WhatsApp Group Join Now
Telegram Group Join Now

ಸುಖಮಯ ದಾಂಪತ್ಯ ನಡೆಸಲು ಕೆಲವು ಸೂತ್ರಗಳಿವೆ. ಈಗಿನ ಒತ್ತಡದ ಜೀವನದಲ್ಲಿ ಗಂಡ ಹೆಂಡತಿ ಸಂತೋಷವಾಗಿ ಜೀವನ ಮಾಡುವುದಕ್ಕಿಂತ ಜಗಳ ಮಾಡುತ್ತಾ ಬೇಸರದಿಂದ ಕಾಲ ಕಳೆಯುತ್ತಾರೆ ಆದರೆ ಎಷ್ಟೆ ಕೋಪವಿದ್ದರು ಕೆಲವು ಸೂತ್ರಗಳನ್ನು ಅನುಸರಿಸಿದರೆ ದಾಂಪತ್ಯದ ಸವಿ ಸವಿಯಲು ಸಾಧ್ಯ ಹಾಗಾದರೆ ದಾಂಪತ್ಯದ ಸೂತ್ರಗಳನ್ನು ಈ ಲೇಖನದಲ್ಲಿ ನೋಡೋಣ

ಈಗಿನ ಕಾಲದಲ್ಲಿ ಒತ್ತಡದ ಜೀವನ ಗಂಡ ಹೆಂಡತಿ ಇಬ್ಬರು ಕೆಲಸಕ್ಕೆ ಹೋಗುವ ಆತುರದ ನಡುವೆ ಮಾಧುರ್ಯವು ಕಡಿಮೆ ಆಗಿದೆ. ದಂಪತಿಗಳ ನಡುವೆ ಸರಸಕ್ಕಿಂತ ವಿರಸ ಹೆಚ್ಚಾಗಿದೆ. ದಂಪತಿಗಳ ನಡುವೆ ಸಂಬಂಧ ಸರಿಯಾಗಲು ದೊಡ್ಡ ದೊಡ್ಡ ಘಟನೆಗಳು ನಡೆಯಬೇಕೆಂದಿಲ್ಲ ಸಣ್ಣ ಸಣ್ಣ ಕೆಲವು ಸೂತ್ರಗಳಿಂದ ದಂಪತಿಗಳ ನಡುವೆ ಸುಮಧುರ ಬಾಂಧವ್ಯ ಬೆಸೆಯುತ್ತದೆ. ಸಂಗಾತಿಗಳ ನಡುವೆ ಎಂತಹ ಕೋಪ, ವಿರಸವಿದ್ದರು ಒಂದು ಸ್ಪರ್ಶದಿಂದ ಎಲ್ಲವನ್ನು ಮರೆಸುವ ಮಾಂತ್ರಿಕ ಶಕ್ತಿ ಇದೆ. ಇಬ್ಬರ ನಡುವೆ ಬಾಂಧವ್ಯ ಉತ್ತಮವಾಗಿ ಬೆಸೆಯಲು ಇಬ್ಬರು ಜೊತೆಯಾಗಿ ಕೈ ಕೈ ಹಿಡಿದುಕೊಂಡು ಸಿನಿಮಾ ನೋಡುವುದು, ಕೈ ಹಿಡಿದುಕೊಂಡು ಪ್ರೇಮಿಗಳಂತೆ ಪಾರ್ಕ್ ನಲ್ಲಿ ಸುತ್ತಾಡಿ ಒಂದೆ ತಟ್ಟೆಯಲ್ಲಿ ಊಟ ಮಾಡುವುದರಿಂದ ಇಬ್ಬರ ನಡುವಿನ ಸಂಬಂಧ ತಿಳಿಯಾಗಿ ಪ್ರೀತಿ ಕಾಣುತ್ತದೆ.

ಮನಸ್ಥಾಪವಾದಾಗ ಒಬ್ಬರೆ ನಿರ್ಧಾರಕ್ಕೆ ಬರಬಾರದು ಸಂಬಂಧದಲ್ಲಿ ಬಿರುಕು ಮೂಡಲು ಸರಿಯಾದ ಕಾರಣವಿರುತ್ತದೆ ಅದನ್ನು ತಿಳಿದುಕೊಳ್ಳದೆ ಅವರ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಾರದು. ಗಂಡ ಹೆಂಡತಿ ಇಬ್ಬರಲ್ಲಿ ಒಬ್ಬರು ಕಾಲ್ ಮಾಡಿದಾಗ ರಿಸಿವ್ ಮಾಡಿಲ್ಲ ಎಂದಮಾತ್ರಕ್ಕೆ ಅವರು ನಿರ್ಲಕ್ಷ ಮಾಡುತ್ತಿದ್ದಾರೆ ಎಂದು ತಿಳಿಯಬಾರದು, ಅವರ ಫೋನ್ ನಂಬರ್ ಬ್ಯುಸಿ ಬಂದರೆ ನನಗಿಂತ ಇನ್ಯಾರೊ ಮುಖ್ಯ ಎಂದು ತಿಳಿಯುವುದು ಹೀಗೆ ಇಲ್ಲ ಸಲ್ಲದ ಯೋಚನೆ ಮಾಡುವ ಬದಲು ನಿಧಾನವಾಗಿ ಯೋಚಿಸಿ ಅವರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು.

ಸಂಗಾತಿಯ ಮನಸನ್ನು ಅರ್ಥ ಮಾಡಿಕೊಂಡಾಗಲೆ ಸಂಬಂಧದಲ್ಲಿ ಬಾಂಧವ್ಯ ಬೆಸೆಯುತ್ತದೆ. ಬೇರೆಯವರ ಎದುರು ಗಂಡನಾದವನು ಹೆಂಡತಿಯನ್ನು ಬಿಟ್ಟುಕೊಡಬಾರದು, ಗಂಡ ಹೆಂಡತಿಯ ನಡುವೆ ಎಷ್ಟೆ, ಜಗಳ ಮನಸ್ಥಾಪವಿರಲಿ ನಾಲ್ಕು ಗೋಡೆಯ ನಡುವೆ ಇರಲಿ ಅಥವಾ ಇಬ್ಬರ ನಡುವೆ ಯುದ್ಧವೆ ಆಗಿರಲಿ ಪ್ರಪಂಚಕ್ಕೆ ಅದನ್ನು ತೋರಿಸಬಾರದು. ಇನ್ನೊಬ್ಬರ ಮುಂದೆ ತಮ್ಮ ಪ್ರೀತಿಯನ್ನು ಬಿಟ್ಟುಕೊಡಬಾರದು ಹೀಗೆ ಮಾಡುವುದರಿಂದ ಮೊದಲಿಗಿಂತ ಸಂಬಂಧದಲ್ಲಿ ಬಾಂಧವ್ಯ ಹೆಚ್ಚುತ್ತದೆ.

ಕೃತಜ್ಞತಾ ಭಾವನೆಯಿರಲಿ ಗಂಡನಾಗಲಿ ಹೆಂಡತಿಯಾಗಲಿ ಕೆಲಸದ ಆಳಲ್ಲ, ಜೀವನದ ಒಂದು ಮುಖ್ಯ ಭಾಗವಾಗಿರುತ್ತದೆ ಕೃತಜ್ಞತಾ ಭಾವವಿರಬೇಕು. ಇಬ್ಬರಲ್ಲಿ ಒಬ್ಬರು ಕಾಂಪ್ಲಿಮೆಂಟ್ ಕೊಟ್ಟರೆ ಸ್ವೀಕರಿಸಬೇಕು. ಸಂಗಾತಿ ಖುಷಿಯಿಂದ ತಮ್ಮ ಬಗ್ಗೆ ಕಾಂಪ್ಲಿಮೆಂಟ್ ಕೊಟ್ಟರೆ ವ್ಯಂಗ್ಯ ಮಾಡದೆ ಒಪ್ಪಿ ಅಪ್ಪಿಕೊಳ್ಳಬೇಕು ಇದೇನು ನೀನು ಥ್ಯಾಂಕ್ಸ್ ಹೇಳಬೇಕು ಎಂದು ಮಾಡಿದ್ದಲ್ಲ ಎಂಬ ಅಸಡ್ಡೆಯ ಮಾತುಗಳನ್ನು ಆಡದೆ ಅವರ ಖುಷಿ ನನ್ನ ಖುಷಿ ಎಂಬ ಭಾವವಿರಲಿ ಇದರಿಂದ ಸಂಬಂಧವನ್ನು ಗಟ್ಟಿಗೊಳಿಸುತ್ತದೆ.

ಸಣ್ಣ ಸಣ್ಣ ಖುಷಿಗಳನ್ನು ಸೆಲೆಬ್ರೇಟ್ ಮಾಡಬೇಕು ಸಂಬಂಧದಲ್ಲಿ ಖುಷಿ ಹೆಚ್ಚಲು ದೊಡ್ಡ ದೊಡ್ಡ ಘಟನೆಗಳು ನಡೆಯಬೇಕೆಂದಿಲ್ಲ ಸಣ್ಣ ಸಣ್ಣ ಖುಷಿಗಳನ್ನು ಜೊತೆಯಾಗಿ ಎಂಜಾಯ್ ಮಾಡಿದಾಗ ಸಂಬಂಧದಲ್ಲಿ ಹೀಗೆ ದಾಂಪತ್ಯದಲ್ಲಿ ಸೂಕ್ಷ್ಮ ವಿಚಾರಗಳನ್ನು ಅರಿತು ಮುಂದೆ ಸಾಗಿದಾಗ ಬದುಕು ಸುಂದರವಾಗಿರುತ್ತದೆ. ನಾ ನಿನಗೆ ನಿ ನನಗೆ ಎನ್ನುತ್ತಾ ಒಬ್ಬರಿಗೊಬ್ಬರು ಹೆಗಲಾಗುವ ಮೂಲಕ ಸಂಸಾರದ ನೊಗದ ಭಾರವನ್ನು ಹೊರುತ್ತಾ ಸಂಬಂಧದಲ್ಲಿ ಬಾಂಧವ್ಯ ಹೆಚ್ಚುತ್ತದೆ. ಹೀಗೆ ಗಂಡ ಹೆಂಡತಿಯ ನಡುವೆ ಸಂಬಂಧ ಉತ್ತಮವಾಗಿರುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: