WhatsApp Group Join Now
Telegram Group Join Now

Saundatti yellamma temple: ಪ್ರಮುಖ ಕ್ಷೇತ್ರಗಳಲ್ಲಿ ಒಂದಾದ ಸವದತ್ತಿ ಯಲ್ಲಮ್ಮ ಕ್ಷೇತ್ರಕ್ಕೆ ಒಮ್ಮೆಯಾದರೂ ಭೇಟಿ ನೀಡಿ ತಾಯಿ ಯಲ್ಲಮ್ಮನ ದರ್ಶನ ಮಾಡಬೇಕು. ಭಕ್ತಾದಿಗಳು ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ಹೋಗಿ ತಾಯಿ ರೇಣುಕಾ ದೇವಿಯ ದರ್ಶನ ಮಾಡುತ್ತಾರೆ ಆದರೆ ಹೀಗೆ ಮಾಡುವುದರಿಂದ ತಪ್ಪಾಗುತ್ತದೆ ಹಾಗಾದರೆ ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ಭೇಟಿ ನೀಡಿದಾಗ ಏನು ಮಾಡಬೇಕು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಸವದತ್ತಿ ಕ್ಷೇತ್ರ ಎಂದರೆ ನೆನಪಾಗುವುದೆ ಸವದತ್ತಿ ಯಲ್ಲಮ್ಮ ಜಗನ್ಮಾತೆ ಶ್ರೀ ರೇಣುಕ ಯಲ್ಲಮ್ಮ ದೇವಿ ಎಲ್ಲರಿಗೂ ಮಾತೆಯಾಗಿ ಅಮ್ಮನಾಗಿ ಯಲ್ಲಮ್ಮ ದೇವಿಯಾಗಿದ್ದಾಳೆ. ದಕ್ಷಿಣ ಭಾರತದ ಪ್ರಮುಖ ಶಕ್ತಿ ಕೇಂದ್ರವಾಗಿ ಭಕ್ತರ ಆರಾಧ್ಯ ದೇವಿಯಾಗಿ ಇಷ್ಟಾರ್ಥ ಸಿದ್ಧಿಸುವ ತಾಯಿಯಾಗಿದ್ದಾಳೆ. ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಿಂದ ಕೇವಲ ಐದು ಕಿಲೋಮೀಟರ್ ದೂರದಲ್ಲಿರುವ ರಾಮಲಿಂಗ ಬೆಟ್ಟ ಗುಡ್ಡಗಳ ನಡುವೆ ನೆಲೆಸಿದ್ದಾಳೆ.

ಭಾರತದಾದ್ಯಂತ ರೇಣುಕಾದೇವಿ ಹಲವಾರು ಕನ್ನಡಿಗರ ಮನ ದೇವತೆಯಾಗಿದ್ದಾಳೆ. ಸವದತ್ತಿ ಕ್ಷೇತ್ರವನ್ನು ಹಿಂದೆ ಸವದ್ವರತಿ ಎಂದು ಕರೆಯಲಾಗುತ್ತಿತ್ತು‌ ಮತ್ತು ಇದು ಬೆಳಗಾವಿ ಜಿಲ್ಲೆಯ ಅತ್ಯಂತ ಹಳೆಯ ಊರಾಗಿದೆ. ಹಳದಿ ಬಣ್ಣದ ಅರಿಶಿಣ ಭಂಡಾರ ಯಲ್ಲಮ್ಮ ದೇವಿಗೆ ಬಹಳ ಪ್ರೀತಿ ಈ ಕಾರಣಕ್ಕಾಗಿ ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ಬರುವ ಭಕ್ತಾದಿಗಳು ಭಂಡಾರವನ್ನು ಹಣೆಗೆ ಬಳಿದುಕೊಂಡು ಬರುತ್ತಾರೆ ಹಾಗೂ ಪ್ರಸಾದದಂತೆ ಇಲ್ಲಿಗೆ ಬರುವ ಎಲ್ಲಾ ಭಕ್ತಾದಿಗಳಿಗೂ ನೀಡುತ್ತಾರೆ. ಸಾಮಾನ್ಯವಾಗಿ ಭಕ್ತಾದಿಗಳು ಯಲ್ಲಮ್ಮನ ಗುಡ್ಡಕ್ಕೆ ಹೋಗಿ ರೇಣುಕಾದೇವಿಯ ಆಶೀರ್ವಾದವನ್ನು ಪಡೆದು ಬರುತ್ತಾರೆ ಆದರೆ ಈ ತಪ್ಪನ್ನು ಮಾಡಬಾರದು.

ಯಲ್ಲಮ್ಮನ ಗುಡ್ಡಕ್ಕೆ ಹೋದಾಗ ತಾಯಿ ರೇಣುಕಾ ದೇವಿಯ ದೇವಸ್ಥಾನಕ್ಕೆ ಹೋಗುವ ಮೊದಲು ಇನ್ನಿತರ ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡಿ ನಂತರ ರೇಣುಕಾ ದೇವಿಯ ದೇವಸ್ಥಾನಕ್ಕೆ ಭೇಟಿ ನೀಡಿ ನೇರವಾಗಿ ಮನೆಗೆ ತೆರಳಬೇಕು. ರೇಣುಕಾ ದೇವಿಯ ದೇವಸ್ಥಾನಕ್ಕೆ ಹೋಗುವ ಮೊದಲು ಜೋಗುಳ ಬಾವಿ ಎಂಬ ಕ್ಷೇತ್ರಕ್ಕೆ ಭೇಟಿ ನೀಡಬೇಕು ಸವದತ್ತಿ ಊರಿನ ಹೊರಗೆ ಕೇವಲ ಎರಡರಿಂದ ಮೂರು ಕಿಲೋಮೀಟರ್ ನಲ್ಲಿ ಜೋಗುಳ ಬಾವಿ ಕ್ಷೇತ್ರವಿದೆ ಇಲ್ಲಿ ಹೋಗಿ ನೀರನ್ನು ತಲೆಗೆ ಸಿಂಪಡಿಸಿಕೊಂಡರೆ ಖಾಯಿಲೆಗಳು ದೂರವಾಗುತ್ತದೆ ಎಂಬ ನಂಬಿಕೆ ಇದೆ ನಂತರ ಜೋಗುಳ ಬಾವಿ ಸತ್ಯಮ್ಮ ದೇವಿಯ ದರ್ಶನ ಮಾಡಲೇಬೇಕು

ಅನಾದಿಕಾಲದಿಂದಲೂ ಈ ಪದ್ಧತಿ ನಡೆದುಕೊಂಡು ಬಂದಿದೆ ಜೋಗುಳ ಬಾವಿಯಲ್ಲಿ ಸ್ನಾನ ಮಾಡಿ ಸತ್ಯಮ್ಮ ದೇವಿಯ ದರ್ಶನ ಮಾಡಿಕೊಂಡು ನಂತರ ರೇಣುಕಾ ದೇವಿಯ ದೇವಸ್ಥಾನಕ್ಕೆ ಹೋಗುತ್ತಾರೆ. ನಂತರ ಎಣ್ಣೆ ಹೊಂಡ ಕ್ಷೇತ್ರಕ್ಕೆ ಭೇಟಿ ಕೊಡಬೇಕು ಎಣ್ಣೆ ಹೊಂಡದಲ್ಲಿ ಹರಿದುಬರುವ ನೀರು ಶುಭ್ರತೆಯಿಂದ ಕೂಡಿದ್ದು ಎಣ್ಣೆ ಹೊಂಡದಲ್ಲಿ ಸ್ನಾನ ಮಾಡುವುದು ಪುಣ್ಯ ಎಂಬ ಪ್ರತೀತಿಯಿದೆ.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕನಕಾಂಬಿ ಗ್ರಾಮದ ಹತ್ತಿರ ಉದಯಿಸುವ ಮಲಪ್ರಭೆ ಉಕ್ಕಿ ಹರಿದು ಮಳೆಯಾಗಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರವಳ್ಳಿ ಹತ್ತಿರ ಅಡ್ಡಲಾಗಿ ಬೆಟ್ಟದ ಸಾಲುಗಳನ್ನು ತಲುಪುತ್ತದೆ ಹಿಂದೆ ಈ ಬೆಟ್ಟದ ಮೇಲೆ ಕುಳಿತ ಸಾವಿರ ಗರಿ ಹೊಂದಿರುವ ಸುವರ್ಣ ನವಿಲು ಮಲಪ್ರಭೆಯನ್ನು ನೋಡಿ ನಗುತ್ತದೆ ಮಲಪ್ರಭೆ ನಗಲು ಕಾರಣವೇನೆಂದು ಕೇಳಿದಾಗ ಗುಡ್ಡಕ್ಕೆ ಹೆದರಿ ಮಲಪ್ರಭೆ ಹರಿವ ದಿಕ್ಕನ್ನು ಬದಲಾಯಿಸಿದ್ದಾಳೆ ಎಂದು ನವಿಲು ನಗುತ್ತದೆ ಇದರಿಂದ ಕೋಪಗೊಂಡ ಮಲಪ್ರಭೆ ರಭಸವಾಗಿ ಹರಿದು ಗುಡ್ಡಕ್ಕೆ ಅಪ್ಪಳಿಸಿ ಗುಡ್ಡ ಎರಡು ಹೋಳಾಗುತ್ತದೆ ಹಾಗೂ ಒಂದು ಕಂದಕ ನಿರ್ಮಾಣವಾಗುತ್ತದೆ ಆ ಕಂದಕವೆ ನವಿಲು ಕಂದಕವಾಗಿದೆ ಕಾಲಾಂತರದಲ್ಲಿ ನವಿಲು ತೀರ್ಥ ಎಂಬ ಹೆಸರನ್ನು ಪಡೆದಿದೆ. ಯಲ್ಲಮ್ಮನ ಗಂಡ ಜಮದಗ್ನಿಯ ದೇವಸ್ಥಾನ ಅಲ್ಲಿಂದ ಆರು ಕಿಲೋಮೀಟರ್ ದೂರದಲ್ಲಿ ಬೆಟ್ಟದಲ್ಲಿ ಕಂಡುಬರುತ್ತದೆ.

ರೇಣುಕಾ ಸಾಗರ ಇದು ನವಿಲುತೀರ್ಥ ಅಣೆಕಟ್ಟಿನಿಂದ ರೂಪುಗೊಂಡ ಮಹಾನ್ ಸಾಗರವಾಗಿದೆ ಇದು ಮಲಪ್ರಭೆಯ ಅದ್ಭುತ ಜಲಾಶಯವಾಗಿದೆ. ಸವದತ್ತಿಯಲ್ಲಿ ಏಳು ಗುಡ್ಡಗಳಿವೆ ಏಳು ಗುಡ್ಡಗಳನ್ನು ತಾಯಿ ಯಲ್ಲಮ್ಮ ಸಂಚರಿಸುತ್ತಾಳೆ ಎಂಬ ನಂಬಿಕೆ ಇದೆ ಅರಿಶಿಣವನ್ನು ಅರ್ಪಿಸುವುದು ಇಲ್ಲಿನ ಪ್ರಮುಖ ಸೇವೆಯಾಗಿದೆ. ಮಕ್ಕಳಾಗದೆ ಇರುವವರು ಜೋಗುಳ ಬಾವಿಯಲ್ಲಿ ಸ್ನಾನ ಮಾಡಿ ಪರಶುರಾಮನ ತೊಟ್ಟಿಲನ್ನು ತೂಗಿಸುತ್ತಾರೆ ಎಂಬ ನಂಬಿಕೆ ಇದೆ. ಈ ಎಲ್ಲಾ ಕ್ಷೇತ್ರಗಳನ್ನು ಭೇಟಿ ನೀಡಿದ ನಂತರ ರೇಣುಕಾ ದೇವಿಯ ದೇವಸ್ಥಾನಕ್ಕೆ ಭೇಟಿ ನೀಡಿ ನೇರವಾಗಿ ಮನೆಗೆ ಹೋಗಬೇಕು ಆಗ ಮಾತ್ರ ತಾವು ಪಡೆದ ಪುಣ್ಯ ತಮ್ಮ ಮನೆಗೆ ಸೇರುತ್ತದೆ ಎಂಬ ವಾಡಿಕೆ ಇದೆ‌. ಸವದತ್ತಿ ಯಲ್ಲಮ್ಮ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: