ಬ್ಯಾಂಕಿನಲ್ಲಿ ಉದ್ಯೋಗವನ್ನು ಮಾಡಬೇಕೆಂದು ಕೆಲವರಿಗೆ ಆಸೆ ಇರುತ್ತದೆ ಅದಕ್ಕಾಗಿ ಹುಡುಕಾಟ ನಡೆಸುತ್ತಿರುತ್ತಾರೆ. ಬ್ಯಾಂಕಿನಲ್ಲಿ ಉದ್ಯೋಗವನ್ನು ಮಾಡಬೇಕು ಎಂಬ ಆಸೆಯನ್ನು ಹೊಂದಿರುವವರಿಗೆ ನಾವು ಸಿಹಿ ಸುದ್ದಿ ಒಂದನ್ನು ತಿಳಿಸಿ ಕೊಡುತ್ತೇವೆ. ಅದೇನೆಂದರೆ ಎರಡು ಸಾವಿರದ ಇಪ್ಪತ್ತೆರಡಕ್ಕೆ ಸಂಬಂಧಿಸಿದಂತೆ ಆರ್ ಬಿ ಐ ಬ್ಯಾಂಕ್ ನಿಂದ ನೇಮಕಾತಿ ನಡೆಯುತ್ತಿದೆ. ಯಾವೆಲ್ಲ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಬಹುದು ಹೇಗೆ ಅರ್ಜಿಯನ್ನು ಸಲ್ಲಿಸಬಹುದು ಈ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತವೆ.
ಆರ್ ಬಿ ಐ ಬ್ಯಾಂಕ್ ನಿಂದ ಸಹಾಯಕ ಮತ್ತು ಗ್ರಂಥಪಾಲಕ ಹುದ್ದೆಗೆ ನೇಮಕಾತಿ ನಡೆಯುತ್ತಿದ್ದು ಅಭ್ಯರ್ಥಿಗಳು ಆನ್ಲೈನ್ ಮೂಲಕ ತಮ್ಮ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಈ ಒಂದು ಹುದ್ದೆಗೆ ಪದವಿ ಪಡೆದಿರುವವರು ಡಿಪ್ಲೋಮಾ ಮುಗಿಸಿರುವವರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇಲ್ಲಿ ಲೀಗಲ್ ಆಫೀಸರ್, ಟೆಕ್ನಿಕಲ್ ಮತ್ತು ಸಿವಿಲ್ ಮ್ಯಾನೇಜರ್, ಟೆಕ್ನಿಕಲ್ ಎಲೆಕ್ಟ್ರಿಕಲ್ ಮ್ಯಾನೇಜರ್ ಲೈಬ್ರರಿ ಅಸಿಸ್ಟೆಂಟ್ ಈ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು ಫುಲ್ ಟೈಮ್ ವರ್ಕ್ ಇರುತ್ತದೆ.
ಈ ಒಂದು ಹುದ್ದೆಗೆ ಭಾರತದಲ್ಲಿ ವಾಸವಿರುವ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈಗಾಗಲೇ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದ್ದು ಅಭ್ಯರ್ಥಿಗಳು ಫೆಬ್ರುವರಿ ನಾಲ್ಕು ಎರಡು ಸಾವಿರದ ಇಪ್ಪತ್ತೆರಡವರೆಗೆ ತಮ್ಮ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಲು ಅವಕಾಶವಿದೆ. ಈ ಒಂದು ಹುದ್ದೆಗೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಎಂಬುದನ್ನು ನೋಡುವುದಾದರೆ ಅಭ್ಯರ್ಥಿಗಳು ಮೊದಲಿಗೆ ಆರ್ ಬಿ ಐ ನ ಆಫೀಸಿಯಲ್ ಲಿಂಕನ್ನು ತೆರೆದು ತಮ್ಮ ಅರ್ಜಿಯನ್ನು ಸಲ್ಲಿಸಬಹುದಾಗಿದೆ. Official notification https://opportunities.rbi.org.in/Scri…
ಲಿಂಕನ್ನು ಓಪನ್ ಮಾಡಿದ ತಕ್ಷಣ ಅಲ್ಲಿ ನಿಮಗೆ ಈ ಒಂದು ಹುದ್ದೆಗೆ ಸಂಬಂಧಿಸಿದಂತೆ ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಶುಲ್ಕ ಎಷ್ಟಿರುತ್ತದೆ ಎಂಬುದರ ಮಾಹಿತಿ ದೊರೆಯುತ್ತದೆ. ಅದನ್ನು ತೆಗೆದುಕೊಂಡು ನಂತರ ನೀವು ಕ್ಲಿಕ್ ಹಿಯರ್ ಟು ನ್ಯೂ ರಿಜಿಸ್ಟ್ರೇಷನ್ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲ್ಲಿ ಒಂದು ಪುಟ ಕಾಣಿಸುತ್ತದೆ ಅಲ್ಲಿ ಕೇಳುವ ಮಾಹಿತಿಯನ್ನು ತುಂಬಬೇಕು. ಈ ರೀತಿಯಾಗಿ ನೀವು ಆನ್ಲೈನ್ ಮೂಲಕ ನಿಮ್ಮ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಇದಿಷ್ಟು ಎರಡು ಸಾವಿರದ ಇಪ್ಪತ್ತೆರಡಕ್ಕೆ ಸಂಬಂಧಿಸಿದಂತೆ ಆರ್ ಬಿ ಐ ನಿಂದ ನಡೆಯುತ್ತಿರುವ ನೇಮಕಾತಿಯ ಕುರಿತಾದ ಮಾಹಿತಿಯಾಗಿದೆ. ನೀವು ಕೂಡ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗವನ್ನು ಮಾಡಬೇಕು ಎಂಬ ಆಸೆ ಇದ್ದರೆ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜತೆಗೆ ಪರಿಚಿತರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.