ಬಿಗ್ ಬಾಸ್ ಸೀಸನ್ 6 ರಲ್ಲಿ ಸ್ಪರ್ಧಿಯಾಗಿ ಮನೆಯೊಳಗೆ ಪಾದಾರ್ಪಣೆ ಮಾಡಿದ ಕವಿತಾ ಗೌಡ (Kavita Gowda) ತಮ್ಮ ಮುದ್ದಾದ ಮೂಡಿ ಇಂದಲೇ ಹೆಸರುವಾಸಿಯಾಗಿದ್ದರು. ಇತರರೊಂದಿಗೆ ವರ್ತಿಸುತಿದ್ದಂತಹ ರೀತಿ ಕ್ಯಾಮೆರಾದ ಮುಂದೆ ಬಂದು ಹಾಡುತ್ತಿದ್ದಂತಹ ತುಂಟತನ, ಗೇಮ್ನಲ್ಲಿ ಇದ್ದಂತಹ (strategy) ಎಲ್ಲವೂ ಕರುನಾಡ ಪ್ರೇಕ್ಷಕರ ಮನಸ್ಸನ್ನು ಗೆದ್ದಿತ್ತು. ಮೂಲತಃ ಬೆಂಗಳೂರಿ (Bangalore) ನವರೇ ಆದ ಕವಿತಾ ಅವರಿಗೆ ಚಿಕ್ಕಂದಿನಿಂದಲೂ ನಟನೆಯ ಮೇಲೆ ಬಹಳ ಆಸಕ್ತಿ ಇರುತ್ತದೆ.
ಹೀಗಾಗಿ ಕಾಲೇಜು ದಿನಗಳಲ್ಲಿ ಮಾಡ್ಲಿಂಗ್ (modelling) ಹಾಗೂ ಇನ್ನಿತರ ಕಲೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಪ್ರಸಿದ್ಧಿ ಪಡೆದಿರುತ್ತಾರೆ. ಹೀಗೆ ಅತಿ ಚಿಕ್ಕ ವಯಸ್ಸಿಗೆ ಅಂದರೆ 20 ವರ್ಷಕ್ಕೆ ತಮಿಳಿನ ಜನಪ್ರಿಯ ದೂರದರ್ಶನ ಕಾರ್ಯಕ್ರಮ ಮಹಾಭಾರತಂ (Mahabharatham) ಮೂಲಕ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿದ.
ಈ ನಟಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮಿ ಬಾರಮ್ಮ (Lakshmi Baramma ಸೀರಿಯಲ್ ಚಿನ್ನು ಎಂಬ ಮುಗ್ದಹಳ್ಳಿ ಹುಡುಗಿಯ ಪಾತ್ರದಲ್ಲಿ ಅಭಿನಯಿಸುವ ಮೂಲಕ ಕನ್ನಡಿಗರ ಮನೆಮಗಳಾಗಿ ಹೋದರು. ಹೌದು ಸ್ನೇಹಿತರೆ ಲಚ್ಚಿ ಅಲಿಯಾಸ್ ಲಕ್ಷ್ಮಿ ಎಂಬ ಪಾತ್ರಕ್ಕೆ ಸರಿದೂಗುವಂತಹ ನಟನೆ ಇವರದಾಗಿತ್ತು, ಇವರ ಮನೋಜ್ಞ ಅಭಿನಯಕ್ಕೆ ಅದೆಷ್ಟೋ ಸೀರಿಯಲ್ ಪ್ರೇಕ್ಷಕರು ಫಿದಾ ಆಗಿ ಹೋಗಿದ್ದರು.
ಇನ್ನು ಪಾಂಡಿಯನ್ ಸ್ಟೋರ್ (Pandian stores) ಎಂಬ ಕಾರ್ಯಕ್ರಮದಲ್ಲಿ ಬ್ಯುಸಿ ಇರುವಾಗಲೇ ಇವರಿಗೆ ಬಿಗ್ ಬಾಸ್ (Bigg Boss) ಸೀಸನ್ 6ರ ಅವಕಾಶ ಒದಗಿ ಬರುತ್ತಿದೆ. ಹೀಗೆ ಸಿಕ್ಕಂತಹ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಂತಹ ಕವಿತ ಗೌಡ (Kavita Gowda) ತಮ್ಮ ತುಂಟುತನ, ಮುದ್ದಾದ ಮಾತುಗಳ ಮೂಲಕ ಎಲ್ಲರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿ ದೊಡ್ಮನೆಯಲ್ಲಿ 100 ದಿನಗಳ ಕಾಲ ಪೂರೈಸಿದ ಏಕೈಕ ಮಹಿಳಾ ಫೈನಲಿಸ್ಟ್ (female finalist) ಆಗಿ ಉಳಿದುಕೊಂಡರು.
ಆ ಕುರಿತಾದ ಕೆಲ ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗುತ್ತಿದ್ದು, ಕವಿತಾ ಗೌಡ (Kavita Gowda) ಅವರ ತುಂಟಾಟಕ್ಕೆ ನೆಟ್ಟಿಗರು ಕ್ಲೀನ್ ಬೋಲ್ಡ್ ಆಗಿದ್ದಾರೆ. ಅಲ್ಲದೆ ಮುಂಬರಲಿರುವ ಬಿಗ್ ಬಾಸ್ ಸೀಸನ್ ಹತ್ತರ ಪ್ರವೀಣರ ಪಟ್ಟಿಯಲ್ಲಿ ಕವಿತ ಗೌಡ ಮತ್ತೆ ಬರಬೇಕೆಂದು ಆಗ್ರಹಿಸುತ್ತಿದ್ದಾರೆ.