These two mantras of Shiva: ಕೇಳಿದ್ದೆಲ್ಲ ನೀಡುವವನು ಶಿವ ಎಂದು ಹೇಳುತ್ತಾರೆ. ಇಂತಹ ಪರಶಿವನನ್ನು ಆರಾಧಿಸಿದರೆ ನೀವು ಅಂದುಕೊಂಡಂತೆ ಆಗುತ್ತದೆ. ಮಹಾಶಿವನನ್ನು ಒಲಿಸಿಕೊಳ್ಳಲು ಇಲ್ಲಿ ನಾವು ಸುಲಭ ಮಂತ್ರಗಳ ಬಗ್ಗೆ ಮಾಹಿತಿ ನೀಡುತ್ತೇವೆ ಮತ್ತು ಅದನ್ನು ಜಪಿಸುವುದರಿಂದ ಆಗುವ ಲಾಭಗಳ ಬಗ್ಗೆ ಮಾಹಿತಿ ನೀಡುತ್ತೇವೆ. ತ್ರಿಲೋಕದ ಕಲ್ಯಾಣಕ್ಕಾಗಿಯೇ ಶಿವನು ಹುಟ್ಟಿ ಬಂದ ಎಂದು ಹೇಳಲಾಗುವುದು .ನಮ್ಮ ಕಷ್ಟವನ್ನು ಹೇಳಿಕೊಂಡರೆ ಶೀಘ್ರದಲ್ಲಿ ಪರಿಹಾರಗೊಳ್ಳುತ್ತದೆ.
ಮೊದಲನೆಯ ಸ್ತೋತ್ರ ಶಿವ ಪಂಚಾಕ್ಷರಿ ಮಂತ್ರ, ಓಂ ನಮಃ ಶಿವಾಯ ಇದರ ಅರ್ಥವೇನು ಎಂದರೆ ನಾನು ಶಿವನಿಗೆ ನಮಸ್ಕರಿಸುತ್ತೇನೆ ಮತ್ತು ಮನಸ್ಸನ್ನು ಶುದ್ಧೀಕರಿಸಲು ಮತ್ತು ಬಲಪಡಿಸಲು ಹೆಚ್ಚು ಪರಿಣಾಮಕಾರಿಯಾಗಿದೆ. ನಿಮ್ಮ ಮನಸ್ಸನ್ನು ಶಕ್ತಿಯುತವಾಗಿ ಮತ್ತು ಶುದ್ಧವಾಗಿಸಲು ಸಹಾಯ ಮಾಡುತ್ತದೆ. ಶಿವ ಇಲ್ಲಿ ಸರ್ವೋಚ್ಛ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಶಿವ ಆಂತರಿಕ ಆತ್ಮ. ಈ ಶ್ಲೋಕವನ್ನು ಪಠಿಸುವುದು ನಿಮ್ಮ ಅಂತರಾತ್ಮವನ್ನು ಕುರಿತು ಭಜಿಸುತ್ತೀರಾ.
ಈ ಮಂತ್ರವನ್ನು ಯಾರು ಕೂಡ ಹೇಳಬಹುದು ಇದಕ್ಕೆ ಯಾವುದೇ ರೀತಿಯ ನಿರ್ಬಂಧನೆ ಇಲ್ಲ. ಇದನ್ನು ನೀವು ಎಲ್ಲಿ ಬೇಕಾದರೂ ಹೇಳಬಹುದು ಯಾವಾಗ ಬೇಕಾದರೂ ಹೇಳಬಹುದು. ರಕ್ಷಣೆಯನ್ನು ಬಯಸುತ್ತಿರುವವರಿಗೆ ಶಿವ ಪಂಚಾಕ್ಷರಿ ಮಂತ್ರ ಜಪಿಸುವುದು ಒಳ್ಳೆಯದು. ಈ ಶ್ಲೋಕ ನಿಮ್ಮೊಳಗಿನ ಶಕ್ತಿಯನ್ನು ಅಭಿವೃದ್ಧಿಪಡಿಸುತ್ತದೆ. ಹಿಂದೂ ಧರ್ಮದ ಎಲ್ಲಾ ದೇವರುಗಳಲ್ಲಿ ಶಿವನು ಪ್ರಮುಖನು ಮತ್ತು ದೇವಾಧಿದೇವ ಎಂದು ಕರೆಯಲಾಗುತ್ತದೆ.
ಎರಡನೆಯ ಶ್ಲೋಕ ಮಹಾ ಮೃತ್ಯುಂಜಯ ಮಂತ್ರ, ಓಂ ತ್ರಯಂಬಕಂ ಯಜಾಮಹೇ ಸುಗಂಧಿ ಪುಷ್ಠಿ ಉರ್ವಾರುಕಮಿವ ಬಂಧನಾನ್ಮೃತ್ಯೋರ್ಮುಕ್ಷೀಯ ಮಾಮೃತಾತ್ ಈ ಮಂತ್ರದ ಅರ್ಥ. ಓ ಮೃತ್ಯುಂಜಯನೇ, ಬಳ್ಳಿಯಿಂದ ತಾನಾಗಿ ಕಳಚಿಕೊಳ್ಳುವ ಹಣ್ಣಿನಂತೆ ನಾನು ನಶ್ವರವಾದ ಸಂಸಾರದಿಂದ ಕಳಚಿಕೊಳ್ಳುವಂತೆ ನನ್ನಲ್ಲಿ ಪುಷ್ಟಿಯನ್ನು ತಂದು ನಾನು ಪಕ್ವವಾಗುವಂತೆ ಮಾಡು.
ಮೃತ್ಯುಂಜಯ ಮಂತ್ರವನ್ನು ಎಲ್ಲ ಸಮಯದಲ್ಲೂ ಹೇಳಬಾರದು ಅದನ್ನು ಯಾವ ಸಮಯದಲ್ಲಿ ಪಠಿಸಬೇಕು ಎಂದು ಮೊದಲು ನಾವು ಅರಿತಿರಬೇಕು. ಈ ಶ್ಲೋಕದಿಂದ ನಿಮ್ಮ ಸಾವಿನ ಬಗ್ಗೆ ನಿಮಗಿರುವ ಭಯವನ್ನು ಹೋಗಲಾಡಿಸಿ ಕೊಳ್ಳಬಹುದು.