ಬ್ರಹ್ಮ ತನ್ನ ಸ್ವಂತ ಮಗಳನ್ನೇ ಮದುವೆ ಆಗಿದ್ದು ಯಾಕೆ

0

ಹಿಂದೂ ಧರ್ಮದಲ್ಲಿ ಅನೇಕ ಪುರಾಣಗಳು ಹಾಗೂ ದಂತ ಕತೆಗಳು ಗ್ರಂಥಗಳು ಒಂದಕ್ಕಿಂತ ಇನ್ನೊಂದು ವಿಶೇಷವಾಗಿದೆ ಸನಾತನ ಧರ್ಮದಲ್ಲಿ ಬರುವ ತ್ರಿಮೂರ್ತಿಗಳಲ್ಲಿ ಬ್ರಹ್ಮನು ಪ್ರಮುಖನು ಹಾಗೆಯೇ ಹಿಂದೂ ಧರ್ಮದಲ್ಲಿ ಬ್ರಹ್ಮನನ್ನು ಇಡೀ ಜೀವ ಕುಲದ ಸ್ತೃಷ್ಟಿಕರ್ತ ಎಂದು ಕರೆಯುತ್ತಾರೆ ಪುರಾಣಗಳ ಪ್ರಕಾರ ಬ್ರಹ್ಮ ದೇವನು ಸಹ ಶಾಪಕ್ಕೆ ಗುರಿಯಾಗಿದ್ದನು ಬ್ರಹ್ಮನಿಗೆ ರಾಜಸ್ಥಾನದ ಪುಷ್ಕರ ಎನ್ನುವ ದೇವಾಲಯವನ್ನು ಹೊರತುಪಡಿಸಿ ಎಲ್ಲೂ ಸಹ ಪೂಜೆಯನ್ನು ಸಲ್ಲಿಸುವುದು ಇಲ್ಲ ಭೂಮಂಡಲದ ಸೃಷ್ಟಿ ಕರ್ತ ಆದರೂ ಸಹ ಬ್ರಹ್ಮನಿಗೆ ಪೂಜೆ ಸಲ್ಲಿಸುವುದು ಇಲ್ಲ

ಬ್ರಹ್ಮನ ಮಗಳು ತಾಯಿ ಸರಸ್ವತಿ ದೇವಿ ಹಾಗೆಯೇ ಪುರಾಣದ ಪ್ರಕಾರ ಬ್ರಹ್ಮನು ತನ್ನ ಮಗಳ ರೂಪ ಲಾವಣ್ಯಕ್ಕೇ ಮನಸೋತು ತನ್ನ ಮಗಳನ್ನೇ ಮದುವೆ ಆದ ಎಂದು ಉಲ್ಲೇಖ ಇರುತ್ತದೆ ತುಂಬಾ ಜನರಿಗೆ ಸ್ತೃಷ್ಟಿ ಕರ್ತ ಬ್ರಹ್ಮನೇ ಮಗಳನ್ನೇ ವಿವಾಹ ಆಗಿದ್ದನಾ ಮನವರಲ್ಲಿಯೆ ಮಗಳನ್ನು ವಿವಾಹ ಆಗಲು ಅನುಮತಿ ಇಲ್ಲದೆ ಇರುವಾಗ ದೇವನು ದೇವತೆಗಳಲ್ಲಿ ಈ ತರಹದ ವಿವಾಹ ಆಗಲು ಸಾಧ್ಯವೇ ಎನ್ನುವ ಕುತೂಹಲ ಇದ್ದೇ ಇರುತ್ತದೆ ನಾವು ಈ ಲೇಖನದ ಮೂಲಕ ಸೃಷ್ಟಿಕರ್ತ ಬ್ರಹ್ಮ ಮಗಳನ್ನು ವಿವಾಹ ಯಾಕೆ ಆಗಿದ್ದನು ಹಾಗೂ ಬ್ರಹ್ಮನಿಗೆ ಭೂಮಂಡಲದಲ್ಲಿ ಪೂಜೆ ಸಲ್ಲಿಸದೆ ಇರಲು ಕಾರಣವನ್ನು ತಿಳಿದುಕೊಳ್ಳೋಣ.

ಮನುಷ್ಯರ ಹಣೆ ಬರಹವನ್ನು ಬರೆಯುವವನು ಬ್ರಹ್ಮ ವಿದ್ಯೆ ಬುದ್ಧಿ ವಿಷಯದಲ್ಲಿ ಸರಸ್ವತಿಯನ್ನು ಆರಾಧನೆ ಮಾಡಲಾಗುತ್ತದೆ ಹಿಂದೂ ಧರ್ಮದ ಪ್ರಮುಖ ಪೂರಣಗಳಾದ ಮತ್ಸ್ಯ ಪುರಾಣ ಹಾಗೂ ಸರಸ್ವತಿ ಪುರಾಣಗಳಲ್ಲಿ ಉಲ್ಲೇಖ ಆಗಿರುವ ಹಾಗೆ ಬ್ರಹ್ಮ ದೇವನು ಸ್ತೃಷ್ಟಿಯನ್ನು ರೂಪಿಸುವಾಗ ರಾಕ್ಷಸರು ಹಗಲು ರಾತ್ರಿ ಸಣ್ಣ ಹಾಗೂ ದೊಡ್ಡ ಜೀವದ ಅನೇಕ ಸಂಕುಲವನ್ನು ಸೃಷ್ಟಿ ಮಾಡುತ್ತಾನೆ ಹಾಗೆಯೇ ನನ್ನ ಜೊತೆಗೆ ಇರಲು ಯಾರು ಇಲ್ಲವಲ್ಲ ಎಂದ ಬ್ರಹ್ಮ ತನ್ನ ಶಕ್ತಿಯನ್ನು ಬಳಸು ಸರಸ್ವತಿಯನ್ನು ಸೃಷ್ಟಿ ಮಾಡುತ್ತಾನೆ ಇನ್ನೊಂದು ರೀತಿಯಲ್ಲಿ ತನ್ನ ವೀರ್ಯದಿಂದ ಸರಸ್ವತಿಯನ್ನು ಸೃಷ್ಟಿ ಮಾಡಿದ ಎಂದು ಹೇಳಲಾಗುತ್ತದೆ.

ಈ ರೀತಿಯಾಗಿ ಸೃಷ್ಟಿದ ಸರಸ್ವತಿ ತುಂಬಾ ಸುಂದರಿಯಾಗಿ ಇದ್ದಳು ಹಾಗೆಯೇ ಅವಳನ್ನು ನೋಡಿ ಬ್ರಹ್ಮ ದೇವನೇ ಆಶ್ಚರ್ಯ ಪಟ್ಟಿದ್ದನು ಅಷ್ಟರ ಮಟ್ಟಿಗೆ ಸರಸ್ವತಿ ಸುಂದರಿಯಾಗಿ ಇದ್ದಳು ಬ್ರಹ್ಮನು ಅವಳ ಸೌಂದರ್ಯಕ್ಕೆ ಸೋತು ತನ್ನ ಮಗಳಾದ ಸರಸ್ವತಿಯನ್ನು ಪ್ರೀತಿಸಲು ಪ್ರಾರಂಭಿಸಿದನು ತನ್ನ ಪೂರ್ತಿ ದೃಷ್ಟಿಯನ್ನು ಸರಸ್ವತಿಯ ಮೇಲೆ ಹರಿಸಲು ಪ್ರಾರಂಭಿಸಿದನು ಬ್ರಹ್ಮ ದೇವನು ಈ ವರ್ತನೆಯನ್ನು ಕಂಡಂತಹ ಸರಸ್ವತಿ ಬ್ರಹ್ಮ ದೇವನ ಪ್ರೇಮದ ಉದ್ದೇಶ ಅರ್ಥವಾಗಿ ಬ್ರಹ್ಮ ದೇವನ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾಳೆ .

ಬ್ರಹ್ಮ ದೇವನಿಗೆ 4 ತಲೆಯ ಬದಲಾಗಿ 5 ತಲೆ ಇತ್ತು ಹೀಗಾಗಿ ಸರಸ್ವತಿ 4 ದಿಕ್ಕುಗಳಲ್ಲಿ ತಪ್ಪಿಸಿಕೊಳ್ಳುತ್ತಾಳೆ ಸರಸ್ವತಿ ಯಾವ ದಿಕ್ಕಿಗೆ ಹೋದರು ಸಹ ಸರಸ್ವತಿ ದೇವಿಯ ಮೇಲೆ ದೃಷ್ಟಿ ಹಾಕಿದ್ದರು ಸರಸ್ವತಿ 4 ದಿಕ್ಕುಗಳನ್ನು ಬಿಟ್ಟು ಮೇಲಿನ 5ನೇ ದಿಕ್ಕಿಗೆ ಅಡಗಿ ಕುಳಿತಿದ್ದಳು ಆದರೆ ಬ್ರಹ್ಮ 5ನೆಯ ತಲೆಯಿಂದ ಕಂಡು ಹಿಡಿತಿದ್ದರು ಇದರಿಂದ ಸರಸ್ವತಿ ದೇವಿಗೆ ಬೇರೆ ದಾರಿ ಕಾಣದೆ ಬ್ರಹ್ಮ ದೇವರ ಜೊತೆಗೆ ಮದುವೆ ಆಗಲು ಒಪ್ಪುವಂತ ಪರಿಸ್ಥಿತಿ ಬರುತ್ತದೆ ನಂತರ ಬ್ರಹ್ಮ ದೇವಾನು ತನ್ನ ಮಗಳು ಎಂದು ಭಾವಿಸದೆ ಅವಳ ಚೆಲುವಿಗೆ ಮಾರು ಹೋಗಿ ಮದುವೆ ಆಗಲು ನಿರ್ಧರಿಸುತ್ತಾನೆ

ನಂತರ ಒಂದು ಜಾಗಕ್ಕೆ ಹಾಗೂ 100 ವರ್ಷಗಳ ಕಾಲ ಪತಿ ಪತ್ನಿಯಾಗಿ ಬದುಕುತ್ತಾರೆ. ಅವರಿಬ್ಬರಿಗೂ ಮನು ಎನ್ನುವ ಮಗ ಹುಟ್ಟುತ್ತಾನೆ ಈ ರೀತಿಯಾಗಿ ಬ್ರಹ್ಮ ದೇವ ಸ್ವಂತ ಮಗಳನ್ನೆ ಮದುವೆ ಆಗುತ್ತಾನೆ ಹಾಗೆಯೇ ಸೃಷ್ಟಿಯ ಕಲ್ಯಾಣಕ್ಕಾಗಿ ಬ್ರಹ್ಮ ದೇವನು ಯಜ್ಞ ಮಾಡಬೇಕಾಗಿ ಇರುತ್ತದೆ ಅದಕ್ಕೆ ಸೂಕ್ತವಾದ ಸ್ಥಳ ಬೇಕಾಗಿ ಇರುತ್ತದೆ ಅದಕ್ಕೆ ತನ್ನ ಕಮಲವನ್ನು ಭೂಮಿಗೆ ಬಿಡುತ್ತಾನೆ ಆಗ ಆ ಕಮಲ ರಾಜಸ್ಥಾನದ ಪುಷ್ಕರ ಎನ್ನುವಲ್ಲಿ ಬೀಳುತ್ತದೆ ಆ ಸ್ಥಳದಲ್ಲಿ ಯಜ್ಞ ಮಾಡಲು ನಿರ್ಧಾರ ಮಾಡಲಾಗುತ್ತದೆ .

ಯಜ್ಞ ಮಾಡಲು ಆ ಸ್ಥಳದಲ್ಲಿ ಹೆಣ್ಣು ಇರಬೇಕು ಹಾಗೆಯೇ ಆ ಹೆಣ್ಣು ಬ್ರಹ್ಮ ದೇವನ ಪತ್ನಿಗೆ ಆಗಿರಬೇಕು ಎಂದು ಇರುತ್ತದೆ ಹಾಗಿರುವಾಗ ಆದರೆ ಬ್ರಹ್ಮ ದೇವರ ಪತ್ನಿ ಸರಸ್ವತಿ ಬರುವುದು ತುಂಬಾ ತಡ ಆಗುತ್ತದೆ ಯಜ್ಞದ ಸಮಯ ಸಹ ಮೀರಿ ಹೋಗುತ್ತಾ ಇರುತ್ತದೆ ಆ ಸಮಯದಲ್ಲಿ ಬ್ರಹ್ಮನಿಗೆ ಏನು ತೋಚದೆ ಆಗ ಬ್ರಹ್ಮ ಮತ್ತೊಂದು ಮದುವೆ ಆಗಿ ಆ ಹೆಣ್ಣಿನ ಜೊತೆಗೆ ಯಜ್ಞವನ್ನು ಪೂರ್ಣಗೋಳಿಸಲಾಗುತ್ತದೆ ಇದರಿಂದ ಕೋಪಗೊಂಡ ಸರಸ್ವತಿ ಈ ಲೋಕದಲ್ಲಿ ಯಾರು ಸಹ ಪೂಜಿಸುವುದು ಇಲ್ಲ ಯಾವ ಕಾರ್ಯಗಳಲ್ಲಿ ಸಹ ನೀನು ನೆನಪು ಆಗುವುದು ಇಲ್ಲ ಶಾಪ ಕೊಡುತ್ತಾಳೆ ಆದರೆ ಬ್ರಹ್ಮ ದೇವ ಮತ್ತೊಂದು ಮದುವೆ ಆಗಿದ್ದು ಲೋಕ ಕಲ್ಯಾಣಕ್ಕಾಗಿ ಎಂದು ತಿಳಿದಾಗ ಸರಸ್ವತಿ ಯಜ್ಞ ಮಾಡಿದ ಸ್ಥಳದಲ್ಲಿ ಪೂಜಿಸಲಾಗುತ್ತದೆ ಮತ್ತೊಂದು ವರವನ್ನು ನೀಡಲಾಗುತ್ತದೆ. ಮತ್ತೊಂದು ಪುರಾಣದ ಪ್ರಕಾರ ಬ್ರಹ್ಮ ದೇವನು ತನ್ನ ಮಗಳಾದ ಸರಸ್ವತಿಯನ್ನು ಮದುವೆ ಆದ ವಿಚಾರವನ್ನು ತಿಳಿದ ಶಿವನು ಬ್ರಹ್ಮನ ಬಗ್ಗೆ ಕೋಪಗೊಂಡು ನೀನು ಮಾಡಿದ ಕೃತ್ಯಕ್ಕೆ ನಿನಗೆ ಯಾರು ಪೂಜಿಸುವುದು ಇಲ್ಲ ಎಂದು ಶಾಪ ನೀಡಿದನು ಎಂದು ಹೇಳಲಾಗುತ್ತದೆ

ಈ ಕಾರಣಗಳಿಂದ ಬ್ರಹ್ಮ ದೇವನು ಸೃಷ್ಟಿಕರ್ತ ಆಗಿದ್ದರು ಸಹ ಮಾಡಿದ ತಪ್ಪುಗಳಿಂದ ಅವನನ್ನು ಯಾರು ಕೂಡ ಅವನನ್ನು ಪೂಜಿಸುವುದು ಇಲ್ಲ ಎಂದು ಹೇಳಲಾಗುತ್ತದೆ ಇಂದಿಗೂ ಸಹ ರಾಜಸ್ಥಾನದ ಪುಷ್ಕರ ಎನ್ನುವ ಸ್ಥಳದಲ್ಲಿ ಮಾತ್ರ ಬ್ರಹ್ಮ ದೇವನನ್ನು ಪೂಜಿಸಲಾಗುತ್ತದೆ ಬ್ರಹ್ಮ ದೇವನಿಗೆ 5 ತಲೆ ಇತ್ತು ಸರಸ್ವತಿ ದೇವಿಯನ್ನು ಮದುವೆ ಆಗಲು ಬಯಸಿದ ಬ್ರಹ್ಮ ದೇವ ತನ್ನ ಪೂರ್ತಿ ದೃಷ್ಟಿಯನ್ನೂ ಸರಸ್ವತಿ ಮೇಲೆ ಇಡಲು ಇಷ್ಟ ಪಟ್ಟಿದ್ದನು ಹಾಗೆಯೇ ಸರಸ್ವತಿ ಯಾವ ದಿಕ್ಕಿಗೆ ಹೋದರು ಒಂದೊಂದು ತಲೆಯನ್ನು ಕಳುಹಿಸುತ್ತಿದ್ದನು ಆಗ ಬ್ರಹ್ಮನಿಂದ ತಪ್ಪಿಸಿಕೊಳ್ಳಲು ಶಿವನ ಹತ್ತಿರ ಹೋಗಿದ್ದಳು ಅಲ್ಲಿಗೂ ಬಂದ ಬ್ರಹ್ಮನನ್ನು ಕಂಡ ಶಿವನು ಬ್ರಹ್ಮನಿಗೆ ತಪ್ಪಿನ ಬಗ್ಗೆ ತಿಳಿ ಹೇಳಿದನು ಆದರೆ ಬ್ರಹ್ಮನ 5 ತಲೆಗಳು ಶಿವನ ಹತ್ತಿರ ವಾದವನ್ನು ಮಾಡಿದ್ದವು ಇದರಿಂದ ಕೋಪಗೊಂಡ ಶಿವನು ಬ್ರಹ್ಮನ 5 ತಲೆಯಲ್ಲಿ 1 ತಲೆಯನ್ನು ನಾಶ ಮಾಡಿದ್ದನು ಅಂದಿನಿಂದ ಬ್ರಹ್ಮನು 4 ತಲೆಯನ್ನು ಹೊಂದಿದ್ದಾನೆ ಹೀಗೆ ಬ್ರಹ್ಮ ದೇವನು ಮಾಡಿದ್ದುಣ್ಣೋ ಮಹರಾಯ ಎನ್ನುವ ಹಾಗೆ ಸ್ವಂತ ಮಗಳನ್ನೆ ಮದುವೆ ಆಗಿದ್ದು ಅಷ್ಟೇ ಅಲ್ಲದೆ ಯಾರು ಪೂಜಿಸದಂತೆ ಮಾಡಿಕೊಂಡನು ಹಾಗೆಯೇ ಇರುವ ತಲೆಯಲ್ಲಿ 4 ತಲೆಯನ್ನು ಮಾತ್ರ ಉಳಿಸಿಕೊಳ್ಳುವಂತೆ ಆಯಿತು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: