WhatsApp Group Join Now
Telegram Group Join Now

ನಮ್ಮ ಕಷ್ಟಗಳನ್ನು ನಿವಾರಣೆ ಮಾಡುವ ಶಕ್ತಿ ಭಗವಂತನಿಗೆ ಮಾತ್ರ ಇರುತ್ತದೆ ಭಗವಂತ ಎಂದರೆ ನಮಗೆ ಮೊದಲು ನೆನಪಾಗುವುದು ಶಿವ ಶಿವನ ಜೊತೆ ಶಕ್ತಿ ಸೇರಿದರೆ ಶಿವಶಕ್ತಿ ನಮ್ಮನ್ನು ಎಂಥಹ ಕಷ್ಟಗಳಿಂದಲೂ ಪಾರು ಮಾಡಬಹುದು. ಕಾಳಪ್ಪನಳ್ಳಿ ಎಂಬ ಕುಗ್ರಾಮ ಇಂದು ಭದ್ರಕಾಳಿ ಕ್ಷೇತ್ರವಾಗಿ ತಮ್ಮ ಕಷ್ಟಗಳನ್ನು ನಿವಾರಣೆ ಮಾಡಿಕೊಳ್ಳುತ್ತಿದ್ದಾರೆ ಹಾಗಾದರೆ ಕಾಳಪ್ಪನಹಳ್ಳಿಯಲ್ಲಿ ಭದ್ರಕಾಳಿ ನೆಲೆಸಿದ್ದು ಹೇಗೆ ದೇವಸ್ಥಾನ ನಿರ್ಮಾಣವಾದ ರೀತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಪುರಾತನ ಕಾಲದಿಂದಲೂ ನಾಗರಾಜ ಶಾಸ್ತ್ರಿಯವರ ತಂದೆ, ತಾತ ಬಸವೇಶ್ವರ ದೇವಾಲಯದ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ನಾಗರಾಜ ಶಾಸ್ತ್ರಿ ಅವರ ತಂದೆಯವರ ಕಾಲದಲ್ಲಿ ಅನೇಕ ಕಷ್ಟಗಳು ಎದುರಾಗಿ ನಾಗರಾಜ ಶಾಸ್ತ್ರಿ ಅವರನ್ನು ಅವರ ತಂದೆ ಜ್ಯೋತಿಷ್ಯ ಕಲಿಯಲು ಕಳುಹಿಸುತ್ತಾರೆ ಅಲ್ಲಿ ಒಬ್ಬ ಗುರು ಭೇಟಿಯಾಗಿ ಅವರ ಮಾರ್ಗದರ್ಶನದಲ್ಲಿ ನಾಗರಾಜ ಶಾಸ್ತ್ರಿ ಅವರು ದಿನ ಕಳೆಯುತ್ತಿದ್ದರು

ಈ ಸಂದರ್ಭದಲ್ಲಿ ಒಮ್ಮೆ ಯಾವುದೊ ಒಂದು ಶಕ್ತಿ ಕನಸಿನಲ್ಲಿ ಕಾಣಿಸಿಕೊಳ್ಳುತ್ತಿತ್ತು ಅದರ ಬಗ್ಗೆ ಏನೂ ತಿಳಿಯದ ನಾಗರಾಜ ಶಾಸ್ತ್ರಿಯವರು ತಲೆಕೆಡಿಸಿಕೊಂಡಿರಲಿಲ್ಲ ಹೀಗಿರುವಾಗ ಒಮ್ಮೆ ಗುರುಗಳು ಮಂತ್ರ ಸಿದ್ಧಿಗೆ ನಾಗರಾಜ ಅವರನ್ನು ಶ್ರೀರಂಗಪಟ್ಟಣ ಬಳಿ ಕಾಶಿ ವಿಶ್ವನಾಥ ದೇವಾಲಯವಿದೆ

ಅಲ್ಲಿಗೆ ಕರೆದುಕೊಂಡು ಹೋದಾಗ ಅಲ್ಲಿ ಕುಳಿತುಕೊಂಡು ಇದ್ದಾಗ ನಾಗರಾಜ ಅವರಿಗೆ ಕಲ್ಲಿನ ಸಂದಿಯಲ್ಲಿ ಬೆಳಕು ಕಾಣಿಸುತ್ತದೆ ಗುರುಗಳ ಬಳಿ ಹೇಳಿದಾಗ ಗ್ರಹಣದ ಸಮಯದಲ್ಲಿ ಕಾಣಿಸಿಕೊಳ್ಳುತ್ತದೆ ನೀವು ಜಪ ಮಾಡಿ ಎಂದು ಹೇಳುತ್ತಾರೆ ಗ್ರಹಣ ಮುಗಿದ ನಂತರ ಕಲ್ಲಿನ ಸಂಧಿಯಲ್ಲಿ ಏನಿದೆ ಎಂದು ಹೋಗಿ ನೋಡಲೇಬೇಕೆಂದು ನಾಗರಾಜ ಅವರು ಹೋಗಿ ನೋಡುತ್ತಾರೆ ಅಲ್ಲಿ ಒಂದು ದೇವಿ ವಿಗ್ರಹ ಕಾಣುತ್ತದೆ.

ನಾಗರಾಜ ಅವರಿಗೆ ಈ ದೇವಿ ವಿಗ್ರಹವನ್ನು ಮನೆಗೆ ತೆಗೆದುಕೊಂಡು ಹೋಗಬೇಕೆಂದು ಮನಸ್ಸಿಗೆ ಅನಿಸುತ್ತದೆ ಅಲ್ಲಿರುವವರು ಬೇಡವೆಂದು ಹೇಳುತ್ತಾರೆ ಆದರೂ ಅವರು ಕೇಳದೆ ದೇವಿ ವಿಗ್ರಹವನ್ನು ತೆಗೆದುಕೊಂಡು ಮನೆಗೆ ಹೋಗುತ್ತಾರೆ. ಮನೆಯಲ್ಲಿ ಅವರ ತಂದೆ ಕೂಡ ಉಗ್ರ ದೇವಿಯನ್ನು ನಾವು ಇಟ್ಟುಕೊಳ್ಳುವುದು ಬೇಡ ಎಂದು ಹೇಳುತ್ತಾರೆ ಇದ್ಯಾವುದನ್ನು ಲೆಕ್ಕಕ್ಕೆ ಹಾಕಿಕೊಳ್ಳದ ನಾಗರಾಜ ಅವರು ದೇವಿ ವಿಗ್ರಹವನ್ನು ಮನೆಯಲ್ಲಿ ಇಟ್ಟು ಪೂಜೆಯನ್ನು ಪ್ರಾರಂಭಿಸುತ್ತಾರೆ. ನಂತರದಲ್ಲಿ ದೇವಿ ಭಕ್ತರನ್ನು ಕರೆಸಿಕೊಂಡಳು ದೂರ ದೂರದಿಂದ ಭಕ್ತರು ಬಂದರು ಅವರ ಕಷ್ಟವನ್ನು ನಿವಾರಿಸಿದಳು. ನಾಗರಾಜ ಶಾಸ್ತ್ರಿ ಅವರ ಮನೆಯಲ್ಲಿ ಇರುವ ಕಷ್ಟಗಳನ್ನೆಲ್ಲ ದೇವಿ ನಿವಾರಣೆ ಮಾಡುತ್ತಾಳೆ.

ನಂತರದ ದಿನಗಳಲ್ಲಿ ದೇವಿ ಮತ್ತೆ ಮತ್ತೆ ನಾಗರಾಜ ಅವರ ಕನಸಿನಲ್ಲಿ ಬಂದು ನನಗಾಗಿ ಒಂದು ದೇವಸ್ಥಾನವನ್ನು ನಿರ್ಮಿಸುವಂತೆ ಕೇಳುತ್ತಾಳೆ. ಆದರೆ ನಾಗರಾಜ ಅವರ ಹತ್ತಿರ ಹಣವಿಲ್ಲದ ಕಾರಣ ಅವರು ಈ ಯೋಜನೆಯನ್ನು ನಿರ್ಲಕ್ಷ ಮಾಡುತ್ತಾರೆ ಒಮ್ಮೆ ನಾಗರಾಜ ಶಾಸ್ತ್ರಿ ಅವರ ಕೆನ್ನೆಗೆ ಯಾರೊ ಹೊಡೆದಂತ ಅನುಭವವಾಗಿ ನಾಲ್ಕು ದಿನ ಊದಿಕೊಂಡಿತ್ತು ದೇವಿ ಕನಸಿನಲ್ಲಿ ನಾನು ಹೇಳಿದ ಜಾಗಕ್ಕೆ ಹೋಗು ಅಲ್ಲಿ ಮಲ್ಲಿಗೆ ಹಾಗೂ ಸಾಮ್ರಾಣಿಯ ಪರಿಮಳ ಬರುತ್ತದೆ ಎಂದು ಹೇಳುತ್ತಾಳೆ

ಅದರಂತೆ ಬೆಳಗ್ಗೆ ನಾಗರಾಜ ಅವರು ಆ ಜಾಗವನ್ನು ಹುಡುಕಿಕೊಂಡು ಹೋಗುತ್ತಾರೆ. ದೇವಿ ಹೇಳಿದಂತೆ ಆ ಜಾಗದಲ್ಲಿ ದೇವಸ್ಥಾನ ನಿರ್ಮಿಸಿ ದೇವಿ ಮೂರ್ತಿಯನ್ನು ಶಿವಲಿಂಗವನ್ನು ಸಾಲಿಗ್ರಾಮವನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡಲು ಪ್ರಾರಂಭಿಸುತ್ತಾರೆ. ಈ ದೇವಸ್ಥಾನದ ವಿಶೇಷವೆಂದರೆ ಶಿವ ಹಾಗೂ ಅಮ್ಮನವರು ಅಂದರೆ ಶಿವಶಕ್ತಿ ಒಂದೆ ಜಾಗದಲ್ಲಿ ನೆಲೆಸಿದ್ದಾರೆ.

ಈ ಕ್ಷೇತ್ರದ ದೇವಿಯ ವಿಶೇಷತೆ ಎಂದರೆ ಸಮಸ್ಯೆ ಇರುವ ಭಕ್ತರು ಮೂರು ರೂಪಾಯಿ ಕಾಯಿನನ್ನು ಕಟ್ಟಿ ಮಂಗಳವಾರ ಬೂದುಗುಂಬಳಕಾಯಿ ಯ ಮೇಲೆ ದೀಪ ಹಚ್ಚಿ ಬೆಳಗಿ ಹೋದರೆ ದೇವಿ ಅವರ ಕಷ್ಟವನ್ನು ಸಂಪೂರ್ಣವಾಗಿ ನಿವಾರಣೆ ಮಾಡುತ್ತಾಳೆ. ಅತ್ಯಂತ ಭೀಕರ ಖಾಯಿಲೆಗೆ ಒಳಗಾದವರು ಸಹ ಈ ಕ್ಷೇತ್ರಕ್ಕೆ ಬಂದು ನಿವಾರಣೆ ಮಾಡಿಕೊಂಡು ಹೋಗಿದ್ದಾರೆ. ದೇವಸ್ಥಾನ ನಿರ್ಮಿಸಿ ಇಂದಿಗೆ 15 ವರ್ಷವಾಯಿತು. ಡಿಸೆಂಬರ್ ತಿಂಗಳಿನಲ್ಲಿ ಆರು ದಿನ ಇಲ್ಲಿ ಜಾತ್ರೆ ನಡೆಯುತ್ತದೆ.

ಮಕ್ಕಳಾಗದೆ ಇದ್ದವರು ಸಂತಾನಕ್ಕಾಗಿ ಇಲ್ಲಿ ಬಂದು ಸೇವೆ ಸಲ್ಲಿಸಿ ಮಕ್ಕಳನ್ನು ಪಡೆದುಕೊಂಡ ಅದೆಷ್ಟೊ ಉದಾಹರಣೆಗಳಿವೆ. ಮಾಟ ಮಂತ್ರ ನಡೆದಿದ್ದರೆ ಅದನ್ನು ಕೂಡ ಈ ಕ್ಷೇತ್ರಕ್ಕೆ ಬಂದು ನಿವಾರಣೆ ಮಾಡಿಕೊಂಡು ಹೋಗಬಹುದು. ಈ ಕ್ಷೇತ್ರದಲ್ಲಿ ಶುಕ್ರವಾರ, ಮಂಗಳವಾರ, ಅಮಾವಾಸ್ಯೆ, ಹುಣ್ಣಿಮೆ ನವರಾತ್ರಿ ಹಾಗೂ ಆಷಾಢ ಮಾಸದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ಭದ್ರಕಾಳಿ ದೇವಿ ಎಲ್ಲರಿಗೂ ಆಶೀರ್ವಾದ ಮಾಡಲಿ.

ನಿಮ್ಮ ಭವ್ಯ ಭವಿಷ್ಯದ ದಾರಿದೀಪಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ 9606655519ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ Astrologically accurate prediction & Solutions to your all personal problems will given by VIDVAN SHREE SHREE RAGHUNANDHAN GURUJIfrom the way of Asta Mangala Prashna, Horoskope, Palmistry,Face Reading: 9606655519

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: