ಮೇಷ ರಾಶಿಯವರಿಗೆ 2024 ಹೊಸವರ್ಷದ ಮೊದಲ ತಿಂಗಳಲ್ಲೇ ಹರಿದು ಬರಲಿದೆ ಸುಖಭೋಗ

0

2023ನೆ ಇಸ್ವಿಯ ಕೊನೆಯ ತಿಂಗಳಿನಲ್ಲಿ ಇರುವ ನಾವೆಲ್ಲರೂ 2024 ಹೊಸ ವರ್ಷಕ್ಕಾಗಿ ಆತುರದಿಂದ ಕಾಯುತ್ತಿದ್ದೇವೆ. 12 ರಾಶಿಗಳಲ್ಲಿ ಪ್ರತಿಯೊಂದು ರಾಶಿಯಲ್ಲಿ ಜನಿಸಿದವರು ಪ್ರತಿ ವರ್ಷ ಪ್ರತಿ ತಿಂಗಳು ಬದಲಾಗುವ ತಮ್ಮ ರಾಶಿ ಭವಿಷ್ಯ ನೋಡಲು ಅಷ್ಟೆ ಕಾತುರದಿಂದ ಕಾಯುತ್ತಿದ್ದಾರೆ. ಹಾಗಾದರೆ ಮೇಷ ರಾಶಿಯ 2024ರ ಜನವರಿ ತಿಂಗಳಿನ ರಾಶಿ ಭವಿಷ್ಯವನ್ನು ಈ ಲೇಖನದಲ್ಲಿ ನೋಡೋಣ

ಮೇಷ ರಾಶಿಯವರಿಗೆ 2024 ಜನವರಿ ತಿಂಗಳಿನಲ್ಲಿ ಗುರುವಿನಿಂದ ಅರ್ಧದಷ್ಟು ಲಾಭವಾಗಲಿದ್ದು ಇನ್ನರ್ಧದಷ್ಟು ನಷ್ಟ ಉಂಟಾಗುತ್ತದೆ. ದೇಹದ ಆರೋಗ್ಯದ ವಿಷಯದಲ್ಲಿ ಸ್ವಲ್ಪ ಏರು ಪೇರು ಕಂಡುಬರುತ್ತದೆ. ಒಬೆಸಿಟಿ, ಡಯಾಬಿಟಿಕ್, ಒತ್ತಡ ಹೆಚ್ಚಾಗುತ್ತದೆ, ಆರೋಗ್ಯ ಅಷ್ಟೊಂದು ಉತ್ತಮವಾಗಿರುವುದಿಲ್ಲ. ಈ ಸಮಯದಲ್ಲಿ ಮೇಷ ರಾಶಿಯವರು ವಿವಾಹವಾಗಲು ನೋಡುತ್ತಿರುವವರು ವಿವಾಹ ಯೋಗ ಕೂಡಿಬರುತ್ತದೆ.

ಜನವರಿ 18 ರ ನಂತರ ಶುಕ್ರನಿಂದ ಶುಭ ಫಲವಿದೆ. ಒಡಹುಟ್ಟಿದವರೊಂದಿಗೆ ಇರುವ ವೈಮನಸ್ಸು ಈ ಸಮಯದಲ್ಲಿ ದೂರವಾಗುತ್ತದೆ. ಬಹಳ ದಿನಗಳಿಂದ ಸ್ಥಗಿತಗೊಂಡಿರುವ ಕೆಲಸ ಕಾರ್ಯಗಳು ಈ ಸಮಯದಲ್ಲಿ ಕಾರ್ಯಗತಗೊಳ್ಳುತ್ತದೆ. ಶನಿಯಿಂದ ಮೇಷ ರಾಶಿಯವರಿಗೆ ಜನವರಿ ತಿಂಗಳಿನಲ್ಲಿ ಲಾಭವನ್ನು ನಿರೀಕ್ಷೆ ಮಾಡಬಹುದು ಆದರೆ ಮಂದಗತಿಯಲ್ಲಿ ಶನಿ ಒಳ್ಳೆಯದನ್ನು ಮಾಡುತ್ತಾನೆ. ರಾಹು ಜೀವನದಲ್ಲಿ ವೈರಾಗ್ಯ ಉಂಟಾಗುವಂತೆ ಮಾಡುತ್ತಾನೆ.

ಮೇಷ ರಾಶಿಯವರಿಗೆ ಬೇಗನೆ ಕೋಪ ಬರುತ್ತದೆ ಕೋಪವನ್ನು ಇವರು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಇದ್ದಕಿದ್ದಂತೆ ಕೋಪ ಬಂದು ದುಡುಕಿ ಮಾತನಾಡುತ್ತಾರೆ ಇದು ಇವರ ಯಶಸ್ಸಿಗೆ ಅಡ್ಡಿಯಾಗುತ್ತದೆ. ಮೇಷ ರಾಶಿಯವರು ದುಂದುವೆಚ್ಚ ಮಾಡಬಾರದು. ಅನಿರೀಕ್ಷಿತವಾಗಿ ಮೇಷ ರಾಶಿಯವರು ಜನವರಿ ತಿಂಗಳಿನಲ್ಲಿ ಧನ ಲಾಭವನ್ನು ಪಡೆಯುತ್ತಾರೆ. ಭೂಮಿಗೆ ಸಂಬಂಧಿಸಿದ ಲಾಭ ದೊರೆಯಬಹುದು. ಕೆಲವೊಮ್ಮೆ ನಮ್ಮ ಸುತ್ತಲಿನ ಜನರೆ ತಲೆ ಕೆಡಿಸುತ್ತಾರೆ ಮೇಷ ರಾಶಿಯವರು ಇದರ ಬಗ್ಗೆ ಎಚ್ಚರಿಕೆ ವಹಿಸಬೇಕು. ಪಿತ್ರಾರ್ಜಿತ ಆಸ್ತಿಯ ವ್ಯಾಜ್ಯಗಳು ನಿವಾರಣೆಯಾಗಿ ಮೇಷ ರಾಶಿಯವರ ಪರ ತೀರ್ಪು ಬರುತ್ತದೆ.

ಮೇಷ ರಾಶಿಯ ವ್ಯವಸಾಯ, ಸ್ವಂತ ಉದ್ಯೋಗ, ಟ್ರಾವೆಲ್ಸ್ ನಡೆಸುವವರಿಗೆ ಜನವರಿ ತಿಂಗಳಿನಲ್ಲಿ ಲಾಭವಾಗುತ್ತದೆ ಜೊತೆಗೆ ಆದಾಯದ ಮೂಲ ಸಿಗುತ್ತದೆ. ಮನೆ ಕಟ್ಟುವ ಕೆಲಸದಲ್ಲಿ ಇರುವವರಿಗೆ, ಕ್ರೀಡಾಪಟುಗಳಿಗೆ, ಕಲೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರಿಗೆ ಜನವರಿ ತಿಂಗಳಿನಲ್ಲಿ ಒಳ್ಳೆಯದಾಗುತ್ತದೆ. ಬೇರೆ ದೇಶಗಳಿಗೆ ಹೋಗಿ ಕೆಲಸ ಮಾಡಬೇಕು ಎನ್ನುವವರಿಗೆ ಈ ಸಮಯ ಉತ್ತಮವಾಗಿದೆ. ಮೇಷ ರಾಶಿಯವರು ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು. ಮೇಷ ರಾಶಿಯ ವಿದ್ಯಾರ್ಥಿಗಳಿಗೆ ಒಳ್ಳೆಯದಾಗುತ್ತದೆ.

ಪ್ರಕೃತಿಯನ್ನು ಹಾಳುಮಾಡುವ ಯಾವುದೆ ಕೆಲಸವನ್ನು ಮೇಷ ರಾಶಿಯವರು ಮಾಡಬಾರದು, ಮರ ಗಿಡಗಳನ್ನು ಬೆಳೆಸಬೇಕು ಇದರಿಂದ ದೇವರು ಮೇಷ ರಾಶಿಯವರಿಗೆ ಆಶೀರ್ವಾದ ಮಾಡುತ್ತಾರೆ. ಮನೆಯ ಟೆರೆಸ್ ಅಥವಾ ಇನ್ಯಾವುದೆ ಜಾಗದಲ್ಲಿ ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಇಟ್ಟರೆ ಪ್ರಾಣಿ ಪಕ್ಷಿಗಳು ನೀರನ್ನು ಕುಡಿಯುತ್ತವೆ. ಅಶ್ವಿನಿ ನಕ್ಷತ್ರದಲ್ಲಿ ಜನಿಸಿದವರು ಗಣಾಧಿಪಪಂಚರತ್ನ ಸ್ತೋತ್ರವನ್ನು ಭರಣಿ ನಕ್ಷತ್ರದಲ್ಲಿ ಜನಿಸಿದವರು ಶ್ರೀ ದೇವಿ ಸ್ತೋತ್ರವನ್ನು ಪಠಿಸಬೇಕು, ಕೃತ್ತಿಕಾ ನಕ್ಷತ್ರದಲ್ಲಿ ಜನಿಸಿದವರು ಕಮಲಾ ಸ್ತೋತ್ರಂನ್ನು ಪಠಿಸಬೇಕು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: