Meghana Raj : ಸ್ನೇಹಿತರೆ ಕನ್ನಡ ಚಿತ್ರರಂಗದ ಕ್ಯೂಟ್ ಕಪಲ್ಸ್(cute couples) ಎಂದೇ ಕರೆಸಿಕೊಳ್ಳುತ್ತಿದ್ದ ಮೇಘನರಾಜ್ (Meghana Raj) ಹಾಗೂ ಚಿರಂಜೀವಿ ಸರ್ಜಾ (Chiranjeevi Sarja( ಹಲವಾರು ವರ್ಷಗಳ ಕಾಲ ಪ್ರೀತಿಸಿ ಆನಂತರ ಮನೆಯವರೆಲ್ಲರ ಒಪ್ಪಿಗೆ ಪಡೆದ ಬಳಿಕ ಹಿಂದೂ ಹಾಗೂ ಕ್ರಿಶ್ಚಿಯನ್ (Hindu and Christian) ಸಮುದಾಯಕ್ಕೆ ಸೇರಿದಂತೆ ಎರಡು ಸಂಪ್ರದಾಯಗಳನ್ನು ಆಚರಿಸಿ ಬಹಳ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಹೇಗೆ ಮದುವೆಯಾದ ಬಳಿಕ ಒಬ್ಬರ ವೃತ್ತಿ ಬದುಕಿಗೆ ಮತ್ತೊಬ್ಬರು ಸಪೋರ್ಟ್ ಮಾಡಿಕೊಂಡು ಬಹಳ ಅನ್ಯೂನ್ಯವಾಗಿದ್ದ ಈ ಜೋಡಿ ಹಕ್ಕಿಗಳ ಮೇಲೆ ಅದ್ಯಾರ ವಕ್ರ ದೃಷ್ಟಿ ಬಿತ್ತೋ ಗೊತ್ತಿಲ್ಲ, ಮದುವೆಯಾದ ಒಂದುವರೆ ವರ್ಷಕ್ಕೆ ಚಿರು (Chiru) ತನ್ನ ಅರ್ಧಾಂಗಿ ಮೇಘನಾ ರಾಜ್ ಅವರನ್ನು ಬಿಟ್ಟು ಇಹಲೋಕಕ್ಕೆ ತ್ಯಜಿಸಿದರು. ಆದರೀಗ ತಮ್ಮ ಪತಿಯ ಅಗಲಿಕೆಯಿಂದಾಗಿ ಕುಗ್ಗಿ ಹೋಗಿದ್ದಂತಹ ಮೇಘನ ರಾಜ್ ತಮ್ಮ ಮಗುವಿಗಾಗಿ ಹಾಗೂ ಅಭಿಮಾನಿಗಳಿಗಾಗಿ ಮತ್ತೆ ಮೊದಲಿನಂತಾಗುವ ಪ್ರಯತ್ನದಲ್ಲಿದ್ದ.
ತತ್ಸಮ ತದ್ಭವ(Tatsama Tadbhava) ಎಂಬ ಸಿನಿಮಾದ ಮೂಲಕ ಕಂಬ್ಯಾಕ್ ಮಾಡಲು ಸಜ್ಜಾಗುತ್ತಿದ್ದಾರೆ. ಈ ಬೆನ್ನಲ್ಲೇ ಮೇಘನ ಕುರಿತಾದ ಒಂದಲ್ಲ ಒಂದು ಮಾಹಿತಿ ಸೋಶಿಯಲ್ ಮೀಡಿಯಾಗಳಲ್ಲಿ ಬಾರಿ ವೈರಲ್ ಆಗುತ್ತಿರುತ್ತದೆ. ಇದೀಗ ಮೇಘನಾ ರಾಜ್(Meghana Raj) ಅವರ ಕೆಲ ಫೋಟೋಗಳು ಸಾಮಾಜಿಕ ಜಾಲತಾಣದ ತುಂಬೆಲ್ಲ ಹರಿದಾಡುತ್ತಿದ್ದು, ಇವರಿಬ್ಬರ ಲವ್ ಸ್ಟೋರಿ ನೆಟ್ಟಿಗರ ಮನಸ್ಸನ್ನು ಸೆಳೆಯುತ್ತಿದೆ.
ಮೇಘನಾ ಹಾಗೂ ಚಿರು ಪ್ರೀತಿ ಮಾಡುವ ಮೊದಲು 10 ವರ್ಷಗಳ ಸ್ನೇಹಿತರಾಗಿದ್ದಾರಂತೆ. ಆನಂತರ ಹೀಗೆ ಮಾತನಾಡುತ್ತಿದ್ದಾಗ ಮೇಘನ ರಾಜ್ ಅವರ ಕೈ ಹಿಡಿದು ಚಿರಂಜೀವಿ ಸರ್ಜಾ ನಾನು ನಿನ್ನನ್ನು ಬಹಳ ಪ್ರೀತಿಸುತ್ತಿದ್ದೇನೆ ನೀನು ನನ್ನನ್ನು ಪ್ರೀತಿಸಬೇಕಷ್ಟೇ ಎಂದು ಕೇಳಿಕೊಂಡರಂತೆ. ಮೇಘನಾ ಅವರಿಗೆ ಚಿರಂಜೀವಿ(Chiranjeevi) ಅವರ ಮೇಲೆ ಮನಸ್ಸಿದ್ದ ಕಾರಣ ಅಂದೆ ಖುಷಿಯಿಂದ ಒಪ್ಪಿಕೊಳ್ಳುತ್ತಾರೆ.
ಅಲ್ಲದೆ ಸದಾ ಕಾಲ ಮೇಘನಾ ರಾಜ್ ಅವರನ್ನು ಚಿರಂಜೀವಿ ಸರ್ಜಾ ‘ಕುಟ್ಟಿಮಾ’ ಎಂದು ಕರೆಯುತ್ತಿದ್ದರಂತೆ. ಹೀಗೆ ಏಪ್ರಿಲ್ 29, 2018ರ ಕನ್ನಡ ಸಿನಿಮಾ ರಂಗದ ಸಾಕ್ಷಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿಗಳು ಹನಿಮೂನ್(Honeymoon) ಪ್ರವಾಸಕ್ಕೆಂದು ವಿದೇಶಕ್ಕೆ ಹೋಗಿ ಅಲ್ಲಿನ ಸುಂದರ ಕ್ಷಣಗಳ ಫೋಟೋಗಳನೆಲ್ಲ ಸಾಮಾಜಿಕ ಜಾಲತಾಣದಲ್ಲಿ ಶೇರ್ ಸಹ ಮಾಡಿದ್ದರು. ಮದುವೆಯಾದ ಬಳಿಕ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದ ಈ ಜೋಡಿಗಳು ಒಬ್ಬರ ವೃತ್ತಿ ಬದುಕಿಗೆ ಮತ್ತೊಬ್ಬರು ಸಹಕರಿಸುತ್ತಾ ಬಹಳನೇ ಅನ್ಯೋನ್ಯವಾಗಿ ಕನ್ನಡ ಚಿತ್ರರಂಗದ ಆದರ್ಶ ದಂಪತಿಗಳ ಪಟ್ಟಿಯಲ್ಲಿದ್ದವರು.
ಆದರೆ ವಿಧಿ ಇವರಿಬ್ಬರ ಪ್ರೀತಿ ಪಯಣವನ್ನು ಸಹಿಸಲಾರದೆ ಮದುವೆಯಾದ ಕೇವಲ ಎರಡೇ ವರ್ಷಕ್ಕೆ ಮೇಘನಾ (Meghana) ಅವರಿಂದ ಚಿರು ಅವರನ್ನು ದೂರ ಮಾಡಿಬಿಟ್ಟಿದೆ. ಹೌದು ಸ್ನೇಹಿತರೆ, ಜೂನ್ 7ನೇ ತಾರೀಕು 2020 ರಂದು ಚಿರು ಹೃದಯಘಾತ ಸಮಸ್ಯೆಯಿಂದಾಗಿ ಇಹಲೋಕ ತ್ಯಜಿಸಿದರು. ಅವರ ಅಗಲಿಕೆಯ ನೋವಿನಲ್ಲಿದ್ದ ಮೇಘನ(Meghana) ತಮ್ಮ ಮಗ ರಾಯನ್ ರಾಜ್ ಸರ್ಜ(Rayan Raj Sarja)ನ ನಗುವಿನ ಮೂಲಕ ತಮ್ಮ ನೋವನ್ನು ಮರೆಯುವ ಪ್ರಯತ್ನದಲ್ಲಿದ್ದಾರೆ.