ್ರಮ ಗೊಳಿಸಲು ಅವಕಾಶ ಕಲ್ಪಿಸಲಾಗಿದ್ದು ಫಲಾನುಭವಿಗಳು ನಿಗದಿತ ದಿನಾಂಕದ ಒಳಗೆ ಅರ್ಜಿಗಳನ್ನು ಸಲ್ಲಿಸಿ ಅಕ್ರಮ ಮನೆಗಳನ್ನು ಸಕ್ರಮ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: