WhatsApp Group Join Now
Telegram Group Join Now

ಸ್ನೇಹಿತರೆ, ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಮೈಸೂರು ರಾಜ ಮನೆತನವು ಭಾರತ ದೇಶದ ಅತಿ ಶ್ರೀಮಂತ ಕುಟುಂಬದಲ್ಲಿ ಒಂದು. ಹಲವಾರು ರಾಜರುಗಳು ಆಳ್ವಿಕೆ ನಡೆಸಿದ ಮೈಸೂರು ಸಂಸ್ಥಾನದ ರಾಜಕುಮಾರ ಶ್ರೀಕಂಠ ದತ್ತ ಒಡೆಯರ್ (Srikanth Datta Wadiyar) ಉತ್ತರಾಧಿಕಾರಿಯ ಹೆಸರನ್ನು ಹೇಳದೆ 10 ಡಿಸೆಂಬರ್ 2013 ರಂದು ನಿಧನರಾದರು. ಆ ಸಮಯದಲ್ಲಿ ಶ್ರೀಕಂಠ ದತ್ತ ಒಡೆಯರ್ ಅವರಿಗೆ ಮಕ್ಕಳಿರಲಿಲ್ಲ.

ಹೀಗಾಗಿ ಮುಖ್ಯಸ್ಥನ ಸ್ಥಾನ ಖಾಲಿ ಇದ್ದ ಕಾರಣ ರಾಜಮಾತೆಯವರಾದ ಪ್ರಮೋದ ದೇವಿ( Pramod Devi) ಯವರು ಉತ್ತರಧಿಕಾರಿಯಾಗಿ ಮಗುವನ್ನು ದತ್ತು ಪಡೆದುಕೊಳ್ಳಬೇಕಾಗುತ್ತದೆ. ಅದರಂತೆ 1992 ಮಾರ್ಚ್ 24 ರಂದು ಸ್ವರೂಪ್ ಆನಂದ್ ಗೋಪಾಲ್ ರಾಜ್ ಅರಸ್ ಮತ್ತು ತ್ರಿಪುರ ಸುಂದರಿ ದೇವಿ ದಂಪತಿಗಳಿಗೆ ಬೆಂಗಳೂರಿನಲ್ಲಿ ಜನಿಸಿದಂತಹ ಯದುವೀರ್ ಅವರನ್ನು ಆಗಿನ ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ ನಂತರದ ಮಹಾರಾಜನಾಗಿ ಪ್ರಮೋದ ದೇವಿಯವರು ದತ್ತು ಪಡೆದುಕೊಳ್ಳುತ್ತಾರೆ.

ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಶಾಪದಿಂದಲೂ ಅಥವಾ ಮತ್ಯಾವುದೋ ಕಾರಣದಿಂದಲೂ ಮೈಸೂರು ಮಹಾರಾಜರುಗಳಿಗೆ ಮಕ್ಕಳಾಗಿಲ್ಲ. ಅವರ ಇಡೀ ಸಂತತಿಯು ದತ್ತು ಪಡೆಯುವ ಮೂಲಕವೇ ಮುಂದುವರಿಯುತ್ತಾ ಬಂದಿದೆ. ಹೀಗಿರುವಾಗ ಯದುವೀರ್ ಶ್ರೀ ಕೃಷ್ಣ ದತ್ತ ಚಾಮರಾಜ ಒಡೆಯರ್ ಅವರನ್ನು ಬಾಲ್ಯದಲ್ಲಿಯೇ ದತ್ತು ಪಡೆದು, 28 ಮೇ 2015ರಂದು ವಡಿಯರ್ ರಾಜವಂಶದ 27ನೇ ಮುಖ್ಯಸ್ಥರನ್ನಾಗಿ ಮಾಡುತ್ತಾರೆ.

ಅಂದಿನಿಂದ ಇಂದಿನವರೆಗೂ ಮೈಸೂರು ಸಂಸ್ಥಾನದಲ್ಲಿ ತಮ್ಮ ಆಡಳಿತ ನಡೆಸುತ್ತಿರುವ ಯದುವೀರ್, ತ್ರಿಷಿಕಾ ಕುಮಾರಿ ಒಡೆಯರ್ ಅವರನ್ನು 2017 ಡಿಸೆಂಬರ್ 6 ನೇ ತಾರೀಖಿನಂದು ಮದುವೆಯಾದರು. ಈ ದಂಪತಿಗಳಿಗೆ ಅಧ್ಯವೀರ ನರಸಿಂಹರಾಜ ಒಡೆಯರ್ ಎಂಬ ಗಂಡು ಮಗು ಜನಿಸಿದ್ದು, ದಸರಾ ಉತ್ಸವದ(Dasara utsava) ಸಂದರ್ಭದಲ್ಲಿ ಜನರ ಮುಂದೆ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ.

ಇನ್ನು ನಮ್ಮ ಭಾರತ ದೇಶದಲ್ಲಿರುವ ಅತ್ಯಂತ ಶ್ರೀಮಂತ ಕುಟುಂಬಗಳಲ್ಲಿ ಒಂದಾಗಿರುವ ಮೈಸೂರು ಸಂಸ್ಥಾನದ ರಾಜರಾಗಿರುವ ಯದುವೀರ್ರವರು (Yaduvir) ವಿದೇಶದಲ್ಲಿ ಇಂಗ್ಲಿಷ್ ಸಾಹಿತ್ಯ ಮತ್ತು ಅರ್ಥಶಾಸ್ತ್ರ (economics) ವಿಭಾಗದಲ್ಲಿ ಪದವಿಯನ್ನು ಪಡೆದಿರುವ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ. ಇನ್ನು ರಾಜ ಮನೆತನದವರಾದರು ಬಹಳ ಸಿಂಪಲ್ಲಾಗಿ ಜೀವನ ನಡೆಸುತ್ತಿರುವ ಯದುವೀರ್ ದಂಪತಿಗಳ ವೈರಲ್ ಫೋಟೋಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: