News Anchor Dimple Divya ಸ್ನೇಹಿತರೆ, ತಮ್ಮ ಚಿಟಪಟ ಮಾತುಗಾರಿಕೆಯ ಮೂಲಕವೇ ಕರ್ನಾಟಕದ ಮನೆ ಮಾತಾಗಿರುವ ಸಾಕಷ್ಟು ಹೆಣ್ಣುಮಕ್ಕಳಲ್ಲಿ ಆಂಕರ್ ಡಿಂಪಲ್ ದಿವ್ಯ ಕೂಡ ಒಬ್ಬರು. ರಂಗಣ್ಣನವರ ಕನಸಿನ ಕೂಸಾಗಿರುವಂತಹ ಪಬ್ಲಿಕ್ ಟಿವಿಯಲ್ಲಿ ಪ್ರಮುಖ ಆಂಕರ್ಗಳಲ್ಲಿ ಒಬ್ಬರಾಗಿರುವಂತಹ ಈಕೆ ತಮ್ಮ ಅದ್ಭುತ ಮಾತುಗಾರಿಕೆಯ ಶೈಲಿಯಲ್ಲಿಯೇ ಕನ್ನಡಿಗರ ಮನಸ್ಸನ್ನು ಗೆದ್ದಿದ್ದಾರೆ.
ಹೌದು ಸ್ನೇಹಿತರೆ ಕನ್ನಡದಲ್ಲಿ ಇರುವ ಸಾಕಷ್ಟು ಟಿವಿ ನ್ಯೂಸ್ ಚಾನೆಲ್ಗಳಲ್ಲಿ ಪಬ್ಲಿಕ್ ಟಿವಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ರಂಗನಾಥ್ ಅವರ ಸಾರಥ್ಯದಲ್ಲಿ ಮೂಡಿಬರುವ ಈ ಚಾನಲ್ನಲ್ಲಿ ಡಿಂಪಲ್ ದಿವ್ಯ, ಅರುಣ್ ಬಡಿಗೆರೆ ಪ್ರಮುಖ ಆಂಕರ್ಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅದರಲ್ಲೂ ಡಿಂಪಲ್ ದಿವ್ಯ ಅವರ ಆಂಕರಿಂಗ್ ಸ್ಟೈಲ್ ಗೆ ವಿಶೇಷವಾದ ಅಭಿಮಾನಿ ಬಳಗವಿದೆ ಎಂದರೆ ತಪ್ಪಾಗಲಾರದು.
ಅದರಲ್ಲೂ ರಂಗಣ್ಣ ಮತ್ತು ದಿವ್ಯ ಅವರ ಕಾಂಬಿನೇಷನ್ನಲ್ಲಿ ಮೂಡಿಬರುವ ಬಿಗ್ ಬುಲೆಟಿನ್ ಕಾರ್ಯಕ್ರಮ ಜನರ ಮನಸ್ಸನ್ನು ಆಕರ್ಷಿಸಿ ಬಾರಿ ಜನಪ್ರಿಯತೆ ಪಡೆದುಕೊಂಡಿದೆ. ಹೌದು ಸ್ನೇಹಿತರೆ, ಕಾರ್ಯಕ್ರಮದ ಲೈವ್ನಲ್ಲಿ ರಂಗಣ್ಣ ಮಾತನಾಡುವ ಪ್ರತಿಯೊಂದು ಪದಗಳಿಗೂ ದಿವ್ಯ ತಮ್ಮದೇ ಶೈಲಿಯಲ್ಲಿ ಟಾಂಗ್ ನೀಡುತ್ತಿರುತ್ತಾರೆ. ಲೈವ್ ನಲ್ಲಿ ಇವರ ಜುಗಲ್ ಬಂದಿ ನೋಡುವ ಸಲುವಾಗಿ ಅದೆಷ್ಟೋ ಜನ ಟಿವಿ ಚಾನಲ್ ಹಾಕುವಂತಹ ವರದಿ ತಿಳಿದು ಬಂದಿದೆ.
ನ್ಯೂಸ್ ಆಂಕರಿಂಗ್ ಹೊರತಾಗಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಇರುವಂತಹ ದಿವ್ಯ ಆಗಾಗ ತಮ್ಮ ವೈಯಕ್ತಿಕ ವಿಚಾರಗಳನ್ನು ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳುತ್ತಾ ಅಭಿಮಾನಿಗಳೊಡನೆ ಒಡನಾಟದಲ್ಲಿ ಇರುತ್ತಾರೆ. ಹೀಗೆ ಕಳೆದ ಕೆಲವು ವರ್ಷಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಿವ್ಯ ಅವರಿಗೆ ಒಂದು ಹೆಣ್ಣು ಮಗು ಕೂಡ ಇದ್ದು, ಆಗಾಗ ಕುಟುಂಬದ ಫೋಟೋಗಳನ್ನು ಹಂಚಿಕೊಳ್ಳುತ್ತಾ ವೈರಲ್ ಆಗುತ್ತಿರುತ್ತಾರೆ. ಇದನ್ನೂ ಓದಿ Vijay Surya: ನಟ ವಿಜಯ್ ಸೂರ್ಯ ದಂಪತಿಗಳ ಅಪರೂಪದ ಫೋಟೋಸ್!