ಆದಿಶಕ್ತಿಯು ಹಲವಾರು ಅವತಾರಗಳಿಂದ ಪ್ರಸಿದ್ಧಿ ಹೊಂದಿದ್ದಾಳೆ ಅದರಲ್ಲಿ ಒಂದು ವಿಶೇಷ ರೂಪ ಪ್ರತ್ಯಂಗಿರ ದೇವಿ ರೂಪ ಈ ದೇವಿಯ ಶಕ್ತಿ ಅಪಾರವಾದದ್ದು. ಈಕೆ ಒಲಿದರೆ ಅನ್ನಪೂರ್ಣೇಶ್ವರಿಯಂತೆ ಹಾಗೆ ಮುನಿದರೆ ಕೌಮಾರಿಯಂತೆ ಎಂದು ಹೇಳಲಾಗಿದೆ. ಅಂದಹಾಗೆ ಈ ದೇವಿಯು ಕಾಳಪ್ಪನಹಳ್ಳಿ ಎಂಬ ಗ್ರಾಮದಲ್ಲಿ ತಾಯಿ ಭದ್ರಕಾಳಿಯ ಜೊತೆ ಸೇರಿ ನೆಲೆ ನಿಂತಿದ್ದಾಳೆ ಈ ಊರು ಬೆಂಗಳೂರು ಗ್ರಾಮಾಂತರದಿಂದ ತಾವರೆಕೆರೆ ಪೋಸ್ಟ್ ನಂದಗುಂಡಿ ಹೋಬಳಿ ಹೊಸಪೇಟೆ ತಾಲ್ಲೂಕು ಕುಪ್ಪನಹಳ್ಳಿ ಗ್ರಾಮದಲ್ಲಿ ಬರುತ್ತದೆ ಬೆಂಗಳೂರಿನಿಂದ ಕೋಲಾರಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದೇವಿಯ ದೇವಸ್ಥಾನ ಸಿಗುತ್ತದೆ.
ಈ ದೇವಿಯ ಮಹಾತ್ಮೆ ಅಪಾರವಾದದ್ದು ಈ ದೇವಿಯ ವಿಶೇಷತೆ ಏನೆಂದರೆ ಇಲ್ಲಿನ ಗ್ರಾಮಸ್ಥರು ಒಬ್ಬರ ಕನಸಿನಲ್ಲಿ ತಾಯಿ ಕಾಣಿಸಿಕೊಂಡು ಇಲ್ಲಿ ವಿಗ್ರಹವಾಗಿ ನೆಲೆಸಿದ್ದಾಳೆ ಅಷ್ಟೇ ಅಲ್ಲದೆ ಅದಕ್ಕೆ ದೇವಸ್ಥಾನ ಕಟ್ಟಬೇಕು ಎಂಬುದಾಗಿ ಕೂಡ ಆಜ್ಞೆಯನ್ನು ಮಾಡಿದ್ದಾಳೆ. ಈ ಮೂಲಕ ಭಕ್ತಾದಿಗಳು ದೇವಿಗೆ ದೇವಸ್ಥಾನವನ್ನು ಕಟ್ಟಿ ಆರಾಧಿಸಲು ಪ್ರಾರಂಭಿಸುತ್ತಾರೆ ಹೀಗೆ ಭಕ್ತರ ಸಂಕಷ್ಟಗಳನ್ನು ನಿವಾರಿಸುತ್ತಾ ಅಲ್ಲಿನ ಜನರ ಆರಾಧ್ಯ ದೈವವಾಗಿ ಈಕೆ ನೆಲೆನಿಂತಿದ್ದಾಳೆ.

ಈ ದೇವಿಗೆ ಅಮಾವಾಸ್ಯೆಯ ದಿನದ ಪೂಜೆ ಬಹಳ ವಿಶೇಷವಾಗಿದ್ದು ಅಮಾವಾಸ್ಯೆಯಂದು ನಡೆಯುವ ಹೋಮದಲ್ಲಿ ಪಾಲ್ಗೊಳ್ಳಲು ಸಾವಿರಾರು ಜನ ಭಕ್ತರು ಬರುತ್ತಾರೆ ವಿಶೇಷವೆಂದರೆ ಈ ತಾಯಿಗೆ ವನಸ್ಪತಿಯ ಮೂಲಕ ಹೋಮ ಏರ್ಪಡಿಸುವುದು ಕಡಿಮೆ. ಇದರ ಬದಲಾಗಿ ಮೂಟೆ ಮೂಟೆ ಮೆಣಸಿನ ಕಾಯಿಯನ್ನು ಹೋಮಕ್ಕೆ ಸುರಿಯಲಾಗುತ್ತದೆ ಅದಾಗಿಯೂ ಸಹ ಈ ಮೆಣಸಿನ ಕಾಯಿಯ ಘಾಟು ಒಂದು ಚಿಕ್ಕ ಮಗುವಿಗೂ ಸಹ ತಾಗುವುದಿಲ್ಲ.
ಇಲ್ಲಿನ ಹೋಮಕುಂಡಕ್ಕೆ ಮೆಣಸಿನ ಕಾಯಿ ಹಾಕುವುದರಿಂದ ಜೀವನದಲ್ಲಿರುವ ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತವೆ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ. ಹಾಗೆಯೇ ಮೆಣಸಿನಕಾಯಿ ಜೊತೆಗೆ ಉಪ್ಪನ್ನು ಸಹ ಹೋಮಕ್ಕೆ ಹಾಕಲಾಗುತ್ತದೆ ಜನರ ಮೇಲಾಗಿರುವ ದೃಷ್ಟಿ ದೋಷಗಳನ್ನು ನಿವಾರಣೆ ಮಾಡುತ್ತದೆ ಎಂದು ನಂಬಲಾಗಿದೆ ಹೀಗೆ ವಿಶೇಷವಾದ ಆಚರಣೆಗಳೊಂದಿಗೆ ಹೆಸರುವಾಸಿಯಾಗಿರುವ ಈ ದೇವಸ್ಥಾನಕ್ಕೆ ಅನೇಕ ಭಕ್ತಾದಿಗಳು ಆಗಮಿಸುತ್ತಾರೆ. ತಮ್ಮ ಹರಕೆಯನ್ನು ತೀರಿಸಿದ ಮೂರು ತಿಂಗಳ ಒಳಗಾಗಿ ಅಂದುಕೊಂಡ ಕಾರ್ಯಗಳು ಈಡೇರುತ್ತವೆ ಎಂದು ಕೂಡ ನಂಬಲಾಗಿದೆ. ಹಾಗೆ ನಿಮಗೆ ಏನಾದರೂ ಸ್ವಂತ ಮನೆ ಕಟ್ಟುವ ಬಯಕೆ ಇದ್ದರೆ ಈ ದೇವಿಗೆ ಹರಕೆಯನ್ನು ಹೊತ್ತುಕೊಳ್ಳಿ ಆದರೆ ಕಟ್ಟಿಕೊಂಡ ಹರಕೆಯನ್ನು ತಪ್ಪದೇ ಬಂದು ಪೂರೈಸಿಕೊಂಡು ಹೋಗಬೇಕು.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು