Gruhalakshmi Scheme New Update: ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಒಂದು ಗುಡ್ ನ್ಯೂಸ್ ಇದೆ ಎಲ್ಲರೂ 11 ಹಾಗೂ 12ನೆ ಕಂತಿನ ಗ್ರಹಲಕ್ಷ್ಮಿ ಹಣಕ್ಕಾಗಿ ಕಾಯುತ್ತಿದ್ದಾರೆ ಆದರೆ ಚುನಾವಣೆಯ ನಂತರ ಹಣ ಸರಿಯಾಗಿ ಬರುತ್ತಿಲ್ಲವಾದ್ದರಿಂದ ಗೃಹಲಕ್ಷ್ಮೀ ಯೋಜನೆ ಹಾಗೂ ಇತರೆ ಗ್ಯಾರಂಟಿ ಯೋಜನೆಗಳು ಬಂದ್ ಆಗಬಹುದು ಎಂಬ ಸುದ್ದಿ ಹರಿದಾಡುತ್ತಿದೆ ಇದರ ಬಗ್ಗೆ ರಾಜ್ಯ ಸರ್ಕಾರವೆ ನೀಡಿದ ಒಂದು ಸ್ಪಷ್ಟ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ
ಕೆಲವು ಮಹಿಳೆಯರಿಗೆ ಮಾತ್ರ ಗೃಹಲಕ್ಷ್ಮೀ ಯೋಜನೆಯ 11ನೆ ಕಂತಿನ ಹಣ ಬಂದಿದೆ ಇನ್ನು ಹಲವು ಮಹಿಳೆಯರಿಗೆ 11ನೆ ಕಂತಿನ ಹಣ ಬಂದಿಲ್ಲ ಅವರು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೆ ಸಾಕಷ್ಟು ಜನರಿಗೆ ಗೊತ್ತಿರುವ ಮಾಹಿತಿಯಂತೆ ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಹಣವಿಲ್ಲ ಆದರೆ ಗೃಹಲಕ್ಷ್ಮಿ ಯೋಜನೆಗೆ ಹಣ ಹೇಗೆ ಸರ್ಕಾರ ಕೊಡುತ್ತದೆ ಎನ್ನುವ ಪ್ರಶ್ನೆ ಎಲ್ಲರಿಗೂ ಮೂಡುತ್ತದೆ. ಎಲ್ಲರಿಗೂ ತಿಳಿದಿರುವ ಹಾಗೆ ಚುನಾವಣೆ ಬರುವವರೆಗೂ ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಖಾತೆಗೆ 2000 ರೂಪಾಯಿ ಹಣ ಜಮಾ ಆಗುತ್ತಿತ್ತು ಆದರೆ ಚುನಾವಣೆಯ ನಂತರ ಮಹಿಳೆಯರ ಖಾತೆಗೆ ಹಣ ಬರುವುದು ನಿಂತು ಹೋಯಿತು
ಕೆಲವು ಮಹಿಳೆಯರಿಗೆ ಒಂದು ತಿಂಗಳು ಬಿಡದೆ ಹಣ ಬಂದಿದೆ ಇನ್ನು ಕೆಲವು ಮಹಿಳೆಯರ ಖಾತೆಗೆ ಒಂದೆರಡು ತಿಂಗಳಿನ ಹಣ ಬಿಟ್ಟರೆ ಉಳಿದಂತೆ ಹಣ ಜಮಾ ಆಯಿತು ಮುಂದಿನ ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಬರುತ್ತದೆಯೊ ಇಲ್ಲವೊ ಎನ್ನುವುದು ಎಲ್ಲರ ಪ್ರಶ್ನೆಯಾಗಿದೆ. ಕೆಲವರು ಹನ್ನೊಂದನೆ ಕಂತಿನ ಹಣಕ್ಕಾಗಿ ಕಾಯುತ್ತಿದ್ದರೆ ಇನ್ನು ಕೆಲವರು 12ನೆ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ ಹಾಗಾದರೆ ಇದೀಗ ರಾಜ್ಯ ಸರ್ಕಾರದಿಂದ ಒಂದು ಮಹತ್ತರ ಮಾಹಿತಿ ತಿಳಿದು ಬಂದಿದೆ.
ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯ ದಿವಾಳಿಯಾಗುತ್ತಿದೆ ಸರ್ಕಾರದ ಖಜಾನೆ ಖಾಲಿಯಾಗುತ್ತಿದೆ ಇದರಿಂದ ವಿಪಕ್ಷಗಳು ಕಾಂಗ್ರೆಸ್ ಪಕ್ಷಕ್ಕೆ ನಿಮ್ಮಿಂದ ಇತರೆ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ ಹೀಗಾಗಿ 5 ಗ್ಯಾರಂಟಿ ಯೋಜನೆಗಳನ್ನು ಬಂದ್ ಮಾಡಿ ಎಂದು ಪಟ್ಟು ಹಿಡಿದಿದೆ. ರಾಜ್ಯ ಏಳಿಗೆ ಆಗಬೇಕಾದರೆ ಈ ಗ್ಯಾರೆಂಟಿ ಯೋಜನೆಗಳು ಬಂದ್ ಆಗಬೇಕು ಎಂದು ವಿರೋಧ ಕಂಡುಬರುತ್ತಿದೆ ಆದರೆ ಕಾಂಗ್ರೆಸ್ ಸರ್ಕಾರ ನಾವು ಗ್ಯಾರೆಂಟಿ ಯೋಜನೆಗಳನ್ನು ಬಂದ್ ಮಾಡುವುದಿಲ್ಲ ಇದರಿಂದ ಮಹಿಳೆಯರ ಆರ್ಥಿಕ ಅಭಿವೃದ್ಧಿಯಾಗುತ್ತಿದೆ ಎಂದು ಹೇಳುತ್ತಿದೆ
ಆದರೆ ವಿಪಕ್ಷಗಳು ಗ್ಯಾರಂಟಿ ಯೋಜನೆಗಳಿಗೆ ಹಣ ಕೊಡಲು ಹಣ ಎಲ್ಲಿಂದ ತರುತ್ತೀರಾ ಹಾಗೂ ಇತರೆ ಯೋಜನೆಗಳ ಅನುದಾನ ದುರ್ಬಳಕೆಯಾಗುತ್ತಿದೆ ಹಾಗೂ ದಿನನಿತ್ಯ ಬಳಸುವ ವಸ್ತುಗಳ ಬೆಲೆಗಳ ಏರಿಕೆಯಾಗಿದೆ ಡೀಸೆಲ್ ಪೆಟ್ರೋಲ್ ಬೆಲೆ ಏರಿಕೆ ಮಾಡಿ ಟ್ಯಾಕ್ಸ್ ನಿಂದ ಬಂದ ಹಣವನ್ನು ಪುನಃ ಜನರಿಗೆ ಕೊಡುತ್ತಿದ್ದೀರಾ ಇದರಿಂದ ಜನರಿಗೆ ತೊಂದರೆ ಆಗುತ್ತದೆ ಎಂದು ಹೇಳುತ್ತಿದ್ದಾರೆ ಅಷ್ಟೆ ಅಲ್ಲದೆ ಜನರ ಮುಂದೆ ನಮ್ಮಿಂದ ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸಲು ಆಗುತ್ತಿಲ್ಲ ಎಂದು ಒಪ್ಪಿಕೊಳ್ಳಬೇಕು ಎಂಬ ವಾದ ವಿವಾದಗಳು ಸೃಷ್ಟಿಯಾಗಿದೆ.
ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಒಂದು ಮಾಹಿತಿಯನ್ನು ನೀಡಿದೆ ಗೃಹಲಕ್ಷ್ಮಿ ಯೋಜನೆ ಮುಂದುವರೆಯುತ್ತದೆ ಆದರೆ ಕೆಲವು ಮಹಿಳೆಯರ ಖಾತೆ ಸರಿ ಇಲ್ಲದೆ ಇರುವುದು ಅಥವಾ ಶ್ರೀಮಂತರು ಸಹಿತ ಈ ಯೋಜನೆಯ ಪ್ರಯೋಜನವನ್ನು ಪಡೆಯುತ್ತಿದ್ದಾರೆ ಅಂತಹ ಮಹಿಳೆಯರನ್ನು ಗುರುತಿಸಿ ಅವರ ಖಾತೆಗೆ ಹಣ ಜಮಾ ಆಗುವುದನ್ನು ನಿಲ್ಲಿಸಬೇಕು ಬಡವರಿಗೆ ಹಣವನ್ನು ಖಾತೆಗೆ ಜಮಾ ಮಾಡುತ್ತೇವೆ ಇನ್ನೊಮ್ಮೆ ವೆರಿಫೈ ಮಾಡಿ ನಂತರ 11 ಹಾಗೂ 12ನೆ ಕಂತಿನ ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ.
ಒಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ತಮ್ಮ 5 ಗ್ಯಾರಂಟಿ ಯೋಜನೆಗಳನ್ನು ಸದ್ಯದಲ್ಲಿ ಬಂದ್ ಮಾಡುವ ಯಾವುದೆ ಯೋಚನೆ ಮಾಡಿಲ್ಲ ಎಂದಿನಂತೆ ಎಲ್ಲಾ ಯೋಜನೆಗಳು ಮುಂದುವರೆಯುತ್ತದೆ ಜನರು ಅದರ ಸದುಪಯೋಗ ಪಡೆದುಕೊಳ್ಳಬಹುದು ಆದರೆ ಸಣ್ಣ ಬದಲಾವಣೆಯಾಗಬಹುದು ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ.