ಶ್ರೀರಾಮನ ಪರಮ ಭಕ್ತನಾದ ಆಂಜನೇಯ ಸ್ವಾಮಿಯು ಭಕ್ತರು ಬೇಡಿದ ಬೇಡಿಕೆಯನ್ನು ಈಡೇರಿಸುತ್ತಾನೆ. ಹನುಮಾನ್ ಚಾಲೀಸ್ ವನ್ನು ಪ್ರತಿದಿನ ಓದುತ್ತಿದ್ದರೆ ಏನನ್ನಾದರೂ ಗೆಲ್ಲುವ ಧೈರ್ಯ ತಾನಾಗಿಯೆ ಬರುತ್ತದೆ ಅದು ಆಂಜನೇಯ ಸ್ವಾಮಿಯ ಶಕ್ತಿ. ಶಕ್ತಿವಂತ ಆಂಜನೇಯ ಸ್ವಾಮಿಯ ಕವಚವನ್ನು ಹೇಗೆ ಧರಿಸಿಕೊಳ್ಳಬೇಕು ಅದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ
ಆಂಜನೇಯ ಸ್ವಾಮಿಯ ಕವಚವು ನಮ್ಮ ಶರೀರದಲ್ಲಿ ರಕ್ಷಾ ಕವಚವಾಗಿ ಕೆಲಸ ಮಾಡುತ್ತದೆ. ಪ್ರತಿಕ್ಷಣವೂ ಕವಚವು ಒಬ್ಬ ಸಹಾಯಕನ ರೀತಿಯಲ್ಲಿ ನಮ್ಮನ್ನು ಕಾಪಾಡುತ್ತದೆ. ಆಂಜನೇಯ ಸ್ವಾಮಿಯ ಕವಚವನ್ನು ಧರಿಸುವುದರಿಂದ ದೊಡ್ಡ ಸಂಕಟಗಳು ನಿವಾರಣೆಯಾಗುತ್ತದೆ. ಆಂಜನೇಯ ಸ್ವಾಮಿಯ ಕವಚದ ಪ್ರಯೋಜನದ ಬಗ್ಗೆ ಅಂದಾಜಿಸಲು ಸಾಧ್ಯವಿಲ್ಲ ಕವಚದ ಮೂಲಕ ಆಂಜನೇಯ ಸ್ವಾಮಿ ಪ್ರತಿಕ್ಷಣ ನಮಗೆ ಸಾತ್ ಕೊಡುತ್ತಾರೆ. ಮಂಗಳವಾರದಂದು ಬ್ರಹ್ಮ ಮೂಹೂರ್ತದಲ್ಲಿ ಎದ್ದು ಪೂಜೆಯ ಸ್ಥಾನ ಅಥವಾ ದೇವರ ಕೋಣೆಯ ಹತ್ತಿರ ಒಂದು ಕಟ್ಟಿಗೆಯ ಮಣೆಯನ್ನು ಇಟ್ಟು ಅದರ ಮೇಲೆ ಕೆಂಪು ಬಣ್ಣದ ಬಟ್ಟೆಯನ್ನು ಹಾಸಿ ಆಂಜನೇಯ ಸ್ವಾಮಿಯ ಫೋಟೋವನ್ನು ಇಡಬೇಕು.
ನಂತರ ಕೈಗೆ ಕಟ್ಟುವ ಮೌಲಿ ದಾರವನ್ನು ತೆಗೆದುಕೊಳ್ಳಬೇಕು. ಆಂಜನೇಯ ಸ್ವಾಮಿಯ ಫೋಟೋ ಎದುರು ತುಪ್ಪದ ಅಥವಾ ಮಲ್ಲಿಗೆ ಹೂವಿನ ಎಣ್ಣೆಯ ದೀಪವನ್ನು ಹಚ್ಚಬೇಕು. ಆಂಜನೇಯ ಸ್ವಾಮಿಗೆ ನೈವೇದ್ಯವನ್ನು ಅರ್ಪಿಸಬೇಕು ಹಣ್ಣು ಅಥವಾ ಮಿಠಾಯಿಯನ್ನು ನೈವೇದ್ಯದ ರೂಪದಲ್ಲಿ ಅರ್ಪಿಸಬಹುದು. ಹನುಮಾನ್ ಚಾಲೀಸಾವನ್ನು 21 ಬಾರಿ ಜಪಿಸಬೇಕು ನಂತರ ಜೈ ಶ್ರೀ ರಾಮ್ ಎಂದು ಜಪಿಸಬೇಕು
ನಂತರ ತೆಗೆದುಕೊಂಡ ಮೌಲಿದಾರದಲ್ಲಿ ಒಂದು ಗಂಟನ್ನು ಹಾಕಬೇಕು ಈ ರೀತಿ 21 ದಿನಗಳ ಕಾಲ ಮಾಡಬೇಕು. 21 ದಿನ ಧ್ಯಾನವನ್ನು ಮಾಡುತ್ತಲೆ ಒಂದೊಂದು ಗಂಟನ್ನು ಹಾಕುತ್ತಾ ಹೋಗಬೇಕು ಅಂದರೆ 21 ದಿನ 21 ಗಂಟು ಆಗುತ್ತದೆ ಮೊದಲೆ 21 ದಿನಗಳಿಗೆ ಬೇಕಾಗುವಷ್ಟು ದಾರವನ್ನೆ ತೆಗೆದುಕೊಂಡಿರಬೇಕು ಕಡಿಮೆ ಆಗಬಾರದು. 21 ದಿನಗಳ ಕಾಲ ಈರುಳ್ಳಿ, ಬೆಳ್ಳುಳ್ಳಿ, ಮಧ್ಯ ಮಾಂಸ ಸೇವಿಸಬಾರದು ಹಾಗೆಯೆ ಬ್ರಹ್ಮಚರ್ಯವನ್ನು ಪಾಲಿಸಬೇಕು.
ತಪ್ಪದೆ ಪ್ರತಿದಿನ 21 ಬಾರಿ ಹನುಮಾನ್ ಚಾಲೀಸಾವನ್ನು ಓದಿದ ನಂತರ 108 ಬಾರಿ ಅಂದರೆ ಒಂದು ಮಾಲೆ ಜೈ ಶ್ರೀ ರಾಮ್ ಜಪಿಸಬೇಕು ನಂತರವೆ ದಾರವನ್ನು ಗಂಟು ಹಾಕಬೇಕು 21 ದಿನ ಪೂರೈಸಿದ ನಂತರ ಆಂಜನೇಯ ಸ್ವಾಮಿಗೆ ತೆಂಗಿನಕಾಯಿ ಅಥವಾ ಏನನ್ನಾದರೂ ನೈವೇದ್ಯವನ್ನು ಅರ್ಪಿಸಬೇಕು. 21 ಗಂಟುಗಳಾದ ನಂತರ ದಾರವನ್ನು ಬಲಗೈಗೆ ಕಟ್ಟಿಕೊಳ್ಳಬೇಕು ಕವಚವನ್ನು ಕೈಗೆ ಕಟ್ಟಿಕೊಳ್ಳುತ್ತಿರುವಾಗ ಮನಸ್ಸಿನಲ್ಲಿ ಹೇ ಆಂಜನೇಯ ಸ್ವಾಮಿಯೆ ಹೆ ಭಗವಂತನೆ ನಿಮ್ಮ ನೆರಳಲ್ಲಿ ನಾನಿದ್ದೇನೆ ಯಾವತ್ತಿಗೂ ನನ್ನನ್ನು ರಕ್ಷಣೆ ಮಾಡಿರಿ ನೆರಳಾಗಿ ನನ್ನನ್ನು ಕಾಪಾಡಿರಿ ಎಂದು ಬೇಡಿಕೊಂಡು ಕಟ್ಟಿಕೊಳ್ಳಬೇಕು.
ತೆಂಗಿನಕಾಯಿ ಅಥವಾ ನೈವೇದ್ಯದ ಪ್ರಸಾದವನ್ನು ಮನೆಯಲ್ಲಿ ಇರುವವರಿಗೆ ಕೊಡಬೇಕು. ಇದರಿಂದ ಆಗುತ್ತಿರುವ ತೊಂದರೆಗಳೆಲ್ಲಾ ದೂರವಾಗಿ ಅನೇಕ ಬದಲಾವಣೆಗಳು ಆಗುತ್ತದೆ. ಕಣ್ಣು ಮುಚ್ಚಿಕೊಂಡು ಭಗವಂತನನ್ನು ನೆನೆದಾಗ ನಿಮ್ಮ ಹತ್ತಿರದಲ್ಲಿ ಭಗವಂತನಿರುವ ಅನುಭವವಾಗುತ್ತದೆ ಹನುಮಾನ್ ಕವಚವನ್ನು ಧರಿಸಿಕೊಂಡವರಿಗೆ ಯಾರಿಂದಲೂ ಅನಿಷ್ಟ ಮಾಡಲು ಸಾಧ್ಯವಿಲ್ಲ. ಆ ವ್ಯಕ್ತಿಯ ಮೇಲೆ ಆಂಜನೇಯ ಸ್ವಾಮಿಯ ಅನುಗ್ರಹ ಯಾವಾಗಲೂ ಇರುತ್ತದೆ. ಪ್ರತಿ ಶನಿವಾರ ಆಂಜನೇಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಮಾಡಿದರೆ ಒಳ್ಳೆಯದಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ಆಂಜನೇಯ ಸ್ವಾಮಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು