Kannada actor prem in sri krushna mata: ಸ್ನೇಹಿತರೆ, ಪ್ರಾಣ ಎಂಬ ಸಿನಿಮಾದ ಮೂಲಕ ತಮ್ಮ ಸಿನಿ ಬದುಕಿನ ಪ್ರಯಾಣವನ್ನು ಪ್ರಾರಂಭ ಮಾಡಿದಂತಹ ಪ್ರೇಮ್ ಇಂದಿಗೂ ಕೂಡ ಯಶಸ್ವಿ ಸಿನಿಮಾಗಳನ್ನು ನೀಡುತ್ತಾ ಕನ್ನಡದ ಬಹು ಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದಾರೆ. ಕ್ಯೂಟ್ ಲವ್ ಸ್ಟೋರಿ ಇರುವ ಸಿನಿಮಾಗಳ ಮೂಲಕವೇ ಅದೆಷ್ಟೋ ಹೆಣ್ಣು ಮಕ್ಕಳ ಹೃದಯ ಗೆದ್ದಿರುವ ಪ್ರೇಮ್ ಅವರು ಸಿನಿ ಬದುಕಿಗೆ ಕಾಲಿಡುವ ಆರಂಭಿಕ ದಿನದಲ್ಲಿಯೇ ಜ್ಯೋತಿ ಅವರ ಪ್ರೀತಿಯ ಬಲೆಗೆ ಬಿದ್ದು ಮನೆಯವರ ವಿರೋಧವಾಗಿ ಅವರನ್ನು ಮದುವೆಯಾಗಿ ಇಂದು ಯಶಸ್ವಿ ಸಾಂಸಾರಿಕ ಜೀವನ ನಡೆಸುತ್ತಿದ್ದಾರೆ.
ಹೌದು ಗೆಳೆಯರೇ ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಪ್ರೇಮ್ ಮತ್ತು ಜ್ಯೋತಿ ಅವರದ್ದು, ಲವ್ ಮ್ಯಾರೇಜ್ ಆಗಷ್ಟೇ ನಟ ಪ್ರೇಮ್ ಸಿನಿಮಾರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಂತಹ ಕಾಲದಲ್ಲಿ ಪ್ರೇಮ್ ಅವರಿಗೆ ಪ್ರತಿದಿನ ಬಸ್ಸಿನಲ್ಲಿ ನೋಡುತ್ತಿದ್ದಂತಹ ಹುಡುಗಿ ಜ್ಯೋತಿ ಅವರ ಮೇಲೆ ಮನಸ್ಸು ಆಗುತ್ತದೆ. ಇವರಿಬ್ಬರ ಪ್ರೀತಿಯ ವಿಚಾರ ಮನೆಯವರಿಗೆ ಗೊತ್ತಾಗಿ ಜ್ಯೋತಿ ಅವರನ್ನು ಬೇರೆ ಹುಡುಗನೊಂದಿಗೆ ಮದುವೆ ಮಾಡಲು ಹೊರಟಾಗ
ಜ್ಯೋತಿ ಮನೆ ಬಿಟ್ಟು ಪ್ರೇಮ್ ಅವರೊಂದಿಗೆ ಬರುತ್ತಾರೆ. ಆಂಬುಲೆನ್ಸ್ನಲ್ಲಿ ಈ ಜೋಡಿಗಳು ಓಡಿಹೋಗಿ ಗಣಪತಿ ದೇವಸ್ಥಾನ ಒಂದರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅಂದಿನಿಂದ ಇಂದಿನವರೆಗೂ ತಮ್ಮ ಸಂಸಾರಕ ಜೀವನದಲ್ಲಿ ಸಣ್ಣಪುಟ್ಟ ಕಿರಿಕಿರಿ ಮನಸ್ತಾಪಗಳಿಗೂ ಜಾಗವನ್ನೇ ಮಾಡಿಕೊಡದೆ ಬಹಳನೇ ಅನ್ಯೋನ್ಯವಾಗಿ ಜೀವನ ನಡೆಸುತ್ತಿರುವ ಈ ದಂಪತಿಗಳಿಗೆ ಎರಡು ಮುದ್ದಾದ ಮಕ್ಕಳಿದ್ದು
ಅವರು ಕೂಡ ಅದಾಗಲೇ ಸಿನಿಮಾ ರಂಗಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇನ್ನು ಕಳೆದ ಕೆಲವು ದಿನಗಳ ಹಿಂದೆ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ನೆನಪಿರಲಿ ಪ್ರೇಮ್ ದಂಪತಿಗಳು ಇದೀಗ ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ತೆರಳಿ, ಪೂಜ್ಯರ ಆಶೀರ್ವಾದ ಪಡೆದು ದೇವರ ಧ್ಯಾನದಲ್ಲಿ ಮಗ್ನರಾಗಿ ಆನೆಯೊಂದಿಗೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿರುವಂತಹ ಕೆಲ ಅಪರೂಪದ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೋ ಬಾರಿ ವೈರಲಾಗುತ್ತಿದ್ದು ಮದುವೆಯಾಗಿ 23 ವರ್ಷಗಳಾದರೂ ಇವರಿಬ್ಬರ ನಡುವೆ ಇರುವಂತಹ ಪ್ರೀತಿ ಅನ್ಯೋನ್ಯತೆ ಕಂಡು ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಇದನ್ನೂ ಓದಿ ನೆಟ್ಟಿಗರನ್ನು ಸೆಳೆಯುತ್ತಿದೆ ಪೋಷಕ ನಟರಾದ ಅವಿನಾಶ್ ಮತ್ತು ಮಾಳವಿಕಾ ಜೋಡಿಗಳ ಕ್ಯೂಟೆಸ್ಟ್ ಫೋಟೋ!