WhatsApp Group Join Now
Telegram Group Join Now

ದೇವರ ಮನೆಯಲ್ಲಿ ಯಾವ ವಸ್ತುಗಳು ಇದ್ದರೆ ಶುಭಕರ. ಯಾವ ವಸ್ತು ಇಟ್ಟರೆ ಹಣ ಕಾಸಿನ ಕೊರತೆ ಬರುವುದಿಲ್ಲ ಎನ್ನುವುದರ ಕುರಿತು ತಿಳಿಯೋಣ. ಕೆಲವು ವಸ್ತುಗಳು ದೇವರ ಮನೆಯಲ್ಲಿ ಇಲ್ಲದೆ ಹೋದರೆ ದೇವರ ಮನೆ ಅಪೂರ್ಣ ಎಂದು ಹೇಳಲಾಗುತ್ತದೆ. ಆ ವಸ್ತುಗಳನ್ನು ಮಂಗಳಕರ ಸೂಚಕಗಳು ಎಂದು ಹೇಳುವರು. ದೇವರ ಆಶೀರ್ವಾದದ ಜೊತೆಗೆ ಸಂಪತ್ತು ವೃದ್ಧಿ ಆ ವಸ್ತುಗಳಿಂದ ಅಗುತ್ತದೆ.

ಋಣಾತ್ಮಕ ಅಂಶಗಳು ಮನೆಯಿಂದ ದೂರ ಉಳಿಯುತ್ತವೆ.  ಯಾವುದು ಆ ವಸ್ತುಗಳು ಯಾವುವು ಎನ್ನುವುದನ್ನು ನೋಡೋಣ. ದೇವರ ಕೋಣೆಯಲ್ಲಿ ಸ್ವಸ್ತಿಕ ಬರೆಯುವುದರಿಂದ ಮನೆಗೆ ಒಳ್ಳೆಯದು. ಅಭಿವೃದ್ದಿ, ಸಂಪತ್ತು ಎಲ್ಲಾ ಹೆಚ್ಚಾಗುತ್ತದೆ. ಯಾವ ಕೆಲಸಕ್ಕೆ ಮುನ್ನುಡಿಯಾಗಿ ಸ್ವಸ್ತಿಕ ಬರೆದರು ಆ ಗುರುತು ಶುಭ ಫಲ ತರುತ್ತದೆ. ಪೂಜೆ ಸ್ಥಳದಲ್ಲಿ ಸ್ವಸ್ತಿಕ ಬರೆದರೆ ಹೆಚ್ಚು ಒಳ್ಳೆಯದು.

ಕಳಸವನ್ನು ಸಮೃದ್ಧಿ ಮತ್ತು ಮಂಗಳದ ಸಂಕೇತ ಕೆಂಪು ಬಣ್ಣದಿಂದ ಅಷ್ಟ ದಳ ಕಮಲದ ಆಕಾರ ಮಾಡಿ ಅದರ ಮೇಲೆ ಕಳಸ ಸ್ಥಾಪನೆ ಮಾಡಬೇಕು. ಇದು ಮನೆಗೆ ಹೆಚ್ಚು ಸಮೃದ್ಧಿ ತಂದುಕೊಡುತ್ತದೆ. ಶಂಖ ಅತ್ಯಂತ ಅಮೂಲ್ಯ ರತ್ನಗಳಲ್ಲಿ ಒಂದು, ಇದು  ಸಮುದ್ರ ಮಂತನದ ಸಮಯದಲ್ಲಿ ಸಿಕ್ಕಿರುವುದು ಲಕ್ಷ್ಮೀ ಉದ್ಭವ ಗೊಂಡಾಗ ಜೊತೆಯಲ್ಲಿ ಶಂಖ ಕೂಡ ಉದ್ಭವ ಆಯ್ತು. ಇದನ್ನು ದೇವರ ಕೋಣೆಯಲ್ಲಿ ಇಟ್ಟರೆ ಉತ್ತಮ ಫಲ ಸಿಗುತ್ತದೆ.

ಗಂಟೆಯನ್ನು ಇಟ್ಟು ಪೂಜೆ ಮಾಡಿದರೆ ಶುಭ, ಅದು ಸಕಾರಾತ್ಮಕ ಬೆಳವಣಿಗೆ ತರುತ್ತದೆ ಮನೆಗೆ. ಗಂಟೆ ಶಬ್ದ ಸತತವಾಗಿ ಬರುವ ಜಾಗ ಪರಿಶುದ್ಧ ಮತ್ತು ಪವಿತ್ರವಾಗಿ ಇರುತ್ತದೆ. ಸುತ್ತ ಮೂಡುವ ಋಣಾತ್ಮಕ ಅಂಶಗಳು ಈ ಶಬ್ದ ದೂರ ಮಾಡುತ್ತದೆ.

ಮನೆಯನ್ನು ವಾಸ್ತು ಪ್ರಕಾರ ನಿರ್ಮಾಣ ಮಾಡಬೇಕು ಇಲ್ಲ ನಿರ್ಮಾಣ ಮಾಡಿರುವ ಮನೆಯನ್ನು ಖರೀದಿ ಮಾಡಬೇಕು ಇಲ್ಲದೆ ಹೋದರೆ ಸುಖ, ನೆಮ್ಮದಿ, ಶಾಂತಿ ನೆಲೆಸುವುದು ದೂರದ ಮಾತು. ವಾಸ್ತು ದೋಷ ನಿವಾರಣೆಗೆ  ಈ ವಸ್ತುಗಳನ್ನು ದೇವರ ಮನೆಯಲ್ಲಿ ಇಡಬೇಕು. 1೦8 ಜಪ ಮಣಿಗಳು, ಬೆಳ್ಳಿ ಕೊಳಲು, ಬಟ್ಟಲಿನಲ್ಲಿ ಅಕ್ಕಿ ಇಡಬೇಕು ಇದರಿಂದ ಮನೆಯ ವಾಸ್ತು ದೋಷ ನಿವಾರಣೆ ಆಗುತ್ತದೆ ಸುಖ, ನೆಮ್ಮದಿ, ಶಾಂತಿ ಮತ್ತು ಸಂಪತ್ತು ನೆಲೆಸುತ್ತದೆ.

ಮೂರು ಪಾವು ಅಕ್ಕಿಯನ್ನು ಒಂದು ಬಟ್ಟಲಿಗೆ ಹಾಕಿ, ಅದರ ಮೇಲೆ ಅರಿಶಿಣ ಕೊಂಬನ್ನು ಇಡಬೇಕು ಹಾಗೆ ಅರಿಶಿಣ ಕುಂಕುಮ ಇಟ್ಟು ಪ್ರತಿ ದಿನ ಪೂಜೆ ಮಾಡಬೇಕು. ಇದರಿಂದ ಅನ್ನಪೂರ್ಣೇಶ್ವರಿ ಹಾಗೂ ಮಹಾಲಕ್ಷ್ಮಿ ಕೃಪೆ ಸಿಗುತ್ತದೆ. ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆಗೆ ಅಕ್ಕಿಯನ್ನು ಬದಲಾವಣೆ ಮಾಡಬೇಕು.

ಒಂದು ಕಣ್ಣಿನ ತೆಂಗಿನಕಾಯಿ ಇಟ್ಟು ಪೂಜೆ ಮಾಡುವುದು ಉತ್ತಮ ಎಂದು ಹೇಳಲಾಗುತ್ತದೆ. ತೆಂಗಿನಕಾಯಿಗೆ ಕೆಂಪು ಬಣ್ಣ ಹಚ್ಚಿ ಕೆಂಪು ಬಟ್ಟೆಯಲ್ಲಿ ಸುತ್ತಿ ಪೂಜೆ ಮಾಡುವ ಕೋಣೆಯಲ್ಲಿ ಇಡಬೇಕು ಮತ್ತು ಪೂಜೆ ಮಾಡಬೇಕು. ಇದರಿಂದ, ಮನೆಯ ಎಲ್ಲಾ ಆರ್ಥಿಕ ಸಮಸ್ಯೆಗಳು ದೂರ ಆಗುತ್ತದೆ.

