WhatsApp Group Join Now
Telegram Group Join Now

ಎಷ್ಟು ದುಡಿದರೂ ಹಣ ಉಳಿತಾಯವಾಗುವುದಿಲ್ಲ ಹೇಗಾದರೂ ಖರ್ಚಾಗಿ ಹೋಗುತ್ತದೆ ಎನ್ನುವ ಮಾತನ್ನು ಬಹಳಷ್ಟು ಜನರ ಬಾಯಲ್ಲಿ ಕೇಳಿರುತ್ತೇವೆ ಎಷ್ಟೆ ದುಡಿದರೂ ಹಣ ಉಳಿತಾಯವಾಗದೆ ಇರಲು ಕೆಲವು ಕಾರಣಗಳು ಇರುತ್ತವೆ ಹಾಗೂ ಹಣ ಉಳಿತಾಯವಾಗಲು ಕೆಲವು ಕ್ರಮಗಳನ್ನು ಅನುಸರಿಸಬೇಕು ಅವುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ಹಿರಿಯರು ಮರಣ ಹೊಂದಿದ್ದರೆ ಅವರ ಕಾರ್ಯವನ್ನು ಪ್ರತಿವರ್ಷ ಮಾಡಬೇಕಾಗುತ್ತದೆ ಅದನ್ನು ಮಾಡದೆ ಇರುವುದರಿಂದ ಎಷ್ಟೆ ದುಡಿದರು ಹಣ ನಮ್ಮ ಬಳಿ ಉಳಿಯುವುದಿಲ್ಲ. ಕಷ್ಟದ ಸಂದರ್ಭದಲ್ಲಿ ಹರಕೆ ಹೊತ್ತಿದ್ದು ನೆನಪಿದ್ದರೂ ಸಹ ಸಣ್ಣ ಪುಟ್ಟ ಕಾರಣಗಳನ್ನು ಕೊಟ್ಟು ಮುಂದಕ್ಕೆ ಹಾಕುತ್ತಿದ್ದರೆ ಹಣ ಉಳಿತಾಯವಾಗುವುದಿಲ್ಲ. ರಾತ್ರಿ ಮಲಗಿಕೊಂಡಾಗ ಮಹಿಳೆಯರ ತಾಳಿಸರ ಬೆನ್ನಿನ ಕಡೆ ಹೋಗಿರುತ್ತದೆ ಅದರ ಅರಿವಿದ್ದರೂ ಎದ್ದ ಮೇಲೆ ಅದನ್ನು ಸರಿ ಮಾಡಿಕೊಳ್ಳದೆ ಇರುವುದು ಕೂಡ ಅನಾವಶ್ಯಕ ಖರ್ಚಿಗೆ ಕಾರಣವಾಗಿರುತ್ತದೆ.

ಮನೆಯಲ್ಲಿ ನಾಗರ ಪ್ರತಿಷ್ಠಾಪನೆ ಮಾಡಿಕೊಂಡು ನಾಗರ ಪೂಜೆಯ ಪದ್ಧತಿ ಇದ್ದರೂ ಪೂಜೆಯನ್ನು ಮಾಡದೆ ಹಾಗೆ ಇರುವುದು ಕೂಡ ದೋಷಕ್ಕೆ ಕಾರಣವಾಗುತ್ತದೆ. ಪ್ರತಿದಿನ ಪೂಜೆ ಮಾಡುವ ಸಾಮಗ್ರಿಗಳು ಮೊಂಡಾಗಿದ್ದರೆ ಮುಕ್ಕಾಗಿದ್ದರೆ ಒಡೆದು ಹೋಗಿದ್ದರೆ ಸವೆದಿದ್ದರೆ ಬಳಸಬಾರದು ಅದು ಮನೆಗೆ ಶ್ರೇಯಸ್ಸಲ್ಲ. ಹಾಲು ಹಾಗೂ ನೀರನ್ನು ಒಂದೆ ಬಾರಿ ಒಟ್ಟಿಗೆ ತರುವುದು ಕೂಡ ಒಳ್ಳೆಯದಲ್ಲ.

ಪೂಜೆ ಮಾಡುವಾಗ ದೇವರಿಗೆ ಮಂಗಳಾರತಿ ಮಾಡುವಾಗ ಆರತಿ ತಟ್ಟೆಯಲ್ಲಿ ಹೂವನ್ನು ಇಡದೆ ಹಾಗೆ ಮಂಗಳಾರತಿ ಮಾಡಿದರೆ ಮನೆಗೆ ಒಳ್ಳೆಯದಾಗುವುದಿಲ್ಲ. ಪ್ರತಿದಿನ ಹಾಲು ಕಾಯಿಸುವ ಪಾತ್ರೆ ಸ್ವಚ್ಛವಾಗಿಲ್ಲದಿದ್ದರೆ ಆರೋಗ್ಯ ದೃಷ್ಟಿಯಿಂದಲೂ ಒಳ್ಳೆಯದಲ್ಲ ಹಾಗೂ ಮನೆಗೆ ಶ್ರೇಯಸ್ಸಲ್ಲ. ಮನೆಯ ಬಾಗಿಲಿಗೆ ಯಾರಾದರೂ ಹೂವನ್ನು ಮಾರುತ್ತಾ ಬಂದು ಕೇಳಿದರೆ ಹೂವು ಬೇಡ ಎನ್ನುವ ಬದಲು ನಾಳೆ ಕೊಳ್ಳುವೆ ಎಂದು ಹೇಳಿ ಕಳುಹಿಸಬೇಕು. ಮನೆಯ ಕಸ ಗುಡಿಸುವಾಗ ಮೊಂಡು ಪೊರಕೆಯನ್ನು ಬಳಸಲೆಬಾರದು. ವರ್ಷಕ್ಕೊಮ್ಮೆಯಾದರೂ ಎಷ್ಟು ಸಾಧ್ಯವೊ ಅಷ್ಟೆ ಪ್ರಮಾಣದಲ್ಲಿ ಊಟ ಅಥವಾ ಬಟ್ಟೆಯನ್ನು ದಾನ ಮಾಡಬೇಕು ಇದರಿಂದ ದುಡಿದ ಹಣ ಉಳಿಯುತ್ತದೆ.

ಮನೆಯ ದೇವರ ಮನೆಯಲ್ಲಿ ಅಥವಾ ದೇವರ ಫೋಟೋದ ಪಕ್ಕದಲ್ಲಿ ಪೂರ್ವಜರ ಫೋಟೊ ಅಥವಾ ಸತ್ತವರ ಫೋಟೋವನ್ನು ಹಾಕಬಾರದು ಇದರಿಂದ ಎಷ್ಟೆ ದುಡಿದರು ಹಣ ನಿಲ್ಲುವುದಿಲ್ಲ. ಮನೆಯಲ್ಲಿ ಕೆಲಸ ಮುಗಿದ ತಕ್ಷಣ ರೊಟ್ಟಿಯ ಹಂಚನ್ನು ಹಾಗೂ ಹಾಲು ಕಾಯಿಸುವ ಪಾತ್ರೆಯನ್ನು ಬೋರಲು ಹಾಕಬಾರದು ಇದರಿಂದ ಸಂಪತ್ತು ಬೇಗ ಕರಗಿ ಹೋಗುತ್ತದೆ. ಹೆಣ್ಣು ಮಕ್ಕಳನ್ನು ಕೀಳಾಗಿ ನೋಡುವ ಮನೆಯಲ್ಲಿ ಎಂದಿಗೂ ಅಭಿವೃದ್ಧಿ ಆಗುವುದಿಲ್ಲ.

