ಮನೆಯಲ್ಲಿ ಹಾಲು ಪದೆ ಪದೇ ಉಕ್ಕುತಿದೆಯಾ? ಇದು ಶುಭ ಶಕುನ ಅಲ್ವಾ

0

ಶಕುನ ಅಪಶಕುನ ಈ ಎರಡು ಪದಗಳು ನಮ್ಮ ಪ್ರತಿನಿತ್ಯದ ಬದುಕಿನಲ್ಲಿ ಬೆರೆತು ಹೋಗಿದೆ. ಇದರಲ್ಲಿ ಕೆಲವು ನಮ್ಮ ಗಮನಕ್ಕೂ ಬಂದಿರುತ್ತದೆ. ಬೆಕ್ಕು, ಒಂಟಿ ಮತ್ತು ಖಾಲಿ ಬಿಂದಿಗೆ ಅಡ್ಡ ಹೋಗುವುದು, ಮೈ ಮೇಲೆ ಪಲ್ಲಿ ಬೀಳುವುದು ಇದೆಲ್ಲಾ ಅಪಶಕುನ. ಆದೆ ತುಂಬಿದ ಕೊಡ, ಮುತ್ತೈದೆ ಹೆಂಗಸು ಅಡ್ಡ ಬರುವುದು. ಇದೆಲ್ಲಾ ಶುಭ ಶಕುನ ಎಂದು ಜನರು ನಂಬುವರು. ಈ ಹಾಲಿನ ಬಗ್ಗೆ ಇರುವ ಶುಭ ಮತ್ತು ಅಶುಭ ಶಕುನಗಳ ಬಗ್ಗೆ ತಿಳಿಯೋಣ ಬನ್ನಿ.

ಪ್ರತಿ ದಿನ ಹಾಲು ತಂದು ಬಳಸದೆ ಇರುವ ಮನೆ ಇರುವುದು ತುಂಬಾ ವಿರಳ. ಹಾಲು ಕೂಡ ಶುಭ ಮತ್ತು ಅಶುಭ ಸಂಕೇತಗಳ ಬಗ್ಗೆ ಸೂಚನೆ ಕೊಡುತ್ತದೆ. ಶುಭ ತೋರಿದರೆ ಒಳ್ಳೆಯ ಫಲಗಳು ದೊರೆಯುತ್ತವೆ, ಹಾಗೆ ಅಶುಭ ತೋರಿದರೆ ಕೆಟ್ಟ ಘಟನೆಗಳು ಸಂಭವಿಸಬಹುದು.

ಕೈ ಜಾರಿ ಹಾಲು ಚೆಲ್ಲಿದರೆ ಅದು ಅಪಶಕುನ ಎಂದು ಹೇಳಲಾಗುತ್ತದೆ. ಜೋತಿಷ್ಯ ಶಾಸ್ತ್ರದ ಪ್ರಕಾರ ಹಾಲು ಉಕ್ಕುವುದು ಶುಭ ಆದರೆ ತಣ್ಣನೆಯ ಹಾಲು ಚೆಲ್ಲುವುದು, ಇಲ್ಲ ಗಾಜು ಒಡೆದು ಹೋಗುವುದು ಅಶುಭ ಎಂದು ಹೇಳಲಾಗುತ್ತದೆ. ಇದಕ್ಕೆ ಕಾರಣ ಹಾಲನ್ನು ಚಂದ್ರನ ಅಂಶ ಎಂದು ಪರಿಗಣಿಸಿರುವುದು. ಇನ್ನು ಚಂದ್ರ ಗ್ರಹ ಮನಸ್ಸನ್ನು ನಿಯಂತ್ರಿಸುವ ಗುಣ ಹೊಂದಿರುತ್ತದೆ. ಅದೇ ಹಾಲು ಚೆಲ್ಲಿದರೆ ಅದು ಮನಸ್ಸಿಗೆ ಬೇಸರುವಾಗುವ ಘಟನೆ ನಡೆಯುವ ಸೂಚನೆ ಎಂದು ಹೇಳಲಾಗುತ್ತದೆ.

ಚಂದ್ರನು ವ್ಯಕ್ತಿಯ ಮನಸ್ಸು, ಸಂಬಂಧಗಳು, ಹಣ, ತಾಯಿ, ಮನೆ ಮತ್ತು ಸಂತಸದ ಸಂಕೇತ ಆದ್ದರಿಂದ ಹಾಲಿನ ಅಪಶಕುನ ಮನೆಯಲ್ಲಿ ಸಂಬಂಧ ಹಾಳು ಮಾಡುವುದು, ಆರ್ಥಿಕ ನಷ್ಟ, ಮಾನಸಿಕ ಬೇಸರಗಳನ್ನು ಸೂಚಿಸುತ್ತದೆ. ಹಾಲು ಕುದಿಯುವಾಗ ಉಕ್ಕುವುದು ಶುಭ. ಇದು ಭವಿಷ್ಯದಲ್ಲಿ ಲಾಭ ಬರುವುದನ್ನು ಸೂಚಿಸುತ್ತದೆ. ಆರ್ಥಿಕ ಸ್ಥಿತಿಯ ಅಭಿವೃದ್ದಿ ಸೂಚಕ. ಹಾಲು ಅದರಷ್ಟಕ್ಕೆ ಅದೇ ಉಕ್ಕಬೇಕು ಬೇಕೆಂದು ಮಾಡಿದರೆ ಅದು ಹಣದ ನಷ್ಟ ತರುತ್ತದೆ.

ಬೆಳಗಿನ ಜಾವ ಬೇರೆಯವರಿಗೆ ಹಾಲು ಹಾಕುವ, ಇಲ್ಲ ಹಾಲು ನೀಡುವ ಜನರನ್ನು ನೋಡಿದರೆ ಅದು ಶುಭ ಸೂಚಕ ಇದರಿಂದ ಶೀಘ್ರದಲ್ಲಿ ಒಳ್ಳೆಯ ಸುದ್ದಿ ಕೇಳಿ ಬರುತ್ತದೆ. ಬೆಳಗಿನ ಜಾವ ಹಾಲು ತರುವುದು ಮತ್ತು ಕುದಿಸುವುದು ಶುಭ ಶಕುನ ಮತ್ತು ಅವರ ಜಾತಕದಲ್ಲಿ ಚಂದ್ರ ಇನ್ನಷ್ಟು ಬಲಗೊಳ್ಳುತ್ತಾನೆ. ಹಾಲು ಪದೆ ಪದೇ ಕುದಿಯುವಾಗ ಉಕ್ಕಿದ್ದರೆ ಅದು ಮನೆ ವಾಸ್ತು ದೋಷ ಇರಬಹುದು ಎಂದು ಅರ್ಥ ಕೊಡುತ್ತದೆ. ಹಾಲು ಯಾರ ಕೈಯಿಂದ ಆಕಸ್ಮಿಕವಾಗಿ ಮತ್ತು ಕುಡಿಯುವಾಗ ಜಾರಿದರು ಅದು ಅಶುಭ.

ಹಾಲನು ಕುದಿಸಿದ ನಂತರ ಪಾತ್ರೆಯಿಂದ ಕೆಳಗೆ ಬಿದ್ದರೂ ಕೂಡ ಅದು ಮಂಗಳಕರ ಅಲ್ಲ. ಹಾಲು ಪದೆ ಪದೇ ತಳ ಹತ್ತುವುದು ಅಪಶಕುನ ಅದರಿಂದ ಮಾನಸಿಕ ತುಮುಲಗಳು ಹೆಚ್ಚಾಗುತ್ತವೆ ಮತ್ತು ಮನೆಯಲ್ಲಿ ಜಗಳಗಳು ಆಗಬಹುದು ಎಂದು ಸೂಚಿಸುತ್ತದೆ. ಕೆಲವು ಬಾರಿ ಹಾಲು ಒಲೆಯ ಮೇಲೆ ಇಟ್ಟು ಬೇರೆ ಕೆಲಸ ಮಾಡುವಾಗ ಹಾಲು ನೆಲದ ಪಾಲಾಗುತ್ತದೆ ಮತ್ತು ಕೆಲವು ಸಾರಿ ನಾವು ಹಾಲಿನ ಪಾತ್ರೆ ಮುಂದೆ ಇದ್ದರು ನಮ್ಮ ಧ್ಯಾನ ಬೇರೆ ಕಡೆ ಇದ್ದು ಹಾಲು ನೆಲ ಸೇರುವುದು ಅದು ಭೂದೇವಿ ಪಾಲು ಇದರಿಂದ ಯಾವ ಸಮಸ್ಯೆ ಕೂಡ ಬರುವುದಿಲ್ಲ ಆದ್ರೆ ಆ ಸಮಯದಲ್ಲಿ ಮನಸ್ಸಿನ ಕೋರಿಕೆ ಸಲ್ಲಿಸಿದರೆ ಭೂದೇವಿ ಅದನ್ನು ಈಡೇರಿಸುವಳು ಎಂದು ಹೇಳಲಾಗುತ್ತದೆ. ಜೊತೆಗೆ ಲಕ್ಷ್ಮಿ ಕಟಾಕ್ಷ ಕೂಡ ಸಿಗುತ್ತದೆ.

ಹಾಲು ಉಕ್ಕಿದ ಮೇಲೆ ಅದರ ಮೇಲೆ ತಕ್ಷಣ ಪ್ಲೇಟ್ ಮುಚ್ಚಬಾರದು ಅದರ ಹೊಗೆ ಮನೆ ತುಂಬ ಹರಡಬೇಕು ಇದು ಮನೆಯ ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡುತ್ತದೆ ಮತ್ತು ಸಕಾರಾತ್ಮಕ ಬೆಳವಣಿಗೆ ತರುತ್ತದೆ ಸುಖ, ಶಾಂತಿ, ನೆಮ್ಮದಿ ಬಂದು ನೆಲೆಸುತ್ತದೆ. ಹಾಲಿನ ಪಾತ್ರೆಯ ಮೇಲೆ ಪ್ಲೇಟ್ ಮುಚ್ಚುವ ಮುನ್ನ ಓಂ ಮಹಾಲಕ್ಷ್ಮಿ ನಮಃ ಎಂದು ಹೇಳಿ ಎರಡು ಅಕ್ಕಿ ಕಾಳು ತೆಗೆದು ಪಾತ್ರೆಗೆ ಹಾಕಬೇಕು ಇದರಿಂದ ಲಕ್ಷ್ಮೀದೇವಿ ಮನೆಯಲ್ಲಿ ಸ್ಥಿರವಾಗಿ ನೆಲೆ ನಿಲ್ಲುವಳು.

ಕನಸಿನಲ್ಲಿ ಆಹಾರ ಮತ್ತು ಪಾನೀಯಗಳನ್ನು ನೋಡುವುದು ಕೆಲವು ಬಾರಿ ಶುಭ ಮತ್ತು ಕೆಲವು ಬಾರಿ ಅಶುಭ. ಕನಸಿನಲ್ಲಿ ಹಾಲು ನೋಡುವುದು ವಿವಿಧ ರೀತಿಯ ಸೂಚನೆ ಕೊಡುತ್ತದೆ. ಹಾಲು ಕುಡಿಯುವಂತೆ ಕನಸು ಬಿದ್ದರೆ ಅದು ಜೀವನದಲ್ಲಿ ಯಶಸ್ಸಿನ ಬಾಗಿಲು ತೆರೆದುಕೊಳ್ಳುವುದು ಎಂದು ಅರ್ಥ ಕೊಡುತ್ತದೆ ಮತ್ತು ಶುಭದ ಸಂಕೇತ. ಅದೇ ಹಾಲು ಒಡೆದಿರುವಂತೆ ಕನಸಿನಲ್ಲಿ ಕಂಡರೆ ಅದು ಅಶುಭ ಜೀವನದಲ್ಲಿ ಹೊಸ ತೊಂದರೆಗಳು ಎದುರಾಗಬಹುದು ಅಥವಾ ತೊಂದರೆಗಳಲ್ಲಿ ನೀವು ಸಿಲುಕಿಕೊಳ್ಳುವ ಎನ್ನುವ ಸೂಚನೆ ಕೊಡುತ್ತದೆ.

ಕುದಿಯುವ ಹಾಲು ಕನಸಿನಲ್ಲಿ ಕಂಡರೆ ಅದು ಶುಭ ಇದರಿಂದ ಶೀಘ್ರದಲ್ಲಿ ಒಳ್ಳೆಯ ಸುದ್ದಿ ಕೇಳಿ ಬರುತ್ತದೆ. ಪ್ರಗತಿಯ ಮತ್ತು ಅಭಿವೃದ್ಧಿಯ ಸಂಕೇತ.  ಧೀರ್ಘ ಕಾಲದಿಂದ ಪ್ರಯತ್ನ ಪಡುತ್ತಿರುವ ಕನಸು ಪೂರ್ಣಗೊಳ್ಳುತ್ತದೆ ಎನ್ನುವ ಅರ್ಥ. ಕನಸಿನಲ್ಲಿ ಹಾಲು ಖರೀದಿ ಮಾಡಿದರೆ ಅದು ಕೂಡ ಶುಭದ ಸಂಕೇತ ಇದು ಆರೋಗ್ಯ ವೃದ್ಧಿಯಾಗುತ್ತದೆ ಎಂದು ಸೂಚನೆ ಕೊಡುತ್ತದೆ. ಹಾಲಿಗೆ ಸಕ್ಕರೆ ಬೆರೆಸುವ ಕನಸು ಬಿದ್ದರೆ ಅದು ಉತ್ತಮ ಕನಸು ಎಂದು ಹೇಳಲಾಗುತ್ತದೆ ಅದು ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರಕುತ್ತದೆ ಎಂದು ಸೂಚಿಸುತ್ತದೆ.

ಜಾತಕದಲ್ಲಿ ಯಾವುದು ಗ್ರಹ ಕೆಟ್ಟ ಪರಿಣಾಮ ಬೀರುತ್ತಿದ್ದರೆ. ಸೋಮವಾರ ಬೆಳಗ್ಗೆ ಶಿವಲಿಂಗಕ್ಕೆ ಹಸಿ ಹಾಲನ್ನು ಸಮರ್ಪಣೆ ಮಾಡಬೇಕು ಸತತ 7 ಸೋಮವಾರ ಈ ಪರಿಹಾರ ಮಾಡಿದರೆ ಎಲ್ಲಾ ಇಷ್ಟಾರ್ಥ ಸಿದ್ಧಿಯಾಗುತ್ತದೆ ಮತ್ತು ಎಲ್ಲ ರೀತಿಯ ಗ್ರಹಗಳ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: