ನಮ್ಮೆಲ್ಲರ ಮನೆಗಳಲ್ಲಿ ಕ್ರಿಕೆಟ್ ಪ್ರೇಮಿಗಳು ಸಿಕ್ಕೆ ಸಿಗುತ್ತಾರೆ. ಕ್ರಿಕೆಟ್ ಜಗತ್ತಿನಲ್ಲಿ ಬಹಳಷ್ಟು ಜನರಿಗೆ ಆಸಕ್ತಿ ಇರುತ್ತದೆ. ಸದ್ಯದಲ್ಲೆ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾರಂಭವಾಗಲಿದ್ದು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
15ನೆ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಬೆರಳಣಿಕೆಯಷ್ಟು ದಿನಗಳು ಮಾತ್ರ ಬಾಕಿ ಉಳಿದಿದೆ. ಇದೆ ಮಾರ್ಚ್ 26 ಶನಿವಾರದಂದು ಐಪಿಎಲ್ 2022ಕ್ಕೆ ಚಾಲನೆ ಸಿಗಲಿದೆ. ಹೊಸ ತಂಡ, ಹೊಸ ನಾಯಕ, ಹೊಸ ನಿಯಮ ಹೀಗೆ ಸಾಕಷ್ಟು ಬದಲಾವಣೆಗಳೊಂದಿಗೆ ಈ ಬಾರಿಯ ಮಿಲಿಯನ್ ಡಾಲರ್ ಟೂರ್ನಿ ನಡೆಯಲಿದೆ ಎಂಬ ಸುದ್ದಿ ಹರಡಿದೆ. ಕೆಲವು ವಿದೇಶಿ ಆಟಗಾರರನ್ನು ಹೊರತು ಪಡಿಸಿ ಉಳಿದ ಪ್ಲೇಯರ್ಸ್ ಈಗಾಗಲೆ ತಮ್ಮ ಫ್ರಾಂಚೈಸಿ ಸೇರಿಸಿಕೊಳ್ಳುತ್ತಿದ್ದಾರೆ. ಅಂತೆಯೆ ಚೊಚ್ಚಲ ಕಪ್ನ ನಿರೀಕ್ಷೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಭರ್ಜರಿ ತಯಾರಿ ನಡೆಸುತ್ತಿದೆ.
ನೂತನ ನಾಯಕ ಫಾಫ್ ಡುಪ್ಲೆಸಿಸ್ ಆಟಗಾರರ ಜೊತೆ ನಿರಂತರ ಮಾತುಕತೆ ನಡೆಸುತ್ತಿದ್ದು ದೊಡ್ಡ ಗೇಮ್ ಪ್ಲಾನ್ ಅನ್ನು ರೂಪಿಸುತ್ತಿದ್ದಾರೆ. ಇದರ ನಡುವೆ ಆರ್ಸಿಬಿ ತಂಡಕ್ಕೆ ಅಪಾಯಕಾರಿ ಆಟಗಾರನ ಎಂಟ್ರಿಯಾಗಿದೆ. ಆರ್ಸಿಬಿ ಪಾಳಯಕ್ಕೆ ಕಿಂಗ್ ಕೊಹ್ಲಿ ಅವರು ಕಾಲಿಟ್ಟಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಧಾರ ಸ್ತಂಭ ವಿರಾಟ್ ಕೊಹ್ಲಿ ಆರ್ಸಿಬಿ ಪಾಳಯವನ್ನು ಸೇರಿಕೊಂಡಿದ್ದಾರೆ. ಈ ಬಗ್ಗೆ ಆರ್ಸಿಬಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಫೋಟೋವನ್ನು ಹಂಚಿಕೊಂಡಿದೆ ಕಿಂಗ್ ಕೊಹ್ಲಿಯ ಆಗಮನವಾಗಿದೆ ಇನ್ನು ಅದರ ಗತ್ತೆ ಬೇರೆ ಅಲ್ಲದೆ ಈಗ ಅದು ದೊಡ್ಡ ಸುದ್ದಿ ಎಂದು ಬರೆದುಕೊಂಡಿದೆ. ಕೊಹ್ಲಿ ಬಹುಶಃ ಎರಡು ದಿನಗಳ ಕ್ವಾರಂಟೈನ್ ಅನುಭವಿಸಿ ಮುಂಬೈನಲ್ಲಿರುವ ಆರ್ಸಿಬಿ ಕ್ಯಾಂಪ್ ಸೇರಿಕೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕೊಹ್ಲಿ ನಾಯಕತ್ವದಿಂದ ಕೆಳಗಿಳಿದು ಇದೀಗ ಒಬ್ಬ ಬ್ಯಾಟರ್ ಆಗಿ ಈ ಬಾರಿ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಯಾವರೀತಿ ಪ್ರದರ್ಶನ ತೋರುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.
ಮೊದಲ ಸೀಸನ್ನಿಂದಲೂ ಒಂದು ಪ್ರಶಸ್ತಿಗಾಗಿ ಹೋರಾಡುತ್ತಿರುವ ರಾಯಲ್ ಚಾಲೆಂಜರ್ಸ್ ಈ ಬಾರಿ ಆದರೂ ನೂತನ ನಾಯಕ ನೂತನ ತಂಡದೊಂದಿಗೆ ಕಪ್ ಗೆಲ್ಲುವ ವಿಶ್ವಾಸದಲ್ಲಿದೆ. ಮಾರ್ಚ್ 27 ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಆಡುವ ಮೂಲಕ ಆರ್ಸಿಬಿ ತನ್ನ ಅಭಿಯಾನವನ್ನು ಶುರು ಮಾಡಲಿದೆ. ಆರ್ಸಿಬಿ ಹರಾಜಿಗೂ ಮುನ್ನ ತನ್ನಲ್ಲೆ ಉಳಿಸಿಕೊಂಡಿದ್ದ ಸ್ಫೋಟಕ ಬ್ಯಾಟರ್ ಗ್ಲೇನ್ ಮ್ಯಾಕ್ಸ್ವೆಲ್ ಆರಂಭದ ಕೆಲವು ಪಂದ್ಯಗಳಿಗೆ ಲಭ್ಯರಿಲ್ಲ ಎಂಬುದು ಅಭಿಮಾನಿಗಳಿಗೆ ಬೇಸರದ ಸಂಗತಿಯಾಗಿತ್ತು. ಕಳೆದ ವರ್ಷ ಯುಎಇನಲ್ಲಿ ನಡೆದ ಐಪಿಎಲ್ನಲ್ಲಿ ಆರ್ಸಿಬಿ ಪ್ಲೆ ಆಫ್ ವರೆಗೂ ತಲುಪುವಲ್ಲಿ ಯಶಸ್ವಿಯಾಗಿತ್ತು ಆದರೆ ಕೊನೆಯ ಕ್ಷಣದಲ್ಲಿ ಎಡವಿದ ಪರಿಣಾಮ ಮುಂದಿನ ಹಂತಕ್ಕೆ ತೇರ್ಗಡೆಯಾಗಲಿಲ್ಲ. ಅದಾಗಲೆ ಕೊಹ್ಲಿ ನಾನು ಮುಂದಿನ ಆವೃತ್ತಿಯಿಂದ ಆರ್ಸಿಬಿ ತಂಡದ ನಾಯಕನಾಗಿ ಇರುವುದಿಲ್ಲ ಎಂದು ಘೋಷಿಸಿದ್ದರು.
ಮೆಗಾ ಹರಾಜಿಗೂ ಮುನ್ನ ಆರ್ಸಿಬಿ ಕೊಹ್ಲಿ, ಮ್ಯಾಕ್ಸ್ವೆಲ್ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ರಿಟೇನ್ ಮಾಡಿಕೊಂಡಿತ್ತು. ಹಿಂದಿನ ಸೀಸನ್ಗಳಲ್ಲಿ ಆರ್ಸಿಬಿ ಪರ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಓಪನರ್ ಆಗಿ ಕಣಕ್ಕಿಳಿಯುತ್ತಿದ್ದರು. ಈ ಬಾರಿ ಪಡಿಕ್ಕಲ್ ಇಲ್ಲ ಎಂಬುದು ಕ್ರಿಕೆಟ್ ಅಭಿಮಾನಿಗಳಿಗೆ ಬೇಸರವಿದೆ. ಕೊಹ್ಲಿ ಆರಂಭಿಕನಾಗಿ ಆಡಿದರೂ ದೊಡ್ಡ ಮಟ್ಟದ ಯಶಸ್ಸು ತಂಡಕ್ಕೆ ಸಿಗಲಿಲ್ಲ. ಹೀಗಾಗಿ ಡುಪ್ಲೆಸಿಸ್ ಓಪನರ್ ಆಗಿ ಆಡುವುದು ಖಚಿತ ಆದರೆ ಮತ್ತೊಬ್ಬ ಆರಂಭಿಕ ಯಾರು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಇದಕ್ಕೆ ಅನೇಕ ಕ್ರಿಕೆಟ್ ಪಂಡಿತರು ಸಲಹೆ ನೀಡಿದ್ದಾರೆ. ಐಪಿಎಲ್ 2022 ರಲ್ಲಿ ಆರ್ಸಿಬಿ ತಂಡದ ಪರ ಆರಂಭಿಕರಾಗಿ ಪಾಫ್ ಡುಪ್ಲೆಸಿಸ್ ಜೊತೆ ಯುವ ಕ್ರಿಕೆಟಿಗ ಅನೂಜ್ ರಾವತ್ ಕಣಕ್ಕಿಳಿಯಬೇಕು ಎಂದು ಭಾರತದ ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್ ಹೇಳಿದ್ದಾರೆ. ಕೊಹ್ಲಿ ಅವರು ಮೂರನೆ ಕ್ರಮಾಂಕದಲ್ಲಿ ಕಣಕ್ಕಿಳಿದು ಬ್ಯಾಟ್ ಬೀಸಬೇಕು ಎಂದಿರುವ ಅವರು ಈ ಬಾರಿ ತಂಡಕ್ಕೆ ಎಬಿ ಡಿ ವಿಲಿಯರ್ಸ್ ಕೊಡುಗೆ ಇಲ್ಲದ ಕಾರಣ ಕೊಹ್ಲಿಯ ಅವಶ್ಯಕತೆ ಆರ್ಸಿಬಿಗೆ ಮಧ್ಯಮ ಕ್ರಮಾಂಕದಲ್ಲಿದೆ ಎಂಬುದು ಅವರ ಅಭಿಪ್ರಾಯ. ಈ ಮಾಹಿತಿಯನ್ನು ಕ್ರಿಕೆಟ್ ಅಭಿಮಾನಿಗಳಿಗೆ ತಿಳಿಸಿ.