WhatsApp Group Join Now
Telegram Group Join Now

ಸ್ನೇಹಿತರೇ, ತಮ್ಮ ಅದ್ಭುತ ಹಾಸ್ಯ ಪ್ರಜ್ಞೆಯ ಮೂಲಕವೇ ಜನ ಮನ್ನಣೆ ಪಡೆದಿರುವಂತಹ ಹಾಸ್ಯ ಕಲಾವಿದ ಸಂಜು ಬಸಯ್ಯ(Sanju Basayya) ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ಎಂಬ ಹಾಸ್ಯ ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾದರೂ. ಹೌದು ಗೆಳೆಯರೇ ಯೋಗರಾಜ್ ಭಟ್(Yograj Bhat), ನವರಸ ನಾಯಕ ಜಗ್ಗೇಶ್ (Jaggesh) ಹಾಗೂ ಕ್ರೇಜಿ ಕ್ವೀನ್ ರಕ್ಷಿತಾ

(Rakshitha) ರವರ ತೀರ್ಪುಗಾರಿಕೆಯಲ್ಲಿ ಮೂಡಿಬರುತ್ತಿದ್ದಂತಹ ಈ ಕಾರ್ಯಕ್ರಮದ ಮೊದಲ ಆವೃತ್ತಿಯಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಸಂಜು ಬಸಯ್ಯನವರು ಕಲೆಗೆ ಬಾಹ್ಯ ರೂಪ ದೇಹದ ಆಕರ ಮುಖ್ಯವಲ್ಲ ಅದ್ಭುತವಾಗಿ ನಟಿಸುವಂತಹ ಶಕ್ತಿ ಒಂದಿದ್ದರೆ ಸಾಕು ಎಂಬುದನ್ನು ಸಾಬೀತು ಪಡಿಸಿದಂತಹ ಅಪರೂಪದ ಕಲಾವಿದ ಮೂಲತಃ ಬೆಳಗಾವಿ ಜಿಲ್ಲೆಯವರಾದ ಸಂಜು ಬಸಯ್ಯನವರಿಗೆ ಚಿಕ್ಕಂದಿನಿಂದಲೂ ನಟನೆ ಹಾಗೂ ಲಲಿತ ಕಲೆಗಳ ಮೇಲೆ

ಬಹಳ ಆಸಕ್ತಿ ಇದ್ದ ಕಾರಣ ವಿದ್ಯಾಭ್ಯಾಸವನ್ನು ಅರ್ದಕ್ಕೆ ತೊರೆದು ರಂಗ ಮಂಟಪವನ್ನು ಸೇರ್ಪಡೆಯಾಗುತ್ತಾರೆ. ನಂತರ ಸಾಕಷ್ಟು ಗ್ರಾಮದ ನಾಟಕಗಳಲ್ಲಿ ಸ್ಟೇಜ್ ಶೋಗಳಲ್ಲಿ ಹಾಗೂ ಬೀದಿ ನಾಟಕಗಳಲ್ಲಿ ಅಭಿನಯಿಸುತ್ತ ರಂಗಭೂಮಿ ಕಲಾವಿದನಾಗಿ ಗುರುತಿಸಿಕೊಂಡಿದ್ದ ಸಂಜು ಬಸಯ್ಯನವರಿಗೆ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗುವಂತಹ ಅವಕಾಶ ದೊರಕುತ್ತದೆ. ಸಿಕ್ಕಂತಹ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು

ಸಾಕಷ್ಟು ಸಿನಿಮಾ ಹಾಗೂ ಸೀರಿಯಲ್ ಗಳಲ್ಲಿ ಪೋಷಕ ಪಾತ್ರದಲ್ಲಿ ಹಾಸ್ಯ ಪಾತ್ರದಲ್ಲಿ ಅಭಿನಯಿಸುವ ಮೂಲಕ ತಮ್ಮದೇ ಆದ ವಿಶೇಷ ಅಭಿಮಾನಿ ಬಳಗವನ್ನು ಸೂಚಿಸಿಕೊಂಡಿದ್ದಾರೆ ಇನ್ನು ಕಳೆದ ಎಂಟು ವರ್ಷಗಳಿಂದ ತಮ್ಮ ಬಹುಕಾಲದ ಗೆಳತಿ ಪಲ್ಲವಿ ಬಳ್ಳಾರಿ (Palllavi Ballari) ಅವರೊಂದಿಗೆ ಪ್ರೀತಿಯಲ್ಲಿದ್ದ ಸಂಜು ಬಸಯ್ಯ ಮನೆಯವರ ಒಪ್ಪಿಗೆ ದೊರೆತ ನಂತರ ರಿಜಿಸ್ಟರ್ ಮ್ಯಾರೇಜ್ ಆಗಿ ಕಳೆದ ಕೆಲವು ದಿನಗಳ ಹಿಂದೆ ಅದ್ದೂರಿಯಾಗಿ ಕಾರ್ಯತಕ್ಷತೆ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಆ ಕಾರ್ಯಕ್ರಮದ ಸುಂದರ ಕ್ಷಣಗಳ ಫೋಟೋಗಳನ್ನು ತಮ್ಮ ತಮ್ಮ ಸೋಶಿಯಲ್ ಮೀಡಿಯಾದ ಖಾತೆಯಲ್ಲಿ ಹಂಚಿಕೊಳ್ಳುತ್ತಿರುವ ಸಂಜು ಹಾಗೂ ಪಲ್ಲವಿ ನೆಟ್ಟಿ್ರ ಮನಸ್ಸನ್ನು ಸೆಳೆಯುತ್ತಿದ್ದಾರೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: