40,50 ಅಥವಾ 60 ವರ್ಷ ವಯಸ್ಸಿನ ಹಿರಿಯರಿಗೆ ಕೆಲವು ವಿಶೇಷ ಸಲಹೆಗಳಿವೆ. ಈ ವಯಸ್ಸಿನವರ ಮನಸ್ಥಿತಿ ಹೇಗಿರಬೇಕು ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸಬೇಕು ಸ್ವಭಾವದಲ್ಲಿ ಯಾವ ರೀತಿಯ ಬದಲಾವಣೆ ಮಾಡಿಕೊಳ್ಳಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ಮೊದಲನೆಯ ಸಲಹೆ ಬಾಯಾರಿಕೆ ಇಲ್ಲದಿದ್ದರೂ ಅವಶ್ಯಕತೆ ಇಲ್ಲದಿದ್ದರೂ ಯಾವಾಗಲೂ ದಿನಕ್ಕೆ ಕನಿಷ್ಠ ಎರಡು ಲೀಟರ್ ಅಂದರೆ ದಿನಕ್ಕೆ 8 ಗ್ಲಾಸ್ ನೀರನ್ನು ತಪ್ಪದೆ ಕುಡಿಯಿರಿ ದೊಡ್ಡ ದೊಡ್ಡ ಆರೋಗ್ಯ ಸಮಸ್ಯೆಗಳು ಮತ್ತು ಅವುಗಳಲ್ಲಿ ಹೆಚ್ಚಿನವು ದೇಹದಲ್ಲಿ ನೀರಿನ ಕೊರತೆಯಿಂದಾಗಿಯೆ ಬರುತ್ತದೆ ಹೀಗಾಗಿ ಮುನ್ನೆಚ್ಚರಿಕೆ ವಹಿಸುವುದು ಒಳ್ಳೆಯದಲ್ಲವೆ. ಎರಡನೆಯ ವಿಶೇಷ ಸಲಹೆ ಸಾಧ್ಯವಾದಷ್ಟು ಕೆಲಸವನ್ನು ಮಾಡಬೇಕು ನಡಿಗೆ ಈಜು ಅಥವಾ ಯಾವುದೆ ರೀತಿಯ ಕ್ರೀಡೆಯಂತಹ ದೇಹದ ಚಲನೆ ಇರಬೇಕು. ಮೂರನೆ ಸಲಹೆ ಕಡಿಮೆ ಊಟ ಮಾಡಿ ಹೆಚ್ಚು ತಿನ್ನಬೇಕೆಂಬ ಹಂಬಲ ಬಿಟ್ಟುಬಿಡಬೇಕು ಏಕೆಂದರೆ ಹೆಚ್ಚು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಹಾಗಂದರೆ ಊಟವನ್ನು ಬಿಡಬೇಕು ಅಂತಲ್ಲ ಪ್ರಮಾಣವನ್ನು ಕಡಿಮೆ ಮಾಡಬೇಕು ಪ್ರೋಟೀನ್ ಕಾರ್ಬೋಹೈಡ್ರೇಟ್ಸ್ ಹೆಚ್ಚಿರುವ ಆಹಾರವನ್ನು ಸೇವಿಸಬೇಕು.
ನಾಲ್ಕನೆಯ ವಿಶೇಷ ಸಲಹೆ ವಾಹನವನ್ನು ಅಗತ್ಯವಿದ್ದರೆ ಮಾತ್ರ ಬಳಸಿ ಮತ್ತು ವಾಹನವನ್ನು ಚಲಾಯಿಸುವಾಗ ನಿಧಾನವಾಗಿ ಚಲಿಸುವುದನ್ನು ಮರೆಯದಿರಿ. ಐದನೆ ಸಲಹೆ ಈ ವಯಸ್ಸಿನವರು ಕೋಪವನ್ನು ಬಿಟ್ಟುಬಿಡಬೇಕು ಹಾಗೂ ಚಿಂತಿಸುವುದನ್ನು ನಿಲ್ಲಿಸಿ ಬಿಡಬೇಕು ಕೆಲವು ಅಹಿತಕಾರಿ ವಿಷಯಗಳನ್ನ ನಿರ್ಲಕ್ಷಿಸುವುದು ಒಳ್ಳೆಯದು ತೊಂದರೆಯ ಸಂದರ್ಭದಲ್ಲಿ ನಮ್ಮನ್ನು ನಾವೆ ಸಮಾಧಾನಗೊಳಿಸಿಕೊಳ್ಳಬೇಕು ಇಲ್ಲವೆಂದರೆ ಅವು ಆರೋಗ್ಯವನ್ನು ಹಾಳು ಮಾಡುತ್ತವೆ. ಒಳ್ಳೆಯ ಮಾತನಾಡುವ ಸಕಾರಾತ್ಮಕ ಮಾತುಗಳನ್ನಾಡುವವರ ಜೊತೆ ಸಹವಾಸ ಬೆಳೆಸಿ ಅವರ ಜೊತೆ ಮಾತನಾಡುವುದು ಅವರ ಮಾತನ್ನು ಆಲಿಸಬೇಕು. ಏಳನೆ ಸಲಹೆ ಹಣವೆಂದರೆ ಯಾರಿಗೆ ತಾನೆ ಬೇಡ ಆದರೆ ಈ ವಯಸ್ಸಿನವರು ಹಣದ ಮೇಲಿನ ಅತಿ ವ್ಯಾಮೋಹವನ್ನು ಬಿಡಬೇಕು. ಸುತ್ತಮುತ್ತಲಿರುವ ಜನರೊಂದಿಗೆ ಸಂಪರ್ಕದಿಂದಿರಬೇಕು ನಗುನಗುತ್ತಾ ಮಾತನಾಡಬೇಕು.
ಎಂಟನೆ ಸಲಹೆ ಹಣ ಪ್ರತಿಷ್ಠೆ ಸ್ಥಾನ ಅಧಿಕಾರ ಸೌಂದರ್ಯ ಜಾತಿ ಹಾಗೂ ಪ್ರಭಾವ ಇವೆಲ್ಲವೂ ಅಹಂಕಾರವನ್ನು ಹೆಚ್ಚಿಸುತ್ತದೆ ಆದರೆ ನಮ್ರತೆಯು ಜನರನ್ನು ಹತ್ತಿರಕ್ಕೆ ತರುತ್ತದೆ ಆದ್ದರಿಂದ ಈ ವಯಸ್ಸಿನವರು ನಮ್ರತೆಯಿಂದ ಜನರೊಂದಿಗೆ ವ್ಯವಹರಿಸುವುದು ಉತ್ತಮ. ಕೂದಲು ಬೆಳ್ಳಗಾಗಿದ್ದರೆ ಜೀವನದ ಅಂತ್ಯ ಎಂದರ್ಥವಲ್ಲ ಜೀವನವೆಂಬ ಸಾಗರದ ಅನುಭವವಿದೆ ಎಂದರ್ಥ ಇದು ಉತ್ತಮ ಜೀವನಕ್ಕೆ ನಾಂದಿಯಾಗುತ್ತದೆ, ಆಶಾವಾದಿಯಾಗಿರಿ ನೆನಪಿನೊಂದಿಗೆ ಬದುಕಿ ಪ್ರಯಾಣಿಸಿ, ಆನಂದಿಸಿ ನೆನಪುಗಳನ್ನು ರಚಿಸಿ.
ಈ ವಯಸ್ಸಿನವರು ಪುಟ್ಟ ಮಕ್ಕಳೊಂದಿಗೆ ಪ್ರೀತಿ ಸಹಾನುಭೂತಿಯಿಂದ ಮಾತನಾಡಬೇಕು ವ್ಯಂಗ್ಯವಾಗಿ ಏನನ್ನು ಹೇಳಬಾರದು ಮುಖದಲ್ಲಿ ಯಾವಾಗಲೂ ಪುಟ್ಟ ನಗು ಇರಬೇಕು ಎಷ್ಟೆ ದೊಡ್ಡ ಕಷ್ಟ ಬಂದರೂ ತಾಳ್ಮೆಯನ್ನು ಕಳೆದುಕೊಳ್ಳಬಾರದು ಕಷ್ಟ ಬಂದಾಗ ಯಾರು ಎಷ್ಟೆ ಹತ್ತಿರವಾದರೂ ಸಹಾಯ ಕೇಳುವ ಮುನ್ನ 10 ಬಾರಿ ಯೋಚಿಸಿ ಏಕೆಂದರೆ ಕಷ್ಟದ ಭಾರ ಸ್ವಲ್ಪ ಸಮಯದವರೆಗೆ ಮಾತ್ರ ಇರುತ್ತದೆ ಆದರೆ ಸಹಾಯದ ಭಾರ ಜೀವನ ಪರ್ಯಂತ ಇರುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.
ನಿಮ್ಮ ಜೀವನದ ದಾಂಪತ್ಯ, ಸಂತಾನ ದೋಷ, ಸ್ತ್ರೀ ಪುರುಷ ವಶೀಕರಣ, ಗಂಡನ ಪರಸ್ತ್ರೀ ಸಹವಾಸ ಬಿಡಿಸಲು, ಅತ್ತೆ ಸೊಸೆ ಕಲಹ, ನಿಮ್ಮ ಜೀವನದ ಯಾವುದೇ ಸಮಸ್ಯೆ ಇರಲಿ ಕರೆ ಮಾಡಿ ಶಾಶ್ವತ ಪರಿಹಾರ ಕಂಡುಕೊಳ್ಳಿ ಶ್ರೀ ವಜ್ರೇಶ್ವರಿ ಜ್ಯೋತಿಷ್ಯ ಕೇಂದ್ರ ಆರ್ ಟಿ ನಗರ ಪೊಲೀಸ್ ಸ್ಟೇಷನ್ ಹತ್ತಿರ ಆದಿಶ್ವರ್ ಶೋರೂಮ್ ಕೆಳಗಡೆ RT ನಗರ ಬೆಂಗಳೂರು ಗುರೂಜಿ ಎಂ ಪಿ ಶರ್ಮ, 9845559493