ನಾವಿಂದು ಟರ್ಮ್ ಇನ್ಸೂರೆನ್ಸ್ ಪಾಲಿಸಿಯ ಬಗ್ಗೆ ತಿಳಿದುಕೊಳ್ಳೋಣ. ಅಂದರೆ ನೀವು ಇನ್ಸೂರೆನ್ಸ್ ಪಾಲಿಸಿಯನ್ನು ಕೊಂಡುಕೊಳ್ಳಬೇಕು ಎಂದರೆ ಆದಾಯದ ದಾಖಲೆಗಳನ್ನು ತೋರಿಸಬೇಕು. ಆದರೆ ಐ ಆರ್ ಡಿ ಅವರು ಯಾವುದೇ ಆದಾಯ ದಾಖಲೆಗಳಿಲ್ಲದೆ ಎಲ್ಲರಿಗೂ ಕೂಡ ಟರ್ಮ್ ಇನ್ಸೂರೆನ್ಸ್ ಪಾಲಿಸಿ ಸಿಗಬೇಕು ಎನ್ನುವ ಉದ್ದೇಶದಿಂದ ಒಂದು ಇನ್ಸೂರೆನ್ಸ್ ಪಾಲಿಸಿಯನ್ನು ತೆಗೆದುಕೊಂಡು ಬಂದಿದ್ದಾರೆ ಅದರ ಬಗ್ಗೆ ನಾವಿಂದು ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ.
ಆ ಇನ್ಸೂರೆನ್ಸ್ ಪಾಲಿಸಿ ಯಾವುದು ಎಂದರೆ ಸರಳ ಜೀವನ ಭೀಮಾ ಪಾಲಿಸಿ. ಈ ಪಾಲಿಸಿ ನಿಮಗೆ ಎಲ್ಲಾ ಬ್ಯಾಂಕುಗಳಲ್ಲಿ ದೊರೆಯುತ್ತದೆ ಇನ್ಸೂರೆನ್ಸ್ ಕಂಪನಿ ಗಳಲ್ಲಿಯೂ ಕೂಡ ದೊರೆಯುತ್ತದೆ ನಿಮಗೆ ಎಲ್ಲಿ ಅನುಕೂಲವಾಗುತ್ತದೆ ಅಲ್ಲಿ ನೀವು ಈ ಪಾಲಿಸಿಯನ್ನು ತೆಗೆದುಕೊಳ್ಳಬಹುದು. ನಾವಿಂದು ಎಸ್ ಬಿ ಐ ನಲ್ಲಿ ಸಿಗುವ ಸರಳ ಜೀವನ್ ಭೀಮಾ ಪಾಲಿಸಿಯ ಬಗ್ಗೆ ಮಾಹಿತಿಯನ್ನು ನೋಡೋಣ. ನೀವು ಈ ಪಾಲಿಸಿಯಲ್ಲಿ ತುಂಬುವಂತಹ ಹಣವನ್ನು ಬ್ಯಾಂಕಿನವರು ಷೇರುಮಾರುಕಟ್ಟೆಯಲ್ಲಿ ಎಲ್ಲಿಯೂ ಡೆಪಾಸಿಟ್ ಮಾಡುವುದಿಲ್ಲ. ಹಾಗಾಗಿ ನೀವು ತುಂಬುವ ಹಣ ಸುರಕ್ಷಿತವಾಗಿರುತ್ತದೆ ಮತ್ತು ಇಲ್ಲಿ ನೀವು ತುಂಬಾಬೇಕಾದಂತಹ ಪ್ರೀಮಿಯಂ ತುಂಬಾ ಕಡಿಮೆ ದರದಲ್ಲಿ ಇರುತ್ತದೆ.
ಹಾಗಾದರೆ ಎಸ್ ಬಿ ಐ ನಲ್ಲಿ ಸರಳ ಜೀವನ ಭೀಮಾ ಪಾಲಿಸಿಯನ್ನು ಪಡೆದುಕೊಳ್ಳಬೇಕಾದರೆ ಯಾವೆಲ್ಲ ಅರ್ಹತೆಗಳು ಇರಬೇಕು ಎಂಬುದನ್ನು ನೋಡುವುದಾದರೆ ಈ ಪಾಲಿಸಿಯನ್ನು ತೆಗೆದುಕೊಳ್ಳುವವರು ಹದಿನೆಂಟು ವರ್ಷ ಮೇಲ್ಪಟ್ಟವರು ಮತ್ತು ಅರವತ್ತೈದು ವರ್ಷದ ಒಳಗಿನವರ ಆಗಿರಬೇಕು. ಪಾಲಿಸಿ ಟರ್ಮ್ ಕನಿಷ್ಠ ಐದು ವರ್ಷ ಗರಿಷ್ಠ ನಲವತ್ತು ವರ್ಷದವರೆಗೆ ಇರುತ್ತದೆ. ಕನಿಷ್ಠ ನೀವು ಐದು ಲಕ್ಷ ರೂಪಾಯಿಗೆ ಪಾಲಿಸಿಯನ್ನು ತೆಗೆದುಕೊಳ್ಳಬೇಕು ಗರಿಷ್ಠ ಇಪ್ಪತ್ತೈದು ಲಕ್ಷದವರೆಗಿನ ಪಾಲಿಸಿಯನ್ನು ತೆಗೆದುಕೊಳ್ಳಬಹುದು. ಇದರಲ್ಲಿ ಪ್ರೀಮಿಯಂ ಪೇಮೆಂಟ್ ಟರ್ಮ್ ನೋಡುವುದಾದರೆ ಅದರಲ್ಲಿ ನಾಲ್ಕು ಆಯ್ಕೆಗಳಿರುತ್ತವೆ.
ಒಂದು ಸಿಂಗಲ್ ಪ್ರಿಮಿಯಂ ಎರಡನೆಯದು ರೆಗ್ಯುಲರ್ ಪ್ರೀಮಿಯಂ ಮೂರನೆಯದು ಲಿಮಿಟೆಡ್ ಪ್ರಿಮಿಯಂ ಐದು ವರ್ಷದವರೆಗೆ ನಾಲ್ಕನೆಯದು ಲಿಮಿಟೆಡ್ ಪ್ರಿಮಿಯಂ ಹತ್ತು ವರ್ಷದವರೆಗೆ. ನೀವು ಪ್ರಿಮಿಯಂ ಅನ್ನು ವರ್ಷಕ್ಕೆ ಒಂದು ಸಾರಿ ಆರು ತಿಂಗಳಿಗೆ ಒಂದು ಸಾರಿ ಅಥವಾ ಮೂರು ತಿಂಗಳಿಗೆ ಒಂದು ಸಾರಿ ತುಂಬಬಹುದು ಅಥವಾ ಪ್ರತಿ ತಿಂಗಳು ತುಂಬಬಹುದು. ಇದಕ್ಕೆ ಸಂಬಂಧಿಸಿದಂತೆ ಒಂದು ಉದಾಹರಣೆಯನ್ನು ನೋಡುವುದಾದರೆ ಇಪ್ಪತ್ತೈದು ವರ್ಷದ ಒಬ್ಬ ವ್ಯಕ್ತಿ ಒಂದು ಪಾಲಿಸಿಯನ್ನು ತೆಗೆದುಕೊಂಡಿದ್ದಾರೆ. ಅವರು ಪಾಲಿಸಿ ಟರ್ಮ್ ಅನ್ನು ಇಪ್ಪತ್ತೈದು ವರ್ಷಕ್ಕೆ ಆಯ್ದುಕೊಂಡಿದ್ದಾರೆ. ಐದು ಲಕ್ಷ ರೂಪಾಯಿಗೆ ಪಾಲಿಸಿಯನ್ನು ಆಯ್ದುಕೊಂಡಿದ್ದಾರೆ ಪ್ರೀಮಿಯಂ ಪೇಮೆಂಟ್ ಟರ್ಮ್ ಅನ್ನು ರೆಗ್ಯುಲರ್ ಆಗಿ ಆಯ್ಕೆ ಮಾಡಿಕೊಂಡಿದ್ದಾರೆ.
ಒಂದು ವೇಳೆ ಪಾಲಿಸಿ ಸಮಯ ಮುಗಿಯುವುದರೊಳಗೆ ಪಾಲಿಸಿ ತೆಗೆದುಕೊಂಡ ವ್ಯಕ್ತಿ ಮರಣ ಹೊಂದಿದರೆ ಅವರ ಹೆಸರಿಗೆ ಐದು ಲಕ್ಷ ರೂಪಾಯಿ ಹಣವನ್ನು ನೀಡುತ್ತದೆ ಅಂದರೆ ಅವರು ಎಷ್ಟು ಮೊತ್ತದ ಪಾಲಿಸಿಯನ್ನು ತೆಗೆದುಕೊಂಡಿರುತ್ತಾರೆ ಅಷ್ಟು ಹಣವನ್ನು ಅವರ ನಾಮಿನಿಗೆ ಕೊಡಲಾಗುತ್ತದೆ. ಒಂದು ವೇಳೆ ಪಾಲಿಸಿ ತೆಗೆದುಕೊಂಡ ವ್ಯಕ್ತಿ ಒಂದು ತಿಂಗಳೊಳಗೆ ಮರಣಹೊಂದಿದರೆ ಅವರು ಎಷ್ಟು ಪಾಲಿಸಿಯನ್ನು ತುಂಬಿರುತ್ತಾರೆ ಅಷ್ಟು ಹಣವನ್ನು ಮಾತ್ರ ನಾಮಿನಿಗೆ ನೀಡುತ್ತಾರೆ.
ಪಾಲಿಸಿಯನ್ನು ತೆಗೆದುಕೊಳ್ಳುವವರು ಮೊದಲು ಅದರ ನೀತಿ-ನಿಯಮಗಳನ್ನು ಸರಿಯಾಗಿ ತಿಳಿದುಕೊಂಡು ಹಣ ತೊಡಗಿಸುವುದು ಒಳ್ಳೆಯದು. ನೀವು ಕೂಡ ಸರಳ ಜೀವನ ಭೀಮಾ ಪಾಲಿಸಿಯನ್ನು ಮಾಡಿಕೊಳ್ಳಿ ಜೊತೆಗೆ ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಸ್ನೇಹಿತರು ಹಾಗೂ ಪರಿಚಿತರಿಗೂ ತಿಳಿಸಿರಿ.