WhatsApp Group Join Now
Telegram Group Join Now

ಸ್ನೇಹಿತರೆ, ನಟಿ ಸೀತಾರಾ (Sitara) ಅವರ ಹೆಸರು ಕೇಳಿದೊಡನೆ ಡಾಕ್ಟರ್ ವಿಷ್ಣುವರ್ಧನ್ ಅವರೊಂದಿಗಿನ ಹಾಲುಂಡ ತವರು ಸಿನಿಮಾ ಪ್ರತಿಯೊಬ್ಬ ಕನ್ನಡ ಅಭಿಮಾನಿಗಳಿಗೆ ನೆನಪಿಗೆ ಬಂದುಬಿಡುತ್ತದೆ. ಮೊದಲ ಸಿನಿಮಾದಲ್ಲಿಯೇ ಈ ನಟಿ ಮಾಡಿದಂತಹ ಪರಕಾಯ ಪ್ರವೇಶವನ್ನು ಕನ್ನಡಿಗರು ಎಂದಾದರೂ ಮರೆಯಲು ಸಾಧ್ಯವೇ? ವಿಷ್ಣುವರ್ಧನ್ (vishnuvardhan) ಅವರ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತ ಉತ್ತುಂಗದ ಶಿಖರವನ್ನೇರಿದ ನಟಿ ಸೀತಾರಾ (Sitara)

ಕಾಲಕ್ರಮೇಣ ಅವಕಾಶಗಳನ್ನು ಕಳೆದುಕೊಂಡು ಸಿನಿ ಬದುಕಿನಿಂದ ಸೀತಾರಾ ಬಣ್ಣದ ಬದುಕಿನಿಂದ ಕಾಯ್ದುಕೊಂಡರು. ಇದೀಗ ಆಧ್ಯಾತ್ಮಿಕದೆಡೆಗೆ ಮುಖ ಮಾಡಿರುವ ಸೀತಾರಾ ಶಬರಿಮಲೆಯ ಅಯ್ಯಪ್ಪ ಸ್ವಾಮಿ(Ayyappa swamy) ಸನ್ನಿಧಿಯಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು ಗೆಳೆಯರೇ ನಟಿ ಸೀತಾರಾ ಅವರು ಅಯ್ಯಪ್ಪ ಸ್ವಾಮಿಯ ಮಾಲೆ ಧರಿಸಿ ತಲೆಯ ಮೇಲೆ ಇಡುಮುಡಿ ಹೊತ್ತು ಕಪ್ಪು ಬಣ್ಣದ ವಸ್ತ್ರವನ್ನು ಧರಿಸಿರುವ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು,

90ರ ನಟಿಯನ್ನು ಈ ಅವತಾರದಲ್ಲಿ ಕಂಡಂತಹ ಅಭಿಮಾನಿಗಳು ಅಚ್ಚರಿಗೊಳಗಾಗಿದ್ದಾರೆ. ಹೌದು ಗೆಳೆಯರೇ ಮೂಲತಃ ಕೇರಳದವರಾದ(Kerala) ಸೀತಾರಾ (Sitara) ಮಲಯಾಳಂ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿ ಕನ್ನಡ ಚಿತ್ರರಂಗದ ಮೂಲಕ ಯಶಸ್ಸನ್ನು ಕಂಡಂತಹ ನಟಿ ಎಂದರೆ ತಪ್ಪಾಗಲಿಕ್ಕಿಲ್ಲ. ಅತಿ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸುತ್ತ ಉತ್ತುಂಗದ ಶಿಖರದಲ್ಲಿದ್ದ ಈ ನಟಿ ಕೌಟುಂಬಿಕ ಕಥಾ ಹಂದರವುಳ್ಳ ಪಾತ್ರಗಳ ಮೂಲಕ ಆಗಿನ ಸಿನಿಪ್ರೇಕ್ಷಕರನ್ನು ರಂಜಿಸಿದವರು.

ಹೀಗೆ ಆಗಿನ ಕಾಲಘಟ್ಟದಲ್ಲಿ ಬಹಳ ಪೀಕ್ನಲ್ಲಿ ಇದ್ದಂತಹ ಡಾಕ್ಟರ್ ವಿಷ್ಣುವರ್ಧನ್, ಅಂಬರೀಶ್, ರಾಮ್ ಕುಮಾರ್ ಹಾಗೂ ಶಶಿಕುಮಾರ್ ಅವರಂತಹ ಕನ್ನಡದ ದಿಗ್ಗಜ ನಟರೊಂದಿಗೆ ತೆರೆ ಹಂಚಿಕೊಂಡು ಜನಪ್ರಿಯತೆ ಪಡೆದ ಸೀತಾರಾ (Sitara) ತಮ್ಮ ವೈಯಕ್ತಿಕ ಬದುಕಿನಲ್ಲಿ ಎದುರಾದಂತಹ ಕೆಲ ಕಹಿ ಘಟನೆಗಳಿಂದಾಗಿ ಮದುವೆಯಾಗದೆ ಜೀವನ ನಡೆಸುತ್ತಿದ್ದಾರೆ. ಆಗಾಗ ತಮ್ಮ ಕ್ಯೂಟ್ ಫೋಟೋಗಳ ಮೂಲಕ ಸದ್ದು ಮಾಡುತ್ತಿದ್ದ ಸೀತಾರಾರವರು ಸದ್ಯ ಮಾಲೆ ಧರಿಸಿ ದೇವರ ಧ್ಯಾನದಲ್ಲಿ ಮಗ್ನರಾಗಿರುವ ಫೋಟೋ ಮೂಲಕ ನೆಟ್ಟಿಗರನ್ನು ಅಚ್ಚರಿಗೊಳಗಾಗುವಂತೆ ಮಾಡಿದ್ದಾರೆ. Prajwal Devaraj ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ದಂಪತಿಯ ಕ್ಯೂಟ್ ಫೋಟೋಸ್!

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: