ಸರ್ಕಾರಿ ಕೆಲಸಕ್ಕೆ ಸೇರಬೇಕು ಎನ್ನುವುದು ಹಲವರ ಆಸೆಯಾಗಿರುತ್ತದೆ. ಕೊರೋನ ವೈರಸ್ ಬಂದಾಗಿನಿಂದ ಬೇಕಾದ ಜಾಬ್ ಅವಕಾಶ ಸಿಗುವುದು ಕಡಿಮೆಯಾಗಿದೆ. ಇಂತಹ ಸಂದರ್ಭದಲ್ಲಿ ಹಿಂದುಸ್ಥಾನ ಕಾಪರ್ ಲಿಮಿಟೆಡ್ ನ ಖಾಲಿ ಇರುವ ಹುದ್ದೆಗಳ ನೇಮಕಾತಿ ನಡೆಯುತ್ತಿದೆ. ಈ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಹಿಂದುಸ್ಥಾನ್ ಕಾಪರ್ ಲಿಮಿಟೆಡ್ ನ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ವಿದ್ಯುತ್ ಮೇಲ್ವಿಚಾರಕ ಹಾಗೂ ಎಲೆಕ್ಟ್ರಿಷಿಯನ್ ಒಟ್ಟು 104 ವೇಕೆನ್ಸಿ ಇದೆ. ಸಹಾಯಕ ವ್ಯವಸ್ಥಾಪಕ 5 ವೇಕೆನ್ಸಿ, ಗಣಿಗಾರಿಕೆ ಪೋರ್ಮನ್ 19 ವೇಕೆನ್ಸಿ, ಮೆಕ್ಯಾನಿಕಲ್ ಪೋರ್ಮನ್ 7 ವೇಕೆನ್ಸಿ, ಮ್ಯಾಗಜೀನ್ ಕ್ಲರ್ಕ್ 4 ವೇಕೆನ್ಸಿ, ಮೈನಿಂಗ್ ಮೇಟ್ 34 ವೇಕೆನ್ಸಿ, ಗಣಿ ಸರ್ವೇಯರ್ 1 ವೇಕೆನ್ಸಿ, ವಿದ್ಯುತ್ ಮೇಲ್ವಿಚಾರಕ 16 ವೇಕೆನ್ಸಿ, ಎಲೆಕ್ಟ್ರಿಷಿಯನ್ 18 ವೇಕೆನ್ಸಿ. ಸಹಾಯಕ ವ್ಯವಸ್ಥಾಪಕ ಹುದ್ದೆಗೆ ಡಿಪ್ಲೊಮಾ ಅಥವಾ ಬಿಎಸ್ ಸಿ ಪದವಿ ಪಡೆದಿರಬೇಕು.
ಗಣಿಗಾರಿಕೆ ಪೋರ್ಮನ್ ಹುದ್ದೆಗೆ ಡಿಪ್ಲೊಮಾ ಮೈನಿಂಗ್ ಇಂಜಿನಿಯರಿಂಗ್ ನಲ್ಲಿ ಬಿ ಎಸ್ ಸಿ ಪದವಿ ಓದಿರಬೇಕು. ಮೆಕ್ಯಾನಿಕಲ್ ಪೋರ್ಮನ್ ಹುದ್ದೆಗೆ ಡಿಪ್ಲೊಮಾ, ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ ಓದಿರಬೇಕು. ಮ್ಯಾಗಜೀನ್ ಕ್ಲರ್ಕ್ ಹುದ್ದೆಗೆ ಪದವಿ ಓದಿರಬೇಕು, ಮೈನಿಂಗ್ ಮೇಟ್ ಹುದ್ದೆಗೆ 10 ನೇ ತರಗತಿ ಓದಿರಬೇಕು, ಗಣಿ ಸರ್ವೇಯರ್ ಹುದ್ದೆಗೆ ಡಿಪ್ಲೊಮಾ ಅಥವಾ ಗಣಿಗಾರಿಕೆ ಸಮೀಕ್ಷೆಯಲ್ಲಿ ಪದವಿ ಓದಿರಬೇಕು, ವಿದ್ಯುತ್ ಮೇಲ್ವಿಚಾರಕ ಹುದ್ದೆಗೆ ಡಿಪ್ಲೊಮಾ ಅಥವಾ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ನಲ್ಲಿ ಬಿಎಸ್ ಸಿ ಓದಿರಬೇಕು ಎಲೆಕ್ಟ್ರಿಷಿಯನ್ ಹುದ್ದೆಗೆ 10 ನೇ ತರಗತಿ ಅಥವಾ ಎಲೆಕ್ಟ್ರಿಕಲ್ ಸೂಪರ್ ವೈಸರ್ ನಲ್ಲಿ ಐಟಿಐ ಓದಿದವರು ಅರ್ಜಿ ಸಲ್ಲಿಸಬಹುದು.
ಅಸಿಸ್ಟಂಟ್ ಮ್ಯಾನೇಜರ್ ಮತ್ತು ಮೈನಿಂಗ್ ಪೋರ್ಮನ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭೂಗತ ಲೋಹದ ಗಣಿಗಳಲ್ಲಿ ಕೆಲಸ ಅಥವಾ ಮೇಲ್ವಿಚಾರಣಾ ಸಾಮರ್ಥ್ಯದ ಕನಿಷ್ಠ 20 ವರ್ಷಗಳ ಅನುಭವವನ್ನು ಹೊಂದಿರಬೇಕು ಮತ್ತು ಗಣಿಗಾರಿಕೆ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ನಿಲುಗಡೆಗೆ, ಅಭಿವೃದ್ದಿ ಮತ್ತು ಸ್ಫೋಟಕಗಳ ನಿರ್ವಹಣೆ, ರಸೀದಿ, ವಿತರಣೆ, ಸ್ಫೋಟಕ, ಕಂಪ್ಯೂಟರ್ ಡೇಟಾ ಬೇಸ್ ಪ್ರವೇಶದ ನಿರ್ವಹಣೆ ಮತ್ತು ಸಂಗ್ರಹಣೆಯ ಬಗ್ಗೆ ಉತ್ತಮ ಜ್ಞಾನವನ್ನು ಹೊಂದಿರಬೇಕು. ಗಣಿ ಸರ್ವೇಯರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಗಣಿ ಸಮೀಕ್ಷೆ, ಕ್ಷೇತ್ರ ಸಮೀಕ್ಷೆ ಮತ್ತು ಸಮೀಕ್ಷೆ ಉಪಕರಣಗಳ ನಿರ್ವಹಣೆಯ ಬಗ್ಗೆ ಉತ್ತಮ ಜ್ಞಾನವನ್ನು ಹೊಂದಿರಬೇಕು, ಮೇಲಾಗಿ ಒಟ್ಟು ನಿಲ್ದಾಣ ಯೋಜನೆಗಳು ಮತ್ತು ವಿಭಾಗಗಳ ಸಿದ್ಧತೆಗಳು ಆಟೋ ಸಿಎಡಿ ಜ್ಞಾನ ಮತ್ತು ಮೆಟಾಲಿಫೆರಸ್ ಮೈನ್ಸ್ ನಲ್ಲಿ ಸಂಬಂಧಿಸಿದ ಕ್ಷೇತ್ರದಲ್ಲಿ ಕನಿಷ್ಠ 20 ವರ್ಷಗಳ ಅನುಭವ ಇರಬೇಕು.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು 63 ವರ್ಷದೊಳಗೆ ಇರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಸಹಾಯಕ ವ್ಯವಸ್ಥಾಪಕ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ತಿಂಗಳಿಗೆ 35,000 ರೂಪಾಯಿ, ಗಣಿಗಾರಿಕೆ ಪೋರ್ಮನ್ ಮತ್ತು ಮೆಕ್ಯಾನಿಕಲ್ ಪೋರ್ಮನ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ತಿಂಗಳಿಗೆ 25,000 ರೂಪಾಯಿ, ಮ್ಯಾಗಜೀನ್ ಕ್ಲರ್ಕ್ ಮತ್ತು ಮೈನಿಂಗ್ ಮೇಟ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ತಿಂಗಳಿಗೆ 20,000 ರೂಪಾಯಿ ಸಿಗುತ್ತದೆ. ಗಣಿ ಸರ್ವೇಯರ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ತಿಂಗಳಿಗೆ 35,000 ರೂಪಾಯಿ, ವಿದ್ಯುತ್ ಮೇಲ್ವಿಚಾರಕ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ತಿಂಗಳಿಗೆ 25,000 ರೂಪಾಯಿ, ಎಲೆಕ್ಟ್ರಿಷಿಯನ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ತಿಂಗಳಿಗೆ 20,000 ರೂಪಾಯಿ ಸಂಭಾವನೆ ಸಿಗುತ್ತದೆ.
ಜನರಲ್ ಆಫೀಸ್ ಬಿಲ್ಡಿಂಗ್ ಕಾಂಪ್ಲೆಕ್ಸ್, ಹಿಂದುಸ್ಥಾನ್ ಕಾಪರ್ ಲಿಮಿಟೆಡ್/ ಇಂಡಿಯನ್ ಕಾಪರ್ ಕಾಂಪ್ಲೆಕ್ಸ್, ಪಿಒ- ಮೌಭಂದರ್, ಜಿಲ್ಲೆ- ಪೂರ್ವ ಸಿಂಗ್ ಭೂಮ್, ಝಾರ್ಖಂಡ್ -832103 ಈ ವಿಳಾಸದಲ್ಲಿ ಸಂದರ್ಶನ ನಡೆಯುತ್ತದೆ. ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಜನವರಿ 11, 2022 ರಿಂದ ಪ್ರಾರಂಭವಾಗಿದ್ದು ಫೆಬ್ರುವರಿ 8, 2022 ರಂದು ಸಂದರ್ಶನ ಇರುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲಾ ನಿರುದ್ಯೋಗ ಯುವಕ, ಯುವತಿಯರಿಗೆ ತಿಳಿಸಿ.