ಹಾಸಿಗೆಯನ್ನು ಪೊರಕೆಯಿಂದ ಎಂದಿಗೂ ಸ್ವಚ್ಛ ಮಾಡಬಾರದು. ದೇವರಿಗೆ ನೈವೇದ್ಯ ಇಡಬೇಕಾದರೆ ತುದಿ ಮುರಿಯದ ಹಣ್ಣುಗಳನ್ನು ನೈವೇದ್ಯಕ್ಕೆ ಇಡಬಾರದು, ದೇವರಿಗೆ ನೈವೇದ್ಯವನ್ನು ಪ್ಲಾಸ್ಟಿಕ್ ಅಥವಾ ಪೇಪರ್ ನಲ್ಲಿ ಇಡಲೇಬಾರದು ಪಾತ್ರೆಯಲ್ಲಿ ಇಡಬೇಕು ಇದರಿಂದ ದುಡಿದ ಹಣ ಉಳಿತಾಯವಾಗುತ್ತದೆ. ಅಂತ್ಯಕ್ರಿಯೆ ಮೆರವಣಿಗೆಯ ಮುಂದೆ ನಡೆದುಕೊಂಡು ಹೋಗಬಾರದು. ದೇವರ ಪೂಜೆ ಮಾಡುವಾಗ ಚಾಪೆ, ಮಣೆ ಹಾಕಿಕೊಳ್ಳದೆ ಹಾಗೆ ನೆಲದ ಮೇಲೆ ಕುಳಿತುಕೊಂಡು ಪೂಜೆ ಮಾಡಬಾರದು. ದೇವಸ್ಥಾನಗಳಿಗೆ ಹೋಗುವಾಗಲೆ ಕಾಲನ್ನು ತೊಳೆದುಕೊಳ್ಳಬೇಕು ದೇವಸ್ಥಾನದಿಂದ ಬಂದ ತಕ್ಷಣ ಮನೆಯಲ್ಲಿ ಕಾಲುಗಳನ್ನು ತೊಳೆದು ಕೊಳ್ಳಬಾರದು ಒಂದು ವೇಳೆ ತೊಳೆದುಕೊಂಡರೆ ಗಳಿಸಿದ ಪುಣ್ಯ ಹೊರಟುಹೋಯಿತು ಎಂದು ಹೇಳುತ್ತಾರೆ.

ಹಸಿದಿರುವವರಿಗೆ ಊಟ ಕೊಡದೆ ಹಾಗೆಯೆ ಕಳುಹಿಸುವುದು ಒಳ್ಳೆಯದಲ್ಲ. ಮುರಿದ ಬಾಚಣಿಕೆಯಿಂದ ತಲೆಯನ್ನು ಬಾಚಿಕೊಳ್ಳಬಾರದು ಒಂದು ವೇಳೆ ಬಾಚಿಕೊಂಡರೆ ರಾಹುವಿನ ತತ್ವವಾಗಿದ್ದು ಬಡತನ ಬರುತ್ತದೆ. ದಿನನಿತ್ಯ ಬಳಸುವ ಪರ್ಸ್ ನಲ್ಲಿ ನೋಟ್ ಹಾಗೂ ನಾಣ್ಯವನ್ನು ಒಟ್ಟಿಗೆ ಇಡಬಾರದು ಇದು ಅನವಶ್ಯಕ ಖರ್ಚಿಗೆ ಕಾರಣವಾಗುತ್ತದೆ. ದೇವಸ್ಥಾನಕ್ಕೆ ಹೋದಾಗ ದಾನ ಮಾಡದೆ ಅಲ್ಲಿ ಊಟ ಮಾಡಿ ಬರುವುದು ಒಳ್ಳೆಯದಲ್ಲ. ವಯಸ್ಸಾದ ವ್ಯಕ್ತಿ ಅಥವಾ ಚಿಕ್ಕ ಮಗುವಿನಿಂದ ವಸ್ತುಗಳನ್ನು ಖರೀದಿಸುವಾಗ ಅತಿಯಾಗಿ ಬೆಲೆ ಕಡಿಮೆ ಮಾಡಬಾರದು.

ಮನೆಯ ಬಾಗಿಲಿನ ಮೇಲೆ ಚಿಕ್ಕ ಚಿಕ್ಕ ಫೋಟೋಗಳನ್ನು ಹಾಗೂ ಸ್ಟಿಕರ್ಸ್ ಗಳನ್ನು ಅಂಟಿಸಬಾರದು. ಮನೆಯ ಒಳಗೆ ರಾತ್ರಿಯೆಲ್ಲ ಕಸವನ್ನು ಒಗೆಯದೆ ಹಾಗೆ ಇಡುವುದು ಅಥವಾ ಪಾತ್ರೆಯನ್ನು ತೊಳೆಯದೆ ಮುಸರೆಯನ್ನು ಹಾಗೆ ಇಡುವುದು ಮನೆಯ ಅಭಿವೃದ್ಧಿಗೆ ಒಳ್ಳೆಯದಲ್ಲ. ಪ್ರತಿದಿನ ತೆಗೆದುಕೊಂಡು ಹೋಗುವ ಆಫೀಸ್ ಬಾಕ್ಸ್ ಅಥವಾ ಪರ್ಸ್ ಅನ್ನು ಇಡಲು ಮನೆಯಲ್ಲಿ ನಿಗದಿತ ಜಾಗವನ್ನು ಮಾಡಿಕೊಳ್ಳದೆ ಇರುವುದರಿಂದ ಮನೆಯಲ್ಲಿ ಕಲಹವಾಗುತ್ತದೆ ಹಾಗೂ ಹಣದ ಉಳಿತಾಯ ಸಾಧ್ಯವಿರುವುದಿಲ್ಲ. ಮುಸ್ಸಂಜೆ ಹೊತ್ತಿನಲ್ಲಿ ಮನೆಯಲ್ಲಿ ಮಲಗುವುದು ಹಾಗೂ ಹಲ್ಲನ್ನು ಕಡಿಯುವುದು ಮಾಡಿದರೆ ದರಿದ್ರ ಆವರಿಸುತ್ತದೆ. ನಮ್ಮ ಹಿಂದೂ ಸಂಪ್ರದಾಯದಲ್ಲಿ ಅತಿಥಿ ದೇವೋಭವ ಎನ್ನುತ್ತಾರೆ ಕಿರಿಕಿರಿ ಕೊಡುವುದು ಅವರ ಮನಸ್ಸನ್ನು ನೋಯಿಸಿದರೆ ಮನೆಗೆ ಒಳ್ಳೆಯದಾಗುವುದಿಲ್ಲ. ಯಾರಾದರೂ ಊಟ ಮಾಡುತ್ತಿದ್ದಾಗ ಅವರ ಊಟದ ತಟ್ಟೆಯನ್ನು ದಾಟಿ ಹೋಗುವುದು ಒಳ್ಳೆಯದಲ್ಲ.

ಮನೆಯಲ್ಲಿ ಹೊಸ್ತಿಲ ಒಳಗೆ ಒಂದು ಕಾಲು ಹೊರಗೆ ಒಂದು ಕಾಲು ಇಟ್ಟು ನಿಂತುಕೊಂಡು ಏನನ್ನಾದರೂ ಕೊಡುವುದು ತೆಗೆದುಕೊಳ್ಳುವುದನ್ನು ಮಾಡಬಾರದು. ಮನೆ ಸದಸ್ಯರಲ್ಲಿ ಬೇಧ ಭಾವ ಮಾಡಬಾರದು ಒಬ್ಬರನ್ನು ಕಂಡರೆ ಅಸೂಯೆ ಪಟ್ಟುಕೊಳ್ಳುವುದು ಇನ್ನೊಬ್ಬರನ್ನು ಕಂಡರೆ ಅತಿಯಾಗಿ ಹೊಗಳುವುದು ಮಾಡಬಾರದು ಇದರಿಂದ ಮನೆ ನೆಮ್ಮದಿ ಹಾಳಾಗುತ್ತದೆ ಹಾಗೂ ಮನೆಗೆ ಒಳ್ಳೆಯದಾಗುವುದಿಲ್ಲ. ಊಟ ಮಾಡುವಾಗ ಊಟದ ತುತ್ತನ್ನು ತೂಕ ಹಾಕುವುದು ಅಥವಾ ಉಂಡೆ ಕಟ್ಟಿ ತಿನ್ನುವುದು ಮಾಡಬಾರದು ಇದರಿಂದ ದುಡಿದ ಹಣ ಖರ್ಚಾಗುತ್ತದೆ. ಯಾವುದೋ ಕಾರಣಕ್ಕೆ ಮನೆಯಲ್ಲಿ ಇದ್ದುಕೊಂಡು ಬೇರೆಯವರಿಗೆ ಶಾಪ ಹಾಕುವುದರಿಂದ ಈ ಮನೆಗೆ ಶಾಪವಾಗುತ್ತದೆ. ಸೋಂಬೇರಿಯಾಗಿದ್ದರೆ ಪ್ರತಿಯೊಂದು ಕೆಲಸವನ್ನು ಇಂದು ಮಾಡುವ ಬದಲು ನಾಳೆಗೆ ಮುಂದೂಡುವುದು ಒಳ್ಳೆಯದಲ್ಲ.

ಮಲಗುವ ಹಾಸಿಗೆ ವಾಸನೆ ಬರುತ್ತಿದ್ದರೆ ಮನೆಗೆ ಒಳ್ಳೆಯದಾಗುವುದಿಲ್ಲ ಅದನ್ನು ಸ್ವಚ್ಛಗೊಳಿಸುತ್ತಿರಬೇಕು. ಮನೆಯಲ್ಲಿರುವ ಕಾಲು ವರೆಸುವ ಮ್ಯಾಟ್ ಗಳು ಕೊಳಕಾಗಿದ್ದರೆ ಅದನ್ನೆ ಬಳಸಬಾರದು ಶುಚಿಗೊಳಿಸಿ ಬಳಸಬೇಕು. ದೇವರಿಗೆ ಪೂಜೆ ಮಾಡಿದಾಗ ಹಾಕಿದ ಹೂವುಗಳನ್ನು ಮರುದಿನವೆ ತೆಗೆದುಬಿಡಬೇಕು ಒಣಗಿದ ಹೂವನ್ನು ದೇವರ ಮನೆಯಲ್ಲಿ ಹಾಗೆಯೆ ಇಡುವುದರಿಂದ ದುಡಿದ ಹಣ ಉಳಿತಾಯವಾಗುವುದಿಲ್ಲ. ಎಂದಿಗೂ ಮನೆಯಲ್ಲಿ ಮಕ್ಕಳು ಬಳಸಿದ ಬಟ್ಟೆಗಳನ್ನು ಮಸಿ ಬಟ್ಟೆಯನ್ನಾಗಿ ಬಳಸಬಾರದು. ಈ ಎಲ್ಲ ಕ್ರಮಗಳನ್ನು ಮನೆಯಲ್ಲಿ ಅನುಸರಿಸಬೇಕು ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ಹಾಗೂ ನೀವು ಅನುಸರಿಸಿ

ನಿಮ್ಮ ಭವ್ಯ ಭವಿಷ್ಯದ ದಾರಿದೀಪ
ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ 9606655519
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ Astrologically accurate prediction & Solutions to your all personal problems will given by VIDVAN SHREE SHREE RAGHUNANDHAN GURUJIfrom the way of Asta Mangala Prashna, Horoskope, Palmistry,Face Reading: 9606655519

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: