ayuda puje: ಮನೆಯಲ್ಲೇ ಆಯುಧ ಪೂಜೆಯನ್ನ ಮಾಡುವ ಕ್ರಮ ತಿಳಿದುಕೊಳ್ಳಿ, ಯಾವ ಯಾವ ವಸ್ತುಗಳು ಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ.

0

ಆಯುಧಗಳು ಅಂದರೆ ಬರಿ ಮಷಿನರಿಗಳಲ್ಲ ಆಯುಧಗಳನ್ನ ನಾವು ಲಕ್ಷ್ಮಿ ಎಂದು ನವರಾತ್ರಿಯಲ್ಲಿ ಪೂಜೆ ಮಾಡುತ್ತೇವೆ. ಮನೆಯಲ್ಲಿರುವ ಯಾವುದೇ ವಸ್ತುಗಳಿರಲಿ ವಾಹನಗಳಿರಲಿ ಅವುಗಳನ್ನ ನಾವು ಆಯುಧ ಪೂಜೆಯ ದಿನ ಪೂಜೆ ಮಾಡುವುದು ವಾಡಿಕೆ. ನಮ್ಮ ಹಿಂದೂ ಸಂಪ್ರದಾಯದಲ್ಲಿ ಮನೆಯಲ್ಲಿರುವ ಎಲ್ಲ ವಸ್ತುವನ್ನು ನಾವು ಲಕ್ಷ್ಮಿ ರೂಪದಲ್ಲಿ ಕಾಣುತ್ತೇವೆ. ಹಾಗಾದ್ರೆ ಈ ಪೂಜೆಯನ್ನ ಹೇಗೆ ಮಾಡುವುದು ಯಾವ ಯಾವ ವಸ್ತುಗಳು ಇರಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

ನವರಾತ್ರಿ ಎಂದರೆ 9 ದಿನಗಳ ವಿಶೇಷವಾದ 9 ದೇವಿಯ ಅವತಾರದ ಪೂಜೆಯಾಗಿದೆ. ಪ್ರತಿಯೊಂದು ದಿನವು ಒಂದೊಂದು ದಿವ್ಯ ಅವತಾರವನ್ನ ಪೂಜಿಸುತ್ತೇವೆ. ಹಾಗೆ ನವಮಿಯ ದಿನ ಆಯುಧವನ್ನು ಪೂಜಿಸುತ್ತೇವೆ. ಅಂದರೆ ಮನೆಯಲ್ಲಿರುವ ಮಷೀನ್ ಗಳಾಗಲಿ ಮನೆಯ ಯಾವುದೇ ವಸ್ತುವಾಗಲಿ ಎಲ್ಲವೂ ಕೂಡ ಆಯುಧಗಳು ಇದನ್ನೆಲ್ಲಾ ನಾವು ನವರಾತ್ರಿಯಲ್ಲಿ ಒಂದು ದಿನ ಅಂದರೆ ನವಮಿಯ ದಿನ ಪೂಜಿಸುತ್ತೇವೆ.

ಆಯುಧ ಪೂಜೆಯನ್ನ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ ದೊಡ್ಡ ದೊಡ್ಡ ಬಿಸಿನೆಸ್ಮ್ಯಾನ್ ಗಳು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಪುರೋಹಿತರನ್ನೆಲ್ಲ ಕರೆದು ಬಡವರಿಗೆಲ್ಲ ಸಿಹಿತಿಂಡಿಯನ್ನು ದಾನ ಮಾಡುತ್ತಾರೆ. ಬರಿ ಕಚೇರಿಯಲ್ಲಿ ಅಷ್ಟೇ ಅಲ್ಲ ಪ್ರತಿ ಮನೆ ಮನೆಯಲ್ಲೂ ಕೂಡ ಆಯುಧ ಪೂಜೆಯನ್ನು ಮಾಡುತ್ತಾರೆ. ಮನುಷ್ಯನಿಗೆ ಬೇಕಾಗಿರುವಂತಹ ಪ್ರತಿಯೊಂದು ಕೂಡ ಆಯುಧವೇ ಸರಿ.

ಆರ್ಥಿಕತೆ ಚೆನ್ನಾಗಿದ್ದವರು ಪುರೋಹಿತರನ್ನೆಲ್ಲಾ ಕರೆದು ಆಯುಧ ಪೂಜೆಯನ್ನು ಮಾಡುತ್ತಾರೆ. ಸಾಮಾನ್ಯ ಜನರು ಮನೆಯಲ್ಲಿ ತಾವೇ ಆಯುಧ ಪೂಜೆಯನ್ನು ಮಾಡಿಕೊಳ್ಳಬಹುದು. ದೇವರಿಗೆ ಬೇಕಾದದ್ದು ಭಕ್ತಿ ಹಾಗೂ ಶ್ರದ್ಧೆ ಎರಡೇ. ಇವೆರಡಿದ್ದರೆ ಪೂಜೆಗೆ ಸಾಕು. ಯಾವ ವಿಜ್ರಂಭಣೆಯ ಇಲ್ಲದೆ ಸರಳವಾಗಿ ಪೂಜೆಯನ್ನ ಮನೆಯಲ್ಲೇ ಮಾಡಿಕೊಳ್ಳಬಹುದು ಟಿವಿ ವಾಷಿಂಗ್ ಮಷೀನ್ ಹೊಲಿಗೆ ಯಂತ್ರ ತ್ರಿಜೂರಿ ವಾಹನಗಳು ಇವಕ್ಕೆಲ್ಲ ನೀವು ಆಯುಧ ಪೂಜೆಯನ್ನು ಮಾಡಬಹುದು.

ಆಯುಧ ಪೂಜೆಯನ್ನು ಮಾಡುವುದು ಹೇಗೆ?
ನೀವು ಪೂಜೆ ಮಾಡುವ ಆಯುಧಗಳನ್ನೆಲ್ಲ ಚೆನ್ನಾಗಿ ತೊಳೆದುಕೊಳ್ಳಬೇಕು ಹಾಗೂ ಪೂಜೆ ಮಾಡುವ ಜಾಗವನ್ನು ಒರೆಸಿಟ್ಟುಕೊಳ್ಳಬೇಕು ಸ್ವಲ್ಪ ರಂಗೋಲಿಯನ್ನು ಹಾಕಿ ಅದರ ಮೇಲೆ ನೀವು ಪೂಜೆ ಮಾಡುವ ಆಯುಧವನ್ನು ತಂದು ಇಡಿ. ಹೊಲಿಗೆ ಯಂತ್ರ ವಾಷಿಂಗ್ ಮಷೀನ್ ಮಿಕ್ಸರ್ ಹೀಗೆ ನಿಮ್ಮ ಮನೆಯ ವಸ್ತುಗಳನ್ನೆಲ್ಲ ನೀವು ಪೂಜೆ ಮಾಡಬಹುದು. ಸ್ವಲ್ಪ ಅರಿಶಿನ ಕುಂಕುಮ ಹೂವು ಗಂಧ ಅಕ್ಷತೆಯೊಂದಿಗೆ ನೈವೇದ್ಯವನ್ನ ಅರ್ಪಿಸಿ ಮಂಗಳಾರತಿಯನ್ನು ಮಾಡಬೇಕು. ಲಕ್ಷ್ಮಿ ಸ್ತುತಿಯನ್ನು ಹೇಳಬೇಕು. ಏಕೆಂದರೆ ಆಯುಧವು ಲಕ್ಷ್ಮಿಯ ಸ್ವರೂಪ. ಹೀಗೆ ಸರಳವಾಗಿ ಭಕ್ತಿ ಮತ್ತು ಶ್ರದ್ಧೆಯಿಂದ ಮನೆಯಲ್ಲೇ ಆಯುಧ ಪೂಜೆಯನ್ನು ಮಾಡಬಹುದು. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!