ನಿಸರ್ಗದಲ್ಲಿ ಅದೆಷ್ಟೋ ರೋಗಗಳಿಗೆ ಮದ್ದಾಗಿರುವ ಗಿಡಗಳು ಅಡಗಿಕೊಂಡಿವೆ. ಗಿಡಗಳಿಂದ ನಮ್ಮ ರೋಗಕ್ಕೆ ಮದ್ದು ಕಂಡುಕೊಳ್ಳಬಹುದು. ಅನೇಕ ಔಷಧೀಯ ಗುಣಗಳನ್ನು ಹೊಂದಿರುವ ಮುಟ್ಟಿದರೆ ಮುನಿ ಗಿಡದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ನೈಸರ್ಗಿಕವಾಗಿ ಸಿಗುವ ಗಿಡಮೂಲಿಕೆಯನ್ನು ಬಳಸಿ ನಮ್ಮ ರೋಗಕ್ಕೆ ಪರಿಹಾರವನ್ನು ಕಂಡುಕೊಳ್ಳಬಹುದು. ಮುಟ್ಟಿದರೆ ಮುನಿ ಗಿಡವು ಸಾಮಾನ್ಯವಾಗಿ ಹಳ್ಳಿಗಳಲ್ಲಿ ಎಲ್ಲರ ಮನೆಯಲ್ಲೂ ಇರುತ್ತದೆ. ಈ ಗಿಡದಿಂದ ಹಲವಾರು ರೀತಿಯ ಉಪಯೋಗವನ್ನು ಪಡೆಯಬಹುದಾಗಿದೆ. ಈ ಗಿಡಕ್ಕೆ ನಾಚಿಕೆ ಮುಳ್ಳು, ಮುಚ್ಚಿದ ಮುಳ್ಳು ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಈ ಗಿಡದ ಬೇರು, ಕೂಡ ಔಷಧೀಯ ಗುಣಗಳನ್ನು ಹೊಂದಿದೆ.
ಇದು ಚರ್ಮರೋಗ, ಚರ್ಮದ ಸಮಸ್ಯೆ ಬೆವರಿನ ಹುಲ್ಲುಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಈ ಗಿಡದ ಎಲೆಯ ರಸವನ್ನು ತೆಗೆದು ಚರ್ಮದ ಮೇಲೆ ಹಚ್ಚಿದರೆ ಚರ್ಮದ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತದೆ. ಈ ಸೊಪ್ಪಿನ ಕಷಾಯ ಸೇವನೆ ಮಾಡುವುದರಿಂದ ಕಿಡ್ನಿಯಲ್ಲಿ ಆಗುವ ಕಲ್ಲುಗಳು ನಿವಾರಣೆಯಾಗುತ್ತದೆ. ಈ ಗಿಡ ಮುಟ್ಟಿನ ನೋವಿನ ಸಮಸ್ಯೆಯನ್ನು ನಿವರಣೆ ಮಾಡುತ್ತದೆ. ಮುಟ್ಟಿದರೆ ಮುನಿ ಗಿಡದ ಎಲೆಗಳನ್ನು ತೆಗೆದುಕೊಳ್ಳಬೇಕು ಒಂದು ಲೋಟ ನೀರಿಗೆ ಎಲೆಗಳನ್ನು ತಂದು ಜಜ್ಜಿ ನೀರಿನಲ್ಲಿ ಚೆನ್ನಾಗಿ ಕುದಿಸಿ ಕಷಾಯ ಮಾಡಿಕೊಳ್ಳಬೇಕು. ಈ ಕಷಾಯವನ್ನು ಕುಡಿಯುವುದರಿಂದ ಅಧಿಕ ರಕ್ತಸ್ರಾವ ಇದ್ದರೆ ಕಡಿಮೆ ಮಾಡುತ್ತದೆ.
ರಕ್ತ ಮೂಲವ್ಯಾಧಿ ಇರುವವರು ಮುಟ್ಟಿದರೆ ಮುನಿ ಗಿಡದ ಕಷಾಯವನ್ನು ಕುಡಿಯುವುದರಿಂದ ಪರಿಹಾರ ಕಂಡುಕೊಳ್ಳಬಹುದು. ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ಕಿಡ್ನಿಯಲ್ಲಿ ಮರಳು ಗಾತ್ರದ ಕಲ್ಲು ಉಂಟಾಗುತ್ತದೆ ಇದಕ್ಕೆ ಮುಟ್ಟಿದರೆ ಮುನಿ ಸೊಪ್ಪಿನ ಕಷಾಯ ಕುಡಿದರೆ ನಿವಾರಣೆಯಾಗುತ್ತದೆ. ಹೆಣ್ಣು ಮಕ್ಕಳಿಗೆ ಮುಟ್ಟಿನ ದಿನಗಳಲ್ಲಿ ಅತಿಯಾದ ಸುಸ್ತು, ಹೊಟ್ಟೆ ನೋವು, ಸೊಂಟ ನೋವು ಬರುತ್ತದೆ ಆಗ ನಾಚಿಕೆ ಮುಳ್ಳಿನ ಕಷಾಯವನ್ನು ಕುಡಿಯುವುದರಿಂದ ಸುಸ್ತು ನಿವಾರಣೆಯಾಗುತ್ತದೆ.
ಅನಿಯಮಿತ ಮುಟ್ಟು ಸಮಸ್ಯೆ ಇದ್ದವರು ಮುಟ್ಟಿದರೆ ಮುನಿ ಗಿಡದ ಬೇರನ್ನು ಜಜ್ಜಿ ಕಷಾಯ ಮಾಡಿ ಕುಡಿದರೆ ಸಮಸ್ಯೆ ನಿವಾರಣೆಯಾಗುತ್ತದೆ. ಗಾಯವಾದಾಗ ಮುಟ್ಟಿದರೆ ಮುನಿ ಗಿಡದ ಸೊಪ್ಪನ್ನು ಜಜ್ಜಿ ಗಾಯಕ್ಕೆ ರಸವನ್ನು ಹಾಕಿದರೆ ಬೇಗನೆ ರಕ್ತಸ್ರಾವ ಕಡಿಮೆ ಆಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು