ವೈಕುಂಠ ಏಕಾದಶಿಯ ಮಹತ್ವ ತಿಳಿದುಕೊಳ್ಳಿ

0

ಹಿಂದೂ ಸಂಪ್ರದಾಯದಲ್ಲಿ ಕೈಗೊಳ್ಳುವಂತಹ ವಿವಿಧ ಮೃತಾಚರಣೆಗಳ ಪೈಕಿ ಏಕಾದಶಿ ಪ್ರಮುಖವಾದದ್ದು ಈ ದಿನ ಮಹಾಲಕ್ಷ್ಮಿಗೆ ಅತ್ಯಂತ ಪ್ರಿಯವಾದ ದಿನವಾಗಿದೆ ಈ ದಿನ ಭಕ್ತಾದಿಗಳು ಉಪವಾಸವನ್ನು ಕೈಗೊಂಡು ಮಹಾ ವಿಷ್ಣುವಿನ ಆರಾಧನೆಯಲ್ಲಿ ತೊಡಗಿರುತ್ತಾರೆ ಹೀಗೆ ಉಪವಾಸ ಮಾಡುವುದರಿಂದ ಎಲ್ಲಾ ಪಾಪಕರ್ಮಗಳನ್ನ ಕಳೆದುಕೊಳ್ಳಬಹುದು ಎಂಬ ನಂಬಿಕೆ ಭಕ್ತರಲ್ಲಿದೆ. ಹೀಗೆ ವರ್ಷದಲ್ಲಿ ಬರುವ 24 ಏಕಾದಶಿಗಳಿಗೂ ಸಹ ಅವುಗಳದ್ದೇ ಆದ ವಿಶೇಷತೆ ಇದೆ ಅದರಲ್ಲಿ ಧನುರ್ಮಾಸದಲ್ಲಿ ಬರುವಂತಹ ವೈಕುಂಠ ಏಕಾದಶಿಯು ಅತ್ಯಂತ ಮಹತ್ವಪೂರ್ಣವಾಗಿದೆ. ಈ ಏಕಾದಶಿಯನ್ನು ಮಹಾ ವಿಷ್ಣುವಿನ ವೈಕುಂಠದ ದ್ವಾರ ತೆರೆದಿರುತ್ತದೆ ಹಾಗಾಗಿಯೇ ಇದು ಶ್ರೇಷ್ಠ ಎಂಬುದಾಗಿ ನಂಬಲಾಗಿದೆ.

ವೈಕುಂಠ ಏಕಾದಶಿ ಎಂದು ಭಗವಾನ್ ವಿಷ್ಣು ಕೋಟಿ ದೇವತೆಗಳಿಗೂ ದರ್ಶನ ನೀಡುವುದರಿಂದ ಇದನ್ನು ಮುಕ್ಕೋಟಿ ಏಕಾದಶಿ ಎಂತಲೂ ಕರೆಯುತ್ತಾರೆ ಈ ದಿನದಂದು ವಿಶೇಷವಾಗಿ ಉತ್ತರ ದ್ವಾರದ ಮೂಲಕ ದೇವಸ್ಥಾನವನ್ನು ಪ್ರವೇಶಿಸಿ ದೇವರ ದರ್ಶನ ಮಾಡುವುದು ವಿಶೇಷ ವಾಡಿಕೆ ಈ ದಿನದಂದು ವಿಷ್ಣು ದೇವಾಲಯಗಳಲ್ಲಿ ವಿಶೇಷವಾಗಿ ವೈಕುಂಠ ದ್ವಾರವನ್ನು ನಿರ್ಮಿಸಿ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶವನ್ನ ಮಾಡಿಕೊಡುತ್ತಾರೆ ಹೀಗೆ ಮಾಡುವುದರಿಂದ ಸಪ್ತ ಜನ್ಮದಲ್ಲಿ ಮಾಡಿದ ಎಲ್ಲ ಪಾಪ ಕರ್ಮಗಳು ನಾಶವಾಗುತ್ತವೆ.

ಭೂಲೋಕದ ವದ್ದು ವರ್ಷವೂ ದೇವಲೋಕದಲ್ಲಿ ಒಂದು ದಿನಕ್ಕೆ ಸಮ ಎಂಬುದಾಗಿ ಹೇಳಲಾಗುತ್ತದೆ ಹಾಗಾಗಿ ಈ ವೈಕುಂಠ ಏಕಾದಶಿಯ ಸಮಯ ದಕ್ಷಿಣಾಯಣದಲ್ಲಿ ಬರುವುದರಿಂದ ದೇವಲೋಕದಲ್ಲಿ ಇದು ಬೆಳಗಿನ ಸಮಯವಾಗಿರುತ್ತದೆ ಹಾಗಾಗಿ ಈ ದಿನದಂದು ಉಪವಾಸ ಮಾಡುವ ಭಕ್ತಾದಿಗಳು ತಮ್ಮ ಇಷ್ಟಾರ್ಥವನ್ನು ಸಿದ್ಧಿಪಡಿಸಿಕೊಳ್ಳುತ್ತಾರೆ ಹಾಗೂ ಈ ದಿನ ಮರಣ ಹೊಂದುವಂತಹ ಜನರು ಎಲ್ಲ ಪಾಪ ಕರ್ಮಗಳಿಂದ ಮುಕ್ತಿ ಹೊಂದಿ ವೈಕುಂಠವನ್ನು ಸೇರುತ್ತಾರೆ ಎಂಬ ನಂಬಿಕೆಕೂಡ ಇದೆ. ದ್ವಾಪರಾಯುಗದಲ್ಲಿ ಇಚ್ಛಾ ಮರಣವನ್ನು ಹೊಂದುವ ವರವುಳ್ಳ ಭೀಷ್ಮರು ಸಹ ಇದೇ ದಿನ ಮರಣ ಹೊಂದಿದರಂತೆ ಹಾಗೆ ಸಮುದ್ರ ಮಂಥನದ ಸಮಯದಲ್ಲಿ ಅಮೃತ ಹಾಗೂ ಹಲ-ಹಲ ಎರಡು ಇದೇ ದಿನದಂದು ದೊರೆತಿದ್ದವಂತೆ ಈ ದಿನವೇ ಶಿವ ಪರಮಾತ್ಮ ರು ಹಾಲಹಲವನ್ನ ಕುಡಿದು ಲೋಕವನ್ನು ರಕ್ಷಣೆ ಮಾಡಿದ್ದರು.

ಹಿಂದೆ ಮಹಾಪ್ರಳಯದ ಸಂದರ್ಭದಲ್ಲಿ ಭಗವಂತನು ಒಂದು ಚಿಕ್ಕ ಶಿಶುವಿನ ರೂಪದಲ್ಲಿ ಆಲದ ಎಲೆಯ ಮೇಲೆ ತೇಲುತ್ತಿದ್ದರಂತೆ ಅವರು ಚತುರ್ಮುಖ ಬ್ರಹ್ಮನನ್ನು ಸೃಷ್ಟಿ ಮಾಡಿ ಜಗತ್ತಿನ ಸೃಷ್ಟಿ ಕಾರ್ಯವನ್ನು ಪ್ರಾರಂಭಿಸಲು ಆದೇಶ ನೀಡುತ್ತಾರೆ ಆ ಸಮಯದಲ್ಲಿ ಬ್ರಹ್ಮ ದೇವರು ತಮ್ಮ ಸೃಷ್ಟಿಯ ಮೂಲವಾದ ಭಗವಂತನನ್ನ ಮರೆತು ಅಹಂಕಾರದಿಂದ ತಮ್ಮ ಕಾರ್ಯದಲ್ಲಿ ತೊಡಗಿರುತ್ತಾರೆ ಆ ಸಮಯದಲ್ಲಿ ಲೋಕ ಹಾಗೂ ಕಂಡರೆಂಬ ಇಬ್ಬರು ರಾಕ್ಷಸರು ಭಗವಂತನ ಕಿವಿಯಿಂದ ಉದ್ಭವಿಸಿ ಅಹಂಕಾರದಿಂದ ತುಂಬಿದ್ದ ಬ್ರಹ್ಮ ದೇವರನ್ನ ಸಮ್ಮರಿಸಲೆಂದು ಹೊರಟುಬಿಟ್ಟರಂತೆ ಆ ಸಮಯದಲ್ಲಿ ಬ್ರಹ್ಮದೇವ ತನ್ನ ಅಪರಾಧವನ್ನ ಅರಿತು ರಕ್ಷಣೆಗಾಗಿ ಭಗವಂತ ಮಹಾವಿಷ್ಣುವಿನಲ್ಲಿ ಮೊರೆ ಹೋಗುತ್ತಾರೆ

ಆಗ ವೈಕುಂಠ ಏಕಾದಶಿ ಎಂದು ವೈಕುಂಠ ದ್ವಾರ ತೆರೆಯುವ ಮೂಲಕ ಆ ಇಬ್ಬರು ರಾಕ್ಷಸರಿಗೆ ಶಾಶ್ವತ ನೆಲೆಯನ್ನು ಭಗವಂತ ಕಲ್ಪಿಸಿಕೊಡುತ್ತಾರೆ. ಆ ಸಮಯದಲ್ಲಿ ರಾಕ್ಷಸರು ಕೇಳಿಕೊಂಡ ಅವರ ವಿಶೇಷವಾಗಿದೆ ಅದೇನೆಂದರೆ ಭೂಲೋಕದಲ್ಲಿ ಯಾರು ವೈಕುಂಠ ಏಕಾದಶಿ ಎಂದು ಉತ್ತರ ದ್ವಾರದಿಂದ ನಿಮ್ಮ ಆಲಯವನ್ನು ಪ್ರವೇಶ ಮಾಡುತ್ತಾರೆ ಅವರಿಗೆ ಮರಣದ ನಂತರ ವೈಕುಂಠವನ್ನು ಕರುಣಿಸುವಂತೆ ಕೋರಿಕೆ ವ್ಯಕ್ತಪಡಿಸುತ್ತಾರೆ.

ಇಂತಹ ವಿಶೇಷ ವೈಕುಂಠ ಏಕಾದಶಿ ದಿನದಂದು ಉಪವಾಸ ಮಾಡಿ ವಿಷ್ಣುವಿಗೆ ತುಳಸಿಯನ್ನ ಅರ್ಪಿಸಿ ಪೂಜೆ ಮಾಡುವುದರಿಂದ ಮತ್ತು ಸಹಸ್ರನಾಮದ ಭಜನೆ ಮಾಡುವುದರಿಂದ ಮುಕ್ತಿಯನ್ನು ಪಡೆಯಬಹುದಾಗಿದೆ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: