ಲಕ್ಷ್ಮಿ ದೇವಿಯ ಕೃಪೆ ತಮ್ಮ ಮನೆಯ ಮೇಲೆ ಇರಬೇಕು ಎಂದು ಪ್ರತಿ ಒಬ್ಬರು ಬಯಸುವರು. ಬದುಕು ನಡೆಸಲು ದುಡ್ಡು ದುಡಿದರೆ ಸಾಲದು ಅದನ್ನು ಒಳ್ಳೆಯ ರೀತಿಯಲ್ಲಿ ಸದುಪಯೋಗ ಮಾಡಬೇಕು ಅದಕ್ಕೆ ಲಕ್ಷ್ಮಿ ದೇವಿಯ ಕಟಾಕ್ಷ ಕೂಡ ಬೇಕು.
ಶುಕ್ರವಾರದ ದಿನ ಈ ಐದು ಕೆಲಸಗಳನ್ನು ಮಾಡಿದರೆ ಲಕ್ಷ್ಮೀ ದೇವಿ ಆಶೀರ್ವಾದ ಸಿಗುತ್ತದೆ. ಎಲ್ಲರಿಗೂ ತಿಳಿದಿರುವ ಹಾಗೆ ಶುಕ್ರವಾರದ ದಿನ ಲಕ್ಷ್ಮೀ ದೇವಿಗೆ ಮೀಸಲಿರುವ ದಿನವಾಗಿದೆ. ಈ ದಿನದಂದು ಲಕ್ಷ್ಮೀ ದೇವಿಯನ್ನು ಆರಾಧನೆ ಮಾಡುವ ಮೂಲಕ ಲಕ್ಷ್ಮೀ ದೇವಿಯ ಆಶೀರ್ವಾದ ಪಡೆಯಬಹುದು.
ಈ ದಿನ ಲಕ್ಷ್ಮಿ ದೇವಿಗೆ ನಿಯಮ ನಿಷ್ಠೆಯಿಂದ ಪೂಜೆ ಮಾಡಬೇಕು ಮತ್ತು ಕೆಲವು ಸರಳ ಪರಿಹಾರ ಕ್ರಮಗಳನ್ನು ಪಾಲಿಸಿದರೆ ಲಕ್ಷ್ಮೀ ದೇವಿ ಮನೆಗೆ ಪ್ರವೇಶ ಮಾಡುವರು ಎಂದು ಹೇಳಲಾಗುತ್ತದೆ. ಬಡತನ ಮತ್ತು ದಾರಿದ್ರ್ಯವನ್ನು ದೂರ ಮಾಡಲು ಶುಕ್ರವಾರದ ದಿನ ಮಾಡಬೇಕಾದ ಐದು ಪರಿಹಾರ ಕ್ರಮಗಳು ಯಾವುದು ಎನ್ನುವುದನ್ನು ನೋಡೋಣ. ಶಾಸನಗಳಲ್ಲಿ ಉಲ್ಲೇಖ ಮಾಡಿರುವಂತೆ ಶುಕ್ರವಾರದ ಹೆಚ್ಚು ಹಾಗೂ ಮಂಗಳಕರ ದಿನ ಎಂದು ಪರಿಗಣನೆ ಮಾಡಲಾಗಿದೆ.
ಶುಕ್ರವಾರ ಲಕ್ಷ್ಮೀ ದೇವಿಯ ಪೂಜೆಗೆ ಸೂಕ್ತಕರವಾದ ದಿನವಾಗಿದೆ. ಈ ದಿನ ಯಾರ ಮನಸ್ಸಿಗೂ ನೋವು ನೀಡಬಾರದು, ಯಾರಿಗೂ ಸಹ ಅವಮಾನ ಮಾಡಬಾರದು ಹಾಗೂ ಯಾರಿಗೂ ಅಣಕ ಕೂಡ ಮಾಡಬಾರದು ಎಂದು ಶಾಸ್ತ್ರಗಳಲ್ಲಿ ಉಲ್ಲೇಖ ಮಾಡಲಾಗಿದೆ.
ಲಕ್ಷ್ಮೀ ದೇವಿಯನ್ನು ಒಲಿಸಿ ಕೊಳ್ಳಲು ಶುಕ್ರವಾರದ ದಿನ ಸರ್ವಶ್ರೇಷ್ಠ ಎಂದು ಹೇಳಲಾಗುತ್ತದೆ. ಆದ್ದರಿಂದ ಈ ದಿನ ವೈಭವ ಲಕ್ಷ್ಮಿ ವ್ರತವನ್ನು ಶ್ರದ್ಧೆಯಿಂದ ಮತ್ತು ಭಕ್ತಿಯಿಂದ ಮಾಡಬೇಕು. ಸಂಜೆಯ ಸಮಯದಲ್ಲಿ ನಿಯಮವನ್ನು ಪಾಲಿಸಿ ಲಕ್ಷ್ಮಿ ದೇವಿಯ ಪೂಜೆ ಮಾಡಿದ ನಂತರವೇ ಆಹಾರ ಮತ್ತು ನೀರನ್ನು ಸೇವನೆ ಮಾಡಬೇಕು.
ಶುಕ್ರವಾರದ ದಿನ ಸಂಜೆ ಲಕ್ಷ್ಮೀ ಮತ್ತು ವಿಷ್ಣುವಿನ ಪೂಜೆಯನ್ನು ಮಾಡಬೇಕು. ಲಕ್ಷ್ಮೀ ದೇವಿ ಮತ್ತು ವಿಷ್ಣುವಿನ ಪೂಜೆ ಮಾಡಿದ ನಂತರ ಮಾಡುವ ಆರತಿಯ ಸಮಯದಲ್ಲಿ ಮಣ್ಣಿನ ದೀಪದಲ್ಲಿ ಕರ್ಪೂರವನ್ನು ಬೆಳಗಿಸಿ ಮನೆಯ ಪೂರಾ ಕರ್ಪೂರದ ಬೆಳಕನ್ನು ತೋರಿಸಬೇಕು. ಈ ರೀತಿ ಮಾಡಿದರೆ ಎಲ್ಲ ರೀತಿಯ ನಕಾರಾತ್ಮಕ ಶಕ್ತಿ ಮನೆಯಿಂದ ತೊಲಗುತ್ತದೆ. ಮನೆಯ ಪರಿಸರವು ಕೂಡ ಪರಿಶುದ್ಧ ಆಗುತ್ತದೆ ಮತ್ತು ಶುದ್ಧವಾಗಿ ಇರುವ ಮನೆಯಲ್ಲಿ ಲಕ್ಷ್ಮಿ ದೇವಿ ಖಂಡಿತ ನೆಲೆಸುತ್ತಾಳೆ ಎಂದು ಹೇಳಲಾಗುತ್ತದೆ.
ಶುಕ್ರವಾರದ ದಿನ ಸಂಜೆ ವೇಳೆಯಲ್ಲಿ ಲಕ್ಷ್ಮಿ ದೇವಿಯ ಸ್ತೋತ್ರವನ್ನು ಜಪ ಮಾಡಬೇಕು ಅದು ಸಹ ಹೆಚ್ಚು ಸರ್ವ ಶ್ರೇಷ್ಠ ಎಂದು ಪರಿಗಣನೆ ಮಾಡಲಾಗಿದೆ. ಇನ್ನು ಸಮಯದ ಅಭಾವ ಇಲ್ಲ ಎಂದವರು ಶುಕ್ರವಾರದ ದಿನ ಸಂಜೆ ವೇಳೆಯಲ್ಲಿ ಕನಕ ಧಾರ ಸ್ತೋತ್ರವನ್ನು ಸಹ ಜಪ ಮಾಡಬಹುದು ಅದು ಸಹ ತುಂಬಾ ಪರಿಣಾಮಕಾರಿ ಎಂದು ಹೇಳಲಾಗುತ್ತದೆ. ಕನಕ ಧಾರಾ ಸ್ತೋತ್ರವನ್ನು ಜಪ ಮಾಡುವುದರಿಂದ ಹಾಗೂ ಲಕ್ಷ್ಮೀ ದೇವಿಯನ್ನು ಮನಸ್ಸು ಇಟ್ಟು ಸ್ಮರಣೆ ಮಾಡುವುದರಿಂದ ಪ್ರತಿ ಒಬ್ಬರ ಕೋರಿಕೆ ನೆರವೇರುತ್ತದೆ ಎಂದು ಹೇಳಲಾಗುತ್ತದೆ.
ಈ ಮಂತ್ರವನ್ನು ಹೇಳುವಾಗ ತಪ್ಪದೆ ತುಪ್ಪದ ದೀಪವನ್ನು ದೇವರ ಮುಂದೆ ಇಡಬೇಕು. ಹೀಗೆ ಮಾಡುವ ಕಾರಣ ಸುತ್ತಲಿನ ಸ್ಥಳವು ಸಹ ಶುದ್ಧ ಮತ್ತು ಶಕ್ತಿಯುತವಾಗುತ್ತದೆ. ಶುಕ್ರವಾರದ ದಿನ ಪುಟ್ಟ ಹೆಣ್ಣುಮಕ್ಕಳಿಗೆ ಹಣ್ಣನ್ನು ಕೊಡುವುದು ಸಹ ಸರ್ವ ಶ್ರೇಷ್ಠ ಎಂದು ಹೇಳಲಾಗುತ್ತದೆ. ಹೆಣ್ಣು ಮಕ್ಕಳನ್ನು ಗೌರವದಿಂದ ಮನೆಗೆ ಕರೆಯುವ ಜನರ ಮೇಲೆ ವಿಶೇಷವಾಗಿ ಲಕ್ಷ್ಮಿ ದೇವಿಯ ಅನುಗ್ರಹ ಇರುತ್ತದೆ ಎಂದು ಶಾಸ್ತ್ರ ಗಳಲ್ಲಿ ಉಲ್ಲೇಖ ಮಾಡಲಾಗಿದೆ.
ಶುಕ್ರವಾರದ ಸಂಜೆ ಪೂಜೆಯನ್ನು ಮಾಡಿದರೆ ಕನಿಷ್ಠ ಒಂದು ಚಿಕ್ಕ ಹೆಣ್ಣು ಮಗುವಿಗೆ ಆಹಾರವನ್ನು ಕಡ್ಡಾಯವಾಗಿ ನೀಡಬೇಕು ಮತ್ತು ಸಾಧ್ಯವಾದಷ್ಟು ಉಡುಗೊರೆಗಳನ್ನು ಮತ್ತು ಹಣ್ಣುಗಳನ್ನು ನೀಡಬೇಕು. ಆ ಹೆಣ್ಣು ಮಗುವಿಗೆ ಸಾಧ್ಯವಾದರೆ ಸೇಬು ಹಣ್ಣು ಅಥವಾ ದಾಳಿಂಬೆ ಹಣ್ಣನ್ನು ತಿನ್ನಲು ಕೊಡಬೇಕು. ಇನ್ನು ಧರ್ಮಗ್ರಂಥಗಳಲ್ಲಿ ಪ್ರದೋಷ ಸಮಯವನ್ನು ಅತ್ಯಂತ ಶುಭಕರ ಮತ್ತು ಪೂಜೆಗೆ ಸೂಕ್ತ ಎಂದು ಪರಿಗಣನೆ ಮಾಡಲಾಗಿದೆ.
ಈ ವೇಳೆಯಲ್ಲಿ ಮಾಡುವ ಪೂಜೆ, ಆಚರಣೆಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳು ದೇವರಿಂದ ನೇರವಾಗಿ ಸ್ವೀಕರಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಪ್ರದೋಷ ಸಮಯವನ್ನು ಶುಭಕರ ಎಂದು ಹೇಳಲಾಗುತ್ತದೆ ಅದು ಮನೆಯ ಸುತ್ತ ಸಕಾರಾತ್ಮಕ ಶಕ್ತಿಯನ್ನು ಸಹ ಹೆಚ್ಚು ಮಾಡುತ್ತದೆ. ಇನ್ನು ಪ್ರದೋಷ ವೇಳೆಯಲ್ಲಿ ಮನೆಯ ಮುಖ್ಯ ದ್ವಾರವನ್ನು ತೆಗೆದಿರಬೇಕು. ಈ ರೀತಿ ಮಾಡುವ ಕಾರಣ ಸಕಾರಾತ್ಮಕ ಶಕ್ತಿ ಮನೆಯನ್ನು ಪ್ರವೇಶ ಮಾಡುತ್ತದೆ ಹಾಗೂ ಲಕ್ಷ್ಮಿ ದೇವಿ ಕೂಡ ಪ್ರಸನ್ನ ಆಗುತ್ತಾಳೆ.
ಧರ್ಮ ಗ್ರಂಥಗಳ ಪ್ರಕಾರ ಲಕ್ಷ್ಮಿ ದೇವಿ ಕ್ಷೀರಸಾಗರದಲ್ಲಿ ಪ್ರಕಟಗೊಂಡಳು. ಹಾಗಾಗಿ ಲಕ್ಷ್ಮಿ ದೇವಿಗೆ ಹಾಲಿನಿಂದ ಮಾಡಿದ ಸಿಹಿ ತಿಂಡಿಗಳು ಬಹಳ ಇಷ್ಟ ಎಂದು ಹೇಳಲಾಗುತ್ತದೆ. ಶುಕ್ರವಾರ ಸಂಜೆ ಅನ್ನ ಮತ್ತು ಪಾಯಸವನ್ನು ಮಾಡಿ ಲಕ್ಷ್ಮಿ ದೇವಿಗೆ ನೈವೇದ್ಯ ರೂಪದಲ್ಲಿ ಅರ್ಪಣೆ ಮಾಡಬೇಕು. ಈ ರೀತಿ ಮಾಡಿದರೆ ಲಕ್ಷ್ಮಿ ದೇವಿ ಮನೆಯಲ್ಲಿ ನೆಲೆಸುವಳು ಹಾಗೂ ಮನೆಯ ಸಂಕಷ್ಟಗಳು ದೂರವಾಗುತ್ತದೆ.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು