ನಮ್ಮ ಹಿರಿಯರು ಹೇಳಿರುವ ಕೆಲವು ಶಾಸ್ತ್ರ ಸಂಪ್ರದಾಯಗಳು

0

ನಮ್ಮ ಹಿರಿಯರು ಕೆಲವು ಶಾಸ್ತ್ರ ಸಂಪ್ರದಾಯಗಳನ್ನು ಹೇಳಿದ್ದಾರೆ. ನಾವು ದಿನನಿತ್ಯ ಮಾಡುವ ಕೆಲಸ ಕಾರ್ಯ ಆಚಾರ, ನಡೆ ನುಡಿ ಇವುಗಳ ಬಗ್ಗೆ ಹಿರಿಯರು ಹೇಳುತ್ತಿದ್ದರು. ಕೆಲವೊಂದು ತಿದ್ದಿ ಮಾಡಿಸುತ್ತಿದ್ದರು ಬೆಳಗ್ಗೆ ಬಲ ಮಗ್ಗುಲಲ್ಲಿ ಎದ್ದಾಗಿನಿಂದ ರಾತ್ರಿ ಮಲಗುವ ತನಕ ನಿತ್ಯ ಜೀವನದ ನಿಯಮಾವಳಿಗಳನ್ನು ಹೇಳುತ್ತಿದ್ದರು. ಹಿರಿಯರು ಹೇಳಿದ ಶಾಸ್ತ್ರವನ್ನು ಈ ಲೇಖನದಲ್ಲಿ ನೋಡೋಣ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಿರಿಯರು ಮಾಡಿದ ಶಾಸ್ತ್ರ, ಸಂಪ್ರದಾಯಗಳಿಗೆ ಒಂದು ಕಾರಣ ಇದ್ದೆ ಇರುತ್ತದೆ ಅದನ್ನು ತಪ್ಪಿದರೆ ನಮಗೆ ಕೆಡಕಾಗುತ್ತದೆ. ಹಿರಿಯರು ತಮ್ಮ ವಿಚಾರಗಳನ್ನು ಹೆಣ್ಣುಮಕ್ಕಳಿಗೆ ಪದೆ ಪದೆ ಹೇಳುತ್ತಿದ್ದರು ಏಕೆಂದರೆ ಅಡುಗೆ ಮನೆಗೆ ಗೃಹಲಕ್ಷ್ಮಿ, ಇಂತ ಹೆಣ್ಣು ಮನೆಯ ಕಣ್ಣು ಅವಳು ಮನೆಯ ಸದಸ್ಯರ ಕಾಳಜಿ ವಹಿಸುತ್ತಾಳೆ. ಕೆಲವು ಶಾಸ್ತ್ರ ಸಂಪ್ರದಾಯವನ್ನು ಈಗಿನ ಕಾಲಕ್ಕೆ ತಕ್ಕಂತೆ ಪಾಲಿಸಲು ಸಾಧ್ಯವಿಲ್ಲ ಆದರೆ ಅವುಗಳ ಬಗ್ಗೆ ತಿಳುವಳಿಕೆ ಇಟ್ಟುಕೊಳ್ಳುವುದು ಉತ್ತಮ. ದೇವರ ಪಾತ್ರೆ, ಎಂಜಲು ತಟ್ಟೆ, ಎಂಜಲು ಲೋಟ ಪ್ರತ್ಯೇಕವಾಗಿಡಬೇಕು. ಹಬ್ಬ ಹರಿದಿನ, ಶುಕ್ರವಾರ ವಿಶೇಷ ದಿನಗಳಲ್ಲಿ ಬಾಳೆಕಾಯಿ, ಹಾಗಲಕಾಯಿ ಕಾಯಿದಿಂಡು ಮಾಡುವಂತಿಲ್ಲ. ಬೂದುಗುಂಬಳಕಾಯಿ, ಚೀನಿಕಾಯಿ ಇಡಿಕಾಯಿಗಳನ್ನು ಹೆಣ್ಣುಮಕ್ಕಳು ಒಡೆಯುವಂತಿಲ್ಲ ಗಂಡಸರು ಮನೆಯ ಹೊರಗೆ ಒಡೆದು ಕೊಟ್ಟ ಮೇಲೆ ಹೆಚ್ಚಬೇಕು. ಹೆಣ್ಣು ಮಕ್ಕಳು ಒಡೆದ ಬಳೆಗಳನ್ನು ಕೈಗೆ ಹಾಕಿಕೊಳ್ಳಬಾರದು. ಹೋಗಿ ಬರುತ್ತೇವೆ ಎಂದು ಹೇಳುವವರ ಎದುರಿಗೆ ಮುಖಕ್ಕೆ ಎಣ್ಣೆ ಹಚ್ಚಿಕೊಂಡಿರುವುದು, ಮುಖ ತೊಳೆಯದೆ ಹಣೆಗೆ ಇಡದೆ ಬರಬಾರದು. ಹೊರಟಕೂಡಲೆ ಮುಖ ತೊಳೆಯುವುದು, ಸ್ನಾನಕ್ಕೆ ಹೋಗಬಾರದು. ಊಟ ಮಾಡಿ ಹೊರಟವರು ಊಟ ಮಾಡುವವರಿಗೆ ನಾವು ಹೊರಡುತ್ತೇವೆ ಎಂದು ಹೇಳದೆ ಅವರ ಊಟ ಮುಗಿಯುವವರೆಗೆ ಅಲ್ಲಿಯೆ ಇರಬೇಕು.

ಶುಭ ಸಮಾರಂಭಗಳಿಗೆ ಊಟಕ್ಕೆ ಹೋದಾಗ ಹಿಂದಿರುಗಿ ಬರುವಾಗ ಮನೆಯವರಿಗೆ ಹೋಗಿ ಬರುತ್ತೇವೆ ಚೆನ್ನಾಗಿತ್ತು ಎಂದು ಹೇಳಬೇಕು ಹಾಗೆಯೆ ದುಃಖದ ಕಾರ್ಯಕ್ರಮಗಳಿಗೆ ಹೋದಾಗ ಹೋಗಿ ಬರುತ್ತೇವೆ ಎಂದು ಹೇಳುವಂತಿಲ್ಲ ಹಾಗೂ ದುಃಖದ ಮನೆಗೆ ಬಂದವರು ಹೊರಡುತ್ತೇವೆ ಎಂದು ಹೊರಟು ನಿಂತವರಿಗೆ ಊಟ ಮಾಡಿ ಎಂದು ಹೇಳಬಾರದು. ಊರಿಗೆ ಹೊರಟವರು ಬಟ್ಟೆ, ಗಂಟು ಟ್ರಂಕ್ ಮೇಲೆ ಕುಳಿತುಕೊಳ್ಳಬಾರದು ಪ್ರಯಾಣದಲ್ಲಿ ತೊಂದರೆ ಆಗುತ್ತದೆ, ಆಪತ್ತು ಕೂಡ ಆಗಬಹುದು. ಹೊರಡುವಾಗ ಹಿರಿಯರ ಕಾಲಿಗೆ ನಮಸ್ಕರಿಸಬೇಕು. ಮುರ್ ಸಂಜೆ ಹೊತ್ತು ಮುಸುಕು ಹೊದ್ದು ಮಲಗಬಾರದು. ದೀಪ ಹಚ್ಚದೆ ಬಾಗಿಲು ಹಾಕಿ ಒಳಗೆ ಕೂರಬಾರದು. ಶುಕ್ರವಾರ ಮಂಗಳವಾರ ಹಬ್ಬದ ದಿನಗಳಲ್ಲಿ ಉಗುರು ಕತ್ತರಿಸುವುದು ಉಗುರನ್ನು ಮನೆಯ ಒಳಗೆ ಹಾಕುವುದು ಮಾಡಬಾರದು. ತಲೆ ಬಾಚಿಕೊಂಡು ಬಿದ್ದ ಕೂದಲನ್ನು ಹಾಗೆ ಬಿಡಬಾರದು ಹಾಗೂ ಹೊತ್ತಿಲ್ಲದ ಹೊತ್ತಿನಲ್ಲಿ ಮನೆಯ ಹೊರಗೆ ತಲೆ ಬಾಚಬಾರದು. ಬಟ್ಟೆ ಮೈ ಮೇಲೆ ಧರಿಸಿದ ಮೇಲೆ ಕತ್ತರಿಸುವುದು, ಗುಂಡಿ ಹಾಕುವುದು, ಹೊಲಿಯುವುದು ಮಾಡಬಾರದು ಇದರಿಂದ ಮನುಷ್ಯನ ಕಂಟಕ ಹೆಚ್ಚಾಗುತ್ತದೆ. ಅರ್ಧಮರ್ಧ ಮುಖ ತೊಳೆಯುವುದು ಕಾಲಿನ ಹಿಮ್ಮಡಿ ನೆನೆಯದಂತೆ ಕಾಲಿಗೆ ನೀರು ಹಾಕಬಾರದು ಶನಿಯ ಕಾಟ ಪ್ರಾರಂಭವಾಗುತ್ತದೆ.

ಕಬ್ಬಿಣದ ಸಾಮಾನುಗಳನ್ನು ಕೈಯಿಂದ ಇನ್ನೊಂದು ಕೈಗೆ ಕೊಡಬಾರದು. ಬೇರೆಯವರು ಕರ್ಚೀಫ್ ಕೊಟ್ಟರೆ ಅದನ್ನು ತೆಗೆದುಕೊಳ್ಳಬಾರದು. ಸಂಜೆ ಹೊತ್ತು ಅರಿಶಿಣ ಉಪ್ಪು ಮೊಸರನ್ನು ಹೊಸ್ತಿಲಾಚೆ ಕೊಡಬಾರದು ಒಂದು ವೇಳೆ ನೆರೆಹೊರೆಯವರು ಹೆಪ್ಪಿಗೆ ಮೊಸರು ಕೇಳಿದರೆ ಒಣ ಮೆಣಸಿನಕಾಯಿ ಚೂರು ಹಾಕಿ ಮೊಸರನ್ನು ಕೊಡಬಹುದು. ಕುಲದೇವರ ವಾರ ಮತ್ತು ಶುಕ್ರವಾರ ಮಂಗಳವಾರ ಒಂದೆ ದಿನ ತಂದೆ ಮಕ್ಕಳು, ಅಣ್ಣ ತಮ್ಮ ಕ್ಷೌರ ಮಾಡಿಸಿಕೊಳ್ಳಬಾರದು. ಅಡುಗೆ ಮಾಡಿ ಒಗ್ಗರಣೆ ಹಾಕದೆ ಗಂಡಸರಿಗೆ ಬಡಿಸಬಾರದು. ಉಪನಯನದ ನಂತರ ಗಂಡು ಮಕ್ಕಳು ತಂಗಳು ಪದಾರ್ಥ ತಿನ್ನಬಾರದು. ಊಟ ಮಾಡಲು ಕಾಯಬೇಕು ಆದರೆ ಊಟವನ್ನು ಎಂದಿಗೂ ಕಾಯಿಸಬಾರದು. ಎಂಜಲು ಕೈಯನ್ನು ಹಾಗೂ ಎಂಜಲು ತಟ್ಟೆಯನ್ನು ಒಣಗಿಸಬಾರದು ಇದರಿಂದ ಅಶುಭ ಹಾಗೂ ಸಾಲದ ಸಮಸ್ಯೆ ಕಾಡುತ್ತದೆ. ಎಂಜಲಿನ ಕೈಯಲ್ಲಿ ತಟ್ಟೆಯನ್ನು ಎತ್ತಿಕೊಂಡು ತೊಳೆಯಲು ಹಾಕಬಾರದು ಕೈಯನ್ನು ತೊಳೆದು ನಂತರ ಎಂಜಲು ತಟ್ಟೆಯನ್ನು ತೊಳೆಯಲು ಹಾಕಬೇಕು. ಊಟ ಮಾಡುತ್ತಿರಬೇಕಾದರೆ ಮಧ್ಯ ಏಳಬಾರದು. ಚಪ್ಪಲಿ, ಪೊರಕೆಯನ್ನು ತಲೆಕೆಳಗಾಗಿ ಇಡಬಾರದು. ಏಣಿಯನ್ನು ಉದ್ದಕ್ಕೆ ಮಲಗಿಸಬಾರದು. ಸಂಜೆಯ ಹೊತ್ತಿನಲ್ಲಿ ಮನೆ ಗುಡಿಸಬಾರದು ದೀಪ ಹಚ್ಚುವ ಮೊದಲು ಗುಡಿಸಿ ಹಿಂಬಾಗಿಲು ಹಾಕಿ ಮುಂಬಾಗಿಲನ್ನು ತೆರೆದು ದೀಪ ಹಚ್ಚಬೇಕು.

ಮಧ್ಯಾಹ್ನ 12 ಗಂಟೆ ನಂತರ ತುಳಸಿ ಗಿಡದ ಎಲೆಯನ್ನು ಕೀಳಬಾರದು ಬೆಳಗಿನ ಸಮಯದಲ್ಲಿ ಮಾತ್ರ ತುಳಸಿ ಗಿಡವನ್ನು ಕೊಡಬಹುದು. ಅಪರಾಹ್ನ ಸಮಯದಲ್ಲಿ ಹೊಳೆ ಬದಿ ಮರದ ಕೆಳಗೆ ಹೋಗಬಾರದು ಮನೆಯ ಮುಂದಿನ ಬಾಗಿಲ ಚಿಲಕವನ್ನು ಶಬ್ಧ ಮಾಡಬಾರದು. ಶುಭ ವಿಚಾರಗಳನ್ನು ಮಾತನಾಡುವ ಸಂದರ್ಭದಲ್ಲಿ ಒಂಟಿ ಸೀನು ಸೀನಬಾರದು. ಬಿಸಿ ಬಿಸಿ ಅನ್ನಕ್ಕೆ ಹಾಲು ಅಥವಾ ಮೊಸರನ್ನು ಹಾಕಿ ಸೇವಿಸಬಾರದು. ಸೋಮವಾರದಂದು ತಲೆಗೆ ಎಣ್ಣೆ ಹಾಕಿ ತಲೆ ಸ್ನಾನ ಮಾಡಬಾರದು. ಒಂಟಿ ಕಾಲಿನಲ್ಲಿ ನಿಂತು ಮಾತನಾಡಬಾರದು ಹಾಗೂ ಹೊಸ್ತಿಲಲ್ಲಿ ಕುಳಿತುಕೊಳ್ಳಬಾರದು. ಮಲಗಿದಾಗ ಕಾಲಿನಿಂದ ಗೋಡೆಯನ್ನು ಒದೆಯಬಾರದು ಹಾಗೂ ಗೋಡೆಗೆ ಕಾಲು ಹಾಕಿ ಮಲಗಬಾರದು. ತೊಟ್ಟಿಲನ್ನು ಕಾಲಿನಿಂದ ಒದೆಯಬಾರದು. ಒದ್ದೆ ಬಟ್ಟೆಯನ್ನು ಧರಿಸಬಾರದು ಸಂಜೆ ಸಮಯದಲ್ಲಿ ಬಟ್ಟೆಯನ್ನು ಒಗೆಯಬಾರದು. ರಾತ್ರಿ ಮುಸರೆ ಪಾತ್ರೆಗಳಿಗೆ ಸ್ವಲ್ಪ ನೀರು ಹಾಕದೆ ಇಡಬಾರದು ರಾತ್ರಿ ಅನ್ನ ಉಳಿಯದೆ ಇದ್ದರೆ ಸ್ವಲ್ಪ ಅವಲಕ್ಕಿ ಬೆಲ್ಲವನ್ನು ಇಟ್ಟು ಮುಚ್ಚಿಡಬೇಕು. ಮನೆಯಲ್ಲಿ ರಾತ್ರಿ ಊಟ ಮಾಡದೆ ಹಾಗೆ ಮಲಗಬಾರದು ಒಂದು ಹಣ್ಣನ್ನಾದರೂ ಸೇವಿಸಬೇಕು. ನೆಂಟರ ಮನೆಗೆ ಬಾಣಂತಿ ಮನೆಗೆ ವಯಸ್ಸಾದವರ ಮನೆಗೆ ನೋಡಲು ಹೋದರೆ ಬರಿಗೈಯಲ್ಲಿ ಹೋಗಬಾರದು ಮತ್ತು ಹೀಗೆ ಬಂದವರನ್ನು ಬರಿಗೈ ಕಳುಹಿಸಬಾರದು ಒಂದು ಚಮಚ ಸಕ್ಕರೆಯನ್ನಾದರೂ ಕೊಡಬೇಕು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!