WhatsApp Group Join Now
Telegram Group Join Now

Scorpio Horoscope June 2023: ಪ್ರತಿಯೊಬ್ಬರೂ ಸಹ ರಾಶಿ ಭವಿಷ್ಯವನ್ನು ತಿಳಿದುಕೋಳ್ಳಲು ಕುತೂಹಲ ಇದ್ದೇ ಇರುತ್ತದೆ ಹಾಗೆಯೇ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ಹನ್ನೆರಡು ರಾಶಿಗಳ ಫಲಾಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಹಾಗೆಯೇ ಕೆಲವರಿಗೆ ಶುಭ ಫಲ ಲಭಿಸುತ್ತದೆ ಕೆಲವರಿಗೆ ಅಶುಭ ಮತ್ತು ಮಿಶ್ರ ಫಲಗಳು ಲಭಿಸುತ್ತದೆ 2023 ಜೂನ್ ತಿಂಗಳಲ್ಲಿ ವೃಶ್ಚಿಕ (Scorpio) ರಾಶಿಯವರಿಗೆ ಮಿಶ್ರ ಫಲಗಳು ಲಭಿಸುತ್ತದೆ

ಈ ತಿಂಗಳು ವೃಶ್ಚಿಕ (Scorpio Horoscope) ರಾಶಿಯವರಿಗೆ ಅನುಕೂಲಕರವಾಗಿ ಇರುತ್ತದೆ ಹಾಗೆಯೇ ವ್ಯಾಪಾರ ವ್ಯವಹಾರ ಮಾಡುವರಿಗೆ ಹೆಚ್ಚಿನ ಧನ ಲಾಭ ಕಂಡು ಬರುತ್ತದೆ ಅನಿರೀಕ್ಷಿತ ಧನ ಪ್ರಾಪ್ತಿ ಆಗುತ್ತದೆ ಇದರಿಂದಾಗಿ ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಕಂಡು ಬರುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಬಹಳ ಜಾಗೃತೆ ವಹಿಸಿ ವ್ಯವಹಾರವನ್ನು ಮಾಡಬೇಕು ಹಾಗೆಯೇ ಆರೋಗ್ಯದ ಕಡೆಗೆ ಗಮನಹರಿಸಬೇಕು ಆರೋಗ್ಯ ಸಮಸ್ಯೆ ಕಂಡು ಬರುವ ಸಾಧ್ಯತೆ ಇರುತ್ತದೆ ಕೌಟುಂಬಿಕವಾಗಿ ಭಿನ್ನಾಭಿಪ್ರಾಯ ಕಂಡು ಬರುವ ಸಾಧ್ಯತೆ ಇರುತ್ತದೆ

ಹಾಗಾಗಿ ಮಾತನಾಡುವಾಗ ಗಮನ ಹರಿಸಿ ಅಥವಾ ಸರಿಯಾಗಿ ಯೋಚಿಸಿ ಕಲಹ ಆಗದ ರೀತಿಯಲ್ಲಿ ಮಾತನಾಡಬೇಕು ಯಾವುದೇ ಕೆಲಸ ಕಾರ್ಯಗಳಲ್ಲಿ ವೃಶ್ಚಿಕ ರಾಶಿಯವರು ಯಶಸ್ಸನ್ನು ಪಡೆದುಕೊಳ್ಳುತ್ತಾರೆ ಹಾಗೆಯೇ ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಕಂಡು ಬರುತ್ತದೆ ನಾವು ಈ ಲೇಖನದ ಮೂಲಕ 2023 ಜೂನ್ ತಿಂಗಳಲ್ಲಿ ವೃಶ್ಚಿಕ ರಾಶಿಯ ಫಲಾಫಲಗಳ ಬಗ್ಗೆ ತಿಳಿದುಕೊಳ್ಳಬೇಕು.

ವೃಶ್ಚಿಕ ರಾಶಿಯ ನೀರಿನ ಸ್ಥಿರವಾದ ರಾಶಿಯಾಗಿದ್ದು ಮಂಗಳನ ಒಡೆತನದಲ್ಲಿ ಇರುತ್ತದೆ ವೃಶ್ಚಿಕ ರಾಶಿಯಲ್ಲಿ ಜನಿಸಿದವರು ಹೆಚ್ಚಿನ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಆಕ್ರಮಣಕಾರಿ ಸ್ವಭಾವವನ್ನು ಹೊಂದಿರುತ್ತಾರೆ ಹಾಗೆಯೇ ಯಾವುದು ಸರಿ ಯಾವುದು ತಪ್ಪು ಕೆಟ್ಟದ್ದು ಯಾವುದು ಒಳ್ಳೆಯದು ಯಾವುದು ಎನ್ನುವುದರ ಸಾಮರ್ಥ್ಯವನ್ನು ಹೊಂದಿರುತ್ತಾರೆ

ಭವಿಷ್ಯದ ಬಗ್ಗೆ ಮುಂದಾಲೋಚನೆಯ ಶಕ್ತಿಯನ್ನು ಹೊಂದಿರುತ್ತಾರೆ ತ್ವರಿತವಾಗಿ ನಿರ್ಧಾರವನ್ನು ತೆಗೆದುಕೊಳ್ಳುವ ಮತ್ತು ಕಠಿಣ ನಿಯಂತ್ರಣ ಕೈಗೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ತ್ವರಿತವಾಗಿ ಕೈಗೊಳ್ಳುವ ನಿರ್ಧಾರದಿಂದ ವೃಶ್ಚಿಕ ರಾಶಿಯವರು ಕೆಲವು ಸಮಸ್ಯೆಗೆ ಒಳಗಾಗುತ್ತಾರೆ ಹಾಗಾಗಿ ನಿರ್ಧಾರ ತೆಗೆದುಕೊಳ್ಳುವಾಗ ಸರಿಯಾಗಿ ಯೋಚಿಸಿ ಕೈಗೊಳ್ಳಬೇಕು ಆರನೆಯ ಮನೆಯಲ್ಲಿ ರಾಹು ನಿರ್ಣಯವನ್ನು ಹೊಂದಲು ಹಾಗೂ ಎಲ್ಲ ಅಡ್ಡಿಗಳ ವಿರುದ್ಧ ಯಶಸ್ಸನ್ನು ಪಡೆಯಲು ಅನುಕೂಲಕರನಾಗಿ ಇರುತ್ತಾನೆ ವ್ಯಾಪಾರ ವ್ಯವಹಾರ ಮಾಡುವರಿಗೆ ಅನುಕೂಲಕರವಾಗಿ ಇರುತ್ತದೆ ಹೆಚ್ಚಿನ ಧನ ಲಾಭ ಕಂಡು ಬರುತ್ತದೆ ಹಾಗೆಯೇ ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಕಂಡು ಬರುತ್ತದೆ.

ಹನ್ನೆರಡನೆಯ ಮನೆಯಲ್ಲಿ ಕೇತು ಇರುವುದರಿಂದ ಮನಸ್ಸಿನಲ್ಲಿ ಸುರಕ್ಷತೆ ಭಾವನೆ ಕಂಡು ಬರುತ್ತದೆ ಹಾಗಾಗಿ ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆಯಿಂದ ಇರಬೇಕು ಹಾಗೂ ನಷ್ಟ ಆಗುವ ಸಾಧ್ಯತೆ ಇರುತ್ತದೆ ಗುರು ಮತ್ತು ಕೇತು ಪ್ರತಿಕೂಲ ಸ್ಥಾನದಲ್ಲಿ ಇರುತ್ತಾರೆ ಇದರಿಂದಾಗಿ ಸಾಲ ಮಾಡಲು ಪ್ರೇರಣೆ ಆಗಬಹುದಾಗಿದೆ ನಾಲ್ಕನೆಯ ಮನೆಯಲ್ಲಿ ಶನಿಯು ಇರುತ್ತಾನೆ ಹಾಗಾಗಿ ಕುಟುಂಬದಲ್ಲಿ ಹೆಚ್ಚಿನ ಜವಾಬ್ದಾರಿ ಹಾಗೂ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಸಂಬಂಧದಲ್ಲಿ ಸಹ ಮಿಶ್ರ ಫಲಿತಾಂಶ ಕಂಡು ಬರುತ್ತದೆ

ಜೀವನ ಸಂಗಾತಿಯ ನಡುವೆ ಭಿನ್ನಾಭಿಪ್ರಾಯ ಕಂಡು ಬರುವ ಸಾಧ್ಯತೆ ಇರುತ್ತದೆ ಹೆಚ್ಚಿನ ಫಲಗಳಿಗಾಗಿ ಹನುಮಾನ್ ಚಾಲಿಸವನ್ನು ಹೇಳಬೇಕು ಹೀಗೆ ಜೂನ್ ತಿಂಗಳಲ್ಲಿ ವೃಶ್ಚಿಕ ರಾಶಿಯವರಿಗೆ ಅನುಕೂಲಕರವಾಗಿ ಇರುತ್ತದೆ ಹಾಗೂ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಹೊಂದುತ್ತಾರೆ ಹಾಗೂ ಮಿಶ್ರ ಫಲಾಗಳಿಂದ ಕೂಡಿ ಇರುತ್ತದೆ. ಆರ್ಥಿಕ ಸ್ಥಿತಿಯಲ್ಲಿ ಬದಲಾವಣೆ ಕಂಡು ಬರುತ್ತದೆ ಹಣಕಾಸಿನ ವ್ಯವಹಾರದಲ್ಲಿ ಜಾಗೃತೆಯನ್ನುವಹಿಸಿ ವ್ಯವಹಾರ ಮಾಡಬೇಕು ಉಳಿತಾಯದ ಕಡೆಗೆ ಗಮನ ಹರಿಸಬೇಕು.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: