ನಾವಿಂದು ನಿಮಗೆ ಬಿಎಂಟಿಸಿಯಲ್ಲಿ ಮಾಡಿಕೊಳ್ಳಲಾಗುತ್ತಿರುವ ಮುನ್ನೂರು ಹುದ್ದೆಗಳ ಬ್ರಹತ್ ನೇಮಕಾತಿಯ ಕುರಿತಾದ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ಈ ಒಂದು ಹುದ್ದೆಗೆ ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಬಹುದು ಹೇಗೆ ಅರ್ಜಿಯನ್ನು ಸಲ್ಲಿಸಬೇಕು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಯಾವ ರೀತಿಯಾಗಿ ಆಯ್ಕೆಮಾಡಿಕೊಳ್ಳಲಾಗುತ್ತದೆ ಈ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.
ಬಿಎಂಟಿಸಿಯಲ್ಲಿ ಮುನ್ನೂರು ಹುದ್ದೆಗಳ ನೇಮಕಾತಿ ನಡೆಯುತ್ತಿದ್ದು ಹತ್ತನೇ ತರಗತಿ ಪಾಸಾಗಿರುವಂತಹ ಅಭ್ಯರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಸಬಹುದು. ಬಿಎಂಟಿಸಿಯಲ್ಲಿ ಯಾವ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಎಂದರೆ ಮೆಕಾನಿಕ್ ಡಿಸೆಲ್ ವಿಭಾಗದಲ್ಲಿ ಎರಡು ನೂರಾ ಐವತ್ತು ಹುದ್ದೆಗಳು ಫಿಟ್ಟರ್ ವಿಭಾಗವನ್ನು ಐವತ್ತು ಹುದ್ದೆಗಳ ನೇಮಕಾತಿ ನಡೆಯುತ್ತಿದೆ.
ಇದಕ್ಕೆ ಎಸೆಸೆಲ್ಸಿ ಅಥವಾ ಐಟಿಐ ಪಾಸಾಗಿರುವಂತವರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಎಸೆಸೆಲ್ಸಿ ಪಾಸಾಗಿರುವವರು ಅರ್ಜಿಯನ್ನು ಸಲ್ಲಿಸಿ ಆಯ್ಕೆಯಾದರೆ ಅವರಿಗೆ ಎರಡು ವರ್ಷಗಳ ತರಬೇತಿ ಇರುತ್ತದೆ ಹಾಗೂ ಐ ಟಿ ಐ ಪಾಸ್ ಆಗಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ ಆಯ್ಕೆಯಾದರೆ ಅವರಿಗೆ ಒಂದು ವರ್ಷಗಳ ತರಬೇತಿ ಇರುತ್ತದೆ. ಇನ್ನು ಈ ಹುದ್ದೆಗೆ ಯಾವ ವಯಸ್ಸಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಎಂಬುದನ್ನು ನೋಡುವುದಾದರೆ 30 ಮಾರ್ಚ್ 2022ಕ್ಕೆ ಹದಿನಾರು ವರ್ಷ ತುಂಬಿರಬೇಕು ಹಾಗೂ ಇಪ್ಪತಾರು ವರ್ಷ ಮೀರಿದವರಾಗಿರಬಾರದು. ಈ ಹುದ್ದೆಗೆ ಅರ್ಜಿ ಸಲ್ಲಿಸಿ ಆಯ್ಕೆ ಆದಂತಹ ಅಭ್ಯರ್ಥಿಗಳಿಗೆ ತರಬೇತಿ ಸಮಯದಲ್ಲಿ ತರಬೇತಿ ಭತ್ಯೆ ನೀಡಲಾಗುತ್ತದೆ.
ಎಸೆಸೆಲ್ಸಿ ಆಧಾರದ ಮೇಲೆ ಅರ್ಜಿಯನ್ನು ಸಲ್ಲಿಸಿರುವವರಿಗೆ ಮೊದಲ ವರ್ಷ ಆರು ಸಾವಿರ ರೂಪಾಯಿ ಹಾಗೂ ಎರಡನೇ ವರ್ಷ ಏಳು ಸಾವಿರ ರೂಪಾಯಿ ನೀಡಲಾಗುತ್ತದೆ. ಹಾಗೂ ಐಟಿಐ ಆಧಾರದ ಮೇಲೆ ಅರ್ಜಿಯನ್ನು ಸಲ್ಲಿಸಿರುವವರಿಗೆ ಏಳು ಸಾವಿರ ರೂಪಾಯಿ ತರಬೇತಿ ಭತ್ಯೆ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಆಸಕ್ತ ಅಭ್ಯರ್ಥಿಗಳು www. apprenticeship india.gov.in ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಬೇಕು. ಇಲ್ಲಿ ರಿಜಿಸ್ಟರ್ ಮಾಡಿಕೊಂಡ ನಂತರ ಅಪ್ಲಿಕೇಶನ್ ಫಾರಂ ಪ್ರಿಂಟ್ ತೆಗೆದುಕೊಳ್ಳಬೇಕು ಅದರ ಜೊತೆಗೆ ಎರಡು ಪಾಸ್ಪೋರ್ಟ್ ಸೈಜ್ ಫೋಟೋ ಎಸೆಸೆಲ್ಸಿ ಅಂಕಪಟ್ಟಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಆಧಾರ್ ಕಾರ್ಡ್ ಅಥವಾ ಬ್ಯಾಂಕ್ ಪಾಸ್ ಬುಕ್ ಮತ್ತು ಐಟಿಐ ಮೇಲೆ ಅರ್ಜಿ ಸಲ್ಲಿಸುವವರು ಐಟಿಐ ಮಾರ್ಕ್ಸ್ ಕಾರ್ಡ್ ದಾಖಲೆಗಳನ್ನು ಹೊಂದಿರಬೇಕು.
ಈ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿರುವಂತಹ ಅಭ್ಯರ್ಥಿಗಳು ಮಾರ್ಚ್ 30 2022 ನೇ ತಾರೀಖಿನಂದು ಬೆಳಿಗ್ಗೆ 10.30 ರಿಂದ ಸಂಜೆ 5 ಗಂಟೆಯ ಒಳಗಾಗಿ ಬಿಎಂಟಿಸಿ ತರಬೇತಿ ಕೇಂದ್ರ ಎರಡನೇ ಮಹಡಿ ಶಾಂತಿನಗರ ಬಸ್ ನಿಲ್ದಾಣ ಬೆಂಗಳೂರು ಅಲ್ಲಿಗೆ ಹೋಗಿ ನೇರ ನೇಮಕಾತಿಯಲ್ಲಿ ಪಾಲ್ಗೊಳ್ಳಬೇಕು. ನೀವು ಪಡೆದಿರುವ ಅಂತಹ ಅಂಕಗಳ ಆಧಾರದ ಮೇಲೆ ಕಟ್ಟಾಫ್ ಮಾಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಯಾವುದೇ ರೀತಿಯಾದಂತಹ ಲಿಖಿತ ಪರೀಕ್ಷೆ ಅಥವಾ ಸಂದರ್ಶನ ಇರುವುದಿಲ್ಲ ನೇರ ನೇಮಕಾತಿ ಯನ್ನು ಮಾಡಿಕೊಳ್ಳಲಾಗುತ್ತದೆ. ನೀವು ಕೂಡ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸಿ ಉದ್ಯೋಗವನ್ನು ಪಡೆದುಕೊಳ್ಳಬಹುದಾಗಿದೆ ಈ ಮಾಹಿತಿಯನ್ನು ನೀವು ತೆಗೆದುಕೊಳ್ಳುವುದರೊಂದಿಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಿರಿ.