Gayatri Mantra patana: ಈಗಿನ ಕಾಲದಲ್ಲಿ ಕಾಸ್ ಇದ್ದವನೆ ಬಾಸ್ ಧನ ಮೂಲ ಇದ್ದರೆ ಜಗತ್ತು ಎಂಬ ನುಡಿಯ ಮೇಲೆ ನಾವು ನೀವು ನಿಂತಿದ್ದೇವೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮಹಾಲಕ್ಷ್ಮೀ ಹಾಗೂ ಕುಬೇರ ಶ್ರೀಮಂತ ದೇವರು. ಹೀಗಾಗಿ ನಮ್ಮ ಆರ್ಥಿಕ ಸಮಸ್ಯೆಗಳಿಗೆ ದೇವರನ್ನು ಒಲಿಸಿಕೊಳ್ಳುವ ಮಂತ್ರದ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.
ನಮ್ಮ ಪೂರ್ವಿಕರ ಕಾಲದಿಂದಲೂ ಧನ ಸಂಬಂಧಿತ ಬೇಡಿಕೆಗಳಿಗೆ ಈ ಇಬ್ಬರು ದೇವರನ್ನು ಆರಾಧಿಸುತ್ತಾ ಬಂದಿದ್ದೇವೆ. ಯಾವುದೆ ಒಬ್ಬ ವ್ಯಕ್ತಿಗೆ ಧನ ಲಾಭದಲ್ಲಿ ಕಷ್ಟ ಎಂದು ಬಂದರೆ ಅವನು ಮೊದಲು ಪ್ರಾರ್ಥಿಸುವುದು ಮಹಾಲಕ್ಷ್ಮಿ ದೇವಿಗೆ ಹಾಗೆಯೆ ನಮಗೆ ಗೊತ್ತಿರುವ ಹಾಗೆ ಕುಬೇರನು ಅತ್ಯಂತ ಶ್ರೀಮಂತ ದೇವರು ಕುಬೇರನನ್ನು ಆರಾಧಿಸಿದರೆ ನಮ್ಮ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುತ್ತದೆ. ನಮ್ಮ ಆರ್ಥಿಕ ಪರಿಸ್ಥಿತಿ ವ್ಯಕ್ತಿಯ ಪೂರ್ವ ಜನ್ಮದ ಕರ್ಮ ಹಾಗೂ ಸಂಸ್ಕಾರಗಳ ಆಧಾರದ ಮೇಲೆ ನಡೆಯುತ್ತದೆ ಅಂದರೆ ಪೂರ್ವ ಜನ್ಮದಲ್ಲಿ ಉತ್ತಮ ಮಾರ್ಗದಲ್ಲಿ ನಡೆದಿದ್ದರೆ ಮತ್ತು ಪ್ರಕೃತಿ ಸಮತೋಲನದಲ್ಲಿ ಭಾಗಿಯಾಗಿದ್ದರೆ ಈ ಜನ್ಮದಲ್ಲಿ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಧರ್ಮ ಮಾರ್ಗದಲ್ಲಿ ನಾವು ನಡೆದರೆ ನಮ್ಮನ್ನು ಧರ್ಮ ರಕ್ಷಿಸುತ್ತದೆ. ನಮ್ಮ ಋಷಮುನಿಗಳು ಪೂರ್ವಿಕರು ಮುಂದಿನ ಪೀಳಿಗೆಗಾಗಿ ಸಂಪತ್ತು ಗಳಿಸಿ ಶಾಂತಿ ನೆಮ್ಮದಿಯಿಂದ ಇರಲು ನೂರಾರು ಮಂತ್ರಗಳನ್ನು ತಿಳಿಸಿದ್ದಾರೆ.
ಅತ್ಯಂತ ಶ್ರೇಷ್ಠವಾದ ಮಂತ್ರವೆಂದರೆ ಗಾಯತ್ರಿ ಮಂತ್ರ ನಾಲ್ಕು ವೇದಗಳಿಗೂ ಸರಿಸಮಾನವಾಗಿರುವ ಮಂತ್ರವೆ ಗಾಯತ್ರಿ ಮಂತ್ರ ಸ್ವತಃ ಬ್ರಹ್ಮ ವಿಷ್ಣು ಮಹೇಶ್ವರರು ಗಾಯತ್ರಿ ಮಾತೆಯನ್ನು ಪೂಜಿಸಿದರು ಎಂದರೆ ಗಾಯತ್ರಿ ದೇವಿಯ ಮಹಿಮೆಯನ್ನು ತಿಳಿಯಬೇಕು. ನಮ್ಮ ಶರೀರದಲ್ಲಿ ಏಳು ಚಕ್ರಗಳಿವೆ ಆ ಚಕ್ರಗಳು ಕ್ರಮಬದ್ಧವಾಗಿ ಮನುಷ್ಯನಿಗೆ ವಿಶೇಷವಾದ ಶಕ್ತಿಯನ್ನು ಒದಗಿಸುತ್ತದೆ ಆ ಮೂಲಕ ಮನುಷ್ಯನ ಮನೋಕಾಮನೆಗಳು ಈಡೇರುತ್ತವೆ. ಗಾಯತ್ರಿ ಮಂತ್ರವನ್ನು ಹೇಳುವುದರಿಂದ ಸಂಪತ್ತು ಮಾತ್ರವಲ್ಲದೆ ನಮ್ಮ ಪಾಪ ಕರ್ಮ ನಿವಾರಣೆಯಾಗುತ್ತದೆ.
ಹಣಕ್ಕೆ ಸಂಬಂಧಿಸಿದ ಇಷ್ಟಾರ್ಥಗಳನ್ನು ಪೂಜಿಸಲು ವಿಶೇಷವಾಗಿ ಎರಡು ಗಾಯತ್ರಿ ಮಂತ್ರಗಳಿವೆ ಒಂದು ಶ್ರೀ ಮಹಾಲಕ್ಷ್ಮಿ ಗಾಯತ್ರಿ ಮಂತ್ರ ಓಂ ಶ್ರೀ ಮಹಾಲಕ್ಷ್ಮೀಚ ವಿದ್ಮಹೆ ವಿಷ್ಣು ಪತ್ನಿಚ ಧೀಮಹಿ ತನ್ನೋ ಲಕ್ಷ್ಮೀ ಪ್ರಚೋದಯಾತ್. ಇನ್ನೊಂದು ವಿಶೇಷವಾದ ಮಂತ್ರ ಶ್ರೀ ಕುಬೇರ ಗಾಯತ್ರಿ ಮಂತ್ರ ಓಂ ವೈಶ್ರವಣಾಯ ವಿದ್ಮಹೆ ಯಕ್ಷ ರಾಜಯಃ ಧೀಮಹಿ ತನ್ನೋ ಕುಬೇರ ಪ್ರಚೋದಯಾತ್ ಈ ಎರಡು ಮಂತ್ರಗಳಿಂದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಪ್ರತಿದಿನ ಈ ಮಂತ್ರವನ್ನು ಪಠಿಸಿದರೆ ಲಕ್ಷ್ಮೀ ಕೃಪ ಕಟಾಕ್ಷಕ್ಕೆ ಪಾತ್ರರಾಗುತ್ತಾರೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.