ಮನೆಯಲ್ಲಿ ವಾಸ್ತು ಸಮಸ್ಯೆ ದೂರ ಮಾಡಬೇಕು ಎಂದರೆ ಬೆಳ್ಳಿ ಶಿವಲಿಂಗ ಇಡಬೇಕು. ಶಿವಲಿಂಗಕ್ಕೆ ನಿಯಮಿತವಾಗಿ ಪೂಜೆ ಮಾಡುವುದರಿಂದ ಮನೆಯ ಎಲ್ಲಾ ರೀತಿಯ ತೊಂದರೆಗಳಿಗೆ ಮುಕ್ತಿ ದೊರಕುತ್ತದೆ. ಮನೆಯಲ್ಲಿ ಬಿಳಿ ಓಕ್ ಗಿಡವನ್ನು ನೆಡಬೇಕು ಈ ಗಿಡದಲ್ಲಿ ಭಗವಂತ ಶ್ರೀ ಗಣೇಶ ನೆಲೆಸಿರುತ್ತಾನೆ. ಈ ಸಸ್ಯ ಶಿವನಿಗೆ ತುಂಬ ಪ್ರಿಯವಾದದ್ದು ಇದು ಆರ್ಥಿಕ ಸ್ಥಿತಿಯ ವೃದ್ಧಿಯಾಗುವುದರ ಜೊತೆಗೆ ಗಟ್ಟಿ ಮಾಡುತ್ತದೆ. ಸಾಲಿಗ್ರಾಮ ವಿಷ್ಣುವಿನ ಅವತಾರ ಎಂದು ಪರಿಗಣಿಸಲಾಗಿದೆ ಇದನ್ನು ದೇವರ ಪೂಜೆ ಮಾಡುವ ಸ್ಥಳದಲ್ಲಿ ಇಟ್ಟರೆ ಹೆಚ್ಚು ಶುಭ ತರುತ್ತದೆ. ವಾಸ್ತು ದೋಷ ಸಾಲಿಗ್ರಾಮ ಪೂಜೆ ಮಾಡುವ ಮನೆಯಲ್ಲಿ ಗೋಚರ ಆಗುವುದಿಲ್ಲ.

ಮರದಿಂದ ಮಾಡಿರುವ ವಿಘ್ನೇಶ್ವರನ ಪೂಜೆ ಮಾಡುವುದು ಮನೆಗೆ ಹೆಚ್ಚು ಸಮೃದ್ಧಿ ತಂದುಕೊಡುತ್ತದೆ ಮತ್ತು ಸಂಪತ್ತು ದ್ವಿಗುಣ ಮಾಡುತ್ತದೆ. ಲಕ್ಷ್ಮೀದೇವಿ ಕೃಪೆ ಅಷ್ಟು ಬೇಗ ಸಿಗುವುದಿಲ್ಲ ಆದರೆ ಕೆಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ದೇವರ ಅನುಗ್ರಹ ಸಿದ್ಧಿಸುತ್ತದೆ.

ಕುಬೇರ ಪ್ರತಿಮೆಗೆ ಪೂಜೆ ಮಾಡಬೇಕು ಆ ದೇವರು ಧಾನ ರಕ್ಷಕ ಎಂದು ಕರೆಯಲ್ಪಡುತ್ತಾರೆ. ಕುಬೇರ ಪ್ರತಿಮೆಗೆ ಪೂಜೆ ಮಾಡಿದರೆ ಲಕ್ಷ್ಮೀ ದೇವಿ ಸಂತೋಷ ಪಟ್ಟು ವರ ಕೊಡುವಳು. ವ್ರತ ಆಚರಣೆ ಮಾಡವ ಜಾಗ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಕವಡೆ ಲಕ್ಷ್ಮೀ ದೇವಿಗೆ ಹೆಚ್ಚು ಪ್ರಿಯವಾದ ವಸ್ತು ಹಾಗೂ ಇದಕ್ಕೂ ಹಣ ಕಾಸಿನ ವಿಚಾರಕ್ಕೆ ಸಂಬಂಧ ಇದೆ.

ಪಾದರಸದ ಲಕ್ಷ್ಮೀ ಪ್ರತಿಮೆ ಹೆಚ್ಚು ಶ್ರೇಷ್ಠ ಮತ್ತು ವಿಶೇಷವಾಗಿ ಇರುತ್ತದೆ. ಈ ಪ್ರತಿಮೆಗೆ ಪೂಜೆ ಮಾಡಿದರೆ ಒಳ್ಳೆಯದು ಮತ್ತು ಬಹು ಬೇಗ ಅಭಿವೃದ್ದಿ ಸಿಗುತ್ತದೆ. ಗಾತ್ರದಲ್ಲಿ ಚಿಕ್ಕದಾಗಿ ಇರುವ ತೆಂಗಿನಕಾಯಿ ಲಕ್ಷ್ಮೀ ದೇವಿಗೆ ತುಂಬ ಇಷ್ಟ. ಇದನ್ನು ಷರೀಫಲ್ ಎಂದು ಕರೆಯುವರು ಮತ್ತು ಅದು ಲಕ್ಷ್ಮೀ ಫಲ ಎಂದೇ ಪ್ರಖ್ಯಾತಿ. ಮನೆಯಲ್ಲಿ ಇದನ್ನು ದೇವರ ಕೋಣೆಯಲ್ಲಿ ಇಟ್ಟರೆ ಉತ್ತಮ ಫಲ ಸಿಗುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: