WhatsApp Group Join Now
Telegram Group Join Now

ಗ್ರಹಗಳು ರಾಶಿಯ ಮೇಲೆ ಬೇರೆ ರೀತಿಯ ಪ್ರಭಾವ ಬೀರುತ್ತದೆ. ಅದೇ, ರೀತಿಯ ಗ್ರಹಗಳ ಸಂಚಾರ ಮನುಷ್ಯನಿಗೆ ಶುಭ ಫಲಗಳನ್ನು ಕೂಡ ಕೊಡುತ್ತದೆ. ನಾವು ಈ ಲೇಖನದಲ್ಲಿ ಬಹಳ ಬೇಗ ಶ್ರೀಮಂತರಾಗುವ ರಾಶಿಗಳ ಬಗ್ಗೆ ತಿಳಿಯೋಣ

ವೈದಿಕ ಜ್ಯೋತಿಷ್ಯದ ಪ್ರಕಾರ 4 ರಾಶಿಯ ಜನರು ಹೆಚ್ಚಿನ ಹಣ ಗಳಿಕೆ ಮಾಡುವರು. ವೈದಿಕ ಜ್ಯೋತಿಷ್ಯ ಶಾಸ್ತ್ರ ಜೀವನದ ಬಗ್ಗೆ ಇರುವ ಪ್ರತಿ ಒಂದು ವಿವರಗಳನ್ನು ಯಥಾವತ್ತಾಗಿ ತಿಳಿಸುವ ಕೆಲಸ ಮಾಡುತ್ತದೆ. ಮಾನವನ ಗುಣ ನಡತೆ, ಅವರು ಬದುಕಿನಲ್ಲಿ ಯಾವ ರೀತಿಯ ಫಲ ಪಡೆಯಬಹುದು ಎಂದು ನೋಡೋಣ.
ಮನುಷ್ಯ ಹುಟ್ಟಿದ ಸಮಯ ಮತ್ತು ದಿನ ನೋಡಿ ರಾಶಿ ನಕ್ಷತ್ರ ಹೇಳಲಾಗುತ್ತದೆ. ಯಾವವು ಆ ಅದೃಷ್ಟವಂತ ರಾಶಿಗಳು ನೋಡೋಣ ಬನ್ನಿ :

ವೃಷಭ ರಾಶಿ :-ಕೆಲಸ ಎಂದು ಬಂದರೆ ಈ ರಾಶಿಯ ಜನರನ್ನು ಮೀರಿಸಲು ಬೇರೆಯವರಿಂದ ಸಾಧ್ಯವಿಲ್ಲ. ಅವರು ಮಾಡುವ ಕೆಲಸದಲ್ಲಿ ಪರಿಶ್ರಮ ಹಾಗೂ ದೃಢತೆ ಇರುತ್ತದೆ. ಕಾರ್ಯಕ್ಷಮತೆ ಬಗ್ಗೆ ಬೇರೆಯವರು ವೃಷಭ ರಾಶಿಯವರ ಬಳಿ ಕಲಿತು ತಿಳಿದುಕೊಳ್ಳಬೇಕು ಎನ್ನುವ ಮಟ್ಟಕ್ಕೆ ವೃಷಭ ರಾಶಿಯವರು ಕೆಲಸದಲ್ಲಿ ಶ್ರದ್ಧೆ ತೋರಿಸುವರು. ವೃಷಭ ರಾಶಿಯ ಜನರು ಅವರ ಜೀವನದಲ್ಲಿ ಅವರು ನಿರ್ಧಾರ ಮಾಡಿಕೊಂಡಿರುವ ಗುರಿಗಳನ್ನು ತಲುಪಲು ಯಾವ ಹಂತಕ್ಕೆ ಬೇಕಾದರೂ ಹೋಗುವರು ಮತ್ತು ಅದನ್ನು ಪೂರೈಸಲು ಕಾರ್ಯಪ್ರವೃತ್ತರಾಗಿ ಇರುವರು. ಬದುಕಿನಲ್ಲಿ ಏನು ಮಾಡಬೇಕು ಎನ್ನುವ ಸ್ಪಷ್ಟ ಚಿತ್ರಿಕರಣ ವೃಷಭ ರಾಶಿಯ ಜನರಲ್ಲಿ ಇರುತ್ತದೆ.

ಈ ರಾಶಿಯವರನ್ನು ವಿಚಲಿತ ಮಾಡಲು ಬೇರೆಯವರು ಎಷ್ಟೇ ಪ್ರಯತ್ನ ಪಟ್ಟರು ಅದರಿಂದ, ಯಾವ ಪ್ರಯೋಜನವೂ ಲಭಿಸುವುದಿಲ್ಲ ಅಂತಹ ದೃಢ ಮನಸ್ಸು ಇವರಿಗೆ ಇರುತ್ತದೆ. ಆರ್ಥಿಕ ವಿಷಯದಲ್ಲಿ ಅಭಿವೃದ್ಧಿ ಹೊಂದಲು ಈ ರಾಶಿಯವರು ಹೆಚ್ಚು ಶ್ರಮವಹಿಸಿ ಕೆಲಸ ಮಾಡಿ ನಂತರ ಅದರ ಲಾಭವನ್ನು ಪಡೆದುಕೊಳ್ಳುವರು.
ಈ ರಾಶಿಯವರು ಸಂಪಾದನೆ ಮಾಡಿ ಮಾಡುವ ಕೆಲಸದಲ್ಲಿ ಕೂಡ ಗೆಲುವನ್ನು ಸಾಧಿಸುತ್ತಾರೆ. ಶ್ರೀಮಂತಿಕೆ ಮತ್ತು ಜಯ ಸಾಧಿಸಲು ವೃಷಭ ರಾಶಿಯವರು ಯಾವುದೇ ಕಾರಣಕ್ಕೂ ಹಿಂಜರಿಯುವುದಿಲ್ಲ. ಹಣ ಗಳಿಕೆ ಮಾಡಲು ವೃಷಭ ರಾಶಿಯವರು ಇತರರಿಗಿಂತ ಹೆಚ್ಚು ಕಷ್ಟ ಪಡುವ ಅಗತ್ಯ ಇಲ್ಲ. ಹಣ ಅವರನ್ನು ಹುಡುಕಿಕೊಂಡು ಬರುತ್ತದೆ.

ಸಿಂಹ ರಾಶಿ :-ಸಿಂಹ ರಾಶಿಯವರು ಯಾವುದೇ ಕಾರ್ಯಕ್ಷೇತ್ರದಲ್ಲಿ ಕೆಲಸ ಮಾಡಿದರು ಸಹ ನಿಶ್ಚಿತ ಜಯವನ್ನು ಸಾಧನೆ ಮಾಡುವರು. ಈ ರಾಶಿ ಅವರು ಬಾಲ್ಯದಿಂದಲೇ ನಾಯಕತ್ವದ ಗುಣವನ್ನು ಹೊಂದಿರುವರು. ಯಾವುದೇ ಕೆಲಸ ಕಾರ್ಯ ಮಾಡಬೇಕಾದರೂ ಕನಿಷ್ಠ ಜ್ಞಾನ ಎನ್ನುವುದು ಅವರಿಗೆ ರಕ್ತದಿಂದಲೇ ಕರಗತವಾಗಿ ಬಂದಿರುತ್ತದೆ. ಇನ್ನು ಹಣದ ಮಟ್ಟದಲ್ಲಿ ಹೆಚ್ಚಿನ ಯಶಸ್ಸು ಕಾಣುವುದಕ್ಕೆ ಸಿಂಹ ರಾಶಿಯವರಿಗೆ ವಿವಿಧ ರೀತಿಯ ಅವಕಾಶಗಳ ಬಾಗಿಲುಗಳು ತೆರೆದಿರುತ್ತವೆ. ರಾಶಿಯವರು ಕೂಡ ಒದಗಿ ಬಂದ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗ ಮಾಡಿಕೊಳ್ಳುವರು.

ಸಿಂಹ ರಾಶಿಯವರಿಗೆ ಹೆಚ್ಚಿನ ಕ್ರಿಯಾತ್ಮಕ ಶಕ್ತಿ ಇರುವುದರಿಂದ ಅದನ್ನು, ಬಳಕೆ ಮಾಡಿ ಕೆಲಸಗಳನ್ನು ಪೂರ್ಣ ಮಾಡಿ ಲಾಭ ಗಳಿಕೆ ಮಾಡುವರು. ಈ ರಾಶಿಯವರು ಅವರ ಬದುಕಿನಲ್ಲಿ ದೊಡ್ಡ ಮಹತ್ವಾಕಾಂಕ್ಷೆ ಹೊಂದಿರುವ ಕಾರಣ ಅವರು ಯಾವುದನ್ನು ಸಣ್ಣ ಮಟ್ಟಕ್ಕೆ ಸೀಮಿತವಾಗಿ ಇಡುವುದಿಲ್ಲ ಬದಲಾಗಿ ದೊಡ್ಡ ಮಟ್ಟದ ಉದ್ಯಮವನ್ನು ಪ್ರಾರಂಭ ಮಾಡಿ ಅದರಿಂದ, ಲಾಭ ಗಳಿಕೆ ಮಾಡುವರು. ಸಿಂಹ ರಾಶಿಯವರ ರಾಶಿ ಚಕ್ರವೇ ಅವರಿಗೆ ಬೇಕಾಗಿರುವ ಸಂಪನ್ಮೂಲಗಳನ್ನು ಒದಗಿಸುವ ಎಲ್ಲಾ ಕೆಲಸವನ್ನು ಮಾಡುತ್ತದೆ.

ವೃಶ್ಚಿಕ ರಾಶಿ :-ವೃಶ್ಚಿಕ ರಾಶಿಯವರ ಗುಣ ಹೇಗಂದರೆ ಆಡಿದರೆ ಗೆಲ್ಲುವುದಕ್ಕೆ ಆಡಬೇಕು ಎನ್ನುವ ಗುಣ ಸ್ವಭಾವವನ್ನು ಹೊಂದಿರುವವರು ಇವರು. ಹಣ ಗಳಿಕೆ ಮಾಡುವ ವಿಚಾರದಲ್ಲಿ ಕೂಡ ಇವರು ಅದೇ ಮನೋಭಾವವನ್ನು ಹೊಂದಿರುತ್ತಾರೆ.  ಸಂಪತ್ತು ಗಳಿಕೆ ಮಾಡಲು ಯಾವ ರೀತಿ ಯೋಜನೆಗಳನ್ನು ರೂಪಿಸಬೇಕು ಎನ್ನುವ ಮಾಹಿತಿಯನ್ನು ವೃಶ್ಚಿಕ ರಾಶಿಯವರು ಸರಿಯಾಗಿ ಪ್ಲಾನ್ ಮಾಡಿರುತ್ತಾರೆ.

ಕೆಲಸ ಮಾಡುವ ಸಮಯದಲ್ಲಿ ಯಾವುದೇ ರೀತಿಯ ರಿಸ್ಕ್ ತೆಗೆದುಕೊಳ್ಳಲು ವೃಶ್ಚಿಕ ರಾಶಿಯವರು ಸಿದ್ಧವಾಗಿ ಇರುತ್ತಾರೆ. ಅದರಿಂದ, ಈ ರಾಶಿಯ ಜನರನ್ನು ಟಾಪ್ ಸ್ಥಾನದಲ್ಲಿ ಕೂರುವುದನ್ನು ಯಾರು ತಪ್ಪಿಸಲು ಸಾಧ್ಯವಿಲ್ಲ. ಶ್ರೀಮಂತಿಕೆ ಪಡೆಯಲು ಯಾವುದೇ ರೀತಿಯ ಕಷ್ಟ ಎದುರಾದರು ಅದನ್ನು, ಈ ರಾಶಿಯವರು ಎದುರಿಸುತ್ತಾರೆ.
ವೃಶ್ಚಿಕ ರಾಶಿಯವರು ಅವರು ನಿರ್ಧಾರ ಮಾಡಿರುವ ಕೆಲಸವನ್ನು ಯಶಸ್ವಿಯಾಗಿ ಪೂರ್ಣ ಮಾಡುವುದರ ಜೊತೆಗೆ ಎದುರಾಗುವ ಎಲ್ಲಾ ಅಡೆತಡೆಗಳನ್ನು ನಿವಾರಿಸಿಕೊಂಡು ಮುಂದೆ ಸಾಗುವರು. ಆದ್ದರಿಂದ, ಈ ರಾಶಿಯವರು ಶ್ರೀಮಂತರ ಸಾಲಿನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವರು.

ಮಕರ ರಾಶಿ :-ಮಕರ ರಾಶಿಯ ಜನರು ಇತರರಿಗಿಂತ ಸ್ವಲ್ಪ ವಿಭಿನ್ನವಾಗಿ ಇರುವ ರಾಶಿಯವರು. ಬದುಕಿನಲ್ಲಿ ಯಶಸ್ವಿ ಆಗಬೇಕು, ಶ್ರೀಮಂತರಾಗಬೇಕು ಅಥವಾ ಬೇರೆ ರೀತಿಯ ಯಾವುದೇ ಸಂಪತ್ತನ್ನು ತಮ್ಮದಾಗಿಸಿಕೊಳ್ಳಬೇಕು ಎನ್ನುವ ಮನೋಭಾವ ಇದ್ದು ಅವರು ಸೋತರು ಸಹ ಮತ್ತೆ ಮತ್ತೆ ಪ್ರಯತ್ನ ಮಾಡಿ ಅವರ ಗುರಿ ಸಾಧನೆ ಮಾಡುವರು. ಜಯಗಳಿಸುವ ಹಾದಿಯಲ್ಲಿ ಎಷ್ಟೇ ರೀತಿಯ ತೊಂದರೆಗಳು ಎದುರಾಗಿ ಅವರು ಸೋತರು ಸಹ ಛಲ ಬಿಡದೆ ಗೆಲ್ಲಲೇ ಬೇಕು ಎನ್ನುವ ಇರಾದೆ ಇರುತ್ತದೆ ಅವರಲ್ಲಿ. ಹೂಡಿಕೆ ಮಾಡುವ ಸಂದರ್ಭದಲ್ಲಿ ಕೂಡ ಬರುವ ಲಾಭವನ್ನು ನೋಡಿ ಹೂಡಿಕೆ ಮಾಡುವುದಿಲ್ಲ ಬದಲಾಗಿ ಅದರಿಂದ, ಭವಿಷ್ಯದಲ್ಲಿ ಯಾವ ರೀತಿ ಹಣವನ್ನು ಪಡೆದು ಶ್ರೀಮಂತರಾಗಬಹುದು ಎನ್ನುವ ಉದ್ದೇಶದಿಂದ ಹೂಡಿಕೆ ಮಾಡುವರು.

ಶ್ರಮಪಟ್ಟು ದುಡಿಮೆ ಮಾಡುವ ಅರ್ಥ ತಿಳಿದಿರುವ ಮಕರ ರಾಶಿಯ ಜನರು ಯಾವ ಕೆಲಸವನ್ನು ಯಾವ ರೀತಿಯಲ್ಲಿ ಮಾಡಬೇಕು ಎನ್ನುವ ಅರಿವು ಮಕರ ರಾಶಿಯ ಜನರಲ್ಲಿ ಹೆಚ್ಚಾಗಿ ಇರುತ್ತದೆ. ಇದರಿಂದ, ಅವರು ಸ್ಮಾರ್ಟ್ ವರ್ಕ್’ಗೆ ಹೆಚ್ಚು ಒತ್ತು ನೀಡುತ್ತಾರೆ. ಈ ಮೇಲ್ಕಂಡ ನಾಲ್ಕು ರಾಶಿಯ ಜನರು ಅವರ ಶ್ರದ್ಧೆ, ಬುದ್ದಿ ಮತ್ತು ಪರಿಶ್ರಮದಿಂದ ಶ್ರೀಮಂತಿಕೆಯನ್ನು ಗಳಿಕೆ ಮಾಡುವರು. ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: