ಹೂವುಗಳಲ್ಲಿ ಎಲ್ಲಾ ರೀತಿಯ ಹೂವು ಸುಂದರವಾಗಿ ಪರಿಮಳ ಸೂಸುತ್ತವೆ. ಶಂಖ ಪುಷ್ಪ ಹೂವಿನ ಬಗ್ಗೆ ಎಷ್ಟು ಹೇಳಿದರು ಸಾಲದು ಅದರ ಪ್ರಯೋಜನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ಪೂಜೆಯ ಸಮಯದಲ್ಲಿ ಹೂವುಗಳಿಗೆ ವಿಶೇಷ ಪ್ರಾಮುಖ್ಯತೆಯನ್ನು ಕೊಡಲಾಗುತ್ತದೆ. ಅಲಂಕಾರದಿಂದ ಹಿಡಿದು ದೇವರಿಗೆ ಸಂಬಂಧಿಸಿದ ಕೆಲಸಗಳಲ್ಲಿ ಹೂವುಗಳನ್ನು ಬಳಸುತ್ತಾರೆ. ಹೂವುಗಳನ್ನು ದೇವರಿಗೆ ಬಹಳ ಪ್ರಿಯವೆಂದು ಹೇಳಲಾಗುತ್ತದೆ. ಧರ್ಮಗ್ರಂಥಗಳಲ್ಲಿ ಎಲ್ಲಾ ದೇವರು ಹಾಗೂ ದೇವತೆಗಳ ಮೆಚ್ಚಿನ ಹೂವುಗಳನ್ನು ಹೆಸರಿಸಲಾಗಿದೆ ಅದರಲ್ಲಿ ಅಪರಾಜಿತಾ ಈ ಹೂವಿನ ಸಂಬಂಧವೂ ಶನಿ ದೇವನೊಂದಿಗೆ ಇದೆ ಎನ್ನಲಾಗುತ್ತದೆ ಹಾಗೂ ಇದು ನೀಲಿ ಬಣ್ಣದಲ್ಲಿ ಇದೆ.
ವಾಸ್ತುಪ್ರಕಾರ ಮನೆಯಲ್ಲಿ ಕೆಲವು ಗಿಡಗಳನ್ನು ನೆಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಅದೃಷ್ಟ, ಸಂತೋಷ ವೃದ್ಧಿಯಾಗುತ್ತದೆ ಇದರಿಂದ ಮನೆಯಲ್ಲಿ ಸಂತೋಷ ಹೆಚ್ಚಾಗುತ್ತದೆ, ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಇಂಥದ್ದೆ ಒಂದು ಗಿಡ ಶಂಖ ಪುಷ್ಪ. ಶಂಖ ಪುಷ್ಪ ದೇವರಿಗೆ ಪ್ರಿಯವಾದ ಪುಷ್ಪ, ಇದರಿಂದ ಮನೆಯಲ್ಲಿ ಸಂತೋಷ ಹಾಗೂ ಧನಾತ್ಮಕ ಶಕ್ತಿಯನ್ನು ತರುತ್ತದೆ. ಈ ಗಿಡ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶಂಖಪುಷ್ಪ ಬಳ್ಳಿಯನ್ನು ಮನೆಯಲ್ಲಿ ಬೆಳೆದರೆ ಸಂತೋಷ ಮತ್ತು ಸಮೃದ್ಧಿಯಾಗಿರುತ್ತದೆ.
ಶನಿದೇವನ ಹೊರತಾಗಿ ಈ ಹೂವು ವಿಷ್ಣುವಿಗೆ ಬಹಳ ಇಷ್ಟವಾಗುತ್ತದೆ. ಈ ಹೂವಿನಿಂದ ನಾರಾಯಣ ಮಾತಾ ಲಕ್ಷ್ಮೀ ಹಾಗೂ ಶನಿದೇವರ ಅನುಗ್ರಹ ಕುಟುಂಬದ ಮೇಲೆ ಉಳಿಯುತ್ತದೆ ಹಾಗೂ ಹಣಕ್ಕೆ ಸಂಬಂಧಿಸಿದ ಯಾವುದೆ ಬಿಕ್ಕಟ್ಟು ನಿವಾರಣೆಯಾಗುತ್ತದೆ, ಕುಟುಂಬದಲ್ಲಿ ಸಮೃದ್ಧಿ ಇರುತ್ತದೆ. ಕೆಲವರು ದುಡ್ಡು ಸಂಪಾದಿಸುತ್ತಾರೆ ಆದರೆ ಹಣವನ್ನು ನೀರಿನಂತೆ ಖರ್ಚು ಮಾಡುತ್ತಾರೆ ಆಗ ಸೋಮವಾರದಿಂದ 5 ಶಂಖಪುಷ್ಪ ಹೂವುಗಳನ್ನು ತೆಗೆದುಕೊಂಡು ಹರಿಯುವ ನೀರಿನಲ್ಲಿ ಒಟ್ಟಿಗೆ ಸೇರಿಸಿ ಎಸೆಯಬೇಕು ಅಥವಾ ಮಂಗಳವಾರದಂದು ಆಂಜನೇಯನ ಪಾದಗಳಿಗೆ ಶಂಖಪುಷ್ಪ ಹೂವನ್ನು ಅರ್ಪಿಸಬೇಕು ಆಗ ಹಣ ಉಳಿತಾಯವಾಗುತ್ತದೆ.
ವ್ಯಾಪಾರ ಆರಂಭಿಸಿದಾಗ ನಷ್ಟವಾಗುತ್ತಿದ್ದರೆ ಶಂಖಪುಷ್ಪ ಗಿಡದ ಬೇರನ್ನು ನೀಲಿ ಬಟ್ಟೆಯಲ್ಲಿ ಕಟ್ಟಿ ಅಂಗಡಿಯ ಹೊರಗೆ ನೇತು ಹಾಕಬೇಕು ಇದರಿಂದ ಒಳ್ಳೆಯದಾಗುತ್ತದೆ. ಈ ಹೂವುಗಳನ್ನು ಶನಿ ದೇವರಿಗೆ ಅರ್ಪಿಸುವ ಮೂಲಕ ಶನಿಯ ಬಲವನ್ನು ಹೆಚ್ಚುಮಾಡಿಕೊಳ್ಳಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಶಂಖ ಪುಷ್ಪ ಗಿಡವನ್ನು ಬೆಳೆಸಿ.