ಭಾಗ್ಯಲಕ್ಷ್ಮಿ ಬಾಂಡ್’ಗಾಗಿ ಯಾರಾದರೂ ಅರ್ಜಿ ಸಲ್ಲಿಕೆ ಮಾಡಿದ್ದರೆ. ಅವರಿಗೆ, ಭಾಗ್ಯಲಕ್ಷ್ಮಿ ಬಾಂಡ್ ದೊರೆತರೆ ಅದರ ಹಣವನ್ನು ಯಾವ ರೀತಿ ಪಡೆಯಬೇಕು ಹಾಗೂ ಇದರಲ್ಲಿ ವಿಮೆಯ ಪಾತ್ರ ಏನು ಎನ್ನುವುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ..
ಭಾಗ್ಯಲಕ್ಷ್ಮಿ ಬಾಂಡ್ ಅನ್ನು ಹೆಣ್ಣು ಮಗು ಜನಿಸಿದಾಗ ಅರ್ಜಿ ಸಲ್ಲಿಕೆ ಮಾಡಿದರೆ. ಅದರ, ಹಣವನ್ನು ಆ ಹೆಣ್ಣು ಮಗುವಿಗೆ 18 ವರ್ಷ ಪೂರ್ಣವಾದ ನಂತರ ಪಡೆಯಬಹುದು. ಹೆಣ್ಣು ಮಗುವಿನ ಹೆಸರಿನಲ್ಲಿ ಸರ್ಕಾರ ಇಂತಿಷ್ಟು ಹಣವನ್ನು ಎಲ್ಐಸಿಯಲ್ಲಿ (LIC) ಠೇವಣಿ ಇಡುತ್ತದೆ. ಅದೇ ಹೆಣ್ಣು ಮಗು 18 ವರ್ಷ ಪೂರ್ಣ ಮಾಡಿದ ನಂತರ ಸರ್ಕಾರ ಇಟ್ಟಿರುವ ಮೊತ್ತಕ್ಕೆ 9.25% ವಾರ್ಷಿಕ ಬಡ್ಡಿಯನ್ನು ಸೇರಿಸಿ ಎಲ್ಐಸಿ ( LIC ) ಕಡೆಯಿಂದ ಹೆಣ್ಣು ಮಗುವಿಗೆ ಕೊಡುವರು.
ಮುಖ್ಯವಾದ ಅಂಶ ಏನೆಂದರೆ ಭಾಗ್ಯಲಕ್ಷ್ಮಿ ಬಾಂಡ್’ನಲ್ಲಿ ಏನು ಸೌಲಭ್ಯ ಇದೇ ಎನ್ನುವುದನ್ನು ಯಾರು ಗಮನ ಕೊಡುವುದಿಲ್ಲ ಹೆಣ್ಣು ಮಗುವಿನ ತಂದೆ ತಾಯಿ ಕೂಡ. ಎಲ್ಐಸಿ ( LIC ) ಬಾಂಡ್’ನಲ್ಲಿ ಏನೇನು ಇರುತ್ತದೆ ತಿಳಿಯೋಣ ಬನ್ನಿ;
ಒಂದೇ ಕುಟುಂಬದ ಮೊದಲ ಹೆಣ್ಣು ಮಗುವಿನ ಹೆಸರಿನಲ್ಲಿ ಸರ್ಕಾರ ಎಲ್ಐಸಿ ( LIC ) ಯಲ್ಲಿ ₹ 19,300 ಠೇವಣಿ ಇಡಲಾಗುತ್ತದೆ. ಎರಡನೇ ಹೆಣ್ಣು ಮಗುವಿನ ಹೆಸರಿನಲ್ಲಿ ಸರ್ಕಾರ ಎಲ್ಐಸಿ ( LIC )ಯಲ್ಲಿ ₹ 18,350 ಠೇವಣಿ ಇಡುತ್ತದೆ. ಹೆಣ್ಣು ಮಗು ಜನಿಸಿದ ದಿನಾಂಕದಿಂದ 18 ವರ್ಷ ಪೂರೈಸಿದ ಮೇಲೆ ಮೊದಲೇ ಹೆಣ್ಣು ಮಗುವಿಗೆ ₹1,00,097 /- ಕೊಡಲಾಗುತ್ತದೆ. ಒಂದೇ ಕುಟುಂಬದ ಎರಡನೇ ಹೆಣ್ಣು ಮಗು ಈ ಯೋಜನೆಯಲ್ಲಿ ಇದ್ದರೇ ₹1,00,059 /- ಬಾಂಡ್ ಸಲ್ಲಿಸಿ ಎಲ್ಐಸಿ ( LIC ) ಕಡೆಯಿಂದ ಹಣ ಪಡೆಯಬಹುದು.
ಇನ್ನೊಂದು ಪ್ರಮುಖ ಅಂಶ ಏನೂ ಎಂದರೆ ವಿಮಾದಾರ ಹೆಣ್ಣು ಮಗುವಿನ ತಂದೆ ತಾಯಿಗೂ ಕೂಡ ವಿಮೆಯ ಸೌಲಭ್ಯಗಳು ಇರುತ್ತದೆ.
- ಭಾಗ್ಯಲಕ್ಷ್ಮಿ ಬಾಂಡ್ ಕೆಳಗೆ ಅರ್ಜಿ ಸಲ್ಲಿಸಿರುವ ಹೆಣ್ಣು ಮಗು 18 ವರ್ಷ ಪೂರೈಸುವ ಮುನ್ನ ಅವರ ತಂದೆ ಅಥವಾ ತಾಯಿ ಅಪಘಾತದಲ್ಲಿ ನಿಧನರಾದರೆ ಎಲ್ಐಸಿ ( LIC ) ವತಿಯಿಂದ ಆ ಹೆಣ್ಣು ಮಗುವಿಗೆ ₹ 75,000 ಕೊಡುವರು.
- ಅಪಘಾತವಾದ ಸಮಯದಲ್ಲಿ ತಂದೆ ಅಥವಾ ತಾಯಿ ಸಂಪೂರ್ಣ ಅಂಗವಿಕಲತೆಯನ್ನು ಹೊಂದಿದ್ದರೆ ( ಎರಡು ಕಣ್ಣು, ಎರಡು ಕಾಲು, ಎರಡು ಕೈ, ಮತ್ತು ಒಂದು ಕಣ್ಣು, ಒಂದು ಕೈ, ಒಂದು ಕಾಲು. ) ಈ ರೀತಿ ಅಂಗಗಳನ್ನು ಕಳೆದುಕೊಂಡರೆ ಅವರಿಗೂ ಸಹ ಎಲ್ಐಸಿ ( LIC ) ಕಡೆಯಿಂದ ₹ 75,000 ನೀಡಲಾಗುತ್ತದೆ.
- ಅಪಘಾತದಲ್ಲಿ ತಂದೆ ಅಥವಾ ತಾಯಿ ಸ್ವಲ್ಪ ( ಕೈ, ಕಾಲು, ಕಣ್ಣು ) ಅಂಗವಿಕಲತೆಯನ್ನು ಹೊಂದಿದರೆ. ₹ 37,500 ಹಣವನ್ನು ಎಲ್ಐಸಿ ( LIC ) ಕಡೆಯಿಂದ ಪಡೆಯಬಹುದು.
- ಅಪಘಾತ ಅಲ್ಲದೆ ತಂದೆ ಅಥವಾ ತಾಯಿಗೆ ಸಹಜ ಸಾವು ಸಂಭವಿಸಿದರೆ ಎಲ್ಐಸಿ ( LIC ) ಕಡೆಯಿಂದ ₹ 30,000 ಪಡೆಯಬಹುದು.
ಒಂದು ಪಕ್ಷ ಹೆಣ್ಣು ಮಗುವಿನ ತಂದೆಯ ಸಾವು ಸಂಭವಿಸಿದಾಗ ವಿಮೆಯ ಹಣವನ್ನು ಪಡೆದರೆ, ತಾಯಿ ನಿಧನರಾದ ಕೂಡ ವಿಮೆಯ ಹಣವನ್ನು ಮತ್ತೊಮ್ಮೆ ಪಡೆಯುವ ಅವಕಾಶ ಇರುತ್ತದೆ. ಆದರೆ ಈ ನಿಯಮ ಅನ್ವಯ ಆಗುವುದು ಹೆಣ್ಣು ಮಗುವಿಗೆ 18 ವರ್ಷ ಪೂರ್ಣ ಆಗುವ ಮುನ್ನ ಮಾತ್ರ. ಭಾಗ್ಯಲಕ್ಷ್ಮಿ ಬಾಂಡ್’ಗೆ ಅರ್ಜಿ ಸಲ್ಲಿಸಿರುವ ಜನರು ಅದರ ಅನುಕಳ ಪಡೆಯಬಹುದು.