ಅನಾದಿಕಾಲದಿಂದಲೂ ಮಾನವನ ಜೀವನ ಶೈಲಿಯ ಮೇಲೆ ನಮ್ಮ ಪೂರ್ವಜರು ಅನೇಕ ಕಟ್ಟುಪಾಡುಗಳನ್ನ ನಿರ್ಮಿಸಿದ್ದಾರೆ ಇಂತಹ ಕಟ್ಟುಪಾಡುಗಳಿಗೆ ಧಾರ್ಮಿಕ ಅರ್ಥದ ಜೊತೆಗೆ ವೈಜ್ಞಾನಿಕ ಅರ್ಥವೂ ಕೂಡ ಇರುತ್ತದೆ ಇಂತಹ ನಿಯಮಗಳನ್ನ ಪಾಲಿಸದೆ ಹೋದರೆ ಮನೆಯಲ್ಲಿ ತೊಂದರೆಗಳು ಉಂಟಾಗುವುದು ಖಚಿತ ಎಂದು ನಂಬಲಾಗಿದೆ ಅದರಂತೆಯೇ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಲು ವಾಸ್ತುಶಾಸ್ತ್ರದಲ್ಲಿ ಅನೇಕ ಸಲಹೆಗಳನ್ನು ನೀಡಲಾಗಿದೆ
ಆ ಮೂಲಕ ಮನೆಯಲ್ಲಿರುವ ಪ್ರತಿಯೊಂದು ವಸ್ತುವೂ ಸಹ ಧನಾತ್ಮಕ ಮತ್ತು ಋಣಾತ್ಮಕ ಶಕ್ತಿಯನ್ನು ಹೊರಹಾಕುತ್ತಾ ಇರುತ್ತವೆ ಇದು ಮನೆಯ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮವನ್ನು ಬೀರುತ್ತವೆ ಆದ್ದರಿಂದ ಕೆಲವು ವಸ್ತುಗಳನ್ನು ಮನೆಯಲ್ಲಿ ಸರಿಯಾದ ಸ್ಥಳದಲ್ಲಿ ಇರಿಸುವುದರಿಂದ ಧನಾತ್ಮಕ ಶಕ್ತಿಯನ್ನು ಕಾಣಬಹುದು ಇದರ ಜೊತೆಗೆ ಮನೆಯಲ್ಲಿ ಸಂತೋಷವೂ ನೆಲೆಸುತ್ತದೆ.
ಮನೆಯ ಮುಖ್ಯ ಬಾಗಿಲು ಎಲ್ಲಾ ರೀತಿಯ ಅಂಶಗಳನ್ನು ಮನೆಗೆ ಕೊಂಡೊಯ್ಯುವ ಮುಖ್ಯ ಮಾರ್ಗವಾಗಿದೆ ಆದ್ದರಿಂದ ಮುಖ್ಯ ದ್ವಾರದ ದಿಕ್ಕು ಸರಿಯಾಗಿ ಇಲ್ಲದಿದ್ದರೆ ಮನೆಯಲ್ಲಿ ತೊಂದರೆಗಳು ಧಾವಿಸುತ್ತವೆ. ವಾಸ್ತು ಪ್ರಕಾರ ಮನೆಯ ಮುಖ್ಯ ದ್ವಾರದ ಎದುರು ಕೊಳಚೆ ನೀರು ಸಂಗ್ರಹವಾಗಬಾರದು ಇದರಿಂದ ವಾಸ್ತುದೋಷ ಉಂಟಾಗುತ್ತದೆ. ಮತ್ತು ಮುಳ್ಳಿನ ಗಿಡಗಳನ್ನು ಮನೆಯ ಮುಂಭಾಗದಲ್ಲಿ ನೆಡಬಾರದು ಅದು ಅಲಂಕಾರಿಕ ಗಿಡವಾದರೂ ಸಹ ಮನೆಯ ಮುಂದೆ ಅದು ಇರಬಾರದು
ಇದು ಕುಟುಂಬದ ಸದಸ್ಯರಲ್ಲಿನ ಹೊಂದಾಣಿಕೆಯನ್ನ ಕಡಿಮೆ ಮಾಡಿ ಪರಸ್ಪರ ಜಗಳ ಉಂಟಾಗುವಂತೆ ಮಾಡುತ್ತದೆ. ಆದ್ದರಿಂದ ಮನೆಯ ಮುಂದೆ ಮುಳ್ಳಿನ ಗಿಡಗಳ ಬದಲಾಗಿ ಪರಿಮಳದ ಹೂಗಳ ಗಿಡಗಳನ್ನು ಬೆಳೆಸಬೇಕು. ಇನ್ನು ಕೆಲವರು ಕಸವನ್ನ ಸುಲಭವಾಗಿ ಎಸೆಯಲು ಕಸದ ಬುಟ್ಟಿಗಳನ್ನು ಮನೆಯ ಮುಖ್ಯದ್ವಾರದ ಎದುರಿಗೆ ಅಥವಾ ಪಕ್ಕದಲ್ಲಿ ಇಡುತ್ತಾರೆ ಆದರೆ ಇದು ವಾಸ್ತು ಪ್ರಕಾರ ತಪ್ಪಾಗಿದೆ ಈ ರೀತಿ ಮಾಡುವುದರಿಂದ ಮನೆಯಲ್ಲಿ ಹಣದ ನಷ್ಟ ಉಂಟಾಗುತ್ತದೆ ಏಕೆಂದರೆ ಉತ್ತರ ದಿಕ್ಕು ಲಕ್ಷ್ಮಿ ದೇವಿಯ ಸ್ಥಾನ ಆಗಿರುವುದರಿಂದ ಉತ್ತರದಿಕ್ಕಿನಲ್ಲಿ ಕಸವನ್ನ ಇಡಬಾರದು.
ಅಷ್ಟೇ ಅಲ್ಲದೆ ಮನೆಯ ಮುಂದೆ ವಿದ್ಯುತ್ ಕಂಬ ಇರುವುದು ಸಹ ಒಳ್ಳೆಯದಲ್ಲ ಮನೆ ಕಟ್ಟುವಾಗ ಇದರ ಬಗ್ಗೆ ಯೋಚನೆ ಮಾಡಿ ಮನೆ ನಿರ್ಮಿಸಿ. ವಾಸ್ತುವಿನ ಪ್ರಕಾರ ಮನೆಯ ಮುಂದಿನ ರಸ್ತೆಯು ಮುಖ್ಯದ್ವಾರದ ಹೊಸ್ತಿಲಿಗಿಂತ ಎತ್ತರದಲ್ಲಿ ಇರಬಾರದು ಇದು ಮನೆಗೆ ಶೋಭೆಯಲ್ಲ ಹಾಗೆಯೇ ಬಿಳಿ ಹಾಲು ಬರುವ ಗಿಡಗಳನ್ನು ಮನೆಯ ಮುಂದೆ ನೆಡಬಾರದು ಜೊತೆಗೆ ಲಕ್ಷ್ಮೀದೇವಿಯ ಚಿತ್ರಪಟವನ್ನು ಮನೆಯ ಮುಖ್ಯ ದ್ವಾರಕ್ಕೆ ಅಂಟಿಸಬಾರದು ನಿಮ್ಮ ಮನೆಯ ಪೂಜೆ ಕೋಣೆಯಲ್ಲಿ ಲಕ್ಷ್ಮಿ ದೇವಿಗೆ ಸಂಬಂಧಪಟ್ಟ ವಸ್ತುಗಳನ್ನು ಇಡಬೇಕು.
ಇನ್ನು ಕೆಲವರು ಸಂಜೆಯ ಸಮಯದಲ್ಲಿ ಮನೆಯ ಹೊಸ್ತಿಲಿನಲ್ಲಿ ಕುಳಿತು ಹರಟೆ ಹೊಡೆಯುತ್ತಾ ಇರುತ್ತಾರೆ ಹಾಗೆ ಮಾಡುವುದು ತಪ್ಪು ಹೇಗೆ ಮಾಡಿದರೆ ದರಿದ್ರ ಲಕ್ಷ್ಮಿ ಪ್ರವೇಶ ಮಾಡುತ್ತಾಳೆ ಇದರಿಂದ ನಿಮ್ಮ ಮನೆಗೆ ಕಷ್ಟಗಳ ಸುರಿಮಳೆ ಬರಬಹುದು. ಹಾಗೆ ಮನೆಯ ಮುಖ್ಯ ದ್ವಾರದ ಮುಂದೆ ಚಪ್ಪಲಿಗಳನ್ನು ಬಿಡಬಾರದು ಹೀಗೆ ಮಾಡುವುದರಿಂದ ಮನೆಗೆ ಅಶುಭ ಉಂಟಾಗುತ್ತದೆ.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು