Akul Balaji: ಕನ್ನಡ ಖ್ಯಾತ ನಿರೂಪಕ ಅಕುಲ್ ಬಾಲಾಜಿ ಅವರ ಸುಂದರ ಕುಟುಂಬ ಹೇಗಿದೆ ನೋಡಿ

0

Akul Balaji : ಸ್ನೇಹಿತರೆ ತಮ್ಮ ಚಿಟಪಟ ಮಾತುಗಾರಿಕೆ ಇಂದಾಗಿಯೇ ಇಂದು ಕನ್ನಡ ಹಾಗೂ ತೆಲುಗು ಕಿರುತೆರೆ ಲೋಕದ ನಂಬರ್ ಒನ್ ಆಂಕರ್(No.1 Anchor)ಎಂಬ ಪಟ್ಟವನ್ನು ಗಿಟ್ಟಿಸಿಕೊಂಡು ಹಲವಾರು ಕಾರ್ಯಕ್ರಮಗಳನ್ನು ಪೋಸ್ಟ್ ಮಾಡುತ್ತಾ ಟೆಲಿವಿಷನ್ ಲೋಕದಲ್ಲಿ ಭಾರಿ ಜನಪ್ರಿಯತೆಯನ್ನು ಪಡೆದಿರುವ ಅಕುಲ್ ಬಾಲಾಜಿ ಯಾರಿಗೆ ತಾನೇ ಪರಿಚಯವಿರದಿರಲು ಸಾಧ್ಯವಿಲ್ಲ ಹೇಳಿ? ಪ್ಯಾಟೆ ಹುಡ್ಗೀರ ಹಳ್ಳಿ ಲೈಫು, ಅನುಬಂಧ ಅವಾರ್ಡ್ಸ್, ತಕದಿಮಿತ, ಡ್ಯಾನ್ಸಿಂಗ್ ಸ್ಟಾರ್, ಇಂಡಿಯನ್, ಕುಕ್ಕು ವಿತ್ ಕಿರಿಕು, ನೃತ್ಯ ಭಾರತ ನೃತ್ಯ ತೆಲುಗು,

ಡ್ಯಾನ್ಸ್ ಚಾಂಪಿಯನ್, ಭರ್ಜರಿ ಬಾಚಿಲ್ಲರ್ಸ್ ಹೇಗೆ ಮುಂತಾದ ಯಶಸ್ವಿ ಕಾರ್ಯಕ್ರಮಗಳನ್ನು ತಮ್ಮ ವಿಶೇಷ ಮಾತುಗಾರಿಕೆಯಿಂದಾಗಿ ನಡೆಸಿಕೊಡುತ್ತ‌ ತಮ್ಮದೇ ಆದ ವಿಶೇಷ ಅಭಿಮಾನಿ ಬಳಗವನ್ನು ಹೊಂದಿರುವ ಅಕುಲ್ ಬಾಲಾಜಿ ಅವರು ಸಾಮಾಜಿಕ ಜಾಲತಾಣದಲ್ಲಿಯೂ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದು ಆಗಾಗ ತಮ್ಮ ಹಾಗೂ ತಮ್ಮ ಕುಟುಂಬದ ಸುಂದರ ಫೋಟೋಗಳನ್ನು ಹಂಚಿಕೊಳ್ಳುತ್ತಾ ವೈರಲ್ ಆಗುತ್ತಿರುತ್ತಾರೆ.

2008ರಲ್ಲಿ ಜೋ(Joo) ಎಂಬುವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಕುಲ್ ಬಾಲಜಿಯವರಿಗೆ ಕಿಶನ್ ಬಾಲಾಜಿ ಎಂಬ ಮುದ್ದಾದ ಮಗನಿದ್ದು ಆತ ತನ್ನ ಸಣ್ಣ ವಯಸ್ಸಿನಲ್ಲಿಯೇ ಸಂಗೀತವನ್ನು ರಚಿಸುತ್ತಾ ಯೂಟ್ಯೂಬ್ ಚಾನೆಲ್ ನಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುತ್ತಾ ಬಾರಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಅಕುಲ್ ಬಾಲಾಜಿಯವರ ಫ್ಯಾಮಿಲಿ ಫೋಟೋಗಳು ಭಾರಿ ವೈರಲಾಗುತ್ತಿದ್ದು,

ತಮ್ಮ ಮುದ್ದು ಮಗನನ್ನು ಎತ್ತಿ ಹಿಡಿದು ಫೋಟೋಗೆ ವಿಭಿನ್ನವಾಗಿ ಪೋಸ್ ನೀಡಿರುವ ಅಕುಲ್ ಬಾಲಾಜಿಯವರ(Akul Balaji) ಈ ಸುಂದರ ಕುಟುಂಬಕ್ಕೆ ನೆಟ್ಟಿಗರು ಲೈಕ್ಸ್ ಹಾಗೂ ಕಮೆಂಟ್ ಮೂಲಕ ತಮ್ಮ ಪ್ರೀತಿಯನ್ನು ತೋರ್ಪಡಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅಕುಲ್ ಬಾಲಾಜಿ ಅವರ ಮಗ ಕಿಶನ್ ನಾಗ್ ಬಾಲಾಜಿ(Kishan Nag Balaji) ಕೂಡ ತಮ್ಮ ತಂದೆಯಂತೆ ಅದ್ಭುತ ನಿರೂಪಕ ನಟ ಹಾಗೂ ಸಂಗೀತಗಾರನಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಳ್ಳಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.

Leave A Reply

Your email address will not be published.

error: Content is protected !!