WhatsApp Group Join Now
Telegram Group Join Now

ಶನಿ ದೇವರು ಎಂದರೆ ಮೊದಲಿಗೆ ಬರುವುದು ಭಯ ದೇವಾನು ದೇವತೆಗಳಲ್ಲಿ ಹೆಚ್ಚು ಕೋಪಿಷ್ಟ ಹಾಗೂ ಭಕ್ತಿ ಪ್ರಧಾನವಾಗಿರುವ ದೇವರು ಎನ್ನುವ ನಂಬಿಕೆ ಇದೆ. ಮಾನಸಿನ ಮತ್ತು ದೈಹಿಕ ತೊಂದರೆಗಳಿಗೆ ಕಾರಣ ಶನಿ ಮಹಾತ್ಮನ ನೇರ ದೃಷ್ಟಿ ಎಂದು ಜನರು ನಂಬಿದ್ದಾರೆ. ಶನಿ ದೇವರಿಗೆ ಸನಾತನ ಧರ್ಮದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಕುರಿತು, ಶನಿ ದೋಷ, ಶನಿ ಪ್ರಭಾವದ ಬಗ್ಗೆ ತಿಳಿಯೋಣ.

ಮಾರ್ಕಂಡೇಯ ಪುರಾಣದ ನಂಬಿಕೆಯ ಪ್ರಕಾರ ಶನಿ ದೇವರ ಜನನದ ಸಮಯದಲ್ಲಿ ಅವರ ಜನನಿ ಸಂಧ್ಯಾ ಮಾತೆಗೆ ನಡೆದ ಘನಘೋರ ಅವಮಾನದಿಂದ ಹುಟ್ಟಿದಾರಭ್ಯ ಶನಿ ಮಹಾತ್ಮ ಕೋಪಿಷ್ಟ ರೂಪದಲ್ಲಿ ಬೆಳೆಯುವರು. ರವಿ ಗ್ರಹ ಹೆಚ್ಚು ಪ್ರಕಾಶತೆಯನ್ನು ಹೊರ ಹಾಕುವ ಕಾರಣ ಅವರಿಗೆ ವಿಶೇಷವಾದ ಸ್ಥಾನ ಮಾನ ಇದೆ ಹಾಗೂ ಪ್ರತ್ಯಕ್ಷ ದೇವರು ಎಂದು ಭೂಮಿ ಮೇಲೆ ಪೂಜಿಸಲ್ಪಡುವ ದೇವರು ಸೂರ್ಯ. ಅವರ ಅಂಶದಿಂದ ಹುಟ್ಟಿರುವ ಶನಿ ಮಹಾತ್ಮನನ್ನು ಮುಂಗೋಪಿ ಎಂದು ವರ್ಣಿಸಲಾಗಿದೆ.

ಸೂರ್ಯ ದೇವ ಶನಿ ದೇವರನ್ನು ವಿಕೃತರೂಪಿ ಎಂದು ತನ್ನ ಪುತ್ರನಾಗಿ ಸ್ವೀಕಾರ ಮಾಡುವುದಿಲ್ಲ.  ಸಂಧ್ಯಾ ಮಾತೆ ಅವಳ ಪುತ್ರನಿಗೆ ನಡೆದ ಅವಮಾನದಿಂದ ದುಃಖಿಸಿದರು ಮತ್ತು ಅವಳದ್ದೇ ಪ್ರತಿರೂಪವಾದ ಛಾಯಾದೇವಿಯನ್ನು ಸೃಷ್ಟಿ ಮಾಡಿದರು ಹಾಗೂ ಅವರ ಎಲ್ಲಾ ಪುತ್ರರನ್ನು ಅವಳ ಪ್ರತಿರೂಪಕ್ಕೆ ಒಪ್ಪಿಸಿ ಶಾಶ್ವತವಾಗಿ ಸನ್ಯಾಸತ್ವ ಸ್ವೀಕಾರ ಮಾಡಿದರು ಎನ್ನುವ ನಂಬಿಕೆ ಇದೆ. ಎಲ್ಲಾ ದೇವರಿಗಿಂತ ಹೆಚ್ಚು ನೋವು ಅನುಭವಿಸಿರುವುದು ಶನಿ ದೇವರು ಅದಕ್ಕೆ ಅವರನ್ನು ಧರ್ಮದ ಪರಿರಕ್ಷಕ ಎಂದು ಈಶ್ವರ ವರ ನೀಡುತ್ತಾರೆ. ಅವರ ಸಹೋದರ ಯಮರಾಯನ ಜೊತೆ ಯಾವ ಬಂಧ ಮತ್ತು ವಾತ್ಸಲ್ಯ ತೋರಿದೆ ನಿಷ್ಪಕ್ಷಪಾತವಾಗಿ ಎಲ್ಲರಿಗೂ ದಂಡನೆ ನೀಡುವರು.

ಸಾವಿನ ನಾಂತರ ಯಮರಾಯ ವಿಧಿಸುವ ಶಿಕ್ಷೆಗಿಂತ ಬದುಕಿರುವಾಗ ಶನಿ ದೇವರು ನೀಡುವ ಶಿಕ್ಷೆ ಕಠಿಣವಾಗಿ ಇರುತ್ತದೆ ಎಂದು ಹಲವು ಪಂಡಿತರು ಅಭಿಪ್ರಾಯ ತಿಳಿಸಿದ್ದಾರೆ. ಅದಕ್ಕೆ ಎಷ್ಟು ಸಿರಿ ಸಂಪತ್ತು ಇದ್ದರು ಶನಿ ದೇವನ ಕರುಣೆಗೆ ಮಾನವ ಕಾಯುತ್ತಾ ಕೂರುವುದು. ಶನಿ ಮಹಾತ್ಮನ ದೃಷ್ಟಿ ನಮ್ಮ ಮೇಲೆ ಬಿದ್ದರೆ ಅದನ್ನು  ನಿವಾರಿಸುವ ತನಕ ಅದು ಪರಿಹಾರ ಆಗುವುದಿಲ್ಲ.  ತಪ್ಪು ಮಾಡಲು ಭಯಕ್ಕೆ ಭಯವನ್ನು ಉಂಟು ಮಾಡುವ ಶಕ್ತಿ ಇರುವುದು ಶನಿ ದೇವರಿಗೆ ಮಾತ್ರ.

ದೇವ ದಾನವ ಯಕ್ಷ ಕಿನ್ನರ ಕಿಂಪುರುಷ ಮಹಾಪುರುಷರು ನಿಷ್ಪಕ್ಷಪಾತ ಮಾಡುವ ಮಹಾದೇವನ ರೀತಿ ಶನಿ ದೇವರನ್ನು ಪೂಜೆ ಮಾಡುವರು. ಶನಿ ಗ್ರಹ ಹೆಚ್ಚು ಪ್ರಭಾವ ಬೀರುವ ವಸ್ತುಗಳು ಎಂದರೆ ಕಲ್ಲು, ಭೂಗರ್ಭ ದ್ರವಗಳು, ಎಣ್ಣೆ, ವಿಷಮ ಪ್ರತ್ಯೇಕ ವೈದ್ಯ ವೃತ್ತಿ ಎಂದರೆ ಕ್ರಾನಿಕ್ ಹೆಲ್ತ್ ಅಂಡ್ ಡಿಸೀಸ್ ಕೇರ್, ಡಾಂಬರು ( ಟಾರು ರಸ್ತೆ ), ಕಬ್ಬಿಣಕ್ಕೆ ಸಂಬಂಧ ಪಟ್ಟ ದ್ರವ್ಯಗಳ.

ಮೇಲಿನ ಕೆಲಸ ಮಾಡುವ ಜನರ ಮೇಲೆ ಶನಿ ಗ್ರಹ ಪ್ರಭಾವ ಹೆಚ್ಚಾಗಿ ಇರುತ್ತದೆ. ಶನಿ ದೋಷವನ್ನು ನಿರ್ವಹಣೆ ಮಾಡಿಕೊಂಡು ಅವರು ಮಾಡುವ ಕೆಲಸವನ್ನು ಅವರು ಸರಿಯಾಗಿ ನಿರ್ವಹಿಸಿದರೆ ಲಕ್ಷ್ಮೀ ಕಷ್ಟಕ್ಷ ಅನುಗ್ರಹ ಮಾಡಿ ಸಂತಸ ಜೀವನ ಸಾಗಿಸುವಂತೆ ಮಾಡುವರು. ಸಣ್ಣ ತಪ್ಪು ಮಾಡಿದರೂ ಶನಿ ದೋಷ ಪೂರ್ತಿ ಪರಿವಾರಕ್ಕೆ ಸಿಗುತ್ತದೆ. ಶನಿ ಗ್ರಹ ಮತ್ತು ಬೃಹಸ್ಪತಿ ಗ್ರಹ ಒಂದೇ ಸಮವಾಗಿ ಸರಿಯಾದ ಕ್ರಮದಲ್ಲಿ ಇದ್ದರೆ ಅದು ಅತ್ಯಂತ ಲಾಭದಾಯಕ ಗ್ರಹ ಕೂಟ ಎಂದು ಜೋತಿಷ್ಯ ಪಂಡಿತರ ಲೆಕ್ಕಾಚಾರ.

ಈ ಎರಡು ಗ್ರಹ ಬೆರೆತಾಗ ಒಳ್ಳೆ ಲಾಭ ತರುತ್ತದೆ. ಉದ್ಯೋಗ ಯಾವುದು ಎಂದರೆ ವೈದ್ಯಕೀಯ, ನ್ಯಾಯ ಶಾಸ್ತ್ರ ಮತ್ತು ವಿದ್ಯ ವ್ಯವಸ್ಥ. ಕಪ್ಪು ಬಣ್ಣದ ಬಟ್ಟೆ ನ್ಯಾಯದ ಸಂಕೇತ ಅದಕ್ಕೆ ಅದನ್ನು ಶನಿ ದೇವರಿಗೆ ಸಮರ್ಪಣೆ ಮಾಡುವರು. ಅದಕ್ಕೆ ಶನಿ ಮಹಾತ್ಮನಿಗೆ ಕಪ್ಪು ಬಣ್ಣ ಹೆಚ್ಚು ಪ್ರಿಯವಾದದ್ದು. ಶನಿವಾರದಂದು ಎಳ್ಳಿನ ಎಣ್ಣೆಯನ್ನು ಶನಿ ದೇವರಿಗೆ ಅಭಿಷೇಕ ಮಾಡುವುದರಿಂದ ಖಂಡಿತ ಸಂತಸ ಪಡುವ ಶನಿ ದೇವರು ಅವರ ತಪ್ಪು ಸರಿಗಳನ್ನು ತೂಕ ಮಾಡಿ ಸರಿಯಾದ ಪದ್ಧತಿಯಲ್ಲಿ ಶಿಕ್ಷೆ ನೀಡಿ ಅವರನ್ನು ಗೌರವಿಸುವ ಭಕ್ತರಿಗೆ ಚಿರಕಾಲ ಅನುಗ್ರಹಿಸುತ್ತಾರೆ.

ಬ್ರಾಹ್ಮಣ ಹತ್ಯೆ, ಅಕ್ರಮ ಸಂಬಂಧ, ಬಡವರನ್ನು  ಇಯಾಳಿಸಿ ಮಾತಾಡುವುದು, ಹಿಂಸೆ ನೀಡುವುದು, ಜೀವನ ಹಿಂಸೆ, ಭಯ ಭಕ್ತಿ ಇಲ್ಲದೆ ಇರುವುದು , ಅಕ್ರಮವಾಗಿ ಹಣ ದೋಚುವುದು, ತಿಳಿಯದೇ ಮಾಡಿರುವ ತಪ್ಪನ್ನು ಬಿಟ್ಟು ತಿಳಿದು ಮಾಡಿರುವ ತಪ್ಪಿಗೆ ತಕ್ಕ ಶಿಕ್ಯೆ ನೀಡುವರು.

ಮಹಾರಾಷ್ಟ್ರದಲ್ಲಿ ಇರುವ ಶನಿ ಶಿನ್ಗ್ನಪುರ್, ದೆಹಲಿಯಲ್ಲಿ ಇರುವ ಶನಿ ಧಾಮ ದೇವಾಲಯ, ಪಾಂಡಿಚೇರಿಯ ತಿರುನಲ್ಲಾರ್ ಶನೀಶ್ವರರ್ ದೇವಸ್ಥಾನ, ಆಂಧ್ರ ಪ್ರದೇಶ ಮಂಡಪಲ್ಲಿ  ಮುಂಡೇಶ್ವರ ಸ್ವಾಮಿ ದೇವಸ್ಥಾನ, ಕರ್ನಾಟಕದ ಬನಂಜೆ ಶ್ರೀ ಶನಿ ದೇವಸ್ತಾನ, ಇಂಧೋರ್ನಲ್ಲಿ ಇರುವ ಶನಿ ಮಂದಿರ, ತಮಿಳುನಾಡಿನ ಶನೀಶ್ವರ ಭಗವಾನ್ ದೇವಸ್ತಾನ ಮತ್ತು ಡಿಯನೋರ್ ಶನಿ ದೇವಸ್ತಾನ. ಭಾರತದ ಅತಿ ದೊಡ್ಡ  ಮತ್ತು ಪ್ರಮುಖ ದೇವಸ್ಥಾನಗಳು.

ಸೂರ್ಯ ಸಿದ್ದಾಂತ ಮತ್ತು ಕಂಡಕ ಪುರಾಣದ ಪ್ರಕಾರ 1,46,564 ಬಾರಿ ಶನಿ ಗ್ರಹ ಸೂರ್ಯನ ಸುತ್ತ ಸುತ್ತಿದೆ ಎಂದು ಹೇಳಲಾಗುತ್ತದೆ.ಶನಿ ಮಹಾತ್ಮ ಕೆಡುಕನ್ನು ಉಂಟು ಮಾಡುತ್ತಾನೆ  ಎಂದು ನೋಡುವ ಬದಲು ಸಕರಾತ್ಮಕವಾಗಿ ನ್ಯಾಯ ನೀತಿ ನಿಯಮ ಪಾಲನೆ ಮಾಡಿ ನ್ಯಾಯ ಒದಗಿಸುವ ದೇವರು ಎಂದು ನೋಡುವ ದೃಷ್ಟಿಕೋನ ಬದಲಿಸಬೇಕು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: