WhatsApp Group Join Now
Telegram Group Join Now

actor Rishab Shetty ಸ್ನೇಹಿತರೆ, ಕಾಂತಾರ(Kantara) ಎಂಬ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದ ಹಿರಿಮೆಯನ್ನು ಬೇರೆ ಒಂದು ಮಟ್ಟಕ್ಕೆ ಕೊಂಡೊಯ್ದು ಬಾಲಿವುಡ್ ಮಂದಿಗೂ ಕನ್ನಡ ಸಿನಿಮಾ ಗಳ ಕ್ರೇಜ್ ಎಂತದ್ದು ಎಂಬುದರ ಪರಿಚಯ ಮಾಡಿಕೊಟ್ಟ ರಿಷಬ್ ಶೆಟ್ಟಿ (Rishab Shetty) ಇಂದು ಫ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ.

ಇತರೆ ಭಾಷೆಗಳ ಸಿನಿಮಾಗಳಿಂದಲೂ ನಟ ರಿಷಬ್ ಅವರಿಗೆ ಆಫರ್ಗಳ ಸುರಿ ಮಳೆ ಬಂದರು ಸಹ ಕನ್ನಡಕ್ಕಾಗಿ ಕೆಲಸ ಮಾಡುವುದು ನನ್ನ ಮೊದಲ ಆದ್ಯತೆ ಎನ್ನುವ ಮೂಲಕ ಕನ್ನಡಿಗರ ಮನಸನ್ನ ಗೆದ್ದಿದ್ದಾರೆ. ಸದ್ಯ ಕಾಂತರಾ ಪಾರ್ಟ್ 2 ಸಿನಿಮಾದಲ್ಲಿ ತೊಡಗಿಕೊಂಡಿರುವಂತಹ ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ತಮ್ಮ ಮಕ್ಕಳೊಂದಿಗೆ ಸೇರಿ ವರಮಹಾಲಕ್ಷ್ಮಿ ಹಬ್ಬವನ್ನು (Varamahalakshmi Festival)

ಅದ್ದೂರಿಯಾಗಿ ಆಚರಿಸಿದ ಸುಂದರ ಹಣಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹೌದು ಗೆಳೆಯರೇ ಯಾವುದೇ ಹಬ್ಬ ಹರಿದಿನಗಳು ಬಂದರು ಸಹ ಸಾಂಪ್ರದಾಯಿಕ ಉಡುಪಿನಲ್ಲಿ ಸಿದ್ದರಾಗಿ ಹೆಂಡತಿ ಮಕ್ಕಳೊಂದಿಗೆ ಕಾಣಿಸಿಕೊಳ್ಳುವಂತಹ ರಿಷಬ್ ಶೆಟ್ಟಿ (Rishab Shetty) ಈ ಬಾರಿಯ ಹಬ್ಬಕ್ಕೂ ಪಂಚೆ ಶಲ್ಯ ಧರಿಸಿ ತಮ್ಮ ಹೆಂಡತಿ ಹಾಗೂ ಮಕ್ಕಳೊಂದಿಗೆ ಲಕ್ಷ್ಮಿ ದೇವಿಯ ಪೂಜೆ ಮಾಡಿದ್ದಾರೆ.

ಮನೆಯಲ್ಲಿ ಸರಳವಾಗಿ ಲಕ್ಷ್ಮಿ ದೇವಿಯನ್ನು ಕೂರಿಸಿ ಹಣ್ಣು ಹಂಪಲು ಬಾಳೆ ಎಲೆ ಹೀಗೆ ಮುಂದಾದವುಗಳಿಂದ ಆಕೆಯನ್ನು ಸಿಂಗಾರ ಗೊಳಿಸಿ ಪೂಜೆಯಾದ ನಂತರ ದೇವಿಯ ಮುಂದೇ ನಿಂತು ಹೆಂಡತಿ ಹಾಗೂ ಮಕ್ಕಳಿಬ್ಬರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ. ಅಲ್ಲದೆ ಆ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಪ್ರಗತಿ ಶೆಟ್ಟಿ(Pragathi Shetty) ಅವರು ‘ಕಳೆದ ಶುಭ ಶುಕ್ರವಾರ ಸಂಭ್ರಮದ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಿದ ಕ್ಷಣಗಳು.

ಆ ತಾಯಿ ಎಲ್ಲರಿಗೂ ಆಯುರಾರೋಗ್ಯ ಐಶ್ವರ್ಯವನ್ನು ನೀಡಿ ಹರಸಲಿ’ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಫೋಟೋಗಳನ್ನು ಹಂಚಿಕೊಳ್ಳಲಾದ ಕೆಲವೇ ಕೆಲವು ಗಂಟೆಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಲೈಕ್ಸ್ ಅವು ಕಮೆಂಟ್ಗಳ ಸುರಿ ಮಳೆಯೆ ಹರಿದು ಬರುತ್ತದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: