ಮಕ್ಕಳು ಯಾವ ವಾರದಂದು ಜನಿಸಿದರೆ ಯಾವ ಅದೃಷ್ಟ ಸಿಗುತ್ತದೆ ಎಂದು ನೋಡೋಣ. ಗಂಡು ಅಥವಾ ಹೆಣ್ಣು ಮಕ್ಕಳು ಕೆಲವೊಂದು ವಾರದಲ್ಲಿ ಜನಿಸಿದರೆ ಹುಟ್ಟಿದ ಮನೆಗೆ ಮತ್ತು ಮೆಟ್ಟಿದ ಮನೆಗೆ ಅದೃಷ್ಟ ತಂದು ಕೊಡ್ತಾರೆ. ಜೀವನವನ್ನು ಸುಗಮವಾಗಿ ನಡೆಸಿಕೊಂಡು ಸಾಗುತ್ತಾರೆ. ಜೋತಿಷ್ಯದ ಪ್ರಕಾರ ನಕ್ಷತ್ರ, ವಾರ, ತಿಥಿಗಳಲ್ಲಿ ಜನಿಸಿದರೆ ಅದರ ಮೇಲೆ ಗುಣ, ನಡತೆ, ಸ್ವಭಾವ ಅವಲಂಬಿತವಾಗಿ ಇರುತ್ತದೆ.
ರವಿವಾರದಂದು ಜನಿಸಿದ ಹೆಣ್ಣು ಮಕ್ಕಳು ತಮ್ಮ ಹುಟ್ಟಿನಿಂದ ಹುಟ್ಟಿದ ಮತ್ತು ಮೆಟ್ಟಿದ ಎರಡು ಮನೆಗೆ ಅದೃಷ್ಟವನ್ನು ತಂದು ಕೊಡ್ತಾರೆ, ಅಷ್ಟ ಐಶ್ವರ್ಯ ತಂದು ಕೊಡ್ತಾರೆ, ಧನ ಪ್ರಾಪ್ತಿ ಯೋಗ ತಂದು ಕೊಡ್ತಾರೆ.
ಮಹಾಲಕ್ಷ್ಮಿ ಯೋಗದಿಂದ ಅವರ ಇರುವ ಮನೆಯಲ್ಲಿ ಕೀರ್ತಿ, ಹಣ ಮತ್ತು ಅದೃಷ್ಟ ಸಿಗುತ್ತದೆ. ಸುಸಂಸ್ಕೃತವಾಗಿ ಮತ್ತು ಸಂಪ್ರದಾಯದಿಂದ ಜೀವನ ನಡೆಸಿಕೊಂಡು ಹೋಗುತ್ತಾರೆ. ಇನ್ನು ದಾಂಪತ್ಯ ಜೀವನ ಸುಖಕರವಾಗಿ ಮತ್ತು ಸುಗಮವಾಗಿ ಸಾಗುತ್ತದೆ.
ರವಿವಾರ ಗಂಡು ಮಕ್ಕಳ ಜನನ ಆದ್ರೆ ಅವರಿಗೆ ತುಂಬಾ ಶ್ರೇಷ್ಠವಾದ ಗುಣಗಳು ಇರುತ್ತವೆ. ಆತ್ಮಸ್ಥೈರ್ಯ ಮತ್ತು ವಿಶ್ವಾಸ ಹೆಚ್ಚಾಗಿ ಇರುತ್ತದೆ ಹಾಗೂ ಕೀರ್ತಿವಂತರಾಗಿ ಬಾಳುವ ಯೋಗವಿದೆ. ಶಾಂತಿಯುತವಾಗಿ ಇರ್ತಾರೆ, ಸಹನೆಯಿಂದ ಎಲ್ಲಾ ಸಂಕಷ್ಟವನ್ನು ಎದುರಿಸುತ್ತಾರೆ.
ರೂಪ ಲಾವಣ್ಯದಲ್ಲಿ ಹೆಚ್ಚು ತೇಜಸ್ಸು ಮತ್ತು ಗಾಂಭೀರ್ಯತೆ ಗೋಚರವಾಗುತ್ತದೆ. ಎಲ್ಲರಿಗೂ ಅವರನ್ನು ಕಂಡರೆ ಆಕರ್ಷಣೆ ಆಗುವಂತೆ ಅವರ ಗುಣ ಇರುತ್ತದೆ. ಕ್ರಿಯಾತ್ಮಕ ಆಲೋಚನೆಗಳನ್ನು ಮಾಡಿ ಯಾವಾಗಲೂ ಚಟುವಟಿಕೆಯಿಂದ ಇರುತ್ತಾರೆ ಮತ್ತು ಸ್ವಾಭಿಮಾನಿಗಳು ಕೂಡ ಆಗಿರುತ್ತಾರೆ.
ಗಂಡು ಮತ್ತು ಹೆಣ್ಣು ಮಕ್ಕಳಿಗೆ ದೇವರ ಮೇಲೆ ಭಕ್ತಿ, ಗುರು ಭಕ್ತಿ, ತಂದೆ ತಾಯಿ ಮೇಲೆ ಭಕ್ತಿ ಹೆಚ್ಚಾಗಿ ಇರುತ್ತದೆ. ಇನ್ನು ಪರಮೇಶ್ವರನ ಅರಾಧಕರಾಗಿತ್ತಾರೆ. ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಚ್ಚು ಭಾಗವಹಿಸುತ್ತಾರೆ. ದೇವಸ್ಥಾನಕ್ಕೆ ಭೇಟಿ ನೀಡುವುದು ಅವರ ಒಂದು ಜೀವನ ಶೈಲಿಯಲ್ಲಿ ಬೇರೆತಿರುತ್ತದೆ.
ಧ್ಯಾನ ಯೋಗದ ಸಹಾಯದಿಂದ ಸಫಲತೆ ಕಾಣುತ್ತಾರೆ, ಸಾಧು ಸಂತರ ಮೇಲೆ ಹೆಚ್ಚು ನಂಬಿಕೆ ಇಡುತ್ತಾರೆ. ಯಾವುದೇ ರೀತಿಯ ಕಲಹಗಳು ಇದ್ದರು ಅದನ್ನು ಬಗೆಹರಿಸುವ ಸಾಮರ್ಥ್ಯ ಇರುತ್ತದೆ.
ದಿನಗಳು ಕಳೆದಂತೆ ಜ್ಞಾನವನ್ನು ಅಭಿವೃದ್ದಿ ಮಾಡಿಕೊಳ್ಳುತ್ತಾ ಸಾಗುತ್ತಾರೆ. ಶಾಂತ ಮೂರ್ತಿಗಳು ಆಗಿರುತ್ತಾರೆ ಬುಧುವಾರದ ದಿನ ಜನಿಸಿದ ಮಕ್ಕಳು. ಭಾವ ಜೀವಿಗಳು ಮತ್ತು ಸೂಕ್ಷ್ಮ ಮನಸ್ಸಿನ ವ್ಯಕ್ತಿಗಳು ಆಗಿರುತ್ತಾರೆ. ಇನ್ನು ವ್ಯಾಸಂಗದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡುತ್ತಾರೆ.
ಜೀವನ ಮಾಡುವ ರೀತಿ ಭಿನ್ನವಾಗಿ ಇರುವುದರಿಂದ ಬೇಗ ಜೀವನದಲ್ಲಿ ಸೆಟಲ್ ಆಗುತ್ತಾರೆ. ಶನಿವಾರ ಗಂಡು ಮಕ್ಕಳ ಜನನವಾದರೆ ಅವರು ಹಠವಾದಿಗಳು. ಮಾತಿನ ಮಲ್ಲರು, ಕುಂತಲ್ಲಿ ಕೂರಲ್ಲ, ನಿಂತಲ್ಲಿ ನಿಲ್ಲದೆ ಇರುವಂತೆ ಇರುತ್ತಾರೆ. ಅವರ ಮನಸ್ಸು ಚಂಚಲವಾಗಿ ಇರುತ್ತದೆ. ಯೋಚನೆ ಮಾಡುವುದರಲ್ಲಿ ಯಾವುದೇ ವ್ಯವಧಾನ ತೋರದೆ ತಮ್ಮದೇ ಸ್ವ ನಿರ್ಧಾರ ಕೈಗೊಳ್ಳುತ್ತಾರೆ.
ಗುರಿ ತಲುಪಲು ಸಾಗುವ ಮಾರ್ಗದ ಕಡೆ ಗಮನ ಕೊಡುವುದಿಲ್ಲ ಹಾಗೆ ಬೇರೆಯವರಿಗೆ ತೊಂದರೆ ಆದರೂ ಯೋಚನೆ ಮಾಡಲ್ಲ. ಅಷ್ಟು ದುಡುಕು ಸ್ವಭಾವ ಹೊಂದಿರುತ್ತಾರೆ ಈ ಶನಿವಾರದಂದು ಹುಟ್ಟಿದ ಜನರು. ಪರಿವಾರಕ್ಕೆ ವಿರೋಧಿಗಳಾಗುವ ಸಂಭವ ಹೆಚ್ಚಾಗಿರುತ್ತದೆ.
ಸಂಗದಿಂದ ಸನ್ಯಾಸಿ ಕೆಟ್ಟ ಎನ್ನುವ ಮಾತಿನಂತೆ ಹಣವನ್ನು ಇತಿ ಮಿತಿ ಇಲ್ಲದೆ ಖರ್ಚು ಮಾಡುತ್ತಾರೆ. ಅಪಮಾನ ಮತ್ತು ಅವಮಾನಗಳು ಜಾಸ್ತಿ ಮಟ್ಟದಲ್ಲಿ ಇರುತ್ತವೆ. ಅವರ ದಾರಿ ಆನೆ ನಡೆದದ್ದೇ ದಾರಿ ಎನ್ನುವಂತೆ ಸಾಗುತ್ತಾ ಇರುತ್ತದೆ.
ಜೀವನದಲ್ಲಿ ಹೆಚ್ಚಿನ ಅಡೆ ತಡೆಗಳು ಜೊತೆಗೆ ತೊಂದರೆ ತಾಪತ್ರಯಗಳು ಎದುರುಗೊಳ್ಳುತವೆ. ಅದು, ಕೂಡ ಅವರು ತಮ್ಮದೇ ಮಾತು ನಡೆಯಬೇಕು ಎಂದು ತೋರುವ ಹಠದಿಂದ ಆಗುವುದು. ಜೀವನದಲ್ಲಿ ಏಳಿಗೆ ಆಗುವುದು ಕಡಿಮೆ ಅವರ ಜೀವನದಲ್ಲಿ ಪ್ರಗತಿ ಮಂದಗತಿಯಲ್ಲಿ ಸಾಗುತ್ತದೆ.
ಇನ್ನು ಶುಕ್ರವಾರ ಜನಿಸಿದ ಹೆಣ್ಣು ಮಕ್ಕಳ ಹುಟ್ಟಿದ ಮನೆಗೆ ಯಾವ ಅನುಕೂಲ ಮತ್ತು ಲಾಭ ತರದೆ ಹೋದರು. ಗಂಡನ ಮನೆಗೆ ಶುಭ ತರುತ್ತಾರೆ, ಲಕ್ಷ್ಮಿ ಕಟಾಕ್ಷ ಸಿದ್ಧಿಯಾಗುತ್ತದೆ. ಎಲ್ಲಾ ರೀತಿಯಲ್ಲಿ ಅಧಿಕಾರ ಮಾಡುವ ಅವಕಾಶ ಇರುತ್ತದೆ. ಮಾಡುವ ಯಾವುದೇ ಕಾರ್ಯದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ.
ಮಂಗಳವಾರ ಹುಟ್ಟಿದ ಹೆಣ್ಣು ಮಕ್ಕಳಿಗೆ ದೈವ ದೇವರಲ್ಲಿ ನಂಬಿಕೆ ಬಲವಾಗಿ ಇರುತ್ತದೆ. ದುರ್ಗಾ ದೇವಿಯ ಇನ್ನೊಂದು ರೂಪವೇ ಮಂಗಳವಾರ ಜನಿಸುವ ಹಣ್ಣು ಮಕ್ಕಳು. ಇನ್ನು ಯಾವುದೇ ಲೋಪ ದೋಷ ಬರದಂತೆ ದೇವರ ಪೂಜೆ ಮಾಡುತ್ತಾರೆ. ಇನ್ನು ದೇವರ ವರ ಪಡೆದು ತಮ್ಮ ಕಾರ್ಯ ಸಿದ್ದಿ ಮಾಡಿಕೊಳ್ಳುತ್ತಾರೆ. ಯಾವುದೇ ವಾರ ಜನಿಸಿದರು ಅವರು ನಡೆಸುವ ಜೀವನ ಅವರ ಕೈಯಲ್ಲಿ ಇರುತ್ತದೆ. ಮೇಲೆ ತಿಳಿಸಿರುವ ಕೆಲವು ವಾರಗಳು ಮಾತ್ರ ಒಂದು ರೀತಿಯ ಶುಭದಾಯಕ ವಾರಗಳು.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು