cancer sign in kannada: ಅಕ್ಟೋಬರ್ 30 ನೇ ತಾರೀಕು ರಾಹುವಿನ ಪರಿವರ್ತನೆಯೊಂದಿಗೆ ಕೇತು ಸಹ ಪರಿವರ್ತನೆ ಹೊಂದುತ್ತಾನೆ ರಾಘವೇಂದ್ರ ನಿಮಗೆ ಸಾಮಾನ್ಯ ಫಲ ಕಂಡು ಬಂದರೆ ಕೇತುವಿನಿಂದ ನಿಮಗೆ ಒಳ್ಳೆಯ ಫಲಗಳು ಕಂಡುಬರುತ್ತವೆ ಅಷ್ಟೇ ಅಲ್ಲದೆ ನಿಮ್ಮನ್ನ ಉತ್ತಮ ದಾರಿಯಲ್ಲಿ ನಡೆಸಲು ಕೇತು ಸಹಾಯಕನಾಗಿ ನಿಲ್ಲುತ್ತಾನೆ.
ರಾಹು ಮತ್ತು ಕೇತುಗಳು ಎರಡು ಒಂದೇ ಮುಖದ ಎರಡು ಭಾಗಗಳಾಗಿದ್ದರು ಸಹ ಕೇತು ರಾಹುಗಿಂತ ಒಳ್ಳೆಯ ಫಲಗಳನ್ನು ನೀಡುವಲ್ಲಿ ನಿಸೀಮನಾಗಿದ್ದಾನೆ. ಕೇತು ನಿಮ್ಮ ರಾಶಿಯ ಇರುವುದರಿಂದ ನೀವು ನಿಮ್ಮ ಸಹೋದರರಿಗೆ ಸಂಬಂಧಪಟ್ಟ ಕೆಲವೊಂದು ಶುಭ ಸಂದೇಶಗಳನ್ನು ಕೇಳಬಹುದು ಉದಾಹರಣೆಗೆ ಕುಟುಂಬದಲ್ಲಿ ಸಹೋದರ ಸಹೋದರಿಯರ ನಡುವೆ ಇರುವ ಭಿನ್ನಾಭಿಪ್ರಾಯಗಳು ಹಾಗೂ ಇನ್ನಿತರ ದೋಷಗಳು ಈ ಸಮಯದಲ್ಲಿ ನಿವಾರಣೆಯಾಗುತ್ತವೆ.
ಹಾಗೆಯೇ ನಿಮ್ಮ ಜೀವನದಲ್ಲಿ ಏನೇ ತೊಂದರೆಗಳು ಬಂದರೂ ಸಹ ಧೈರ್ಯದಿಂದ ಎದುರಿಸುವ ಶಕ್ತಿಯನ್ನು ಕೇತು ನಿಮಗೆ ನೀಡುತ್ತಾನೆ ಹೆಚ್ಚಿನ ಜನರು ಶೌರ್ಯ ಮತ್ತು ಸಾಹಸದಿಂದ ಗೆಲುವು ಸಾಧಿಸಬಹುದು ಅಥವಾ ತಮ್ಮ ಪ್ರಾಮಾಣಿಕತೆಯಿಂದ ನೇರವಾಗಿ ಕೆಲಸವನ್ನು ಮುಗಿಸಬಹುದು. ಹನಿಯೂ ನಿಮ್ಮ ರಾಶಿಯಲ್ಲಿ ಅಷ್ಟಮ ಸ್ಥಾನದಲ್ಲಿ ರುವುದರಿಂದ ನೀವು ಇತರರ ಮೇಲೆ ಅನುಮಾನ ಪಡುವ ಸಂದರ್ಭವು ಬರಬಹುದು ಹಾಗೆಯೇ ಯಾವುದಾದರೂ ಕಾರಣಕ್ಕೆ ನೆರೆಹೊರೆಯವರೊಂದಿಗೆ ಜಗಳವಾಗಿದ್ದಲ್ಲಿ ಅದು ಕೂಡ ಈ ಸಮಯದಲ್ಲಿ ಸುಧಾರಿಸಬಹುದು.
ಇನ್ನು ಕೆಲವರಿಗೆ ಕೇತು ಶ್ರೀಮಂತಿಕೆಯನ್ನು ಕೊಡಬಹುದು ಕೆಲವರಿಗೆ ಈ ಸಮಯದಲ್ಲಿ ಮುಂಬಡ್ತಿ ಕೂಡ ಹೊಂದುವ ಸಾಧ್ಯತೆ ಇದೆ ಹಾಗೆ ಸಮಾಜದಲ್ಲಿ ಉತ್ತಮ ಹೆಸರು ಮಾಡುವ ಅವಕಾಶಗಳು ಒದಗಿ ಬರುತ್ತವೆ. ಕೇತು ನಿಮ್ಮ ದುಡ್ಡಿನ ಮೂಲವನ್ನ ಜಾಸ್ತಿ ಮಾಡುತ್ತಾನೆ ಇನ್ನು ಒಂದೂವರೆ ವರ್ಷಗಳ ಕಾಲ ನಿಮ್ಮ ರಾಶಿಯಲ್ಲಿ ಕೇತು ಶುಭ ಫಲಗಳನ್ನು ನೀಡುತ್ತಾ ಹೋಗುತ್ತಾನೆ.
ಕಟಕ ರಾಶಿಯ ಕೆಲವು ಜನರು ನಿಮ್ಮ ನಾಯಕತ್ವದ ಗುಣಗಳಿಂದ ಎಲ್ಲೆಡೆಗೆ ಜನಪ್ರಿಯತೆಯನ್ನು ಗಳಿಸುವ ಸಾಧ್ಯತೆ ಕೂಡ ಕಂಡು ಬರಲಿದೆ ಹಾಗೆಯೇ ತೀರ್ಥಯಾತ್ರೆಗೆ ಹೋಗುವ ಸಾಧ್ಯತೆ ಕೂಡ ಹೆಚ್ಚಾಗಿ ಕಂಡು ಬರಲಿದೆ ಇನ್ನು ಆರೋಗ್ಯದ ವಿಚಾರದಲ್ಲಿಯೂ ಸಹ ಅನುಭವಿಸುತ್ತಿದ್ದ ಸಮಸ್ಯೆಗಳು ಈ ಸಮಯದಲ್ಲಿ ನಿಧಾನವಾಗಿ ದೂರ ಆಗುತ್ತವೆ ನಿಮ್ಮ ಆರೋಗ್ಯದಲ್ಲಿ ಚೇತರಿಕೆಯನ್ನ ಈ ಸಮಯದಲ್ಲಿ ನೀವು ಕಂಡುಕೊಳ್ಳುತ್ತೀರಿ. ಮುಂದಿನ ಒಂದುವರೆ ವರ್ಷಗಳ ಕಾಲ ಕೇತು ನಿಮ್ಮ ಜೀವನವನ್ನು ನಿಧಾನಗತಿಯಲ್ಲಿ ಸುಧಾರಿಸುತ್ತ ಹೋಗುತ್ತಾನೆ.