ನಾವೆಲ್ಲರೂ ಬೆಳಗ್ಗೆ ಸ್ನಾನ ಮಾಡಿದ ತಕ್ಷಣ ಮೊದಲು ಮಾಡುವ ಕೆಲಸ ಸುಂದರವಾಗಿ ಕಾಣಿಸುವ ಬಟ್ಟೆಯನ್ನು ಆಯ್ಕೆ ಮಾಡಿಕೊಂಡು ಧರಿಸುವುದು ನಾವು ಹಾಕಿಕೊಳ್ಳುವ ಬಟ್ಟೆ ಆಭರಣ ಇನ್ನಿತರ ಬಳಸುವ ವಸ್ತುಗಳಿಗೆ, ನಮ್ಮ ರಾಶಿಗೆ ಸಂಬಂಧ ಇದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸುಂದರವಾಗಿ ಕಾಣುವ ಬಟ್ಟೆಯನ್ನು ಧರಿಸುವುದಕ್ಕಿಂತ ನಮ್ಮತನವನ್ನು ಪ್ರಜ್ವಲಿಸುವ ಬಟ್ಟೆ ಧರಿಸುವುದು ಮುಖ್ಯವಾಗುತ್ತದೆ. ಹಾಗಾದರೆ ಯಾವ ರಾಶಿಯಲ್ಲಿ ಜನಿಸಿದವರಿಗೆ ಯಾವ ಬಟ್ಟೆಯನ್ನು ಧರಿಸಬೇಕು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ಎಲ್ಲ ರಾಶಿಗಳು ವಾಯು ಅಗ್ನಿ ನೆಲ ಜಲ ಹಾಗೂ ಆಕಾಶ ಈ ತತ್ವಗಳನ್ನು ಆಧರಿಸಿವೆ ಈ ಎಲ್ಲಾ ತತ್ವಗಳು ನಕಾರಾತ್ಮಕ ಹಾಗೂ ಸಕಾರಾತ್ಮಕ ಶಕ್ತಿಯನ್ನು ಹೊರಸೂಸುತ್ತದೆ. ಬಹುತೇಕರು ತಮ್ಮ ರಾಶಿಗೆ ಅನುಗುಣವಾಗಿ ಬಟ್ಟೆಯನ್ನು ಆರಿಸುವುದಿಲ್ಲ ಆದರೆ ಕೆಲವೊಮ್ಮೆ ಇದೆ ಎಡವಟ್ಟಾಗುತ್ತದೆ. ಮೇಷ ರಾಶಿಯಲ್ಲಿ ಜನಿಸಿದವರಿಗೆ ಅಧಿಪತಿ ಮಂಗಳನಾಗಿರುವುದರಿಂದ ಅವರಿಗೆ ಸಿಂಥೆಟಿಕ್ ಬಟ್ಟೆ ಮಾತ್ರ ಸರಿ ಹೊಂದುತ್ತದೆ, ಇವರಿಗೆ ಲೆದರ್ ಬೆಳ್ಳಿ ಕಬ್ಬಿಣದ ವಸ್ತುಗಳು ಸರಿ ಹೊಂದುವುದಿಲ್ಲ.

ನೀಲಿ ಕೆಂಪು ಕೇಸರಿ ಬಣ್ಣದ ಬಟ್ಟೆಗಳು ಮೇಷ ರಾಶಿಯವರಿಗೆ ಉತ್ತಮ. ವೃಷಭ ರಾಶಿಯಲ್ಲಿ ಜನಿಸಿದವರಿಗೆ ಹಸಿರು ಬಿಳಿ ಕಂದು ಮತ್ತು ದಟ್ಟ ಬಣ್ಣದ ಸಿಲ್ಕ್ ಬಟ್ಟೆಗಳು ಸರಿ ಹೊಂದುತ್ತದೆ ಡಿಸೈನ್ ರಹಿತ ಹಾಗೂ ಬಹು ಬಣ್ಣದ ಲೇಯರ್ ಇದ್ದರೆ ಇನ್ನು ಉತ್ತಮ. ಮಿಥುನ ರಾಶಿಯವರಿಗೆ ಪರಿಶುದ್ಧ ಕಾಟನ್ ಹಾಗೂ ಲೆನಿನ್ ಬಟ್ಟೆಗಳು ಸರಿಹೊಂದುತ್ತದೆ, ಹಸಿರು ಬಿಳಿ ಬಟ್ಟೆಗಳು ಇವರಿಗೆ ಅತ್ಯುತ್ತಮ, ಮಿಥುನ ರಾಶಿಯವರು ಪ್ಲ್ಯಾಟಿನಮ್ ಚಿನ್ನ ಬೆಳ್ಳಿ ಆಭರಣಗಳನ್ನು ಧರಿಸಬಹುದು.

ಕರ್ಕಾಟಕ ರಾಶಿಯಲ್ಲಿ ಜನಿಸಿದವರಿಗೆ ಸಿಲ್ಕ್ ಕಾಟನ್ ಹಾಗೂ ಲೆನಿನ್ ಬಟ್ಟೆಗಳು ಸರಿ ಹೊಂದುತ್ತದೆ, ಇವರು ಬಿಳಿ ಹಾಗೂ ಸರಳ ಡಿಸೈನ್ ಹೊಂದಿರುವ ಬಟ್ಟೆಗಳನ್ನು ಧರಿಸುವುದು ಉತ್ತಮ. ಸಿಂಹ ರಾಶಿಯಲ್ಲಿ ಜನಿಸಿದವರಿಗೆ ಕೆಂಪು ಹಳದಿ ಕೇಸರಿ ಬಣ್ಣದ ಕಾಟನ್ ಬಟ್ಟೆಗಳು ಸರಿಹೊಂದುತ್ತದೆ. ಸಿಂಹ ರಾಶಿಗೆ ಲೆದರ್, ಬೆಳ್ಳಿ, ಕಬ್ಬಿಣ ವಸ್ತುಗಳನ್ನು ಬಳಸುವುದು ಸರಿಹೊಂದುವುದಿಲ್ಲ ಕಾರಣ ಸಿಂಹ ರಾಶಿಯ ಮೃಗೀಯ ಗುಣಕ್ಕು ಚರ್ಮಕ್ಕೂ ಸರಿಹೊಂದುವುದಿಲ್ಲ.

ಕನ್ಯಾ ರಾಶಿಯಲ್ಲಿ ಜನಿಸಿದವರಿಗೆ ಕಾಟನ್ ಹಾಗೂ ಲೆನಿನ್ ಬಟ್ಟೆಗಳು ಒಳ್ಳೆಯದು ಅಗಲವಾದ ಅಥವಾ ಶೇಡ್ ಇರುವ ಬಟ್ಟೆ ಇವರಿಗೆ ಒಳ್ಳೆಯದಲ್ಲ, ಪ್ಲಾಟಿನಮ್ ಚಿನ್ನ ಬೆಳ್ಳಿ ಕನ್ಯಾ ರಾಶಿಯವರಿಗೆ ಒಪ್ಪುತ್ತದೆ. ತುಲಾ ರಾಶಿಯವರಿಗೆ ಸಿಂಥೆಟಿಕ್ ಸಿಲ್ಕ್ ಬಟ್ಟೆ ಒಳ್ಳೆಯದು ಇವರಿಗೆ ಕೆಂಪು ಕೇಸರಿ ಬಣ್ಣದ ಬಟ್ಟೆ ಹೊಂದಿಕೆಯಾಗುವುದಿಲ್ಲ ಇವರಿಗೆ ಬೆಳ್ಳಿ ಹಾಗೂ ಪ್ಲಾಟಿನಮ್ ಒಳ್ಳೆಯದಲ್ಲ.

ವೃಶ್ಚಿಕ ರಾಶಿಯಲ್ಲಿ ಜನಿಸಿದವರಿಗೆ ಕಾಟನ್ ಜೊತೆ ಲೇಸ್ ಗಳುಳ್ಳ ಬಟ್ಟೆ ಒಳ್ಳೆಯದು. ಕೆಂಪು ಹಳದಿ ಹಾಗೂ ಕೇಸರಿ ಬಣ್ಣದ ಬಟ್ಟೆಗಳು ಉತ್ತಮ ಬೆಳ್ಳಿ ಹಾಗೂ ಪ್ಲಾಟಿನಮ್ ಆಭರಣಗಳಿಂದ ದೂರ ಇರುವುದು ಒಳ್ಳೆಯದು. ಧನು ರಾಶಿಯವರಿಗೆ ಹಳದಿ ತೆಳು ಕೇಸರಿ ಕಿತ್ತಳೆ ಬಣ್ಣದ ಬಟ್ಟೆಗಳು ಹೊಂದುತ್ತದೆ, ಚಿನ್ನದ ಆಭರಣಗಳು ಇವರಿಗೆ ಹೊಂದುತ್ತದೆ.

ಮಕರ ರಾಶಿಯವರಿಗೆ ಕಾಟನ್ ಹಾಗೂ ಸಿಲ್ಕ್ ಬಟ್ಟೆ ಉತ್ತಮ, ಇವರಿಗೆ ಕಪ್ಪು ನೀಲಿ ಕಂದು ಬಣ್ಣದ ಬಟ್ಟೆಗಳು ಸರಿ ಹೊಂದುತ್ತದೆ, ಇವರು ತಾಮ್ರ ಹಾಗೂ ಚಿನ್ನದ ಬಳಕೆಯಿಂದ ದೂರ ಇರಬೇಕು. ಕುಂಭ ರಾಶಿಯಲ್ಲಿ ಜನಿಸಿದವರಿಗೆ ದಟ್ಟ ಬಣ್ಣದ ಬಟ್ಟೆಗಳು ಸರಿಹೊಂದುತ್ತದೆ. ಮೀನ ರಾಶಿಯವರು ಹಳದಿ ಕಿತ್ತಳೆ ಕೇಸರಿ ಬಣ್ಣದ ಬಟ್ಟೆಯನ್ನು ಧರಿಸಿದರೆ ಒಳ್ಳೆಯದು, ಮೀನ ರಾಶಿಯವರಿಗೆ ಸಾಮಾನ್ಯವಾಗಿ ಎಲ್ಲ ಮಾದರಿಯ ಬಟ್ಟೆಗಳು ಹೊಂದುತ್ತದೆ.

ವಾರದ ಪ್ರತಿದಿನವೂ ವಿಭಿನ್ನ ಕಾರ್ಯಗಳಿಗೆ ಆದ್ಯತೆ ಕೊಡಲಾಗುತ್ತದೆ. ಹೊಸ ಬಟ್ಟೆಯನ್ನು ಧರಿಸಲು ಶುಕ್ರವಾರ ಅತ್ಯುತ್ತಮ ದಿನವಾಗಿದೆ. ಸೋಮವಾರ ಚಂದ್ರನ ದಿನ ಹೀಗಾಗಿ ಇದು ಸೌಮ್ಯ ದಿನವಾಗಿದೆ ಈ ದಿನ ಹೊಸ ಬಟ್ಟೆಯನ್ನು ಧರಿಸುವುದರಿಂದ ಸಹಜತೆ ಸಕಾರಾತ್ಮಕ ಪ್ರಜ್ಞೆ ಹೆಚ್ಚಾಗುತ್ತದೆ, ಆಲೋಚನೆಗಳಲ್ಲಿ ನಮ್ರತೆ ಹಾಗೂ ಸಾಮರಸ್ಯ ಇರುತ್ತದೆ. ಮಂಗಳವಾರ ಹೊಸ ಬಟ್ಟೆ ಧರಿಸಲು ಯೋಗ್ಯವಲ್ಲ ಈ ದಿನ ಹೊಸ ಬಟ್ಟೆ ಧರಿಸಿದರೆ ಕೋಪ ಹಾಗೂ ವಿವಾದದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ವಿದ್ಯುತ್ ಉಪಕರಣಗಳ ಖರೀದಿ ಹಾಗೂ ಬಳಕೆಗೆ ಮಂಗಳವಾರ ಉತ್ತಮವಾಗಿದೆ, ಯುದ್ಧ ಹಾಗೂ ಕಾರ್ಖಾನೆಗಳಲ್ಲಿ ಧರಿಸಲಾಗುವ ಹೊಸ ಭದ್ರತಾ ಸಾಧನಗಳನ್ನು ಧರಿಸಲು ಮಾತ್ರ ಈ ದಿನ ಶುಭವಾಗಿದೆ.

ಬುಧವಾರ ಹಾಗೂ ಗುರುವಾರ ಹೊಸ ಬಟ್ಟೆ ಧರಿಸುವುದು ಒಳ್ಳೆಯದು ಸಂಸ್ಥೆಯ ಸಮವಸ್ತ್ರ ಹಾಗೂ ಶಾಲಾ ಸಮವಸ್ತ್ರಗಳನ್ನು ಈ ದಿನದಂದು ಧರಿಸುವುದು ಒಳ್ಳೆಯದು. ಶನಿವಾರ ಮತ್ತು ಭಾನುವಾರ ಹೊಸ ಬಟ್ಟೆಯನ್ನು ಧರಿಸಬಾರದು ಈ ದಿನದಲ್ಲಿ ಹೊಸ ಬಟ್ಟೆಯನ್ನು ಧರಿಸಿದರೆ ರೋಗಾದಿಗಳನ್ನು ಉತ್ತೇಜಿಸುತ್ತದೆ, ಉದ್ಯೋಗದ ಮೇಲೆಯೂ ಅನಾನುಕೂಲ ಪರಿಣಾಮವನ್ನು ಬೀರುತ್ತದೆ. ಮಂಗಳವಾರ ಶನಿವಾರ ಹಾಗೂ ರವಿವಾರದಂದು ಹೊಸ ಬಟ್ಟೆಯನ್ನು ಧರಿಸುವ ಅನಿವಾರ್ಯತೆ ಇದ್ದಲ್ಲಿ ಬುಧವಾರ ಗುರುವಾರ ಅಥವಾ ಶುಕ್ರವಾರದಂದು ಅಲ್ಪಾವಧಿಗೆ ಆ ಬಟ್ಟೆಯನ್ನು ಧರಿಸಿ ಹಾಗೆಯೆ ಇಟ್ಟರೆ ದೋಷವನ್ನು ಪರಿಹರಿಸುತ್ತದೆ.

ಕೆಲವೊಮ್ಮೆ ಗಡಿಬಿಡಿಯಲ್ಲಿ ಬಟ್ಟೆಯನ್ನು ಉಲ್ಟಾ ಧರಿಸುತ್ತೇವೆ ನಂತರ ಕನ್ನಡಿಯಲ್ಲಿ ನೋಡಿಕೊಂಡಾಗ ಅಥವಾ ಯಾರಾದರೂ ಹೇಳಿದ ಮೇಲೆ ಬಟ್ಟೆಯನ್ನು ಸೀದಾ ಹಾಕಿಕೊಳ್ಳುತ್ತೇವೆ ಅಚಾನಕ್ಕಾಗಿ ಬಟ್ಟೆಯನ್ನು ಉಲ್ಟಾ ಧರಿಸಿದರೆ ಮಾಡುತ್ತಿರುವ ಕಾರ್ಯ ಯಶಸ್ವಿಯಾಗುತ್ತದೆ ಎಂದು ಅರ್ಥ ಯಾವುದೋ ಒಂದು ಶುಭ ಸುದ್ದಿ ನಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದು ಅರ್ಥ ಕೊಡುತ್ತದೆ. ಮಕ್ಕಳು ಅಚಾನಕ್ಕಾಗಿ ಉಲ್ಟಾ ಬಟ್ಟೆ ಹಾಕಿಕೊಳ್ಳುತ್ತಾರೆ ಕೆಲವೊಮ್ಮೆ ಗೊತ್ತಾದ ಮೇಲೂ ಉಲ್ಟಾ ಬಟ್ಟೆಯನ್ನು ಧರಿಸಿಕೊಂಡು ಇರುತ್ತಾರೆ ಹೀಗಿದ್ದಾಗ ಅವರಿಗೆ ಒತ್ತಾಯ ಮಾಡಬಾರದು ಏಕೆಂದರೆ ಯಾವುದೋ ಒಂದು ಸೌಭಾಗ್ಯವನ್ನು ಹೊತ್ತು ತರುತ್ತಾರೆ ಎಂದು ಅರ್ಥ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ನಿಮ್ಮ ಭವ್ಯ ಭವಿಷ್ಯದ ದಾರಿದೀಪ
ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ 9606655519
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ Astrologically accurate prediction & Solutions to your all personal problems will given by VIDVAN SHREE SHREE RAGHUNANDHAN GURUJIfrom the way of Asta Mangala Prashna, Horoskope, Palmistry,Face Reading: 9606655519

By admin

Leave a Reply

Your email address will not be published. Required fields are marked *

error: Content is protected !!
Footer code: