ಜನ ಓದಿದ್ದಾರೆ ಎಂದರೆ ಯಾವ ಕಂಪನಿ, ಎಲ್ಲಿ ಕೆಲಸ ಎಂದು ಕೇಳುವ ಕಾಲದಲ್ಲಿ, ಇವರು ಶ್ವೇತಾ ಓದಿರುವುದು ಬಿ.ಎಡ್. ಆದರೆ, ಯಾವ ಹಿಂಜರಿಕೆ ಇಲ್ಲದೆ ಯಳಗ ತಳಿಯ ಕುರಿ ಸಾಕಾಣಿಕೆ ಮಾಡುತ್ತಿದ್ದಾರೆ. ಹೊಸದುರ್ಗ ತಾಲ್ಲೂಕಿನಲ್ಲಿ ವಾಸ ಮಾಡುವ ಇವರು ಸ್ವಲ್ಪ ದಿನ ಖಾಸಗಿ ಶಾಲೆಯಲ್ಲಿ ಶಿಕ್ಷಕ ವೃತ್ತಿ ನಿರ್ವಹಿಸಿ ಮತ್ತೆ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಮಗ್ರ ಕೃಷಿಯಲ್ಲಿ ತೊಡಗಿರುವ ಇವರು ಕುರಿ ಸಾಕಾಣಿಕೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಒಳ್ಳೆಯ ಗೊಬ್ಬರದ ಅವಶ್ಯಕತೆ ಇತ್ತು ತೋಟಕ್ಕೆ ಮತ್ತು ಕೃಷಿ ಬೆಳೆಯಲು ಅದಕ್ಕೆ, ಕುರಿ ಸಾಕಾಣಿಕೆ ಆರಂಭ ಮಾಡಿದರು. ಮೊದಲಿಗೆ 130 ಕುರಿಗಳನ್ನು ತಂದಿದ್ದರು. ಅದರಿಂದ, ನಷ್ಟವನ್ನು ಅನುಭವಿಸಿದ ಇವರು ಮತ್ತೆ ಮತ್ತೆ ಪ್ರಯತ್ನಪಟ್ಟು ಕುರಿಗಳ ಸಾಕಾಣಿಕೆಯನ್ನು ಮುಂದುವರೆಸಿದರು ನಷ್ಟದಿಂದ ಯಾವುದೇ ಕಾರಣಕ್ಕೂ ಧೃತಿಗೆಡಲಿಲ್ಲ. ಲಾಭ ಗಳಿಕೆ ಮಾಡಿ ನಷ್ಟವನ್ನು ಮತ್ತೆ ಮರಳಿ ಪಡೆದರು. ಪಶು ಸಂಗೋಪನೆ ಬಗ್ಗೆ ಯೂನಿವರ್ಸಿಟಿಗಳಲ್ಲಿ ಟ್ರೈನಿಂಗ್ ಪಡೆದಿದ್ದಾರೆ. ಪತಿಯ ಸಹಕಾರ ಮತ್ತು ಸಹಾಯದಿಂದ ಪಶು ಸಂಗೋಪನೆಯನ್ನು ಶುರು ಮಾಡಿದರು.

ಹೊಸದುರ್ಗ ಸಂತೆ ತುಂಬ ಪ್ರಸಿದ್ಧಿ ಹೊಂದಿದೆ ಕುರಿ ಮಾರಾಟ ಮಾಡಲು ಆದರೆ ಇವರು ಫಾರಂ ಮೂಲಕವೇ ಕುರಿಗಳನ್ನು ಮಾರಾಟ ಮಾಡುವರು ಯಾವುದೇ ಕಾರಣಕ್ಕೂ ಅವುಗಳನ್ನು ಸಂತೆಗೆ ಕೊಂಡೊಯ್ಯುವುದಿಲ್ಲ. ಊರ ಹಬ್ಬ ಅಥವಾ ಜಾತ್ರೆ ಮಾಡುವ ಜನರು, ಮುಸ್ಲಿಂ ಬಾಂಧವರು ಎಲ್ಲರೂ ಫಾರಂಗೆ ಭೇಟಿ ನೀಡಿ ಕುರಿಗಳನ್ನು ಖರೀದಿ ಮಾಡುವರು.

ಇಲ್ಲಿ 40 ರಿಂದ 50 ಕೆಜಿ ಕುರಿ ಮತ್ತು ಗುಣಮಟ್ಟ ಇರುವ ಕುರಿ ಸಿಗುತ್ತದೆ ಎನ್ನುವ ಮಾಹಿತಿ ಇರುವ ಜನರು ಫಾರಂಗೆ ಭೇಟಿ ನೀಡಿ ಕುರಿಗಳನ್ನು ಖರೀದಿ ಮಾಡುವರು. ಇವರಿಗೆ ಯಾವುದೇ ರೀತಿಯ ಮಾರ್ಕೆಟಿಂಗ್ ಮಾಡುವ ಅನಿವಾರ್ಯತೆ ಇರುವುದಿಲ್ಲ. 2020ರಲ್ಲಿ ಇವರು ಹಿರಿಯೂರು ತಳಿ ಕುರಿ ಸಾಕಾಣಿಕೆಯನ್ನು ಆರಂಭ ಮಾಡಿದರು. ಕಾಯಿಲೆ ಹೆಚ್ಚಾಗಿ ಮತ್ತು ಫಾರಂಗೆ ಹೊಂದಿಕೊಳ್ಳದ ಕಾರಣ ನಷ್ಟ ಎದುರಿಸಬೇಕಾಗಿತ್ತು. ಕೆಲವು ಕುರಿ ಮರಿಗಳು ಸತ್ತು ಹೋದವು, ಕೆಲವು ಕುರಿಗಳು ತೂಕ ಕಳೆದುಕೊಂಡವು.

ನಂತರ ಯಳಗ ತಳಿಯ ಕುರಿ ಸಾಕಾಣಿಕೆ ಶುರು ಮಾಡಿ, ಅದರಲ್ಲಿ ಲಾಭ ಪಡೆದರು. ಅವು ಫಾರಂಗೆ ಹೊಂದಿಕೊಂಡವು ಜೊತೆಗೆ ತೂಕ ಕೂಡ ಚೆನ್ನಾಗಿ ಬಂದವು. ಒಂದು ಬ್ಯಾಚ್ ಕುರಿಗೆ 40 ರಿಂದ 50 ಕುರಿಗಳನ್ನು ಖರೀದಿ ಮಾಡುವರು ಅದರಲ್ಲಿ ಯಾವುದಾದರೂ ಕುರಿಗೆ ಪೆಟ್ಟು ಬೀಳಬಹುದು, ಕಾಯಿಲೆ ಬರಬಹುದು ಇದರಿಂದ, 2-3 ಮರಿ ಸತ್ತು ಹೋಗುತ್ತದೆ. ಬಾಗಲಕೋಟೆಯಿಂದ ತಂದ ಕುರಿ ಮರಿಗಳು ಫಾರಂಗೆ ಹೊಂದಿಕೊಳ್ಳಲು ಎರಡು ತಿಂಗಳ ಸಮಯ ತೆಗೆದುಕೊಳ್ಳುತ್ತದೆ ನಂತರ ಆರು ತಿಂಗಳ ಕಾಲ ಅವುಗಳ ಪಾಲನೆ ಪೋಷಣೆಯನ್ನು ಮಾಡಬೇಕು. 40 ಕುರಿ ಮರಿಗಳು ಮಾರಾಟವಾದ ನಂತರ ಪುನಃ ನೂತನ ಮರಿಗಳ ಖರೀದಿ ಮಾಡುವರು.

ಈ ಫಾರಂನಲ್ಲಿ ಪ್ರತಿ ಕೆಜಿಗೆ ₹400 ಇರುತ್ತದೆ. 24×7 364 ಡೇಸ್ ಕೂಡ ಫಾರಂ ತುಂಬ ಕುರಿ ಇರುತ್ತದೆ. ಬೆಳಗ್ಗೆ ಶೆಡ್’ನಲ್ಲಿ 2 ರಿಂದ 3 ಗಂಟೆ ಕೆಲಸ ಇರುತ್ತದೆ, ಮಧ್ಯಾಹ್ನ ಕುರಿಗಳಿಗೆ ಮೇವು ನೀಡುವ ಕೆಲಸ ಇರುತ್ತದೆ.  ಕೆಲಸದ ಜನ ಇದ್ದಾಗ ಅವರಿಗೆ ಕುರಿಗಳಲ್ಲಿ ಕಾಯಿಲೆಗಳನ್ನು ಕಂಡುಹಿಡಿಯಲು ಸಾಧ್ಯ ಆಗುತ್ತಿರಲಿಲ್ಲ, ಅವುಗಳಿಗೆ ಔಷಧಿ ಕೊಡಲು ಬರುತ್ತಿರಲಿಲ್ಲ. ಕುರಿಗಳ ಪಾಲನೆ ಪೋಷಣೆಯಲ್ಲಿ ಕೊರತೆಯನ್ನು ಕಂಡಾಗ ಶ್ವೇತಾ ಅವರು ಸ್ವತಃ ಅವರೇ ನಿಂತು ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದಾರೆ.ಕುರಿಗೆ ಕಾಯಿಲೆ ಇದ್ದರೆ ಅದು, ಮೇವು ಸೇವನೆ ಮಾಡುವುದಿಲ್ಲ, ಮುಖದಲ್ಲಿ ಬಾವು ಬರುತ್ತದೆ ಅದರಿಂದ ಆ ಕುರಿಗಳನ್ನು ಗುಂಪಿನಿಂದ ಬೇರೆ ಇಡಲಾಗುತ್ತದೆ. ಜ್ವರ ಏನಾದರೂ ಕಾಣಿಸಿಕೊಂಡರೆ ಅವುಗಳನ್ನು ಕೂಡ ಗುಂಪಿನಿಂದ ಹೊರಗೆ ಇಡಲಾಗುವುದು.

ವೈದ್ಯರ ಬಳಿ ಔಷಧಿ ನೀಡುವುದನ್ನು ಸರಿಯಾದ ಕ್ರಮಗಳಲ್ಲಿ ನೋಡಿಕೊಂಡು ಇವರೇ ಕುರಿಗಳಿಗೆ ಔಷಧಿಗಳನ್ನು ಕೊಡುವರು ಕೆಲವು ಬಾರಿ ಚರ್ಮಕ್ಕೆ, ಕೆಲವು ಬಾರಿ ಮಾಂಸ ಖಂಡಗಳಿಗೆ ಔಷಧಿ ಕೊಡುವುದರಿಂದ ಅದನ್ನು ಸರಿಯಾದ ಸಮಯಕ್ಕೆ ಮತ್ತು ಸರಿಯಾದ ಕ್ರಮದಲ್ಲಿ ಕೊಡುವುದು ಒಳ್ಳೆಯದು. ಹವಾಮಾನ ಅಥವಾ ಜಾಗ ಬದಲಾವಣೆ ವ್ಯತ್ಯಾಸದಿಂದ ಕುರಿಗಳಿಗೂ ಕೂಡ ಕೆಮ್ಮು ನೆಗಡಿ ಕಾಡುವ ಸಾಧ್ಯತೆ ಇರುತ್ತದೆ. ದೂರ ಪ್ರಯಾಣದಿಂದ ಕಾಲು ನೋವು ಬಾಧಿಸಬಹುದು ಇದನ್ನೆಲ್ಲ ಸರಿಯಾದ ರೀತಿಯಲ್ಲಿ ತಿಳಿದು ನಂತರ ಉಪಚಾರ ಮಾಡಬೇಕು.

ವೈದ್ಯರ ಬಳಿ ಸರಿಯಾದ ಸಲಹೆ ಸೂಚನೆಗಳನ್ನು ಪಡೆದು ನಂತರ ಮುಂದುವರೆಯುವುದು ಉತ್ತಮ. ಶೆಡ್ ಉದ್ದ 66 ಅಗಲ 33 ಇರುವ ಕಾರಣ 8 ಲಕ್ಷ ಖರ್ಚಾಗಿದೆ ನಿರ್ಮಾಣ ಮಾಡಲು ಅದರಲ್ಲಿ, ಗೋಡೆಗೆ ಸ್ಲ್ಯಾಬ್ ಬಳಕೆ ಮಾಡಲಾಗಿದೆ ಅದನ್ನು ಮತ್ತೆ ಮರು ಬಳಕೆ ಮಾಡಬಹುದು ಕಂಬಿಗಳನ್ನು ಮತ್ತೆ ಬಳಕೆ ಮಾಡಬಹುದು.

ಕುರಿ ಖರೀದಿ ಮಾಡುವುದರಿಂದ ಹಿಡಿದು ಮಾರಾಟ ಮಾಡುವುದು ಅದಕ್ಕೆ, ಬೇಕಾಗಿರುವ ಅಗತ್ಯ ಮೇವು ಎಲ್ಲವನ್ನು ದಾಖಲೆಯ ರೂಪದಲ್ಲಿ ಇಡಲಾಗಿದೆ. ಒಂದು ವರ್ಷದಲ್ಲಿ 150 ಮರಿಗಳನ್ನು ಸಾಕುವುದರಿಂದ 7 ರಿಂದ 8 ಲಕ್ಷ ಲಾಭ ಗಳಿಕೆಯನ್ನು ಮಾಡಬಹುದು. ಒಂದು ಮರಿಗೆ 5,000 ದಿಂದ 8,000 ದವರೆಗೂ ಲಾಭ ಸಿಗುತ್ತದೆ. ಇವರು ನೆಲ ಪದ್ಧತಿ ಅಳವಡಿಸಿಕೊಂಡು ಕುರಿ ಸಾಕಾಣಿಕೆ ಮಾಡುತ್ತಿರುವರು ಫ್ಯಾಟ್ನಿಂಗ್ ಯೂನಿಟ್ ( fatening unit ) ಪ್ರಸ್ತುತ ಇದೆ. ಮುಂದೆ ಬ್ರೀಡಿಂಗ್ ಯೂನಿಟ್ ( breeding unit ) ಮಾಡುವ ಆಲೋಚನೆ ಕೂಡ ಮಾಡಿದ್ದಾರೆ.

ಕುರಿ ಸಾಕಾಣಿಕೆಯಿಂದ, 15 ರಿಂದ 20 ಲೋಡ್ ಗೊಬ್ಬರ ಸಿಗುತ್ತದೆ. ಒಂದು ವರ್ಷ ಸ್ವಂತ ಹೊಲಕ್ಕೆ ಬಳಕೆ ಮಾಡಿದರೆ. ಇನ್ನೊಂದು ವರ್ಷಕ್ಕೆ ಅದನ್ನು ಬೇರೆಯವರಿಗೆ ಮಾರಾಟ ಮಾಡುವರು. ಕುರಿಗಳಿಗೆ ಸಜ್ಜೆ, ಗೋಧಿ, ಸೋಯಾಬೀನ್, ತೊಗರಿ ಬೇಳೆಯ ಹೊಟ್ಟು, ಹಿಂಡಿ ಎಲ್ಲವನು ತರಿಸಿ ಮೆಷಿನ್’ನಲ್ಲಿ  ನುಚ್ಚು ಮಾಡಿಸಿ ನಂತರ ಕುರಿಗಳಿಗೆ ಮೇವು ಕೊಡುವರು.

ಸಣ್ಣ ಮರಿಗಳಿಗೆ 50 ಗ್ರಾಂ ಮತ್ತು ದೊಡ್ಡ ಕುರಿಗಳಿಗೆ ಅರ್ಧ ಕೆಜಿ ತನಕ ಮೇವು ಕೊಡುವರು. ಒಣ ಮೇವು ಮತ್ತು ಹುಲ್ಲು ಕೊಡುವರು ದಿನಕ್ಕೆ ಎರಡು ಬಾರಿ. ಮೇವಿನ ಮೂಲಕ ಪ್ರೋಟೀನ್ ಸಿಗುವುದು ಮುಖ್ಯ ಉದ್ದೇಶ. ರಾಗಿ ಕಡ್ಡಿ, ಶೇಂಗ ಹಿಂಡಿ, ಫೀಡ್, ಮೆಕ್ಕೆಜೋಳದ ಹೊಟ್ಟು. ಈ ರೀತಿಯ ಮೇವನ್ನು ತಿಂದು ಕುರಿಗಳು ಮಲಗಬೇಕು ಅಲ್ಲಿಯ ತನಕ ಅವುಗಳಿಗೆ ಮೇವು ಪೂರೈಕೆ ಮಾಡುವರು.

ಮೆಕ್ಕೆ ಜೋಳವನ್ನು ಕುರಿಗಳಿಗೆ ಹೆಚ್ಚಾಗಿ ಕೊಡುವ ಕಾರಣ ಅವುಗಳಿಗೆ ಹೊಟ್ಟೆ ಉಬ್ಬುವುದು ಮತ್ತು ಕಿಡ್ನಿ ಸಮಸ್ಯೆಗಳು ಎದುರಾಗಬಹುದು, ಹಿಂಡಿ ಹೆಚ್ಚಾಗಿ ಕೊಡುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ಕುರಿಗಳನ್ನು ಬಾಧಿಸಬಹುದು ಅದರಿಂದ, ಎಲ್ಲಾ ರೀತಿಯ ಆಹಾರವನ್ನು ಸಮ ಪ್ರಮಾಣದಲ್ಲಿ ಕೊಡುವುದರಿಂದ ಕುರಿಗಳ ಆರೋಗ್ಯ ಚೆನ್ನಾಗಿರುತ್ತೆ.

ಇವರನ್ನು ಸಂಪರ್ಕ ಮಾಡಲು ಕೆಳಗಿನ ಸಂಖ್ಯೆಗೆ ಕರೆ ಮಾಡಿ.
ದೂರವಾಣಿ ಸಂಖ್ಯೆ
9480409452

By

Leave a Reply

Your email address will not be published. Required fields are marked *

error: Content is protected !!
Footer code: