ಈ ದೇವಿಯನ್ನು ನೋಡಲು ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಬರುವರು. ಈ ದೇವರನ್ನು ನಂಬಿ ಬಂದು ಕೈ ಮುಗಿದರೂ ಸಾಕು ಅವರ ಕೋರಿಕೆಗಳು ಈಡೇರುತ್ತದೆ. ಈಗ ಹೇಳುತ್ತಿರುವ ದೇವಸ್ಥಾನದಲ್ಲಿ ಇರುವುದು ವಿಭಿನ್ನ ಶಕ್ತಿ ಉಳ್ಳ ದೇವರು. ಈ ದಿನ ನಾವು ಹಾಸನದಲ್ಲಿ ನೆಲೆಸಿರುವ ಪುರದಮ್ಮ ದೇವಿಯ ಬಗ್ಗೆ ತಿಳಿಯೋಣ. ಹಾಸನದ ಪುರದಮ್ಮ ದೇವಸ್ಥಾನ ಕರ್ನಾಟಕ ರಾಜ್ಯದ ಹಾಸನ ನಗರದಲ್ಲಿರುವ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಈ ದೇವಸ್ಥಾನ ಕೂಡ ಒಂದು. ಈ ದೇವಸ್ಥಾನ ಮುಖ್ಯವಾದ ಶಕ್ತಿ ಮತ್ತು ಮಹಾಲಕ್ಷ್ಮಿ ದೇವಿಯನ್ನು ಪೂಜೆ ಮಾಡುವುದಕ್ಕೆ ಪ್ರಸಿದ್ಧಿ ಪಡೆದಿದೆ. ಹಾಸನದ ಮುಖ್ಯ ಧಾರ್ಮಿಕ ಆಸ್ಥಾನಗಳಲ್ಲಿ ಈ ದೇವಸ್ಥಾನ ಸಹ ಒಂದು.
ಪುರದಮ್ಮ ದೇವಿಯ ದೇವಸ್ಥಾನದ ಸುತ್ತ ಬೇರೆ ಬೇರೆ ಧಾರ್ಮಿಕ ಗೋಷ್ಠಿಗಳು ಇವೆ. ಇಲ್ಲಿ ವಿವಿಧ ರೀತಿಯ ಆಚರಣೆಗಳು ನಡೆದುಕೊಂಡು ಬಂದಿದೆ ಎಂದು ಹೇಳಲಾಗುತ್ತದೆ. ಪುರದಮ್ಮ ದೇವಿ ಸಾಕ್ಷಾತ್ ಶಕ್ತಿ ದೇವತೆಗಳ ಸ್ವರೂಪ ಎಂದೇ ಹೇಳಬಹುದು. ಈ ದೇವಿ ಶಕ್ತಿ ಮತ್ತು ಮಹಾಲಕ್ಷ್ಮಿ ರೂಪದಲ್ಲಿ ಪ್ರತಿಷ್ಠಾಪನೆ ಗೊಂಡಿರುವಳು. ಭಕ್ತರು ಈ ತಾಯಿಯನ್ನು ಹೆಚ್ಚು ನಂಬಿಕೆ ಮತ್ತು ಭಕ್ತಿಯಿಂದ ಪೂಜಿಸುವರು. ದೇವಿಯ ದಯಾಪೂರಿತ ಸ್ವಭಾವ, ಕರುಣೆ ಉಳ್ಳ ದೃಷ್ಟಿ ಮತ್ತು ಭಕ್ತರ ಮಧುರ ಪ್ರೀತಿ ಇವುಗಳಿಂದ ಪ್ರಸಿದ್ಧಿ ಹೊಂದಿರುವಳು.
ಹಾಸನದ ಪುರದಮ್ಮ ದೇವಸ್ಥಾನದ ಮುಖ್ಯವಾದ ಅಂಶ ಎಂದರೆ ಪೂಜೆ ಮಾಡುವ ಸ್ಥಳದ ವಿಶೇಷತೆ ಎಂದರೆ ಈ ತಾಯಿಯ ಅಲಂಕಾರ ಮತ್ತು ಬಲಿ ಕೊಡುವ ವಿಧಾನ.
ಇಲ್ಲಿ ದೇವಿಗೆ ತಾಳಿ ಬೊಟ್ಟು ಬಿಟ್ಟು ಬೇರೆ ಯಾವ ಒಡವೆ ವಸ್ತ್ರಗಳನ್ನು ಹಾಕುವುದಿಲ್ಲ. ಅದೇ ರೀತಿ ಈ ಮುಂಚೆ ದೇವಿಗೆ ಪ್ರತ್ಯೇಕವಾಗಿ ದೇವಸ್ಥಾನ ಯಾವುದು ಇರಲಿಲ್ಲ. ಪ್ರಸ್ತುತ ಮಠದ ದೇಣಿಗೆಯಿಂದ ದೇವಾಲಯ ನಿರ್ಮಾಣ ಆಗಿದೆ. ಪೂಜೆ ಮಾಡಲು ಪೂಜಾರಿ ಇಲ್ಲ ಭಕ್ತಾದಿಗಳೇ ಪೂಜೆ ಮಾಡುವರು.
ಭಕ್ತರು ಇಷ್ಟ ಬಂದ ರೀತಿಯಲ್ಲಿ ದೇವಿಗೆ ಪೂಜೆ ಮಾಡಬಹುದು ಮತ್ತು ಕಾಣಿಕೆ ಅರ್ಪಣೆ ಮಾಡಬಹುದು. ವಿಶೇಷವಾಗಿ ಅಮಾವಾಸ್ಯೆ ದಿನ ಪೂಜೆ ಜೋರಾಗಿ ಇರುತ್ತದೆ. ಅದೇ ರೀತಿ ಎಲ್ಲಾ ದೇವಸ್ಥಾನದಲ್ಲಿ ಕುರಿ ಕೋಳಿ ಬಲಿ ಕೊಡುವುದು ರೂಢಿ ಆದರೆ, ಇಲ್ಲಿನ ಆಚರಣೆ ಮಾಡುವ ವಿಧಾನವೇ ಬೇರೆ ಎಂದು ಹೇಳಬಹುದು. ಪುರದಮ್ಮ ದೇವಿಗೆ ಹಂದಿ ಎಂದರೆ ಹೆಚ್ಚು ಪ್ರಿಯ.
ಆದ್ದರಿಂದ, ಜನರ ಸಂಕಷ್ಟಗಳನ್ನು ಪರಿಹಾರ ಮಾಡಿಕೊಡಲು ಈ ದೇವಿಗೆ ಭಕ್ತರು ಇಲ್ಲಿ ಹಂದಿಯನ್ನು ಬಲಿ ಕೊಡುವರು. ಆದರೆ ಅದನ್ನು ತಿನ್ನಲೇಬೇಕು ಎನ್ನುವ ನಿಯಮ ಏನು ಇಲ್ಲ. ದೇವರಿಗೆ ಬಲಿ ಕೊಟ್ಟು ಜನರ ತೊಂದರೆಗಳಿಗೆ ಪರಿಹಾರ ಮಾಡುವಂತೆ ಕೋರಿಕೆ ಇಟ್ಟರೆ ಸಾಕು ಆದಷ್ಟು ಬೇಗ ಅವರ ಸಮಸ್ಯೆ ಪರಿಹಾರ ಆಗುತ್ತದೆ ದೇವಿಯ ಸನ್ನಿಧಾನದಲ್ಲಿ ಹಂದಿಯನ್ನು ಬಲಿ ಕೊಡುವ ಮುನ್ನ ಹೋಗಿ ಹಂದಿ ಕೊಡಿ ಎಂದು ಕೇಳಬಾರದು ಹಾಗೆಯೇ ಬಲಿ ಕೊಡುವ ಸಮಯದಲ್ಲಿ ಕೊಡ ತಮ್ಮ ಕಷ್ಟಕ್ಕೆ ಹಂದಿ ಕೊಡುತ್ತಿದ್ದೇವೆ ಎಂದು ಹೇಳುವಂತೆ ಇಲ್ಲ.
ಅದರ ಬದಲಿಗೆ ಭೇಟೆ ಎಂಬ ಪದವನ್ನು ಬಳಕೆ ಮಾಡಬೇಕು. ಈ ದೇವಿಯನ್ನು ನಂಬಿ ಕಷ್ಟಗಳನ್ನು ಹೊತ್ತು ಬಂದ ಜನರಿಗೆ ಇಲ್ಲಿ ಯಾವ ರೀತಿಯ ಮೋಸ ನಡೆಯುವುದಿಲ್ಲ ಎಂಬ ನಂಬಿಕೆ ಕೂಡ ಇದೆ. ಹಾಸನ ಜಿಲ್ಲೆಯ ಸೊಪ್ಪಿನ ಹಳ್ಳಿಯಲ್ಲಿ ಈ ಪುರದಮ್ಮ ದೇವಸ್ಥಾನ ಇದೆ.