WhatsApp Group Join Now
Telegram Group Join Now

Pavitra Lokesh ಸ್ನೇಹಿತರೆ ಸ್ಯಾಂಡಲ್ವುಡ್ ಹಾಗೂ ಟಾಲಿವುಡ್ ಅಂಗಳದಲ್ಲಿ ಬಹು ದೊಡ್ಡ ಮಟ್ಟದ ಸಂಚಲನ ಸೃಷ್ಟಿ ಮಾಡಿದಂತಹ ಮದುವೆ ಎಂದರೆ ಅದು ಟಾಲಿವುಡ್ನ ಪ್ರಖ್ಯಾತ ನಿರ್ಮಾಪಕ ಹಾಗೂ ಮಹೇಶ್ ಬಾಬು ಅವರ ಸಹೋದರ ನರೇಶ್ ಬಾಬು(Naresh Babu) ಮತ್ತು ಪವಿತ್ರ ಲೋಕೇಶ್ (Pavitra Lokesh) ಅವರ ಪ್ರೇಮ್ ಕಹಾನಿ.

ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಬಹು ದೊಡ್ಡ ಸಂಚಲನವನ್ನು ಸೃಷ್ಟಿ ಮಾಡಿತ್ತು. ಅಲ್ಲದೆ ಇದೆಲ್ಲಾ ಮಾಡಿದ್ದು ಕೇವಲ ಸಿನಿಮಾಗೆ ಎಂದು ನರೇಶ್ ಬಾಬು ಮತ್ತು ಪವಿತ್ರ ಲೋಕೇಶ್ ಸಂದರ್ಶನಗಳಲ್ಲಿ ಹೇಳಿದ್ದಾರೆ. ಆದರೆ ಇದು ಎಷ್ಟರ ಮಟ್ಟಕ್ಕೆ ನಿಜ ಎಷ್ಟರ ಮಟ್ಟಕ್ಕೆ ಸುಳ್ಳು ಎಂಬುದು ಇನ್ನು ಅಧಿಕೃತವಾಗಿ ಹೊರಬಂದಿಲ್ಲ.

ಹೀಗಿರುವಾಗ ನರೇಶ್ ಬಾಬು ಅವರು ತಮ್ಮ ಮೂರನೇ ಪತ್ನಿ ರಮ್ಯಾ ರಘುಪತಿಗೆ ವಿಚ್ಛೇದನ ನೀಡಲು ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಇತ್ತ ರಮ್ಯಾ ರಘುಪತಿಯವರು ಪವಿತ್ರ ಲೋಕೇಶ್ ಹಾಗೂ ನರೇಶ್ ಅವರ ನಿಜ ಜೀವನದ ಕಥೆ ಓಟಿಟಿ ಸ್ಕ್ರೀನಿಂಗ್ನಲ್ಲಿ ಪ್ರಸಾರವಾಗಬಾರದು ಎಂಬುದರ ಅರ್ಜಿಯನ್ನು ಸಲ್ಲಿಸಿದ್ದು, ವಿಚಾರಣೆ ನಡೆದು ಅಂತಿಮ ತೀರ್ಪು ಹೊರ ಬಿದ್ದಿದೆ.

ಹೌದು ಗೆಳೆಯರೇ ಪವಿತ್ರ ಲೋಕೇಶ್-ನರೇಶ್ ಬಾಬು ನಟನೆಯ ಮತ್ತೆ ಮದುವೆ ಸಿನಿಮಾ ಅದಾಗಲೇ ಟಾಲಿವುಡ್ ಅಂಗಳದಲ್ಲಿ ಬಹು ದೊಡ್ಡ ಮಟ್ಟದ ಸಂಚಲನ ಸೃಷ್ಟಿ ಮಾಡಿತ್ತು, ಸಿನಿಮಾದ ಸಕ್ಸಸ್ಗಾಗಿ ಪವಿತ್ರ ಹಾಗೂ ನರೇಶ್ ನಾನಾ ರೀತಿಯ ಕಸರತ್ತನ್ನು ನಡೆಸುತ್ತಿದ್ದಾರೆ. ಹೀಗಿರುವಾಗ ರಮ್ಯಾ ರಘುಪತಿ ಯವರು ಇವರಿಬ್ಬರ ಸಿನಿಮಾ OTTಯಲ್ಲಿ ಪ್ರಸಾರವಾಗಬಾರದು ಎಂಬುದನ್ನು ಕೋರಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.

ಇದರ ತನಿಖೆ ನಡೆಸಿದ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಅಂತಿಮ ತೀರ್ಪನ್ನು ಹೊರ ಹಾಕಿದ್ದು, ರಮ್ಯಾ(Ramya) ಸಲ್ಲಿಸಿದ ಅರ್ಜಿಯನ್ನು ವಜಾ ಗೊಳಿಸಿರುವ ಮಾಹಿತಿ ತಿಳಿದು ಬಂದಿದೆ. ಹೌದು ಗೆಳೆಯರೇ ಸಿನಿಮಾದಲ್ಲಿರುವಂತಹ ಅನೇಕ ಘಟನೆಗಳು ನನ್ನ ಹಾಗೂ ನರೇಶ್ ಬಾಬು (Naresh Babu) ಅವರ ನಿಜ ಜೀವನಕ್ಕೆ ಹೋಲುತ್ತದೆ ಎಂದು ವಾದ ಮಂಡಿಸಿದ್ದರು. ಆದರೆ ಬೆಂಗಳೂರಿನ ಸಿವಿಲ್ ಕೋರ್ಟ್(Court) ಇದನ್ನು ವಜಗೊಳಿಸಿರುವ ಬೆನ್ನಲ್ಲೇ ಅಮೆಜಾನ್ ಪ್ರೈಮ್‌ನಲ್ಲಿ ಮತ್ತೆ ಮದುವೆ(Matte maduve) ಸಿನಿಮಾ ಸ್ರಿಮಿಂಗ್ (Screaming) ಆಗುತ್ತಿದೆ. ಇದನ್ನೂ ಓದಿ Dunia Vijay: ದುನಿಯಾ ವಿಜಯ್ ಮತ್ತು ಕೀರ್ತಿ ಅವರ ವಯಸ್ಸಿನ ಅಂತರವೆಷ್ಟು ಗೊತ್ತೇ? ಇಲ್ಲಿದೆ ನೋಡಿ

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: